Asianet Suvarna News Asianet Suvarna News

Home Decoration: ಮನೆಗೆ ಬ್ರೈಟ್ ಕಲರ್ ಯಾಕೆ ಬೇಕು ಗೊತ್ತಾ?

ನಿಮ್ಮ ಮನೆ ಸ್ಟೈಲಿಷ್ ಎನಿಸಬೇಕೇ? ಹಾಗಾದರೆ ಮನೆಯ ಒಳಾಂಗಣವನ್ನು ಗಾಢ ಬಣ್ಣದ ಪೇಂಟ್ ಅಥವಾ ಪೀಠೋಪಕರಣಗಳಿಂದ ಅಲಂಕರಿಸಿ. ಆಗ ಮನೆಯ ವೈಬ್ರೇಷನ್ನೇ ಬದಲಾಗುವುದನ್ನು ನೀವೇ ನೋಡಿ.
 

Why you should choose bright colors for home decoration
Author
Bangalore, First Published Mar 3, 2022, 5:43 PM IST

ಯಾರದ್ದಾದರೂ ಮನೆಗೆ ಹೋದಾಗ ನೀವು ಗಮನಿಸಿರಬಹುದು. ಏಕಾಏಕಿ ಪ್ರಕಾಶಮಾನವಾದ (Bright) ಬಣ್ಣದ ಪೇಂಟ್ (Paint)ಗಳು ಗಮನ ಸೆಳೆಯುತ್ತವೆ. ಕೆಲವು ಮನೆಗಳಲ್ಲಿ ಮಾತ್ರವೇ ಸ್ವಲ್ಪ ಅಭಾಸವೆನ್ನಿಸುವ ಬಣ್ಣಗಳು ಇರಬಹುದೇ ಹೊರತು, ಉಳಿದಂತೆ ದಟ್ಟವಾದ ಬಣ್ಣ(Color)ಗಳಿಂದ ಮನೆಗೊಂದು ಅದ್ಭುತವಾದ ಸೌಂದರ್ಯ (Beauty) ದಕ್ಕಿರುತ್ತದೆ. 

ಸರಳವಾದ ಆದರೆ ಸೊಗಸಾದ ತಿಳಿ (Light) ಬಣ್ಣಗಳನ್ನು ನೀವು ಇಷ್ಟಪಡುತ್ತೀರಿ ಎಂದಾದರೂ ಒಮ್ಮೆ ಯೋಚಿಸಿ. ನಿಮ್ಮ ಇಷ್ಟವಾದ ತಿಳಿ ಬಣ್ಣಗಳ ನಡುವೆಯೇ ಎಲ್ಲಾದರೂ ದಟ್ಟ ವರ್ಣವೂ ಇಣುಕಿದರೆ ಮನೆಯ ಕೆಲವು ಭಾಗಗಳು ಎಷ್ಟು ಸುಂದರವಾಗಿ ಗೋಚರಿಸುತ್ತವೆ ಎಂದು. ಮನೆಯ ವೈಬ್ರೇಷನ್ (Vibration) ಹೇಗಿರಬಹುದು ಎನ್ನುವ ಬಗ್ಗೆ ಯೋಚಿಸಬೇಡಿ. ಏಕೆಂದರೆ, ದಟ್ಟ ವರ್ಣಗಳಿಂದ ಮನೆಯ ವೈಬ್ರೇಷನ್ ಚೆನ್ನಾಗಿಯೇ ಇರುತ್ತದೆ. ಕೆಲವೇ ಕೆಲವು ಗಾಢ ಬಣ್ಣದ ಪೇಂಟ್ ಗಳಿಂದ ಮನೆಯ ಅಂದ ಹಾಳಾಗಬಹುದೇ ಹೊರತು, ಪ್ರಕಾಶಮಾನವಾದ ಪೇಂಟ್ ಗಳಿಂದ ಮನೆಗೆ ಸೊಗಸಾದ, ಸ್ಟೈಲಿಷ್ (Stylish), ಲಕ್ಸುರಿಯಸ್ (Luxurious) ಲುಕ್ ಬರುತ್ತದೆ. ಹಾಗೂ ಈ ಬಣ್ಣಗಳಿಂದ ಖುಷಿಯೂ (Happy) ಆಗುತ್ತದೆ. 

ನಿಮಗೆ ಗೊತ್ತೇ? ಪ್ರಕಾಶಮಾನವಾದ ಬಣ್ಣಗಳನ್ನು ಬಳಕೆ ಮಾಡುವುದು ನಿಮಗೆ ಜವಾಬ್ದಾರಿಯ ಸಂಗತಿಯೂ ಹೌದು. ಏಕೆಂದರೆ, ಇವುಗಳನ್ನು ಕ್ರಿಯಾಶೀಲವಾಗಿ ಬಳಕೆ ಮಾಡುವ ಅಪಾರ ಸಾಧ್ಯತೆಗಳಿವೆ. ಅಷ್ಟಕ್ಕೂ ಪ್ರಕಾಶಮಾನವಾದ ಬಣ್ಣ ಮನೆಯೊಳಗಿದ್ದರೆ ಏನು ಅನುಕೂಲ, ಯಾಕೆ ಅಂತಹ ಬಣ್ಣಗಳ ಅಗತ್ಯವಿದೆ ಎಂದು ಮೊದಲು ಅರಿತುಕೊಳ್ಳಬೇಕು. 

•    ಪ್ರಕಾಶಮಾನವಾದ ಬಣ್ಣಗಳಿಂದ ಧನಾತ್ಮಕತೆ (Positivity)
ನಿಮಗೆ ಅಚ್ಚರಿಯಾಗಬಹುದು. ಮನೆಯಲ್ಲಿ ಹೆಚ್ಚಿನ ಧನಾತ್ಮಕತೆ ಇರಬೇಕೆಂದರೆ ದಟ್ಟ ಹಾಗೂ ಪ್ರಕಾಶಮಾನವಾದ ಬಣ್ಣಗಳ ಬಳಕೆ ಅಗತ್ಯ. ಇವು ನಿಮ್ಮ ಮೂಡನ್ನು(Mood) ಉತ್ತಮಪಡಿಸುತ್ತವೆ. ಮನೆಯೊಳಗಿದ್ದಾಗ ಆರಾಮದಾಯಕ (Feel Good) ಎನಿಸುತ್ತದೆ. ಸಕಾರಾತ್ಮಕ ಮನಸ್ಥಿತಿ ಹೆಚ್ಚಿಸಿ, ಖುಷಿಯಾಗಿಡುತ್ತವೆ. ನಿಮ್ಮ ಮನೆಗೆ ಸರಳವಾದ ಗೋಡೆಗಳಿದ್ದರೆ ಅವುಗಳನ್ನು ದಟ್ಟವಾದ ಪೀಠೋಪಕರಣ ಹಾಗೂ ಬಣ್ಣಗಳಿಂದ ಬ್ಯಾಲೆನ್ಸ್ (Balance) ಮಾಡಬೇಕು. ಹಳದಿ (Yellow), ಪುದೀನಾ ಹಸಿರು (Mint Green) ಹಾಗೂ ನೀಲಿಯ ಶೇಡ್ (Blue Shades) ಗಳು ಈ ನಿಟ್ಟಿನಲ್ಲಿ ಉತ್ತಮ ಆಯ್ಕೆಗಳು.

ಪರ್ಫೆಕ್ಟ್ ಪತಿಗಾಗಿ ಪಾರ್ಕ್ ನಲ್ಲಿ ಓಡ್ತಾಳೆ ಈ ಮಹಿಳೆ!

•    ಮನೆಗೆ ವಿಭಿನ್ನ ಲುಕ್ (Uniqueness)
ನಿಮ್ಮ ಮನೆ ಸಾಮಾನ್ಯ ಮನೆಗಳಂತೆ ಆಗದೆ, ವಿಭಿನ್ನವಾಗಿ ಚೆಂದ ಕಾಣಲು ಪ್ರಕಾಶಮಾನವಾದ ಬಣ್ಣಗಳು ಸಹಾಯಕ. ನಿಮ್ಮ ಮನೆ ಎಲ್ಲರಿಗಿಂತ ಪ್ರತ್ಯೇಕವಾಗಿ ಕಾಣಿಸಬೇಕೆನ್ನುವ ಆಸೆ ನಿಮಗಿದ್ದರೆ ದಟ್ಟ ಬಣ್ಣಗಳ ಪ್ರಯೋಗ ಮಾಡಬಹುದು. ಆದರೆ, ನೆನಪಿಟ್ಟುಕೊಳ್ಳಿ. ಪ್ರಕಾಶಮಾನವಾದ ಬಣ್ಣಗಳ ಆಯ್ಕೆಯಲ್ಲಿ ಎಡವದಿರಿ. ಸ್ವಲ್ಪ ಎಚ್ಚರಿಕೆ ಇರಲಿ. ಒಂದೇ ಸಣ್ಣ ಎಡವಟ್ಟಾದರೂ ನಿಮ್ಮ ಇಡೀ ಪ್ಲಾನ್ ಹಾಳಾಗುತ್ತದೆ. ಹೀಗಾಗಿ, ನೀವು ಪ್ರಕಾಶಮಾನ ಬಣ್ಣದ  ಪೀಠೋಪಕರಣಗಳನ್ನು ಆಯ್ಕೆ ಮಾಡುವ ಮುನ್ನ ಅದು ನಿಮ್ಮ ಒಟ್ಟಾರೆ ಮನೆಯ ಅಲಂಕಾರಕ್ಕೆ ಪೂರಕವಾಗಿದೆಯೇ ಎಂದು ಚೆಕ್ ಮಾಡಿಕೊಳ್ಳಿ. ಅವುಗಳಿಂದ ಮನೆಯ ಅಂದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ.  

Breakup Tips: ಗೌರವಪೂರ್ಣ ಬ್ರೇಕಪ್ ನಿಮ್ಮದಾಗಲು ಹೀಗ್ಮಾಡಿ

•    ಮನೆಯನ್ನು ಚೆನ್ನಾಗಿ ಮೆಂಟೇನ್ (Maintain) ಮಾಡುವ ಭಾವನೆ
ಗಾಢ ವರ್ಣದ ಪೇಂಟ್ ಅಥವಾ ಪೀಠೋಪಕರಣಗಳಿಂದ ನಿಮ್ಮ ಮನೆ ಹೆಚ್ಚು ಗಮನ ಸೆಳೆಯುತ್ತದೆ. ಹಾಗೆಯೇ ಚೆನ್ನಾಗಿ ಮೆಂಟೇನ್ ಅಥವಾ ಕಾಳಜಿಯಿಂದ ಮನೆಯನ್ನು ನಿಭಾಯಿಸಿರುವ ಭಾವನೆ ಮೂಡುತ್ತದೆ. ಕಣ್ಣುಗಳಿಗೆ ಹಿತವೆನಿಸುವ ಜತೆಗೆ, ಉತ್ತಮವಾದ ವೈಬ್ರೇಷನ್ ಮೂಡಿಸುತ್ತವೆ. ನಿಮಗೆ ದಿನವೂ ಮನೆಯ ಬಗ್ಗೆ ಕಾಳಜಿ ವಹಿಸಲು ಸಾಧ್ಯವಿಲ್ಲ ಎಂದಾದರೆ ಗಾಢ ವರ್ಣಗಳ ಆಯ್ಕೆ ಅತ್ಯಂತ ಉತ್ತಮ. ಆದರೆ, ತೀರ ಗಾಢವಾದ ಬಣ್ಣಗಳು ಬೇಡ. ಮನೆಯ ಒಳಭಾಗವನ್ನು ಕಪ್ಪಾಗಿಸುವ ಅಂದರೆ ಬೆಳಕನ್ನು ಸೂಸದ ಬಣ್ಣಗಳನ್ನು ಬಳಕೆ ಮಾಡಬೇಡಿ. 

Follow Us:
Download App:
  • android
  • ios