ಕನಕಗಿರಿ ತಾಲೂಕಿನ ಗೋಡಿನಾಳ ಗ್ರಾಮದ ಸ.ಕಿ.ಪ್ರಾ. ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶೇಖರ ನಾಯ್ಕ…ತಮ್ಮ ಸ್ಟೇಟಸ್‌ಗೆ ಹಾಕಿರುವ ‘ಪುಲ್ವಾಮ ದಾಳಿ ವ್ಯವಸ್ಥಿತ ಪಿತೂರಿ’ ಎನ್ನುವ ಪದ ಇದೀಗ ಭಾರೀ ವೈರಲ್‌ ಆಗಿದೆ.

ಕೊಪ್ಪಳ (ಫೆ.16) : ಕನಕಗಿರಿ ತಾಲೂಕಿನ ಗೋಡಿನಾಳ ಗ್ರಾಮದ ಸ.ಕಿ.ಪ್ರಾ. ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶೇಖರ ನಾಯ್ಕ…ತಮ್ಮ ಸ್ಟೇಟಸ್‌ಗೆ ಹಾಕಿರುವ ‘ಪುಲ್ವಾಮ ದಾಳಿ ವ್ಯವಸ್ಥಿತ ಪಿತೂರಿ’ ಎನ್ನುವ ಪದ ಇದೀಗ ಭಾರೀ ವೈರಲ್‌ ಆಗಿದೆ.

ಈ ವಿಚಾರದ ಕುರಿತು ಶಿಕ್ಷಕರ ಗ್ರೂಪ್‌ಗಳಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿ ಮುಖಂಡರು ಇದನ್ನು ಖಂಡಿಸಿ, ಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ

‘ಅಧಿಕಾರಕ್ಕಾಗಿ ಇಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ. ಇದೇ ವ್ಯವಸ್ಥೆ ಮುಂದುವರಿದರೆ ಭಾರತದ ಭವಿಷ್ಯವೂ ಬ್ಲಾಕ್‌ ಡೇ ಆಗಿ ಪರಿಣಮಿಸಬಹುದು’ ಎಂಬ ಉಲ್ಲೇಖಿತ ಪೋಸ್ವ್‌ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬಿಜೆಪಿ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ನನ್ನ ಮನಸ್ಸಿಗೆ ಅನಿಸಿದ್ದನ್ನು ಸ್ಟೇಟಸ್‌ಗೆ ಹಾಕಿದ್ದೇನೆ. ದೇಶದ ವ್ಯವಸ್ಥೆ ಸರಿಯಾಗಿಲ್ಲ. ಅದಕ್ಕಾಗಿ ನೋವನ್ನು ಸ್ಟೇಟಸ್‌ ಮೂಲಕ ಹಂಚಿಕೊಂಡಿರುವೆ. ಸಮಾಜ ತಪ್ಪು ತಿಳಿದುಕೊಂಡರೆ ನಾನೇನು ಮಾಡಲು ಆಗುವುದಿಲ್ಲ. ಎಂದಿರುವ ಮುಖ್ಯ ಶಿಕ್ಷಕ ಶೇಖರ ನಾಯ್ಕ್

ಇಂಥವರಿಂದಲೇ ದೇಶದ ವ್ಯವಸ್ಥೆ ಹಾಳಾಗುತ್ತಿದೆ. ಒಳ್ಳೆಯ ಕಾರ್ಯವನ್ನು ಸ್ಮರಿಸುವುದು ಬಿಟ್ಟು ತೆಗಳಿರುವುದು ವಿಷಾದನೀಯ. ಮುಖ್ಯ ಶಿಕ್ಷಕರ ಸ್ಟೇಟಸ್‌(ಡಹಾತಸ) ಹೇಳಿಕೆಯನ್ನು ಡಿಡಿಪಿಐ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು.

ವಾಗೀಶ ಹಿರೇಮಠ, ಬಿಜೆಪಿ ಮುಖಂಡ

ದಿಗ್ವಿಜಯ್‌ ಸಿಂಗ್‌ ಹೇಳಿಕೆಯ ನಡುವೆ, ಪುಲ್ವಾಮಾ ನೆಲದಲ್ಲಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದ ರಾಹುಲ್‌ ಗಾಂಧಿ!