ಡೆನ್ಮಾರ್ಕ್‌ನಲ್ಲಿ ಮೋದಿ ಜೊತೆ ಕಾಣಿಸಿಕೊಂಡ ಈ ನಾಲ್ಕು ಚೆಲುವೆಯರು ಯಾರು?

ಡೆನ್ಮಾರ್ಕ್‌ನಲ್ಲಿ ನಡೆದ ಎರಡನೇ ಭಾರತ- ನಾರ್ಡಿಕ್ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಾರ್ಡಿಕ್ ದೇಶಗಳ ನಾಲ್ವರು ಮಹಿಳಾ ನಾಯಕಿಯರೊಂದಿಗೆ ಭಾಗವಹಿಸಿದದರು. ಈ ನಾಲ್ಕೂ ನಾಯಕಿಯರು ಇನ್ನೂ ಸಣ್ಣ ಪ್ರಾಯದವರು, ಪರಿಸರ ಹೋರಾಟದ ಮುಂಚೂಣಿಯಲ್ಲಿರುವವರು.

 

Who are these Ladies shown in photo with Narendra Modi in Denmark

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ನಾರ್ಡಿಕ್ ದೇಶಗಳ ನಾಲ್ವರು ಮಹಿಳಾ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಈ ಶೃಂಗಸಭೆಯಲ್ಲಿ ಐಸ್‌ಲ್ಯಾಂಡ್‌ನ ಪ್ರಧಾನಿ ಕ್ಯಾಟ್ರಿನ್ ಜಾಕೋಬ್ಸ್‌ಡೋಟ್ಟಿರ್, ಫಿನ್‌ಲ್ಯಾಂಡ್‌ನ ಪ್ರಧಾನಿ ಸನ್ನಾ ಮರಿನ್, ಸ್ವೀಡನ್‌ನ ಪ್ರಧಾನಿ ಮ್ಯಾಗ್ಡಲೀನಾ ಆಂಡರ್ಸನ್ ಮತ್ತು ಡೆನ್ಮಾರ್ಕ್‌ನ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಭಾಗವಹಿಸಿದ್ದರು

ಇವರೆಲ್ಲಾ ಜಾಗತಿಕ ಹವಾಮಾನ ಆಂದೋಲನಕ್ಕೆ ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಇವರಲ್ಲಿ ಒಬ್ಬೊಬ್ಬನ ಪರಿಚಯ ಮಾಡಿಕೊಳ್ಳೋಣ ಬನ್ನಿ.

ಐಸ್‌ಲ್ಯಾಂಡ್‌ನ ಪ್ರಧಾನಿ ಕ್ಯಾಟ್ರಿನ್ ಜಾಕೋಬ್ಸ್‌ಡೊಟ್ಟಿರ್ 

ಐಸ್‌ಲ್ಯಾಂಡ್‌ನ ಪ್ರಧಾನಿ ಕ್ಯಾಟ್ರಿನ್ ಜಾಕೋಬ್ಸ್‌ಡೊಟ್ಟಿರ್ ಅವರು 2017ರಿಂದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷವಷ್ಟೇ ಎರಡನೇ ಅವಧಿಗೆ ಆಯ್ಕೆಯಾಗಿದ್ದಾರೆ. ಸ್ತ್ರೀವಾದಿ ಎಂದು ಖ್ಯಾತಿಯಾಗಿದ್ದಾರೆ. 46 ವರ್ಷದ ಈಕೆ ಮಾಜಿ ಪತ್ರಕರ್ತೆ ಐಸ್‌ಲ್ಯಾಂಡ್‌ನ ಫಲಿತಾಂಶ ಮತ್ತು ಕಾರಣ ಎಂದು ನಂಬಲಾಗಿದೆ. ಲಿಂಗ ಸಮಾನತೆಯ ಅತ್ಯುನ್ನತ ಮಟ್ಟವನ್ನು ಐಸ್‌ಲ್ಯಾಂಡ್ ಕಾಯ್ದುಕೊಂಡಿದೆ. 

ಜಾಕೋಬ್ಸ್‌ಡೋಟ್ಟಿರ್ ಪರಿಸರದ ಹೋರಾಟದ ಉತ್ಕಟ ಬೆಂಬಲಿಗಳು. 2000ರ ದಶಕದಲ್ಲಿ ಪೂರ್ವ ಐಸ್‌ಲ್ಯಾಂಡ್‌ನಲ್ಲಿ ವಿವಾದಾತ್ಮಕ ಜಲವಿದ್ಯುತ್ ಅಣೆಕಟ್ಟಿನ ನಿರ್ಮಾಣ ಆರಂಭವಾದಾಗ ವಿರೋಧಿಸಿ ಜನಪ್ರಿಯತೆ ಗಳಿಸಿದರು. 2002ರಲ್ಲಿ ಎಡ-ಹಸಿರು ಚಳವಳಿಯ ಯುವಜನತೆಯನ್ನು ಸೇರಿದರು. ಮುಂದಿನ ವರ್ಷ ಪಕ್ಷದ ಉಪಾಧ್ಯಕ್ಷರಾದರು ಮತ್ತು 2013ರಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2045ರ ವೇಳೆಗೆ ದೇಶದ ಇಂಗಾಲ ಹೊರಸೂಸುವಿಕೆ ನಿಲ್ಲಿಸುವುದು, ಜೌಗು ಪ್ರದೇಶಗಳನ್ನು ಮರುಸ್ಥಾಪಿಸುವುದು, ನವೀಕರಿಸಬಹುದಾದ ಇಂಧನ ಬಳಕೆ ಅವರ ಗುರಿ. 

Women Health : ಟೈಂ ಪಾಸ್ ಆಗ್ತಿಲ್ಲ ಅಂತಾ ಮೊಬೈಲ್ ಹಿಡಿಯೋ ಗರ್ಭಿಣಿಯರೇ ಇದನ್ನೋದಿ

ಫಿನ್‌ಲ್ಯಾಂಡ್‌ನ ಪ್ರಧಾನಿ ಸನ್ನಾ ಮರಿನ್

2019ರಲ್ಲಿ, 34ನೇ ವಯಸ್ಸಿನಲ್ಲಿ ಸನ್ನಾ ಮರಿನ್ ಅವರು ವಿಶ್ವದ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾದರು. ಎಡ-ಒಲವಿನ ಈ ನಾಯಕಿ ಫಿನ್‌ಲ್ಯಾಂಡ್‌ನಲ್ಲಿ ಪ್ರಧಾನ ಮಂತ್ರಿ ಸ್ಥಾನವನ್ನು ಹೊಂದಿದ ಮೂರನೇ ಮಹಿಳೆ ಮತ್ತು ಪ್ರಸ್ತುತ ಸಂಪೂರ್ಣವಾಗಿ ಮಹಿಳೆಯರ ನೇತೃತ್ವದ ಒಕ್ಕೂಟವನ್ನು ಮುನ್ನಡೆಸುತ್ತಿದ್ದಾರೆ. LGBTQ ವ್ಯಕ್ತಿಗಳಿರುವ "ರೇನ್‌ಬೋ ಫ್ಯಾಮಿಲಿ"ಯಲ್ಲಿ ತಾನು ಬೆಳೆದಿದ್ದೇನೆ ಎಂದು ಮರಿನ್ ಹೇಳುತ್ತಾರೆ.
ಮರಿನ್ ಪುರುಷ- ಸ್ತ್ರೀ ಸಮಾನತೆಯ ಪ್ರತಿಪಾದಕಿ. ಅದೇ ಆಕೆಯ ರಾಜಕೀಯದ ಗುರಿ. ಅವರು ಫಿನ್‌ಲ್ಯಾಂಡ್‌ನಲ್ಲಿ ಹೊಸ ಲಿಂಗ ನೀತಿಯನ್ನು ಪರಿಚಯಿಸಿದ್ದಾರೆ. ಲಿಂಗ ಸಮಾನತೆಯನ್ನು ಸುಧಾರಿಸುವ ಸಲುವಾಗಿ ಎರಡೂ ಪೋಷಕರಿಗೆ ಕುಟುಂಬ ರಜೆಯನ್ನು ವಿಸ್ತರಿಸಿದರು. ವಿಭಿನ್ನ ಲೈಂಗಿಕ ದೃಷ್ಟಿಕೋನದ ಜನರಿಗೆ ಮನ್ನಣೆ ನೀಡಲಾಯಿತು. ಫಿನ್‌ಲ್ಯಾಂಡ್ ವಿಶ್ವದ ಅತ್ಯಂತ ಪ್ರಗತಿಪರ ದೇಶಗಳಲ್ಲಿ ಒಂದೆಂದು ಪರಿಗಣಿಸಿರುವುದು ಆಶ್ಚರ್ಯವೇನಿಲ್ಲ.

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿಯ ತಾರೆಯಾಗಿರುವ ಮರಿನ್ ಹವಾಮಾನ ಬದಲಾವಣೆಯನ್ನು ಎದುರಿಸುವ ಮಾರ್ಗಗಳು, ಗುಣಮಟ್ಟದ ಆರೋಗ್ಯ ರಕ್ಷಣೆ ಮತ್ತು ಸಾಮಾಜಿಕ ಕಲ್ಯಾಣವನ್ನು ಒದಗಿಸುವ ಅವರ ಆಲೋಚನೆಗಳಿಂದಾಗಿ ತಮ್ಮದೇ ಪಕ್ಷದೊಳಗೆ ಪ್ರಗತಿಪರ ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಸ್ವೀಡನ್‌ ಪ್ರಧಾನ ಮಂತ್ರಿ ಮ್ಯಾಗ್ಡಲೀನಾ ಆಂಡರ್ಸನ್

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಸ್ವೀಡನ್‌ನ ನಾಯಕಿ ಮ್ಯಾಗ್ಡಲೀನಾ ಆಂಡರ್ಸನ್ ಅವರು 2021ರಲ್ಲಿ ಇಲ್ಲಿನ ಮೊದಲ ಮಹಿಳಾ ಪ್ರಧಾನ ಮಂತ್ರಿಯಾದರು. ಈಕೆಗೆ ಈಗ 54 ವರ್ಷ. ಈಕೆ ಅರ್ಥಶಾಸ್ತ್ರಜ್ಞೆ. ಕಡಿಮೆ ಆದಾಯದ ಕಾರ್ಮಿಕರನ್ನು ಬೆಂಬಲಿಸಲು ಕಲ್ಯಾಣ ಕಾರ್ಯಗಳನ್ನು ತಂದಿದ್ದಾರೆ. ಆಂಡರ್ಸನ್ ಅವರ ನೇಮಕಾತಿಗೆ ಅಡೆತಡೆಗಳಿದ್ದವು. ಅವರ ಪಕ್ಷದವರೇ ಅವರ ಬಜೆಟ್ ಅನ್ನು ಅನುಮೋದಿಸಲು ಹಿಂದೇಟು ಹಾಕಿದರು. ಈ ನಡುವೆ ಪೋಷಕರಿಗೆ ಹೆಚ್ಚುವರಿ ವೇತನದ ರಜೆ ನೀಡಿದರು. ಆಂಡರ್ಸನ್ ಹಣಕಾಸು ಸಚಿವರಾಗಿದ್ದಾಗಲೂ ಮಹಿಳೆಯರ ಗರ್ಭಪಾತ ಹಕ್ಕುಗಳ ಪ್ರತಿಪಾದಕರಾಗಿದ್ದರು.

ಆಕೆಯ ಭಾಷಣಗಳಲ್ಲಿ ಯಾವಾಗಲೂ ಉದ್ಯೋಗಗಳು ಮತ್ತು ಸಂಪನ್ಮೂಲಗಳ ನ್ಯಾಯಯುತ ವಿತರಣೆಯ ವಿಚಾರ ಇರುತ್ತದೆ. ಗಟ್ಟಿ ಸಂಧಾನಕಾರ್ತಿ ಮತ್ತು ನೇರ ಮಾತುಗಾರ್ತಿ. ಈಕೆ ಹಾರ್ವರ್ಡ್ ಪದವೀಧರೆ. 

Women Behavior : `ಕೋಟಿ ಕೊಟ್ರೂ ಗಂಡನ ಬಿಡಲ್ಲ ಭಾರತೀಯ ಮಹಿಳೆಯರು’

ಡೆನ್ಮಾರ್ಕ್‌ನ ಪ್ರಧಾನ ಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್
ಡೆನ್ಮಾರ್ಕ್‌ನ ಸೆಂಟರ್-ಲೆಫ್ಟ್ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಮೆಟ್ಟೆ ಫ್ರೆಡೆರಿಕ್ಸೆನ್ ಅವರು 2019ರಲ್ಲಿ ದೇಶದ ಅತ್ಯಂತ ಕಿರಿಯ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. 2030ರ ವೇಳೆಗೆ ಇಂಗಾಲದ ಹೊರಸೂಸುವಿಕೆಯನ್ನು (70% ನಷ್ಟು) ಕಡಿತಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅರಣ್ಯೀಕರಣವನ್ನು ಉತ್ತೇಜಿಸುವುದು ಮತ್ತು ಪ್ಲಾಸ್ಟಿಕ್ ಬಳಕೆಯ ಮೇಲಿನ ಸುಂಕಗಳನ್ನು ಹೆಚ್ಚಿಸುವುದು. ಟ್ರೇಡ್ ಯೂನಿಯನ್‌ಗಳಲ್ಲಿ ಸಕ್ರಿಯವಾಗಿರುವ ಕುಟುಂಬದಿಂದ ಬಂದ ಫ್ರೆಡೆರಿಕ್‌ಸೆನ್ ಅವರ ಗುರಿಗಳಲ್ಲಿ ಕೆಲವು. ಸಾಮಾಜಿಕ ನ್ಯಾಯ ಅವರ ಉದ್ದೇಶ. 

2ನೇ ವಿಶ್ವಯುದ್ಧದಲ್ಲಿ ಭಾಗಿಯಾದ ನರ್ಸ್‌ಗೆ 100ರ ಸಂಭ್ರಮ: ಸ್ಕೈಡೈವ್ ಮಾಡಿ ಆಚರಣೆ

ಇವರ ಆಡಳಿತದ ಅಡಿಯಲ್ಲಿ ದೇಶವು ನಿಧಾನವಾಗಿ ವಲಸಿಗರಿಗೆ ಕೆಲವು ಕಠಿಣ ನಿಯಮಗಳನ್ನು ಪರಿಚಯಿಸುವತ್ತ ಸಾಗುತ್ತಿದೆ. ಅವರು ಅಧಿಕಾರಕ್ಕೆ ಬಂದ ನಂತರ ದೇಶದಲ್ಲಿ ನಡೆಯುತ್ತಿರುವ ವಲಸೆಗೆ ಆದ್ಯತೆಯನ್ನು ತಡೆಯುವುದು, ಮುಸ್ಲಿಮರ ಮೇಲೆ ಕೆಲವು ಕ್ರಮಗಳು, ವಲಸಿಗರ ಮಕ್ಕಳಿಗೆ "ಡ್ಯಾನಿಷ್ ಮೌಲ್ಯಗಳು" ಬೋಧನೆಗೆ ಒತ್ತಾಯಿಸುವ ಕ್ರಮಗಳು ಇದರಲ್ಲಿ ಸೇರಿವೆ. ಪ್ರಧಾನಮಂತ್ರಿಯಾದ ನಂತರವೂ ಅವರು, ಡ್ಯಾನಿಶ್ ಸಮಾಜವನ್ನು "ರಕ್ಷಿಸಲು" ಹೇಗೆ ಬಯಸುತ್ತಾರೆ ಎಂಬುದರ ಕುರಿತು ಮಾತನಾಡಿದ್ದಾರೆ. ಅವರಿಗೆ ಈಗ 44 ವರ್ಷ.


 

Latest Videos
Follow Us:
Download App:
  • android
  • ios