ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ರಜೆ ಯಾಕೆ ನೀಡ್ಬೇಕು ಗೊತ್ತಾ?
ಮುಟ್ಟು ಮಹಿಳೆಯರು ಪ್ರತಿ ತಿಂಗಳು ಅನುಭವಿಸುವ ನೋವು. ಇದ್ರಿಂದ ಹೊರಗೆ ಬರಲು ಸಾಧ್ಯವಿಲ್ಲ. ಆ ಸಮಯದಲ್ಲಿ ವಿಶ್ರಾಂತಿ ಪಡೆಯೋದು ಅಗತ್ಯ. ಪಿರಿಯಡ್ಸ್ ವೇಳೆ ರಜೆ ನೀಡ್ಬೇಕೇ ಬೇಡ್ವೇ ಎನ್ನುವ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ.
ಮುಟ್ಟಿನ ಸಮಯದಲ್ಲಿ ರಜೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಬಗ್ಗೆ ತೀರ್ಪು ನೀಡಲು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಮಹಿಳೆಯರಿಗೆ ಪಿರಿಯಡ್ಸ್ ಸಮಯದಲ್ಲಿ ರಜೆ ನೀಡುವಂತೆ ನಿಯಮ ರೂಪಿಸಿ ಎಂದು ಕೋರ್ಟ್ ಹೇಳಿದೆ. ಪಿರಿಯಡ್ಸ್ ಸಮಯದಲ್ಲಿ ಕಡ್ಡಾಯ ರಜೆ ನೀಡುವ ನಿಯಮ ರೂಪಿಸಿದ್ರೆ, ಮಹಿಳೆಯರಿಗೆ ಕೆಲಸ ಪಡೆಯಲು ಸಮಸ್ಯೆಯಾಗಬಹುದು ಎಂದು ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್ ನಿರ್ಧಾರ ಏನೇ ಇರಲಿ, ಮುಟ್ಟಿನ ಸಮಯದಲ್ಲಿ ಮನೆ ಕೆಲಸ ಮಾಡಿ ಮತ್ತೆ 9 ಗಂಟೆಗಳ ಕಾಲ ಕಚೇರಿಯಲ್ಲಿ ಕೆಲಸ ಮಾಡೋದು ಸಾಮಾನ್ಯ ಸಂಗತಿಯಲ್ಲ. ಮುಟ್ಟಿನ ನೋವನ್ನು ಕೆಲವರು ಕಡೆಗಣಿಸುತ್ತಾರೆ. ಮನೆ ಕೆಲಸ ಮಾಡುವಂತೆ ಒತ್ತಡ ಹೇರ್ತಾರೆ. ಆದ್ರೆ ವೈದ್ಯರು ಇದು ಹೃದಯಾಘಾತದ ನೋವಿನಂತೆ ಇರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಷ್ಟಕ್ಕೂ ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ಯಾಕೆ ರಜೆ ನೀಡ್ಬೇಕು ಎಂಬುದನ್ನು ಹೇಳ್ತೇವೆ.
ಮುಟ್ಟಿ (Periods) ನ ಸಮಯದಲ್ಲಿ ವಿಶ್ರಾಂತಿ (Rest) ಏಕೆ ಬೇಕು? :
ದೈಹಿಕ ಅಸ್ವಸ್ಥತೆ (Physically Ill) : ಮುಟ್ಟಿನ ಸಮಯದಲ್ಲಿ ವಿಶ್ರಾಂತಿ ಏಕೆ ಅಗತ್ಯ ಎಂಬ ಪ್ರಶ್ನೆಗೆ ಮೊದಲ ಉತ್ತರ ಈ ಸಮಯದಲ್ಲಿ ಕಾಡುವ ದೈಹಿಕ ಅಸ್ವಸ್ಥತೆ. ಒಂದು ಸ್ಥಳದಲ್ಲಿ ಗಾಯ (Injury) ವಾದ್ರೆ ಅಥವಾ ರಕ್ತಸ್ರಾವವಾದ್ರೆ ನೋವಾಗುತ್ತೆ. ಇನ್ನು ಪಿರಿಯಡ್ಸ್ ಸಮಯದಲ್ಲಿ ಐದು ದಿನ ರಕ್ತಸ್ರಾವವಾದ್ರೆ ನೋವು ಎಷ್ಟಾಗುತ್ತೆ ಎಂಬುದನ್ನು ಊಹಿಸಿ.
MENSTRUAL LEAVE: ಸ್ತ್ರೀಯರಿಗೆ ಮುಟ್ಟಿನ ರಜೆ ಸರ್ಕಾರದ ನೀತಿ ಎಂದ ಸುಪ್ರೀಂಕೋರ್ಟ್
ಬದಲಾಗುತ್ತೆ ಮೂಡ್ (Mood) : ಪಿರಿಯಡ್ಸ್ ಸಮಯದಲ್ಲಿ ದೈಹಿಕ ಅಸ್ವಸ್ಥತೆ ಮಾತ್ರವಲ್ಲ ಮೂಡ್ ಕೂಡ ಬದಲಾಗುತ್ತದೆ. ಕೆಲ ಮಹಿಳೆಯರಿಗೆ ಮುಟ್ಟಿನ ನೋವಿಗಿಂತ ಮೂಡ್ ಬದಲಾವಣೆಯೇ ದೊಡ್ಡ ಸಮಸ್ಯೆಯಾಗಿರುತ್ತದೆ. ಅತಿಯಾದ ಕೋಪ, ಸಣ್ಣ ವಿಚಾರಕ್ಕೆ ಅಳು, ಖಿನ್ನತೆ, ಅತಿಯಾದ ಮಾತು, ತೀರ ಮೌನ ಹೀಗೆ ಪಿರಿಯಡ್ಸ್ ಸಮಯದಲ್ಲಿ ಮಹಿಳೆಯರ ಮೂಡ್ ಬದಲಾಗುತ್ತಿರುತ್ತದೆ. ಎಲ್ಲರಿಗೂ ಸಮಸ್ಯೆ ಒಂದೇ ಆಗಿರುತ್ತೆ ಎಂದಲ್ಲ. ಹಾಗೆಯೇ ಮಹಿಳೆಯರು PCOD ಮತ್ತು PCOS ನಂತಹ ಸಮಸ್ಯೆಗಳನ್ನು ಹೊಂದಿದ್ದರೆ ಈ ಸಮಯದಲ್ಲಿ ಅವರ ಸಮಸ್ಯೆ ಮತ್ತಷ್ಟು ಹೆಚ್ಚಿರುತ್ತದೆ. ಅಸಹನೀಯ ನೋವನ್ನು ಮಹಿಳೆಯರು ಅನುಭವಿಸುತ್ತಾರೆ.
ಹಾಸಿಗೆ (Bed) ಯಿಂದ ಏಳೋದು ಕಷ್ಟ : ಪ್ರತಿ ತಿಂಗಳು ಪಿರಿಯಡ್ಸ್ ಬರುತ್ತೆ ನಿಜ. ಹಾಗಂತ ಅದು ಮಹಿಳೆಯರಿಗೆ ಎಂದೂ ಅಭ್ಯಾಸವಾಗೋದಿಲ್ಲ. ಯಾಕೆಂದ್ರೆ ಪ್ರತಿ ತಿಂಗಳು ಹೊಸ ಹೊಸ ಸಮಸ್ಯೆಯನ್ನು ಮಹಿಳೆ ಎದುರಿಸುತ್ತಾಳೆ. ಮುಟ್ಟಿನ ಸಮಯದಲ್ಲಿ ಕೆಲವರಿಗೆ ವಿಪರೀತ ಬೆನ್ನು ನೋವು (Pain) , ಕಾಲು ನೋವು ಕಾಡುತ್ತದೆ. ಅವರು ಹಾಸಿಗೆಯಿಂದ ಏಳೋದೆ ಕಷ್ಟವಾಗುತ್ತದೆ. ಮೂರು ದಿನ ಇಲ್ಲವೆ ಪಿರಿಯಡ್ಸ್ ಆದ ಒಂದು ದಿನ ಅವರಿಗೆ ವಿಶ್ರಾಂತಿ ಅಗತ್ಯವಾಗಿರುತ್ತದೆ. ತಲೆ ನೋವು, ವಾಂತಿ, ಹೊಟ್ಟೆ, ಕಿಬ್ಬೊಟ್ಟೆ ನೋವಿನಿಂದ ಆಹಾರ ಸೇವನೆ ಮಾಡಲೂ ಸಾಧ್ಯವಾಗದೆ ನೋವು ತಿನ್ನುವ ಅನೇಕ ಮಹಿಳೆಯರಿದ್ದಾರೆ.
ಸ್ಟಿಲ್ ಬರ್ತ್ ತಪ್ಪಿಸಲು ಇಂದಿನಿಂದ ಈ ಕೆಲ್ಸ ಮರೆಯದೆ ಮಾಡಿ
ಪಿರಿಯಡ್ಸ್ ವೇಳೆ ಮಹಿಳೆಯನ್ನು ಕಾಡುತ್ತೆ ಈ ಸಮಸ್ಯೆ : ಮುಟ್ಟಾದಾಗ ಕೆಲ ಮಹಿಳೆಯರಿಗೆ ಅತಿಯಾದ ರಕ್ತಸ್ರಾವವಾಗುತ್ತದೆ. ಪದೇ ಪದೇ ಪ್ಯಾಡ್ ಬದಲಿಸಬೇಕಾಗುತ್ತದೆ. ಕಚೇರಿಯಲ್ಲಿ ಕೆಲಸದ ಮಧ್ಯೆ ಪ್ಯಾಡ್ ಬದಲಾವಣೆ ಕೂಡ ಕಷ್ಟದ ಕೆಲಸ. ಕಚೇರಿಯಿಂದ ಹೊರಗೆ ಕೆಲಸ ಮಾಡುವ ಮಹಿಳೆಯರಿಗೆ ಪ್ಯಾಡ್ ಜೊತೆ ಮೂತ್ರ ವಿಸರ್ಜನೆ ಕೂಡ ಸಾಧ್ಯವಾಗೋದಿಲ್ಲ. 6 – 7 ಗಂಟೆಗಳ ಕಾಲ ನೋವಿನ ಜೊತೆ ಒಂದೇ ಪ್ಯಾಡ್ ನಲ್ಲಿರೋದು ಕಷ್ಟವಾಗುತ್ತದೆ. ಬಟ್ಟೆಗಳಿಗೆ ಕಲೆಯಾದ್ರೆ ಅದು ಮತ್ತಷ್ಟು ಮುಜುಗರವನ್ನು ತರುತ್ತದೆ. ಈ ಸಮಯದಲ್ಲಿ ಮಹಿಳೆಯರ ದೇಹಕ್ಕೆ ಸ್ವಲ್ಪ ವಿಶ್ರಾಂತಿ ಸಿಕ್ಕರೆ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣಬಹುದು.