ಹೆಣ್ಣುಮಕ್ಕಳ ಅತ್ಯಾಕರ್ಷಕ ಆಭರಣಗಳಲ್ಲೊಂದು ಬಳೆಗಳು. ಸುಂದರವಾದ ಬಣ್ಣ ಬಣ್ಣದ ಬಳೆಗಳು ಕೈಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಆದರೆ ಹಲವು ಬಗೆಯ ಬಣ್ಣಗಳಿದ್ದರೂ ಮದುವೆಗೂ ಮುನ್ನ ವಧು ಕೆಂಪು ಮತ್ತು ಹಸಿರು ಬಳೆಗಳನ್ನು ಧರಿಸುವುದೇಕೆ ? ಅದರ ಹಿಂದಿರುವ ಕಾರಣವೇನು ?

ಹೆಣ್ಣುಮಕ್ಕಳು ಆಭರಣಪ್ರಿಯರು. ಕಿವಿಯೋಲೆ, ನೆಕ್ಲೇಸ್, ಬಳೆ, ಕಾಲ್ಗೆಜ್ಜೆಯನ್ನು ಧರಿಸಲು ಇಷ್ಟಪಡುತ್ತಾರೆ. ಅದರಲ್ಲೂ ಗಲಗಲ ಸದ್ದು ಮಾಡುವ ಕೈ ಬಳೆಗಳು ಹೆಣ್ಣು ಮಕ್ಕಳಿಗೆ ತುಂಬಾ ಪ್ರಿಯವಾಗಿವೆ. ಬಳೆಗಳಲ್ಲೂ ಹಲವು ವಿಧಗಳಿವೆ ಗಾಜಿನ ಬಳೆಗಳು, ಮೆಟಲ್ ಬ್ಯಾಂಗಲ್ಸ್, ಚಿನ್ನದ ಬಳೆಗಳು, ಬೆಳ್ಳಿಯ ಬಳೆಗಳು, ಪ್ಲಾಸ್ಟಿಕ್ ಬಳೆಗಳು, ವೆಲ್ವೆಟ್ ಬಳೆಗಳು ಹೀಗೆ ಹಲವು. ಇದರಲ್ಲೂ ಎಲ್ಲಾ ರೀತಿಯ ಬಳೆಗಳಲ್ಲೂ ವೆರೈಟಿ ಬಣ್ಣಗಳಿರುತ್ತವೆ. ಆದರೆ ಇಷ್ಟೆಲ್ಲಾ ಬಣ್ಣಗಳಿದ್ದರೂ ಮದುವೆಗೂ ಮುನ್ನ ವಧು ಕೆಂಪು ಮತ್ತು ಹಸಿರು ಬಳೆಗಳನ್ನು ಧರಿಸುವುದೇಕೆ? ಅದರ ಹಿಂದದೆ ನಿರ್ಧಿಷ್ಟವಾಗಿ ಯಾವುದಾದರೂ ಕಾರಣವಿದೆಯಾ ?

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮದುವೆಯು (Marriage) ಪ್ರಮುಖ ಪಾತ್ರವನ್ನು ವಹಿಸುತ್ತದೆ. ಅದರಲ್ಲೂ ಮದುವೆಯ ಬಗ್ಗೆ ಹೆಣ್ಣುಮಕ್ಕಳು ಅದೆಷ್ಟೂ ಕನಸು ಕಂಡಿರುತ್ತಾರೆ. ಇಂಥದ್ದೇ ಬಟ್ಟೆ ಹಾಕಿಕೊಳ್ಳಬೇಕು, ಇಂಥದ್ದೇ ಆಭರಣ (Jewellery) ಧರಿಸಬೇಕೆಂದು ಪ್ಲಾನ್ ಮಾಡಿರುತ್ತಾರೆ. ಭಾರತೀಯ ಸಂಪ್ರದಾಯದ ಮದುವೆ ಬಗ್ಗೆ ಹೇಳುವುದಾದರೆ, ಮದುವೆಯ ಮೊದಲು, ವಧುವಿನ ಮನೆಯಲ್ಲಿ ಅರಿಶಿನ ಶಾಸ್ತ್ರ, ಮೆಹಂದಿ ಮತ್ತು ಸಂಗೀತ ಸಮಾರಂಭದಂತಹ ಅನೇಕ ಆಚರಣೆಗಳು ನಡೆಯುತ್ತವೆ.

ದಾಂಪತ್ಯ ಜಗಳ ನಿವಾರಿಸುವ ಜೊತೆಗೆ ಐಶಾರಾಮಿ ಜೀವನ ತಂದುಕೊಡುವ ಬಳೆಗಳು!

ಬಳೆಶಾಸ್ತ್ರದಲ್ಲಿ ಕೆಂಪು, ಹಸಿರು ಬಳೆಯನ್ನೇ ತೊಡಿಸುವುದು ಯಾಕಾಗಿ ?
ಭಾರತೀಯ ಸಂಪ್ರದಾಯದ ಪ್ರಕಾರ, ಮದುವೆಗೆ ಸುಮಾರು 2 ಅಥವಾ 3 ವಾರಗಳ ಮೊದಲು ವಧುವಿನ ಮನೆಯಲ್ಲಿ ಬಳೆಗಳನ್ನು (Bangles) ಧರಿಸುವ ಆಚರಣೆ ಇದೆ. ಇದರಲ್ಲಿ, ಹುಡುಗಿಯ ಸಹೋದರಿಯರು, ಅವಳ ಸ್ನೇಹಿತರು ಮತ್ತು ಇತರ ಕುಟುಂಬ ಸದಸ್ಯರು ಬಳೆಗಳನ್ನು ಧರಿಸುತ್ತಾರೆ. ಮದುವೆಯ ದಿನದವರೆಗೂ ಹುಡುಗಿ ಈ ಬಳೆಗಳನ್ನು ಧರಿಸಿರುತ್ತಾಳೆ. ಇನ್ನೂ ಕೆಲವು ಸಂಪ್ರದಾಯದಲ್ಲಿ ಮದುವೆಯ ಹಿಂದಿನ ದಿನ ರಾತ್ರಿ ಬಳೆಶಾಸ್ತ್ರ ನಡೆಸಿ ಹೆಣ್ಣಿಗೆ ಬಳೆ ತೊಡಿಸಲಾಗುತ್ತದೆ. ಆದರೆ ಈ ಸಂದರ್ಭದಲ್ಲಿ ಹೆಚ್ಚಾಗಿ ಕೆಂಪು ಹಾಗೂ ಹಸಿರು ಬಣ್ಣದ ಬಳೆಯನ್ನು (Red and Green bangles) ಧರಿಸುವುದು ಯಾಕೆ ?

ವಧು ಹಸಿರು ಕೆಂಪು ಬಳೆಗಳನ್ನೇ ಧರಿಸುವುದು ಯಾಕೆ ?
ವಿವಿಧ ಬಣ್ಣದ ಬಳೆಗಳು ವಿಭಿನ್ನ ಮಹತ್ವವನ್ನು ಹೊಂದಿವೆ. ಕೆಂಪು ಬಣ್ಣವು ಪ್ರೀತಿಯ (Love) ಸಂಕೇತ ಮತ್ತು ಹಸಿರು ಬಣ್ಣವು ಪ್ರಕೃತಿಯ ಸಂಕೇತವಾಗಿದೆ. ಇದಲ್ಲದೆ, ಹಿಂದೂ ಧರ್ಮದಲ್ಲಿ ಕೆಂಪು ಮತ್ತು ಹಸಿರು ಬಳೆಗಳು ವಧುವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತವೆ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಆಚರಣೆಯ ಸಮಯದಲ್ಲಿ, ಹುಡುಗಿಯ ಸಹೋದರಿಯರು, ಅವಳ ಸ್ನೇಹಿತರು ಮತ್ತು ಇತರ ಕುಟುಂಬ ಸದಸ್ಯರು ಹಸಿರು ಮತ್ತು ಕೆಂಪು ಬಣ್ಣವನ್ನು ಧರಿಸುತ್ತಾರೆ. ಹಾಗೆಯೇ ಬೆಳ್ಳಿ (Silver)ಯನ್ನು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ ಮತ್ತು ಚಿನ್ನದ ಬಳೆಗಳು ಅದೃಷ್ಟ ಮತ್ತು ಸಮೃದ್ಧಿಯ ಸಂಕೇತವಾಗಿದೆ. 

Fashion Tips : ನಿಮ್ಮ ವಾರ್ಡ್ರೋಬ್ ನಲ್ಲೂ ಇರಲಿ ವೆರೈಟಿ ಬಳೆಗಳು

ಮಾತ್ರವಲ್ಲ ಕೆಂಪು ಬಣ್ಣದ ಬಳೆಗಳು ಸಾಮೀಪ್ಯವನ್ನು ಸಂಕೇತಿಸುತ್ತವೆ ಎನ್ನಲಾಗುತ್ತದೆ. ಏಕೆಂದರೆ ವಧು (Bride) ತನ್ನ ಪತಿಯೊಂದಿಗೆ ನಿಕಟವಾಗಿ ಮತ್ತು ಆಳದಿಂದ ಸಂಪರ್ಕ ಹೊಂದಿರಬೇಕು. ಕೆಂಪು ಬಳೆಗಳು ಫಲವತ್ತತೆ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತವೆ ಮತ್ತು ವಧು ತನ್ನ ಮದುವೆಯ ದಿನದಿಂದ ಕನಿಷ್ಠ 40-45 ದಿನಗಳವರೆಗೆ ಬಳೆಯನ್ನು ಧರಿಸಬೇಕು ಎಂದು ಸೂಚಿಸಲಾಗುತ್ತದೆ. ಹಸಿರು, ಫಲವತ್ತತೆ, ಮಂಗಳಕರ ಮತ್ತು ಅದೃಷ್ಟ (Luck)ದಂತಹ ಬಹು ಧನಾತ್ಮಕ ಅರ್ಥಗಳನ್ನು ಹೊಂದಿದೆ. ಹೀಗಾಗಿ ಹಸಿರು ಬಣ್ಣವನ್ನು ವಿಶೇಷ ಬಣ್ಣವೆಂದು ಪರಿಗಣಿಸಲಾಗುತ್ತದೆ. 

ಇಂದಿನ ಆಧುನಿಕ ಯುಗದಲ್ಲಿ, ಜನರು ಅನೇಕ ಸಂಪ್ರದಾಯಗ(Tradition)ಳನ್ನು ಬದಲಾಯಿಸಿದ್ದಾರೆ. ಹಿಂದೆ, ಹುಡುಗಿಯರು ಹಸಿರು-ಕೆಂಪು ಬಳೆಗಳನ್ನು ಮಾತ್ರ ಧರಿಸುತ್ತಿದ್ದರು. ಅದೇ ಸಮಯದಲ್ಲಿ, ಇಂದು ಹಸಿರು ಮತ್ತು ಕೆಂಪು ಬಳೆಗಳ ಜೊತೆಗೆ, ಹುಡುಗಿಯರು ಬಣ್ಣಬಣ್ಣದ ಬಳೆಗಳನ್ನು ಸಹ ಮದುವೆಯ ದಿನ ಧರಿಸುತ್ತಾರೆ. ಆದರೂ ಸಾಂಪ್ರದಾಯಿಕವಾಗಿ ಕೆಂಪು ಹಾಗೂ ಹಸಿರು ಬಳೆಯ ಅರ್ಥವನ್ನು ತಿಳಿದರೆ ಯಾರಾದರೂ ಅಂಥಾ ಬಳೆಯನ್ನು ಧರಿಸಲು ಇಷ್ಟಪಡುವುದು ಖಂಡಿತ.