ಹೆಣ್ಮಕ್ಳು ಬಾಗಿಲು ಹಾಕ್ಕೊಂಡು ಡ್ರೆಸ್ ಮಾಡ್ಕೋಳೋದು ಓಕೆ, ಬರುವಾಗ ಎಲ್ಲಾ ತೋರಿಸೋದ್ ಯಾಕೆ?
ಲೇಡೀಸು ಬಾಗಿಲು ಹಾಕ್ಕೊಂಡು ಡ್ರೆಸ್ ಮಾಡ್ಕೋಳೋದು ಓಕೆ, ಬರುವಾಗ ಎಲ್ಲಾ ತೋರಿಸೋದು ಯಾಕೆ ಎಂಬ ಪ್ರಶ್ನೆ ಫೇಸ್ಬುಕ್ನಲ್ಲಿ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.

ಮಹಿಳೆಯರ ಮೇಲೆ ಇದಾಗಲೇ ಲೆಕ್ಕವಿಲ್ಲದಷ್ಟು ಜೋಕ್ಸ್, ಮೀಮ್ಸ್ಗಳು ಬಂದಿವೆ. ಅದರಲ್ಲಿಯೂ ಗಂಡ-ಹೆಂಡತಿಯರ ಜೋಕ್ಗಳಿಗೆ ಹೋಲಿಸಿದರೆ ಹೆಚ್ಚು ಜೋಕ್ಗಳು ಇರುವುದು ಹೆಣ್ಣುಮಕ್ಕಳ ಮೇಲೆಯೇ ಎನ್ನುವುದೂ ಸುಳ್ಳಲ್ಲ. ಕೆಲವೊಂದನ್ನು ತಮಾಷೆಯಾಗಿ ತೆಗೆದುಕೊಳ್ಳುವ ಹಾಗಿದ್ದರೆ, ಕೆಲವು ಸಲ ತಮಾಷೆಯೇ ವಿಪರೀತ ಎನ್ನಿಸುವುದೂ ಉಂಟು. ಅದೇನೇ ಇದ್ದರೂ ಅದ್ಯಾಕೋ ಗೊತ್ತಿಲ್ಲ, ಇಂಥ ಮೀಮ್ಸ್ಗಳು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಲೇ ಇರುತ್ತವೆ. ಅದರಲ್ಲಿಯೂ ಯುವತಿಯರ ಡ್ರೆಸ್ ವಿಷಯದಲ್ಲಂತೂ ಮೀಮ್ಸ್ಗಳು ಹೆಚ್ಚೇ ಎಂದು ಹೇಳಬಹುದು.
ಈಗ ಅಂಥದ್ದೇ ಒಂದು ತಮಾಷೆಯ ಪ್ರಶ್ನೆಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಹಸ್ರಾರು ಮಂದಿ ಈ ಪ್ರಶ್ನೆಗೆ ಭಲೇ ಭಲೇ ಎನ್ನುತ್ತಿದ್ದಾರೆ. ಮ್ಯಾಡ್ ಮಡ್ ಟಿವಿ (Mad Mud TV) ಎಂಬ ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿದ್ದು, ಎಲ್ಲರೂ ತಮ್ಮದೂ ಅದೇ ಪ್ರಶ್ನೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ಆ ಪ್ರಶ್ನೆ ಏನೆಂದರೆ, ಹುಡುಗಿಯರು ಡ್ರೆಸ್ ಮಾಡಿಕೊಳ್ಳುವಾಗ ಬಾಗಿಲು ಹಾಕಿಕೊಳ್ಳುವುದು ಸರಿಯಾಗಿದೆಯೇ ಇದೆ, ಅದೇನು ದೊಡ್ಡ ಸಮಸ್ಯೆಯಲ್ಲ, ಆದರೆ ಬಾಗಿಲು ತೆರೆದು ಹೊರಕ್ಕೆ ಬರುವಾಗ ಮಾತ್ರ ಅರೆನಗ್ನರಾಗಿ ಬಂದಿರುತ್ತಾರೆ. ಹಾಗಿದ್ದ ಮೇಲೆ ಬಾಗಿಲು ಮುಚ್ಚಿಕೊಂಡು ಡ್ರೆಸ್ ಹಾಕಿಕೊಳ್ಳುವುದು ಯಾಕೆ ಎನ್ನುವುದು ಫೇಸ್ಬುಕ್ನಲ್ಲಿ ಕೇಳಿರುವ ಪ್ರಶ್ನೆ.
ಮಂಗಳೂರು ಬ್ಯೂಟಿ, ನಟಿ ಅನುಷ್ಕಾ ಶೆಟ್ಟಿಯಿಂದ ಮಹಿಳೆಯರಿಗೆ ಗುಡ್ ನ್ಯೂಸ್
ಇದಕ್ಕೆ ಲೆಕ್ಕವಿಲ್ಲದಷ್ಟು ಕಮೆಂಟ್ಗಳ (Comments) ಸುರಿಮಳೆಯಾಗುತ್ತಿದೆ. ಇನ್ನರ್ಧ ಮಾತ್ರ ಮುಚ್ಚಿಕೊಳ್ಳಲು ಇರಬಹುದೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಕೆಲವು ಮಹಿಳೆಯರೂ ಸೇರಿದಂತೆ ಹಲವರು, ಇದಕ್ಕೆ ತಮಾಷೆಯ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದು ವರ್ಷದ ಪ್ರಶ್ನೆಗೆ ಯೋಗ್ಯವಾಗಿದೆ, ಸೂಕ್ತ ಬಹುಮಾನ ನೀಡಲಾಗುವುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಕೆಲವರು ಹೌದಲ್ವಾ? ಇದು ನಮಗೆ ಹೊಳೆದೇ ಇರಲಿಲ್ಲ ಎಂದಿದ್ದರೆ, ಇನ್ನು ಕೆಲವರು, ನನಗೂ ಈ ಪ್ರಶ್ನೆ ಯಾವಾಗಲೂ ಕಾಡುತ್ತಿತ್ತು. ಆದರೆ ಹೇಳಲು ಭಯವಾಗಿತ್ತು. ಅದಕ್ಕೇ ಸುಮ್ಮನಾಗಿದ್ದೆ ಎನ್ನುತ್ತಿದ್ದಾರೆ.
ಇಂದು ಫ್ಯಾಷನ್ (Fashion) ಬದಲಾಗಿದೆ. ಅದರಲ್ಲಿಯೂ ನಟಿಯರನ್ನು ಫಾಲೋ ಮಾಡುವ ಬಹುದೊಡ್ಡ ವರ್ಗವೇ ಇದೆ. ಅವರು ಮಾಡಿದಂತೆಯೇ ತಾವೂ ಮಾಡಬೇಕು ಎಂದುಕೊಳ್ಳುವವರೂ ಒಂದು ಕಡೆಯಾದರೆ, ವಿದೇಶಿ ಸಂಸ್ಕೃತಿಗೆ ಮೊರೆ ಹೋಗುತ್ತಿರುವವರು ಇನ್ನು ಕೆಲವರು. ವಿದೇಶಿಗರು ಭಾರತೀಯ ಸಂಸ್ಕೃತಿಯನ್ನು ತಮ್ಮದಾಗಿಸಿಕೊಂಡು ಸೀರೆಯುಡಲು ನೋಡುತ್ತಿದ್ದರೆ, ನಮ್ಮ ಯುವತಿಯರು ಸೀರೆಯಲ್ಲಿಯೂ ದೇಹ ಪ್ರದರ್ಶನ ಮಾಡುವಲ್ಲಿ ನಿಸ್ಸೀಮರಾಗಿದ್ದಾರೆ. ಅಷ್ಟಕ್ಕೂ ಇವೆಲ್ಲವೂ ನಟಿಯರಿಂದ ಪ್ರಭಾವಿತವಾಗಿದ್ದೇ ಎನ್ನಲಾಗುತ್ತಿದೆ. ಏಕೆಂದರೆ ಎಲ್ಲರಿಗೂ ತಿಳಿದಿರುವಂತೆ ಇಂದು ಬಾಲಿವುಡ್ ಮಾತ್ರವಲ್ಲದೇ ಎಲ್ಲಾ ಸಿನಿಮಾಗಳಲ್ಲಿಯೂ ಪೈಪೋಟಿಗೆ ಬಿದ್ದವರಂತೆ ದೇಹ ಪ್ರದರ್ಶನ ಯಥೇಚ್ಛವಾಗಿ ನಡೆಯುತ್ತಿದ್ದು, ಇದು ಹಲವು ಯುವತಿಯರ ಮೇಲೂ ಪ್ರಭಾವ ಬೀರುತ್ತಿದೆ ಎಂಬ ಆರೋಪವೂ ಇದೆ. ಇಂಥ ಸಂದರ್ಭದಲ್ಲಿ ಈ ಪ್ರಶ್ನೆ ಯೋಗ್ಯವಾಗಿದ್ದು ಎಂದು ಹಲವರು ಹೇಳುತ್ತಿದ್ದಾರೆ.
'ಹೆಣ್ಣು ಏನ್ ಮಾಡ್ಬೇಕು ನೀವೇ ಹೇಳ್ಬಿಡಿ' ಎಂಬ ಭಾಗ್ಯಳ ಪ್ರತಿ ಮಾತಿಗೂ ಭಾವುಕರಾದ ನೆಟ್ಟಿಗರು