Asianet Suvarna News Asianet Suvarna News

ದಾಂಪತ್ಯ ಜಗಳ ನಿವಾರಿಸುವ ಜೊತೆಗೆ ಐಶಾರಾಮಿ ಜೀವನ ತಂದುಕೊಡುವ ಬಳೆಗಳು!

ಬಳೆ ಧರಿಸಿದ್ರೆ ಎಷ್ಟೊಂದು ಲಾಭವಿದೆ ಕೇಳಿದ್ರೆ ಖಂಡಿತಾ ಅಚ್ಚರಿ ಪಡ್ತೀರಿ! ಕೇವಲ ಸೌಂದರ್ಯವರ್ಧಕವಲ್ಲ, ಜ್ಯೋತಿಷ್ಯದಲ್ಲಿ ಬಳೆಗಳಿಗೆ ಇನ್ನೂ ಹೆಚ್ಚಿನ ಮಹತ್ವದ ಸ್ಥಾನವಿದೆ. 

Benefits Of Wearing Bangles As Per Astrology skr
Author
bangalore, First Published Jul 5, 2022, 12:24 PM IST

ಕೈಗಳ ಸೌಂದರ್ಯ ಹೆಚ್ಚಿಸುವ ಬಳೆಗಳು(bangles) ಹೆಣ್ಣುಮಕ್ಕಳ ಪಾಲಿಗೆ ವೈವಿಧ್ಯಮಯವಾಗಿ ಅಲಂಕರಿಸಿಕೊಳ್ಳಲು ಸಹಾಯ ಮಾಡುತ್ತವೆ. ಕೆಲವು ವರ್ಣರಂಜಿತ ಬಳೆಗಳಿಲ್ಲದೆ ನಮ್ಮ ಆಭರಣದ ಕ್ಲೋಸೆಟ್‌ಗಳು ಅಪೂರ್ಣವಾಗಿರುತ್ತವೆ. ಹೆಣ್ಣೊಬ್ಬಳು ಕೈ ತುಂಬಾ ಬಳೆಗಳನ್ನು ಧರಿಸಿ ಗಲಗಲನೆ ಮನೆ ತುಂಬಾ ಓಡಾಡುತ್ತಿದ್ದರೆ ಅದು ಮನೆಗೆ ತರುವ ಕಳೆಯೇ ಬೇರೆ. ಆದರೆ ಈಗೀಗ ಅದೇಕೋ ಹೆಣ್ಮಕ್ಕಳಿಗೆ ಬಳೆ ಎಂದರೇ ಅಲರ್ಜಿ. ತಾವು ಧರಿಸುವ ಫ್ಯಾಶನ್ ಉಡುಗೆಗೆ ಮ್ಯಾಚ್ ಅಗುವುದಿಲ್ಲ ಎಂದೋ, ಕೆಲಸ ಮಾಡಲು ಸಮಸ್ಯೆಯಾಗುತ್ತದೆ ಎಂದೋ ಅವರು ಬಳೆಗಳನ್ನು ಧರಿಸುವುದಿಲ್ಲ. ಆದರೆ, ಹಿಂದೂ ಧರ್ಮ, ಜೊತೆಗೆ ಜ್ಯೋತಿಷ್ಯ(Astrology)ದಲ್ಲಿ ಕೂಡಾ ಬಳೆಗಳ ಮಹತ್ವವನ್ನು ವಿವರಿಸಲಾಗಿದೆ. ಬಳೆಗಳನ್ನು ಹಾಕಿಕೊಳ್ಳುವುದರಿಂದ ಎಷ್ಟೆಲ್ಲ ಲಾಭಗಳಿವೆ(benefits) ಎಂದು ತಿಳಿದರೆ ನೀವು ಇನ್ನೆಂದೂ ಅವುಗಳಿಂದ ದೂರವಿರಲು ಸಬೂಬು ಹೇಳುವುದಿಲ್ಲ. 

ಗಾಜಿನ ಬಳೆಗಳಿಂದ ಹಿಡಿದು ಚಿನ್ನದ ಬಳೆಗಳವರೆಗೆ, ಆಯ್ಕೆ ಮಾಡಲು ಹಲವಾರು ವಿಧಗಳ ಬಳೆಗಳಿವೆ. ಬಳೆಗಳು ಯಾವುದೇ ಉಡುಪಿನೊಂದಿಗೆ ಬೆರೆಯುತ್ತವೆ ಮತ್ತು ತಕ್ಷಣವೇ ನಿಮ್ಮ ಸೌಂದರ್ಯ ಹೆಚ್ಚಿಸುತ್ತವೆ. ಬಳೆ ಎಂಬ ಪದವು ಸಂಸ್ಕೃತ ಪದ ಬಂಗಾಲಿ ಅಥವಾ ಬಾಂಗ್ರಿಯಿಂದ ಬಂದಿದೆ, ಅಂದರೆ ತೋಳುಗಳನ್ನು ಅಲಂಕರಿಸುವ ಆಭರಣಗಳು ಎಂದರ್ಥ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬಳೆಗಳು ಶುಕ್ರ ಗ್ರಹ(Venus)ದೊಂದಿಗೆ ಸಂಬಂಧ ಹೊಂದಿವೆ.

ಇಷ್ಟಾರ್ಥ ಸಿದ್ಧಿಗೆ ಗ್ರಹಗಳ ಪೂಜೆ ಹೀಗೆ ಮಾಡಿ

ಬಳೆಗಳನ್ನು ಧರಿಸುವುದರಿಂದ ಪ್ರಯೋಜನಗಳು
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಬಳೆಗಳು ಬಹಳಷ್ಟು ಮಹತ್ವವನ್ನು ಹೊಂದಿವೆ. ಮಹಿಳೆಯರು ನಿಯಮಿತವಾಗಿ ಬಳೆಗಳನ್ನು ಧರಿಸಿದರೆ ಅನೇಕ ಅದ್ಭುತ ಪ್ರಯೋಜನಗಳನ್ನು ಆನಂದಿಸಬಹುದು. 

ವಿವಾಹಿತ ಮಹಿಳೆಯರು ಬಳೆಗಳನ್ನು ಧರಿಸದಿದ್ದರೆ ಸಾಂಪ್ರದಾಯಿಕವಾಗಿ ಅದನ್ನು ಅಶುಭವೆಂದು ಪರಿಗಣಿಸಲಾಗಿದೆ. ಏಕೆಂದರೆ ಬಳೆಗಳನ್ನು ಧರಿಸದ ಮಹಿಳೆಯರು ತಮ್ಮ ವೈವಾಹಿಕ ಜೀವನ ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುವ ನಕಾರಾತ್ಮಕ ಶಕ್ತಿ(negative energy)ಯನ್ನು ಆಕರ್ಷಿಸುತ್ತಾರೆ ಎಂದು ನಂಬಿಕೆ ಇದೆ. ಮನೆಯ ಮಹಿಳೆಯರು ನಿಯಮಿತವಾಗಿ ಬಳೆಗಳನ್ನು ಧರಿಸಿದರೆ, ಅದು ಕುಟುಂಬದ ಎಲ್ಲ ಸದಸ್ಯರ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.

ಆರೋಗ್ಯ(health)
ಆರೋಗ್ಯಕರವಾಗಿ, ಬಳೆಗಳನ್ನು ಧರಿಸುವುದು ಪ್ರಯೋಜನಕಾರಿಯಾಗಿದೆ. ನಿಮ್ಮ ಮಣಿಕಟ್ಟಿನ ಮೇಲೆ ನೀವು ಬಳೆಗಳನ್ನು ಧರಿಸಿದಾಗ, ಅದು ಘರ್ಷಣೆಯನ್ನು ಉಂಟುಮಾಡುತ್ತದೆ, ಇದು ರಕ್ತ ಪರಿಚಲನೆಯಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ರಕ್ತದೊತ್ತಡದ ಹೆಚ್ಚಳದ ಸಾಧ್ಯತೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬಳೆಗಳನ್ನು ಧರಿಸುವ ಮಹಿಳೆಯರು ಕಡಿಮೆ ಆಯಾಸ ಮತ್ತು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಾರೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ, ಏಕೆಂದರೆ ಬಳೆಗಳ ಧನಾತ್ಮಕತೆಯು ಆರೋಗ್ಯ ಸಮಸ್ಯೆಗಳನ್ನು ತಗ್ಗಿಸುತ್ತದೆ.

ಭ್ರೂಣದ ಬೆಳವಣಿಗೆ
ಗರ್ಭಿಣಿಯರಿಗೆ(pregnants) ವಿಶೇಷವಾಗಿ 7 ನೇ ತಿಂಗಳ ನಂತರ ಬಳೆಗಳನ್ನು ಧರಿಸಲು ಶಿಫಾರಸು ಮಾಡಲಾಗಿದೆ. 7 ನೇ ತಿಂಗಳ ನಂತರ, ಮಗುವಿನ ಮೆದುಳಿನ ಕೋಶಗಳ ಬೆಳವಣಿಗೆ ನಡೆಯುತ್ತದೆ ಮತ್ತು ಮಗುವು ವಿಭಿನ್ನ ಶಬ್ದಗಳನ್ನು ಗುರುತಿಸಲು ಪ್ರಾರಂಭಿಸುತ್ತದೆ. ಬಳೆಗಳ ಶಬ್ದವು ಮಗುವಿನ ಮೆದುಳಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದು ಶೀಘ್ರದಲ್ಲೇ ತಾಯಿಯಾಗಲಿರುವ ಹೆಣ್ಣಿಗೂ ಪ್ರಯೋಜನವನ್ನು ನೀಡುತ್ತದೆ. ಏಕೆಂದರೆ ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ಅವರ ಮನಸ್ಸನ್ನು ಶಾಂತಗೊಳಿಸುತ್ತದೆ.

ಇನ್ನೈದು ದಿನದಲ್ಲಿ ಚಾತುರ್ಮಾಸ ಆರಂಭ, ನೀವೇನು ಮಾಡಬೇಕು?

ದಾಂಪತ್ಯ ಜೀವನ(married life)
ಬಳೆಗಳು ಮಹಿಳೆಯ ಗಂಡನ ಯೋಗಕ್ಷೇಮವನ್ನು ಸಂಕೇತಿಸುತ್ತವೆ. ಆದರೆ ಅಷ್ಟೆ ಅಲ್ಲ, ಬಳೆಗಳನ್ನು ಧರಿಸುವುದು ದಂಪತಿಯ ನಡುವಿನ ಸಂಬಂಧವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಐಶಾರಾಮಿ ಜೀವನ(luxury)
ಬಳೆಗಳು ಒಂದು ಫ್ಯಾಶನ್ ಪರಿಕರವಾಗಿದೆ ಮತ್ತು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಐಷಾರಾಮಿ ಮತ್ತು ಸೌಂದರ್ಯದ ಗ್ರಹ ಶುಕ್ರಕ್ಕೆ ಸಂಬಂಧಿಸಿದೆ. ನಿಮ್ಮ ಜಾತಕದಲ್ಲಿ ಶುಕ್ರ ಗ್ರಹವು ದುರ್ಬಲ ಸ್ಥಾನವನ್ನು ಹೊಂದಿದ್ದರೆ ನೀವು ಬಳೆಗಳನ್ನು ಧರಿಸಬೇಕು. ಇದು ಗ್ರಹವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಐಷಾರಾಮಿ ಜೀವನವನ್ನು ನಡೆಸಲು ನಿಮಗೆ ಸಹಾಯ ಮಾಡುತ್ತದೆ.

ಧನಾತ್ಮಕ ಶಕ್ತಿ(Positive energy)
ಗಾಜಿನ ಬಳೆಗಳನ್ನು ಧರಿಸುವುದು ಮಹಿಳೆಯರಿಗೆ ಹೆಚ್ಚು ಪ್ರಯೋಜನಕಾರಿ. ಗಾಜಿನ ಬಳೆಗಳು ಸುತ್ತಮುತ್ತಲಿನ ಸಕಾರಾತ್ಮಕತೆಯನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸುತ್ತಮುತ್ತಲಿನ ಯಾವುದೇ ನಕಾರಾತ್ಮಕ ಶಕ್ತಿಯನ್ನು ಶುದ್ಧೀಕರಿಸುತ್ತದೆ.

ಮನೆಯ ವಾಸ್ತು ದೋಷಕ್ಕೆ ಹೆಚ್ಚು ಖರ್ಚಿಲ್ಲದ ಪರಿಹಾರಗಳು..

ಯಾವ ಬಣ್ಣದ ಬಳೆ?
ನಿರ್ದಿಷ್ಟ ಬಣ್ಣಗಳನ್ನು ಧರಿಸುವುದು ಮಹಿಳೆಯರಿಗೆ ಪ್ರಯೋಜನಕಾರಿಯಾಗಿದೆ. ಕೆಂಪು ಮತ್ತು ಹಸಿರು ಬಣ್ಣಗಳನ್ನು ಅತ್ಯಂತ ಮಂಗಳಕರ ಬಣ್ಣಗಳೆಂದು ಪರಿಗಣಿಸಲಾಗುತ್ತದೆ. ಕೆಂಪು ಮತ್ತು ಹಸಿರು ಬಳೆಗಳು ಧನಾತ್ಮಕ ಶಕ್ತಿ ಮತ್ತು ಅದೃಷ್ಟವನ್ನು ತರುತ್ತವೆ. ಆದಾಗ್ಯೂ, ಈ ಬಣ್ಣಗಳನ್ನು ವಿವಾಹಿತ ಮಹಿಳೆಯರು ಮಾತ್ರ ಧರಿಸಬೇಕು.
 

Follow Us:
Download App:
  • android
  • ios