ಪರ್ಫೆಕ್ಟ್ ಪತಿಗಾಗಿ ಪಾರ್ಕ್ ನಲ್ಲಿ ಓಡ್ತಾಳೆ ಈ ಮಹಿಳೆ!

ಸಂಗಾತಿ ಹುಡುಕುವುದು ದೊಡ್ಡ ಕೆಲಸ. ನಮಗಿಷ್ಟವಾದ ಸಂಗಾತಿ ಸಿಗುವುದು ಸುಲಭವಲ್ಲ. ಎಷ್ಟೇ ಹುಡುಕಾಟ ನಡೆಸಿದ್ರೂ ಒಂದಿಲ್ಲೊಂದು ನ್ಯೂನ್ಯತೆ ಕಂಡು ಬರುತ್ತದೆ. ಆನ್ಲೈನ್ ನಲ್ಲಿ ನೋಡಿದವರು ಎದುರು ಬಂದಾಗ ಬೇರೆಯೇ ಆಗಿರ್ತಾರೆ. ಹಾಗಾಗಿ ಈ ಮಹಿಳೆ ಪತಿ ಹುಡುಕಾಟಕ್ಕೆ ಹೊಸ ವಿಧಾನ ಅನುಸರಿಸ್ತಿದ್ದಾಳೆ.
 

This woman runs in the park every week to find her dream partner

ಇದು ಡೇಟಿಂಗ್ ಅಪ್ಲಿಕೇಶನ್‌ (Dating App) ಯುಗ.  ಈ ಯುಗದಲ್ಲಿ ಜನರು ಆನ್ಲೈನ್ (Online),ಡೇಟಿಂಗ್ ಅಪ್ಲಿಕೇಷನ್,ಸಾಮಾಜಿಕ ಜಾಲತಾಣಗಳಲ್ಲಿ ಸಂಗಾತಿ (Partner)ಯ ಹುಡುಕಾಟ ನಡೆಸ್ತಾರೆ. ಬರೀ ಆನ್ಲೈನ್ ನಲ್ಲಿ ಸಂಗಾತಿ ಆಯ್ಕೆ ಮಾಡುವುದು ಮಾತ್ರವಲ್ಲ ಕೆಲವರು ಆನ್ಲೈನ್ ನಲ್ಲಿಯೇ ಮದುವೆ ಕೂಡ ಆಗಿದ್ದಾರೆ. ಪ್ರತಿಯೊಬ್ಬರಿಗೂ ಪರ್ಫೆಕ್ಟ್ ಪತಿ ಅಥವಾ ಪತ್ನಿ ಬೇಕೆಂಬ ಆಸೆಯಿರುತ್ತದೆ. ಪರ್ಫೆಕ್ಟ್ ಎಂದರೆ ಏನು ಎಂಬುದು ಅವರವರ ಮನಸ್ಸಿಗೆ ಸಂಬಂಧಿಸಿದೆ. ಯಾಕೆಂದ್ರೆ ಒಬ್ಬರ ಪರ್ಫೆಕ್ಟ್ ಒಂದು ರೀತಿಯಾಗಿದ್ದರೆ ಮತ್ತೊಬ್ಬರ ಪರ್ಫೆಕ್ಟ್ ಇನ್ನೊಂದು ರೀತಿಯಾಗಿರುತ್ತದೆ. ಅದೇನೇ ಇರಲಿ, ಎಲ್ಲರಿಗೂ ತಾವು ಬಯಸಿದ ಪತಿ ಅಥವಾ ಪತ್ನಿ ಸಿಗಬೇಕೆಂಬ ಆಸೆಯಿರುತ್ತದೆ. ಹಾಗಾಗಿಯೇ ಅಲ್ಲಿ-ಇಲ್ಲಿ ಹುಡುಕಿ ಮದುವೆಯಾಗ್ತಾರೆ. ಆದ್ರೆ ಇಲ್ಲೊಬ್ಬ ಮಹಿಳೆಯ ಪರ್ಫೆಕ್ಟ್ ಪತಿ ಹುಡುಕಾಟ ವಿಚಿತ್ರವಾಗಿದೆ. ಆಕೆ ಪಾರ್ಕ್ ನಲ್ಲಿ ಪರ್ಫೆಕ್ಟ್ ಪತಿಗಾಗಿ ಹುಡುಕಾಟ ನಡೆಸ್ತಿದ್ದಾಳೆ. ಆನ್ಲೈನ್ ಜಗತ್ತನ್ನು ದೊಡ್ಡ ಮಟ್ಟದಲ್ಲಿ ನಂಬಿರುವ ಜನರ ಮಧ್ಯೆ ಪಾರ್ಕ್ ನಲ್ಲಿ ಹುಡುಗನ ಹುಡುಕಾಟ ನಡೆಸುತ್ತಿರುವ ಈ ಮಹಿಳೆ  ಕಥೆಯೇನು ಎಂಬುದನ್ನು ನಾವಿಂದು ಹೇಳ್ತೇವೆ.

ಪ್ರತಿ ಶನಿವಾರ ಪಾರ್ಕ್ ನಲ್ಲಿ ಓಡ್ತಾಳೆ ಮಹಿಳೆ..! : ಮೊದಲೇ ಹೇಳಿದಂತೆ ಈಗಿನ ಯುವಕ-ಯುವತಿಯರು ಹೆಚ್ಚು ನಂಬಿರುವುದು ಸಾಮಾಜಿಕ ಜಾಲತಾಣವನ್ನು. ಅಲ್ಲಿ ಹುಡುಗ ಇಷ್ಟವಾದ್ರೆ ನಂತ್ರ ಭೇಟಿ,ಮಾತುಕತೆ. ಆದ್ರೆ ಲಂಡನ್ ನ ಈ ಮಹಿಳೆ ಆನ್ಲೈನ್ ಸಹವಾಸ ಬಿಟ್ಟು ಪಾರ್ಕ್ ನಲ್ಲಿ ಹುಡುಕಾಟ ಶುರು ಮಾಡಿದ್ದಾಳೆ. ಆಕೆ ಹೆಸರು ಮಿನ್ರೀತ್ ಕೌರ್. ಅವಳು ಪಶ್ಚಿಮ ಲಂಡನ್‌ನಲ್ಲಿ ವಾಸಿಸುತ್ತಾಳೆ. 13 ವರ್ಷಗಳ ಹಿಂದೆ ಆಕೆ ವಿಚ್ಛೇದನ ಪಡೆದಿದ್ದಾಳೆ. ಸದ್ಯ ಪಾಲಕರ ಜೊತೆ ವಾಸವಾಗಿದ್ದಾಳೆ. ಈಗ ಮಿನ್ರೀತ್ ಕೌರ್ ಗೆ  ಪರಿಪೂರ್ಣ ಗಂಡನ ಅವಶ್ಯಕತೆಯಿದೆಯಂತೆ. ಇದಕ್ಕಾಗಿ, ಅವಳು ಪ್ರತಿ ಶನಿವಾರ ಪಾರ್ಕ್ ನಲ್ಲಿ ಓಡ್ತಾಳೆ. 

ಬದುಕಿಗೆ ಬೇರೊಂದು ಅರ್ಥ ನೀಡುವ ಮಕ್ಕಳ ಕಾಯಿಲೆಗಳು- Satya Nadella ಹೇಳಿದ್ದೇನು?

ಬೇರೆ ಬೇರೆ ಪಾರ್ಕ್ ನಲ್ಲಿ ಓಟ : ಮಿನ್ರೀತ್ ಕೌರ್ ಪ್ರತಿ ಶನಿವಾರ ಬೇರೆ ಬೇರೆ ಪಾರ್ಕ್ ಆಯ್ಕೆ ಮಾಡಿಕೊಂಡು ಓಡ್ತಾಳೆ. ಹೀಗೆ ಮಾಡಿದ್ರೆ ಪರ್ಫೆಕ್ಟ್ ಪತಿ ಸಿಗ್ತಾನೆಂಬ ನಂಬಿಕೆ ಆಕೆಯದ್ದು. ಪಾರ್ಟ್ ಟೈಂ ಜರ್ನಲಿಸ್ಟ್ ಆಗಿರುವ ಮಿನ್ರೀತ್ ಕೌರ್, ಸ್ವಿಮ್ಮಿಂಗ್ ಟ್ರೈನರ್ ಆಗಿ ತರಬೇತಿ ಪಡೆಯುತ್ತಿದ್ದಾಳೆ.

ಪಾರ್ಕ್ ರನ್ ಮೇಲೆ ಭರವಸೆ : ಮಿನ್ರೀತ್ ಕೌರ್ ಗೆ ಡೇಟಿಂಗ್ ಅಪ್ಲಿಕೇಷನ್ ಮೇಲೆ ಭರವಸೆಯಿಲ್ಲ. ಆಕೆ ಪಾರ್ಕ್ ರನ್ ನಂಬಿದ್ದಾಳೆ. ಪಾರ್ಕ್ ರನ್ ಕೂಡ ಒಂದು ರೀತಿಯ ಡೇಟಿಂಗ್ ಅಪ್ಲಿಕೇಷನ್ ಆಗಿದೆ. ಇಲ್ಲಿ ಜನರು ನೇರವಾಗಿ ಭೇಟಿಯಾಗ್ತಾರೆ. ಲಂಡನ್ ನ ಪ್ರಸಿದ್ಧ ಕಂಪನಿಯಾದ ಪಾರ್ಕ್ ರನ್ ಲಂಡನ್ ನಲ್ಲಿ 2000 ಬ್ರ್ಯಾಂಚ್ ಹೊಂದಿದೆ. ಪ್ರತಿ ಶನಿವಾರ ಓಟವನ್ನು ಏರ್ಪಡಿಸುತ್ತದೆ. ಮದುವೆಯಾಗಲು ಆಸಕ್ತಿ ಹೊಂದಿರುವವರು ಇದ್ರಲ್ಲಿ ಪಾಲ್ಗೊಳ್ತಾರೆ. ಪಾರ್ಕ್ ನಲ್ಲಿ ಓಡ್ತಾರೆ. ಜನರ ಜೊತೆ ಬೆರೆಯುತ್ತಾರೆ. ಅಲ್ಲಿಯೇ ಸಂಗಾತಿ ಆಯ್ಕೆ ಮಾಡಿಕೊಳ್ತಾರೆ.

Relationships: ಪತ್ನಿ ಸತ್ತು 8 ತಿಂಗಳಿಗೇ ಪ್ರೀತಿಗೆ ಬಿದ್ದ ವ್ಯಕ್ತಿ, ಗರ್ಲ್‌ಫ್ರೆಂಡ್‌ಗೆ ಹುಟ್ಟಿತು ಗೊಂದಲ!

ಪತಿ ಹೇಗಿರಬೇಕು ಗೊತ್ತಾ? : ಮೊದಲಿನಿಂದಲೂ ಆಕೆ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಆಸಕ್ತಿ ಹೊಂದಿರಲಿಲ್ಲವಂತೆ. ಎದುರು-ಬದುರು ಕುಳಿತು ಪತಿಯ ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಆಕೆ ಆಸೆಯಂತೆ. ಆದ್ರೆ ಇದು ಸುಲಭವಲ್ಲ ಎನ್ನುತ್ತಾಳೆ ಮಿನ್ರೀತ್ ಕೌರ್. ಪತ್ರಿಕೋದ್ಯಮದಲ್ಲಿ ಸಾಕಷ್ಟು ಪ್ರಶಸ್ತಿ ಪಡೆದಿರುವ ಮಿನ್ರೀತ್ ಕೌರ್ ತನ್ನ ಮೇಲೆ ಸಾಕಷ್ಟು ನಂಬಿಕೆ ಹೊಂದಿದ್ದಾಳೆ. ತನ್ನ ಬಗ್ಗೆ ಹೆಚ್ಚು ಕೇರ್ ಮಾಡುವ ಪತಿ ನನಗೆ ಬೇಕು ಎನ್ನುತ್ತಾಳೆ  ಮಿನ್ರೀತ್ ಕೌರ್. ಈಕೆ ಮದುವೆಯಾಗುವ ಇಚ್ಛೆ ನಿಮಗೂ ಇದ್ದರೆ ಲಂಡನ್ ಗೆ ಪ್ರಯಾಣ ಬೆಳೆಸಿ. ಮಿನ್ರೀತ್ ಕೌರ್  ಜೊತೆ ಓಟದಲ್ಲಿ ಪಾಲ್ಗೊಂಡು ಆಕೆ ಮನಸ್ಸು ಕದಿಯುವ ಪ್ರಯತ್ನನಡೆಸಿ. 

Latest Videos
Follow Us:
Download App:
  • android
  • ios