ಮಂಗಳೂರು ಬ್ಯೂಟಿ, ನಟಿ ಅನುಷ್ಕಾ ಶೆಟ್ಟಿಯಿಂದ ಮಹಿಳೆಯರಿಗೆ ಗುಡ್ ನ್ಯೂಸ್
ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಖುಷಿಯಲ್ಲಿದ್ದು, ಇದೀಗ ಮಹಿಳೆಯರಿಗಾಗಿ ಗುಡ್ನ್ಯೂಸ್ ನೀಡಿದ್ದಾರೆ. ಅವರು ಹೇಳಿದ್ದೇನು?

ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ತೆಲುಗು, ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಕನ್ನಡದಲ್ಲಿಯೂ ಮಾಡುವೆ ಎಂದಿದ್ದರೂ ಇದುವರೆಗೂ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಇದೀಗ ತೆಲುಗು ಚಿತ್ರ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' (Mrs Shetty Mrs Poli Shetty) ಸಿನಿಮಾದ ಖುಷಿಯಲ್ಲಿದ್ದಾರೆ. ಮೂರು ವರ್ಷಗಳ ಬಳಿಕ ಮತ್ತೆ ತೆರೆಮೇಲೆ ಆಗಮಿಸುತ್ತಿರೋ ಅನುಷ್ಕಾ ಅವರ ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ ಚಿತ್ರ ಇದೇ 7ರಂದು ಬಿಡುಗಡೆ ಆಗಿದೆ. ಮಹೇಶ್ ಬಾಬು ಪಿಚಿಗೊಲ್ಲ ನಿರ್ದೇಶನದಲ್ಲಿ ಮೂಡಿಬಂದಿದೆ ಈ ಚಿತ್ರ. ಈ ಸಿನಿಮಾದಲ್ಲಿ ಶೆಫ್ ಆಗಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ.
ಅನುಷ್ಕಾ ಶೆಟ್ಟಿ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಮಂದಿ ಫಾಲೋ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಇನ್ಸ್ಟಾಗ್ರಾಮ್ನಲ್ಲಿ 30 ಲಕ್ಷ ಫ್ಯಾನ್ಸ್ ಹೊಂದಿದ್ದಾಗ ಇವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಅನುಷ್ಕಾ ಶೆಟ್ಟಿ (Anushka Shetty) ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ಆಗಾಗ ಟ್ವೀಟ್ ಮಾಡುತ್ತಾರೆ. ವಿಶೇಷ ಸಂದರ್ಭಗಳಲ್ಲಿ ಅವರು ಕನ್ನಡದಲ್ಲಿ ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ನಟಿ ಬರೋಬ್ಬರಿ 10 ಲಕ್ಷ ಫಾಲೋವರ್ಸ್ ಪಡೆದಿದ್ದು, ಈ ಖುಷಿಯಲ್ಲಿ ಟ್ವೀಟ್ ಮಾಡಿದ್ದರು. ತಮ್ಮ ಫ್ಯಾನ್ಸ್ಗೆ ಹಾರ್ಟ್ ಎಮೋಜಿ ಮೂಲಕ ಧನ್ಯವಾದ ಅರ್ಪಿಸಿದ್ದಾರೆ. 2020ರಲ್ಲಿ ಅನುಷ್ಕಾ ಶೆಟ್ಟಿ ಅವರು ಟ್ವಿಟರ್ನಲ್ಲಿ ಖಾತೆ ತೆರೆದಿದ್ದಾರೆ. ಎರಡೂವರೆ ವರ್ಷಗಳಲ್ಲಿಯೂ ಒಂದು ಮಿಲಿಯನ್ ಅಂದರೆ 10 ಲಕ್ಷ ಹಿಂಬಾಲಕರನ್ನು ಪಡೆದಿದ್ದಾರೆ. ಎಲ್ಲರೂ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಮದ್ವೆಗೆ ರೆಡಿಯಾಗಿದ್ದಾರೆ ಮಂಗಳೂರು ಬೆಡಗಿ ಅನುಷ್ಕಾ ಶೆಟ್ಟಿ: ಆದ್ರೆ... ನಟಿ ಹೇಳಿದ್ದೇನು?
ಈಗ ಅದೇ ಟ್ವಿಟರ್ ಮೂಲಕ ಇನ್ನೊಂದು ಗುಡ್ನ್ಯೂಸ್ ನೀಡಿದ್ದಾರೆ. 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರದ ಯಶಸ್ಸಿನಲ್ಲಿರುವ ನಟಿ ತಮ್ಮ ಮಹಿಳಾ ಫ್ಯಾನ್ಸ್ ಗುಡ್ ನ್ಯೂಸ್ ನೀಡಿದ್ದಾರೆ. ಇದರ ಕುರಿತು ಟ್ವಿಟರ್ ಖಾತೆಯಲ್ಲಿ ನಟಿ ಮಾಹಿತಿ ಶೇರ್ ಮಾಡಿದ್ದಾರೆ. ತಮ್ಮ ಸಿನಿಮಾ ಗೆದ್ದಿರುವುದಕ್ಕೆ ಧನ್ಯವಾದ ಸಲ್ಲಿಸಿರುವ ಅನುಷ್ಕಾ, ಇದೇ 14ರಂದು ಮಹಿಳೆಯರಿಗೆಂದೇ ಚಿತ್ರದ ವಿಶೇಷ ಷೋ ಆಯೋಜಿಸಿರುವುದಾಗಿ ತಿಳಿಸಿದ್ದಾರೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಚಿತ್ರಮಂದಿರಗಳಲ್ಲಿ ಈ ಷೋ ನಡೆಯಲಿದೆ. ಇದಕ್ಕೆ ಎಲ್ಲಾ ಮಹಿಳೆಯರು ತಪ್ಪದೇ ಬನ್ನಿ ಎಂದಿದ್ದಾರೆ ನಟಿ.
ಕೆಲ ದಿನಗಳ ಹಿಂದೆ ನಟಿಗೆ ಮದುವೆಯ ಬಗ್ಗೆ ಕೇಳಲಾಗಿತ್ತು. ಅದಕ್ಕೆ ಅವರು, 'ನಿಜ ಹೇಳಬೇಕೆಂದರೆ, ಈ ಪ್ರಶ್ನೆಗೆ ನನ್ನ ಬಳಿ ನಿಖರ ಉತ್ತರವಿಲ್ಲ. ಸಮಯ ಕೂಡಿಬಂದಾಗ ಮದುವೆ ಆಗಲಿದೆ. ಮದುವೆ ಎಂಬುದು ನನ್ನ ಪಾಲಿಗೆ ಅದಾಗಿಯೇ ಘಟಿಸಬೇಕು. ಅದಕ್ಕೆ ಅದರದೇ ಆದ ಸಮಯ ಬೇಕು ಎಂದು ನಾನು ನಂಬುತ್ತೇನೆ. ಹಾಗಾಗಿ ಸದ್ಯಕ್ಕೆ ಆ ಬಗ್ಗೆ ನನ್ನ ಬಳಿ ಉತ್ತರವಿಲ್ಲ' ಎಂದಿದ್ದರು. ಪ್ರೀತಿ ಮತ್ತು ಭಾವನೆಗಳಿಲ್ಲದೆ ಮದುವೆಯಾಗುವುದರಲ್ಲಿ ಅರ್ಥವಿಲ್ಲ ಎಂದು ಅನುಷ್ಕಾ ಹೇಳಿದ್ದರು. ಅಂದಹಾಗೆ ನಟಿ ಅನುಷ್ಕಾ ಶೆಟ್ಟಿಗೆ (Anushka Shetty) ಈಗ 41 ವರ್ಷ ವಯಸ್ಸು.
Anushka Shetty ಟ್ವಿಟರ್ನಲ್ಲಿ ದಾಖಲೆಯ ಖುಷಿ ಹಂಚಿಕೊಂಡ್ರೆ ಫ್ಯಾನ್ಸ್ ಹೀಗ್ ಹೇಳಬಹುದಾ?