Koppal news: ದೌರ್ಜನ್ಯ ಖಂಡಿಸಿ ದಯಾಮರಣಕ್ಕೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಮಹಿಳೆ

ನನ್ನ ಆಸ್ತಿಯನ್ನು ಉಳುಮೆ ಮಾಡಲು ಅವಕಾಶ ನೀಡದೆ ದೌರ್ಜನ್ಯ ಎಸಗುತ್ತಿದ್ದಾರೆ. ನನಗೆ ಯಾರ ಸಹಾಯ ದೊರೆಯುತ್ತಿಲ್ಲ. ಆದ್ದರಿಂದ ಮನನೊಂದಿರುವ ನಾನು ದಯಾಮರಣಕ್ಕೆ ಸಿದ್ಧವಾಗಿದ್ದು, ಅನುಮತಿ ನೀಡುವಂತೆ ಆಗ್ರಹಿಸಿ ಬುಧವಾರ ತಾಲೂಕಿನ ಶಿವಪುರ ಗ್ರಾಮದ ಹುಲಿಗೆಮ್ಮಾ ಬಸಪ್ಪ ಹರಿಜನ ಅವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Woman appeals to tehsildar for euthanasia condemning brutality koppal rav

ಕೊಪ್ಪಳ (ಫೆ.16) : ನನ್ನ ಆಸ್ತಿಯನ್ನು ಉಳುಮೆ ಮಾಡಲು ಅವಕಾಶ ನೀಡದೆ ದೌರ್ಜನ್ಯ ಎಸಗುತ್ತಿದ್ದಾರೆ. ನನಗೆ ಯಾರ ಸಹಾಯ ದೊರೆಯುತ್ತಿಲ್ಲ. ಆದ್ದರಿಂದ ಮನನೊಂದಿರುವ ನಾನು ದಯಾಮರಣಕ್ಕೆ ಸಿದ್ಧವಾಗಿದ್ದು, ಅನುಮತಿ ನೀಡುವಂತೆ ಆಗ್ರಹಿಸಿ ಬುಧವಾರ ತಾಲೂಕಿನ ಶಿವಪುರ ಗ್ರಾಮದ ಹುಲಿಗೆಮ್ಮಾ ಬಸಪ್ಪ ಹರಿಜನ ಅವರು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ನನ್ನ ತಂದೆಯವರ ಮಾಲೀಕತ್ವದ ಸರ್ವೆ ನಂ. 297/1 ವಿಸ್ತೀರ್ಣ: 1.20 ಎಕರೆ ಭೂಮಿಯ ಪೈಕಿ 30 ಗುಂಟೆ ಭೂಮಿಯನ್ನು ರವೀಂದ್ರರಾವ(Ravindra rao) ಅವರ ಕುಟುಂಬಕ್ಕೆ ಮಾರಾಟ ಮಾಡಲಾಗಿತ್ತು. ಉಳಿದ 30 ಗುಂಟೆ ಭೂಮಿಯನ್ನು ಕಳೆದ 30 ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದೇವೆ. ಆದರೆ ಕಳೆದ 2 ವರ್ಷಗಳಿಂದ ಈ ಭೂಮಿಯ ಸಾಗುವಳಿಗೆ ರವೀಂದ್ರರಾವ ಮತ್ತು ಇತರರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿದರು.

PULWAMA ATTACK ವ್ಯವಸ್ಥಿತ ಪಿತೂರಿ ಎಂದ ಮುಖ್ಯ ಶಿಕ್ಷಕ; ಬಿಜೆಪಿ ಕೆಂಡಾಮಂಡಲ

ನನಗೆ ಸೂಕ್ತ ರಕ್ಷಣೆ ಒದಗಿಸಲು ಪೊಲೀಸ್‌ ಇಲಾಖೆ(Koppal police)ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ರವೀಂದ್ರರಾವ ಕುಟುಂಬದವರು ಮತ್ತು ಇತರರು ನಿರಂತರವಾಗಿ ಕಿರುಕುಳ(Harassment) ನೀಡುತ್ತಿದ್ದು, ದೌರ್ಜನ್ಯ ಎಸಗಿದ್ದಾರೆ ಎಂದರು.

ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಲು ಒತ್ತಾಯಿಸಿ ಕಳೆದ ಡಿ. 17ರಂದು ನಮ್ಮ ಮಾಲೀಕತ್ವದ ಸರ್ವೆ ನಂ. 297ರ ಭೂಮಿಯಲ್ಲಿ ಧರಣಿ ಸತ್ಯಾಗ್ರಹ ಕುಳಿತಿದ್ದವು. ಅಂದು ಧರಣಿ ಸ್ಥಳಕ್ಕೆ ಕೊಪ್ಪಳ ತಹಸೀಲ್ದಾರರು ಆಗಮಿಸಿ ಎರಡು ದಿನಗಳಲ್ಲಿ ನ್ಯಾಯ ಒದಗಿಸುವುದಾಗಿ ಲಿಖಿತ ಭರವಸೆ ಕೊಟ್ಟಿದ್ದರು.

ಕಳೆದ ಡಿ. 19ರಂದು ನಮ್ಮ ಭೂಮಿಯನ್ನು ಅಳತೆ ಮಾಡಲು ಸರ್ವೆದಾರರು ಬಂದಿದ್ದರು. ರವೀಂದ್ರರಾವ್‌ ಅವರು ಸರ್ವೆ ನಂಬರ್‌ಗಳನ್ನು ತಿದ್ದುಪಡಿಗೊಳಿಸಿದ್ದರಿಂದ ಸರ್ವೆ ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ರವೀಂದ್ರರಾವ್‌ ಕುಟುಂಬದವರು ಉದ್ದೇಶಪೂರ್ವಕವಾಗಿ ಹಳೆ ನಂಬರ್‌ ಬದಲಾಯಿಸಿ, ಹೊಸ ನಂಬರ್‌ (297) ಹಿಸ್ಸಾ (9, 10) ಪಡೆದುಕೊಂಡಿದ್ದಾರೆ. ಅಧಿಕಾರಿಗಳ ಕರ್ತವ್ಯಲೋಪದಿಂದ ಸರ್ವೆ ನಂಬರ್‌ಗಳು ಬದಲಾಗಿವೆ. ತಹಸೀಲ್ದಾರರು ಈ ಕುರಿತು ತನಿಖೆ ನಡೆಸದೆ ಹಳೆ ಕಾಗದ ಪತ್ರ ದೊರೆಯುವ ತನಕ ಈ ಭೂಮಿಯನ್ನು ಸರ್ವೆ ನಡೆಸಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

ಜಾತ್ರೆಯಲ್ಲಿ ಪೀಪಿ ಊದಿದಕ್ಕೆ ದಲಿತನ ಮೇಲೆ ಹಲ್ಲೆ: 7 ಮಂದಿಗೆ ಗಾಯ

ಕಳೆದ 10 ವರ್ಷಗಳಿಂದ ಈ ಭೂಮಿಯು ವ್ಯಾಜ್ಯ ನಡೆದ ಕಾರಣಕ್ಕಾಗಿ ನನ್ನ ಕುಟುಂಬವು ಲಕ್ಷಾಂತರ ರುಪಾಯಿಗಳನ್ನು ಸಾಲ ಮಾಡಿಕೊಂಡು ತೀವ್ರ ಸಂಕಷ್ಟದಲ್ಲಿದೆ. ಈ ಹಿನ್ನೆಲೆ ಜೀವನದಲ್ಲಿ ತುಂಬ ಜಿಗುಪ್ಸೆಗೊಂಡಿದ್ದೇನೆ. ಆದ್ದರಿಂದ ರಾಷ್ಟ್ರಪತಿ ಹಾಗೂ ಸರ್ಕಾರವು ದಯಮರಣಕ್ಕೆ ಅನುಮತಿ ಕೊಡಬೇಕೆಂದು ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios