Asianet Suvarna News Asianet Suvarna News

Hair Waxing: ಬೇಡದ ರೋಮಗಳ ನಿವಾರಣೆಗೆ ಇವೆ ನಾನಾ ವಿಧಾನಗಳು

ದೇಹದ ಮೇಲಿನ ಅನಗತ್ಯ ರೋಮಗಳನ್ನು ನಿವಾರಣೆ ಮಾಡಿಕೊಳ್ಳುವುದು ಸಾಮಾನ್ಯವಾಗಿ ಎಲ್ಲರ ಅಭ್ಯಾಸ. ಅದರಲ್ಲೂ ಮುಖ, ಕೈಕಾಲುಗಳ ಮೇಲಿನ ರೋಮಗಳ ನಿವಾರಣೆಗೆ ಹಲವರು ಆದ್ಯತೆ ನೀಡುತ್ತಾರೆ. ಇದಕ್ಕಾಗಿ ಹಲವು ವಿಧಾನಗಳು ಬಳಕೆಯಲ್ಲಿವೆ.

 

Remove unwanted hair in your body
Author
First Published Feb 24, 2023, 12:51 PM IST

ಮೈಮೇಲಿನ ಅನಗತ್ಯ ರೋಮಗಳನ್ನು ಹೇಗಾದರೂ ಕಷ್ಟಪಟ್ಟು ನಿವಾರಣೆ ಮಾಡಿಕೊಳ್ಳುವ ಕೆಲಸವನ್ನು ಸಾಮಾನ್ಯವಾಗಿ ಹುಡುಗಿಯರು ತಮ್ಮ ಹದಿಹರೆಯಲ್ಲಿ ಆರಂಭಿಸುತ್ತಾರೆ ಹಾಗೂ ಇದು ಎಂದಿಗೂ ನಿಲ್ಲುವುದಿಲ್ಲ. ನಿರಂತರವಾಗಿ ಮಾಡಿಕೊಳ್ಳುತ್ತಲೇ ಇರಬೇಕಾಗುತ್ತದೆ. ಮುಖದ ಮೇಲೆ ಮೂಡುವ ರೋಮವಾಗಿರಬಹುದು, ಕಾಲು, ಕೈ, ಬಿಕನಿ ಲೈನ್ ಅಥವಾ ದೇಹದ ಬೇರೆ ಯಾವುದೇ ಭಾಗದಲ್ಲಿ ಮೂಡುವ ಕೂದಲಾಗಿರಬಹುದು. ಕಿರಿಕಿರಿ ಎನಿಸುವ ಕಡೆ ರೋಮಗಳಿದ್ದರೆ ಮಹಿಳೆಯರು ಹಾಗೂ ಇತ್ತೀಚೆಗೆ ಪುರುಷರು ಸಹ ಅವುಗಳನ್ನು ನಿವಾರಣೆ ಮಾಡಿಕೊಳ್ಳಲು ಯತ್ನಿಸುತ್ತಾರೆ. ಬೇಡದ ರೋಮಗಳ ನಿವಾರಣೆಗೆ ಹಲವು ವಿಧಾನಗಳನ್ನು  ಅನುಸರಿಸಲಾಗುತ್ತದೆ. ಆದರೆ, ಕೆಲವೇ ವಿಧಾನಗಳು ಶಾಶ್ವತವಾಗಿ ರೋಮಗಳನ್ನು ನಿವಾರಿಸಬಲ್ಲವು. ಅತಿ ಕಡಿಮೆ ವೆಚ್ಚದ ಶೇವಿಂಗ್ ನಿಂದ ಹಿಡಿದು ದುಬಾರಿ ಎನಿಸುವ ಲೇಸರ್ ಹೇರ್ ರಿಮೂವಲ್ ವಿಧಾನದವರೆಗೆ ಹಲವು ವಿಧಾನಗಳು ಚಾಲ್ತಿಯಲ್ಲಿವೆ. ನಮ್ಮ ದೇಹದ ಪ್ರತಿಯೊಂದೂ ರೋಮವೂ ಪಿಲೊಸೆಬಾಸಿಯಸ್ ಎನ್ನುವ ಘಟಕದೊಂದಿಗೆ ಲಿಂಕ್ ಹೊಂದಿರುತ್ತವೆ. ಇದು ಹೇರ್ ಫಾಲಿಕಲ್, ಮೇದಸ್ಸಿನ ಗ್ರಂಥಿ ಮತ್ತು ಪಿಲಿ ಮಾಂಸಖಂಡವನ್ನು ಒಳಗೊಂಡಿರುತ್ತದೆ. ನಿಮಗೆ ಗೊತ್ತೇ ಇದೆ, ರೋಮಗಳ ಬೆಳವಣಿಗೆ ನಿರಂತರವಾಗಿ ನಡೆಯುತ್ತಿರುತ್ತದೆ. ಮೂರು ಹಂತಗಳಲ್ಲಿ ಕೂದಲು ಬೆಳೆಯುತ್ತದೆ. ಬೇಡದ ಭಾಗದ ಮೇಲೆ ಇವುಗಳನ್ನು ನಿವಾರಣೆ ಮಾಡಿಕೊಳ್ಳುವುದು ಒಂದು ದೊಡ್ಡ ಸವಾಲು.

·  ಶೇವಿಂಗ್ (Shaving)
ಸಾಮಾನ್ಯ ಜನಪ್ರಿಯ (Popular) ವಿಧಾನವೆಂದರೆ ಶೇವಿಂಗ್. ಆದರೆ, ಇದು ಅತ್ಯಂತ ತಾತ್ಕಾಲಿಕ ವಿಧಾನ. ಶೇವಿಂಗ್ ರೋಮವನ್ನು (Hair) ಚರ್ಮದ (Skin) ಬುಡದಿಂದ ಕಿತ್ತೊಗೆಯುವುದಿಲ್ಲ, ಬರೀ ಕತ್ತರಿಸುತ್ತದೆ. ಸಾಮಾನ್ಯ ನಂಬುಗೆಯಂತೆ ಶೇವಿಂಗ್ ಮಾಡುವುದರಿಂದ ರೋಮದ ಎಳೆ ದಿನಕಳೆದಂತೆ ದಪ್ಪಗಾಗುವುದಿಲ್ಲ. ಆದರೆ, ದಟ್ಟವಾಗಿ ಬೆಳೆಯುವಂತೆ ಮಾಡುತ್ತದೆ. ಒಂದೊಮ್ಮೆ ಮುಖದ ಶೇವಿಂಗ್ ಮಾಡುವುದು ನಿಮ್ಮ ಆಯ್ಕೆಯಾದರೆ, ಮೊದಲು ಮುಖವನ್ನು ಮಾಯಿಶ್ಚರೈಸ್ ನಿಂದ ತೇವಗೊಳಿಸಿಕೊಳ್ಳಬೇಕು.

ಪದೇ ಪದೇ ಗರ್ಭಪಾತವಾಗೋದರಿಂದ ಮಹಿಳೆ ಮೇಲೆ ಏನು ಪರಿಣಾಮ ಬೀರುತ್ತೆ?

·  ಬ್ಲೀಚಿಂಗ್ (Bleaching)
ಇದು ರೋಮವನ್ನು ನಿವಾರಣೆ ಮಾಡುವುದಿಲ್ಲ. ಆದರೆ, ರೋಮ ಚರ್ಮದ ಬಣ್ಣಕ್ಕೆ ತಿರುಗಿ ಹೆಚ್ಚು ಗೋಚರಿಸದಂತೆ ಮಾಡುತ್ತದೆ. ವಿರಳವಾಗಿ ರೋಮಗಳಿರುವ ಕಡೆ ಇದು ಸೂಕ್ತ. ಆದರೆ, ತ್ವಚೆಗೆ ಹೊಂದಾಣಿಕೆ ಆಗುತ್ತದೆಯಾ ಎಂದು ನೋಡಿಕೊಳ್ಳಬೇಕು.

·  ಕೀಳುವುದು (Physical Method)
ರೋಮವನ್ನು ಎಳೆದು ಕೀಳುವುದು ಕೆಲವರ ಅಭ್ಯಾಸ. ಆದರೆ, ಹೀಗೆ ಮಾಡುವುದರಿಂದ ಕೂದಲು ಇನ್ನಷ್ಟು ಉದ್ದಕ್ಕೆ ಬೆಳೆಯಬಲ್ಲದು. ಅಲ್ಲದೆ, ಹೇರ್ ಫಾಲಿಕಲ್ (Follicle) ಗಳಿಗೆ ಹಾನಿಯುಂಟಾಗಬಹುದು. ದೇಹದ ಯಾವುದಾದರೂ ಭಾಗದ ರೋಮಗಳನ್ನು ಪದೇ ಪದೆ ಎಳೆದು ಕೀಳುವ ಗೀಳು ನಿಮಗಿದ್ದರೆ ಅದೊಂದು ರೀತಿಯ ಸಮಸ್ಯೆಯೂ ಹೌದು ಎನ್ನುವುದು ಗೊತ್ತಿರಲಿ.

·  ಪ್ಲಕಿಂಗ್
ಟ್ವೀಸರ್ (Tweezers) ಮೂಲಕ ಪ್ಲಕ್ ಮಾಡಿ ಬೇಡದ ಕೂದಲನ್ನು ತೆಗೆಯುವ ವಿಧಾನ ಉತ್ತಮವೇನೋ ನಿಜ. ಆದರೆ, ಇದಕ್ಕೆ ತುಂಬ ಸಮಯ ಬೇಕು. ಹುಬ್ಬು, ಮುಖ, ಮೂಗಿನ ಭಾಗದ ರೋಮಗಳನ್ನು ಟ್ವೀಸರ್ ಮೂಲಕ ಸುಲಭವಾಗಿ ತೆಗೆಯಬಹುದು.

·   ವ್ಯಾಕ್ಸಿಂಗ್ (Waxing)
ಒಂದೇ ಬಾರಿ ಹೆಚ್ಚು ರೋಮಗಳನ್ನು ತೆಗೆಯುವುದಕ್ಕೆ ವ್ಯಾಕ್ಸಿಂಗ್ ಉತ್ತಮ. ಆದರೆ, ತ್ವಚೆಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ಕೆಲವರಿಗೆ ವ್ಯಾಕ್ಸಿಂಗ್ ಮಾಡಿದರೆ ಕೆಂಪು ಗುಳ್ಳೆಗಳೇಳುತ್ತವೆ. ಇನ್ನು, ಶುಗರ್ (Sugar) ವ್ಯಾಕ್ಸಿಂಗ್ ಕೂಡ ಜನಪ್ರಿಯ ವಿಧಾನವಾಗಿದೆ. ಸಕ್ಕರೆಯ ಪಾಕವನ್ನು ಸಿದ್ಧಪಡಿಸಿ ವ್ಯಾಕ್ಸ್ ನಂತೆ ಮಾಡಿಕೊಂಡು ಕೂದಲನ್ನು ತೆಗೆಯಲಾಗುತ್ತದೆ.

Beauty Tips : ಕೂದಲು ಗುಂಗುರು ಮಾಡುವ ಕರ್ಲರ್ ಖರೀದಿ ಮುನ್ನ ಇವಿಷ್ಟು ಗೊತ್ತಿರಲಿ

·  ಡೆಪಿಲೇಟರಿ (Depilatory)
ಇದು ಥಿಯೋಗ್ಲೈಕೋಲೇಟ್ ಎನ್ನುವ ಕೆಮಿಕಲ್ (Chemical) ಅನ್ನು ಒಳಗೊಂಡಿರುತ್ತದೆ. ಸೋಡಿಯಂ ಹೈಡ್ರಾಕ್ಸೈಡ್ ಅಥವಾ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಅಂಶವಿರುವ ಡೆಪಿಲೇಟರಿ ಕ್ರೀಮ್ ರೋಮಗಳನ್ನು ಅಕ್ಷರಶಃ ಕರಗಿಸುತ್ತದೆ. ಇದನ್ನು ಬಳಕೆ ಮಾಡುವ ಮುನ್ನ ತ್ವಚೆಯ ಮೇಲೆ ಪರೀಕ್ಷೆ (Test) ಮಾಡಿಕೊಳ್ಳಬೇಕು.

·  ಥ್ರೆಡಿಂಗ್ (Threading)
ಸಾಮಾನ್ಯವಾಗಿ ಹುಬ್ಬುಗಳನ್ನು (Eyebrow) ಶೇಪ್ ಮಾಡಲು ಈ ವಿಧಾನ ಬಳಕೆಯಲ್ಲಿದೆ. ಅನೇಕ ರೋಮಗಳು ಒಟ್ಟಿಗೆ ನಿವಾರಣೆಯಾಗುವುದು ಇದರ ಲಾಭ.

·   ಎಲೆಕ್ಟ್ರೊಲಿಸಿಸ್ (Electrolysis)
ಈ ವಿಧಾನದ ಮೂಲಕ ಹೇರ್ ಫಾಲಿಕಲ್ ನ ಬೇರುಗಳ (Root) ಮೇಲೆ ವಿದ್ಯುತ್ ಹರಿಸಲಾಗುತ್ತದೆ. ಇದು ರೋಮಗಳ ಬುಡವನ್ನು ಸುಟ್ಟುಹಾಕುತ್ತದೆ. ಬಳಿಕ ಹೆಚ್ಚಿನ ರೋಮ ಹುಟ್ಟುವುದಿಲ್ಲ. ಪ್ರತಿಯೊಂದು ಹೇರ್ ಫಾಲಿಕಲ್ ಅನ್ನೂ ಪ್ರತ್ಯೇಕವಾಗಿ ಟ್ರೀಟ್ ಮಾಡಬೇಕು. ಸಂಪೂರ್ಣ ನಿವಾರಣೆಗೆ ಹಲವು ಸಿಟ್ಟಿಂಗ್ ಅಗತ್ಯ.

·   ಲೇಸರ್ ಹೇರ್ ರಿಮೂವಲ್ (Laser Hair Removal)
ಲೇಸರ್ ತಂತ್ರಜ್ಞಾನದ ಮೂಲಕ ರೋಮಗಳನ್ನು ನಿವಾರಣೆ ಮಾಡಿಕೊಳ್ಳುವುದು ಸಾಮಾನ್ಯ. ಇಲ್ಲಿ ಕೂದಲುಗಳು ನಾಶವಾಗುತ್ತವೆ, ಆದರೆ ಹುಟ್ಟುತ್ತಿರುತ್ತವೆ. ಪದೇ ಪದೆ ಚಿಕಿತ್ಸೆ (Treatment) ಪಡೆದುಕೊಂಡಾಗ ಕ್ರಮೇಣ ರೋಮಗಳ ಬೆಳವಣಿಗೆ ಕಡಿಮೆಯಾಗುತ್ತದೆ. ಎಲೆಕ್ಟ್ರೊಲಿಸಿಸ್ ಗೆ ಹೋಲಿಸಿದರೆ ಈ ವಿಧಾನ ಹೆಚ್ಚು ಪರಿಣಾಮಕಾರಿ.

·   ವನಿಕಾ (Vaniqa)
ಎಪ್ ಡಿಎ ಅನುಮೋದನೆ ನೀಡಿರುವ ಈ ವಿಧಾನದಲ್ಲಿ, ಕ್ರೀಮನ್ನು (Cream) ಮುಖಕ್ಕೆ ಮಾತ್ರ ಬಳಕೆ ಮಾಡಲಾಗುತ್ತದೆ. ಇದು ಎಂಜೈಮುಗಳ ಮೇಲೆ ಪರಿಣಾಮ ಬೀರುತ್ತದೆ. ದಿನಕ್ಕೆ 2 ಬಾರಿಯಂತೆ 8 ವಾರಗಳ ಕಾಲ ಬಳಕೆ ಮಾಡಿದಾಗ ರೋಮಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದಾಗ್ಯೂ ಇದು ಲೇಸರ್ ವಿಧಾನದೊಂದಿಗೆ ಬಳಕೆಯಾದರೆ ಹೆಚ್ಚು ಪರಿಣಾಮಕಾರಿ (Effective) ಎನ್ನಲಾಗಿದೆ. 

Follow Us:
Download App:
  • android
  • ios