ಜಾತ್ರೆಯಲ್ಲಿ ಪೀಪಿ ಊದಿದಕ್ಕೆ ದಲಿತನ ಮೇಲೆ ಹಲ್ಲೆ: 7 ಮಂದಿಗೆ ಗಾಯ
ಜಾತ್ರೆಯಲ್ಲಿ ದಲಿತ ಯುವಕ ಪೀಪಿ ಊದಿದ ಎನ್ನುವ ಕ್ಷುಲ್ಲಕ ಕಾರಣಕ್ಕೆ ಸವರ್ಣಿಯರ ಗುಂಪೊಂದು ದಲಿತರ ಕೇರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಏಳು ಮಂದಿಯ ನ್ನು ಗಾಯಗೊಳಿಸಿದ ಘಟನೆ ಸಮೀಪದ ಹಿಟ್ನಾಳ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.
ಮುನಿರಾಬಾದ್ (ಫೆ.16): ಜಾತ್ರೆಯಲ್ಲಿ ದಲಿತ ಯುವಕ ಪೀಪಿ ಊದಿದ ಎನ್ನುವ ಕ್ಷುಲ್ಲಕ ಕಾರಣಕ್ಕೆ ಸವರ್ಣಿಯರ ಗುಂಪೊಂದು ದಲಿತರ ಕೇರಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಏಳು ಮಂದಿಯನ್ನು ಗಾಯಗೊಳಿಸಿದ ಘಟನೆ ಸಮೀಪದ ಹಿಟ್ನಾಳ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ. ಘಟನೆಯಲ್ಲಿ ಐವರು ಮಹಿಳೆಯರು, ಇಬ್ಬರು ಯುವಕರು ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ. ಮುದಿಯಪ್ಪ, ಶಂಕರ, ಲಕ್ಷ್ಮವ್ವ, ಗಂಗಮಾಳಮ್ಮ, ಗಂಗವ್ವ, ಲಿಂಗಮ್ಮ, ಲಕ್ಷ್ಮವ್ವ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೀಪಿ ಊದಿದ್ದಕ್ಕೆ ಆಕ್ಷೇಪ: ಹಿಟ್ನಾಳ ಗ್ರಾಮದಲ್ಲಿ ಮಂಗಳವಾರ ಸಂಜೆ ದುರ್ಗಾದೇವಿ ಜಾತ್ರೆಯಲ್ಲಿ ದಲಿತ ಯುವಕನೊಬ್ಬ ಪೀಪಿ ಊದುತ್ತಿದ್ದ. ಇದನ್ನು ಸವರ್ಣಿಯ ಮಹಿಳೆ ಯರು ಪ್ರಶ್ನಿಸಿದ್ದಾರೆ. ಆಗ ಸವರ್ಣಿಯ ಯುವಕನೊಬ್ಬ ದಲಿತ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ. ಆ ದಲಿತ ಯುವಕನ ಸಂಬಂಧಿ ಸವರ್ಣಿಯ ಯುವಕನ ಮೇಲೆ ತಿರುಗಿ ಹಲ್ಲೆ ಮಾಡಿದ. ಈ ವಿಷಯವು ಗ್ರಾಮದ ಹಿರಿಯರ ಗಮನಕ್ಕೆ ಬಂದಿದೆ.
ಕಾಂಗ್ರೆಸ್ಸಿನದು ಟಿಪ್ಪು ಸಂತಾನ: ನಳಿನ್‌ಕುಮಾರ್ ಕಟೀಲ್ ವಾಗ್ದಾಳಿ
ಘಟನೆಗೆ ಸಂಬಂಧಿಸಿದಂತೆ ಎರಡು ಕಡೆಯ ಮುಖಂಡರು ಸೇರಿ ಸಮಸ್ಯೆ ಬಗೆಹರಿಸಬೇಕೆಂದು ನಿರ್ಧರಿಸಿದ್ದರು. ಆದರೆ ಬುಧವಾರ ಸಂಜೆ 4 ಗಂಟೆಗೆ ಸವರ್ಣೀಯ ಯುವಕರ ಗುಂಪೊಂದು ಹಠಾತ್ತನೆ ದಲಿತರ ಕೇರಿಗೆ ನುಗ್ಗಿ ದಲಿತ ಮಹಿಳೆಯರು ಹಾಗೂ ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ 300ಕ್ಕೂ ಅಧಿಕ ದಲಿತರು ಮುನಿರಾಬಾದ್‌ನ ಪೊಲೀಸ್ ಠಾಣೆಗೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಶಾಸಕರ ಭೇಟಿ: ವಿಷಯ ತಿಳಿದು ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮುನಿರಾಬಾದಿಗೆ ಧಾವಿಸಿ ದಲಿತ ಮುಖಂಡರೊಡನೆ ಮಾತನಾಡಿ, ಪೊಲೀಸರು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ದಲಿತ ಮುಖಂಡರಿಗೆ ಅಭಯ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಈ ಘಟನೆಗೆ ಸಂಬಂಧಿಸಿದಂತೆ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಈ ವರೆಗೆ ದೂರು ದಾಖಲಾಗಿಲ್ಲ.
ಕೋಲಾರದಿಂದ ಸ್ಪರ್ಧೆ, ಸಿದ್ದು ಕೈಗೊಂಡ ತಪ್ಪು ನಿರ್ಧಾರ: ಸಿ.ಎಂ.ಇಬ್ರಾಹಿಂ
ಕೊಪ್ಪಳ ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ. ಆದರೆ ಘಟನೆ ಕುರಿತು ಎರಡೂ ಗುಂಪಿನವರು ದೂರು ನೀಡಿಲ್ಲ. ದೂರು ನೀಡಿದ ತಕ್ಷಣ ಎಫ್‌ಐಆರ್ ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಆಯೋಜಿಸಲಾಗಿದೆ.
- ಅರುಣಾಂಗ್ಷುಗಿರಿ, ಎಸ್ಪಿ