Asianet Suvarna News Asianet Suvarna News

ಒಂಟಿಯಾಗಿರೋ ಹುಡುಗಿಯರು ಏನ್ ಮಾಡ್ತಾರೆ ಗೊತ್ತಾ?

ಹುಡುಗಿಯರ ಬಗ್ಗೆ ತಿಳಿಯುವ ಕುತೂಹಲ ಹುಡುಗರಿಗಿರುತ್ತೆ. ಮನೆಯಲ್ಲಿ ಅಥವಾ ಪಿಜಿ, ರೂಮ್ ನಲ್ಲಿ ಖಾಲಿ ಟೈಂನಲ್ಲಿ ಹುಡುಗಿಯರು ಏನು ಮಾಡ್ತಾರೆ ಎಂಬ ಪ್ರಶ್ನೆ ಕಾಡ್ತಿರುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.

When Women And Girls Are Alone At Home Do This Things Secretly Know Fact roo
Author
First Published Apr 13, 2024, 3:22 PM IST

ಕುಟುಂಬಸ್ಥರೆಲ್ಲ ಮನೆಯಿಂದ ಹೊರಗೆ ಹೋದಾಗ ಮನೆಯಲ್ಲಿ ನೀವೊಬ್ಬರೇ ಒಂಟಿಯಾಗಿರುವ ಸ್ಥಿತಿ ನಿರ್ಮಾಣವಾಗುತ್ತದೆ. ಅನೇಕರು ಕೆಲಸದ ಮೇಲೆ ಮನೆಯಿಂದ ಹೊರಗಿರುವ ಸಮಯದಲ್ಲಿ ಒಂಟಿ ಜೀವನ ನಡೆಸುತ್ತಾರೆ. ಇಡೀ ದಿನ ಅಥವಾ ತಿಂಗಳು, ವರ್ಷಗಟ್ಟಲೆ ಒಂಟಿಯಾಗಿರುವ ಜನರಿದ್ದಾರೆ. ಅವರಿಗೆ ತಮ್ಮ ಸುತ್ತಮುತ್ತ ಜನರಿರಲಿ ಎನ್ನಿಸುತ್ತದೆ. ಅದೇ ಮನೆ ತುಂಬಾ ಜನರಿರುವ ಅಥವಾ ಪಾಲಕರ ಜೊತೆ ಇರುವ ಮಕ್ಕಳು ಅಪರೂಪಕ್ಕೊಮ್ಮೆಯಾದ್ರೂ ಒಂಟಿಯಾಗಿರುವ ಅವಕಾಶ ಸಿಗಲಿ ಎಂದು ಪ್ರಾರ್ಥಿಸುತ್ತಾರೆ. ಮನೆಯಲ್ಲಿ ಒಬ್ಬರೇ ಇರುವ ಅವಕಾಶ ಸಿಕ್ಕಾಗ ಹುಡುಗರು ಏನು ಮಾಡ್ತಾರೆ ಅಂತಾ ವಿಶೇಷವಾಗಿ ಹೇಳ್ಬೇಕಾಗಿಲ್ಲ. ಯಾಕೆಂದ್ರೆ ಹುಡುಗರ ಸಂಗಾತಿ ಟಿವಿ ಇಲ್ಲವೆ ಮೊಬೈಲ್. ಇವರೆಡರಲ್ಲಿ ಅವರು ಮುಳುಗಿಲ್ಲ ಎಂದಾದ್ರೆ ಮನೆಗೆ ಬೀಗ ಜಡಿದು ಸ್ನೇಹಿತರ ಜೊತೆ ಸುತ್ತಾಡಲು ಹೋಗಿರ್ತಾರೆ. ಅದೇ ಹುಡುಗಿಯರು ಒಂಟಿಯಾಗಿದ್ದಾಗ ಏನು ಮಾಡ್ತಾರೆ ಎಂಬ ಕುತೂಹಲ ಸಾಮಾನ್ಯ. ಹುಡುಗಿಯರ ಸ್ವಭಾವ ಭಿನ್ನ. ಒಬ್ಬೊಬ್ಬರು ಒಂದೊಂದು ರೀತಿ ಸಮಯ ಕಳೆಯಲು ಬಯಸ್ತಾರೆ. ನಾವಿಂದು ಬಹುತೇಕ ಹುಡುಗಿಯರು ಮನೆಯಲ್ಲಿ ಒಂಟಿಯಾಗಿದ್ದಾಗ ಹೇಗೆ ಸಮಯ ಕಳೆಯುತ್ತಾರೆ ಎಂಬುದನ್ನು ನಿಮಗೆ ಹೇಳ್ತೇವೆ. 

ಮನೆಯಲ್ಲಿ ಒಂಟಿ (Alone) ಯಾಗಿರುವ ಹುಡುಗಿಯರು ಹೀಗೆಲ್ಲ ಮಾಡ್ತಾರೆ : ಹುಡುಗಿಯರಿಗೆ ಶಾರ್ಟ್ (Short) ನಲ್ಲಿ ಇರೋದು ಇಷ್ಟ. ಈಗಿನ ದಿನಗಳಲ್ಲಿ ಯಾರಿರಲಿ ಬಿಡಲಿ ಹುಡುಗಿಯರು ಶಾರ್ಟ್ ಧರಿಸ್ತಾರೆ ನಿಜ. ಆದ್ರೆ ಎಲ್ಲ ಮನೆಯಲ್ಲೂ ಈ ಸ್ವಾತಂತ್ರ್ಯ ಸಂಪೂರ್ಣವಾಗಿ ಸಿಗೋದಿಲ್ಲ. ಅಂಥ ಹುಡುಗಿಯರು ಒಂಟಿಯಾಗಿದ್ದಾಗ ಶಾರ್ಟ್ ಧರಿಸೋದು ಕಾಮನ್.

'ಕೆಜಿಎಫ್‌'ನಲ್ಲಿ ಯಶ್ ನೋಡಿ ಕಲಿತಿದ್ಧೇನು ಎಂಬ ಪ್ರಶ್ನೆಗೆ ಶ್ರೀನಿಧಿ ಶೆಟ್ಟಿ ಕೊಟ್ರು ಶಾಕಿಂಗ್ ಆನ್ಸರ್!

ಹುಡುಗಿಯರು ತಮಗಾಗಿ ಸಮಯವನ್ನು ಮೀಸಲಿಡಲು ಬಯಸ್ತಾರೆ. ಸೌಂದರ್ಯ (Beauty) ಕ್ಕೆ ಹೆಚ್ಚು ಆದ್ಯತೆ ನೀಡುವ ಹುಡುಗಿಯರು ಒಂಟಿಯಾಗಿದ್ದಾಗ ಮಿನಿ ಫೇಶಿಯಲ್ ಪೆರೇಡ್ ಮಾಡ್ತಾರೆ. ಅವರ ಈ ಫ್ಯಾಷನ್ (fashion) ಪರೇಡ್‌ನಲ್ಲಿ ಮೇಕಪ್, ಚರ್ಮದ ಆರೈಕೆ, ಉಗುರು, ಕೂದಲಿನ ಆರೈಕೆ ಸೇರಿದೆ.

ಹುಡುಗಿಯರು ಮನೆಯಲ್ಲಿ ಒಂಟಿಯಾಗಿದ್ದು, ಮಾಡಲು ಏನೂ ಕೆಲಸವಿಲ್ಲ ಎಂದಾಗ ಬಟ್ಟೆ ಮೇಲೆ ಪ್ರಯೋಗ ನಡೆಯುತ್ತಿರುತ್ತದೆ. ಹಳೆ ಬಟ್ಟೆಗಳನ್ನು ಹೊಸದು ಮಾಡೋದು ಹೇಗೆ, ಎಷ್ಟೋ ದಿನಗಳ ಹಿಂದೆ ಖರೀದಿ ಮಾಡಿದ್ದ ಡ್ರೆಸ್ ಈಗ್ಲೂ ಫಿಟ್ ಆಗುತ್ತಾ ಎಂದು ಅವರು ನೋಡ್ತಾರೆ. ಕನ್ನಡಿ ಮುಂದೆ ನಿಂತು ತಮ್ಮ ಸೌಂದರ್ಯ ನೋಡಿಕೊಳ್ಳುವ ಹುಡುಗಿಯರು ಫೋಟೋ, ವಿಡಿಯೋ ಮಾಡೋದ್ರಲ್ಲೂ ಬ್ಯುಸಿಯಾಗ್ತಾರೆ. 

ಹುಡುಗಿಯರು ಒಂಟಿಯಾಗಿದ್ದಾಗ ಟಿವಿ ನೋಡೋ ಅವಕಾಶವನ್ನು ತಪ್ಪಿಸಿಕೊಳ್ಳೋದಿಲ್ಲ. ಸಾರ್ವಜನಿಕವಾಗಿ ಅಥವಾ ಕುಟುಂಬಸ್ಥರ ಮುಂದೆ ವೀಕ್ಷಣೆ ಮಾಡಲು ಸಾಧ್ಯವಾಗದ ಸಿನಿಮಾ, ಸಿರೀಸ್ ನೋಡಲು ಹುಡುಗಿಯರು ಇಷ್ಟಪಡ್ತಾರೆ. 

ಹುಡುಗಿಯರಿಗೆ ಮನೆಯಲ್ಲಿ ಬೋರ್ ಆಗೋದೇ ಇಲ್ಲ. ಯಾಕೆಂದ್ರೆ ಅವರಿಗೆ ಮಾತನಾಡಲು ಜನ ಬೇಕಾಗಿಲ್ಲ. ಅವರು ತಮ್ಮ ಜೊತೆಯೇ ಮಾತನಾಡಿಕೊಳ್ತಿರುತ್ತಾರೆ. ತಮ್ಮ ಭಾವನೆಗಳನ್ನು ಯಾರೂ ಇಲ್ಲದ ಸಮಯದಲ್ಲಿ ದೊಡ್ಡದಾಗಿ ಹೇಳ್ತಾ ಅವರು ಸಮಯ ಕಳೆಯುತ್ತಾರೆ. 

ಒಂಟಿಯಾಗಿರಲಿ ಇಲ್ಲದಿರಲಿ ಹುಡುಗಿಯರು ಮಾಡುವ ಅತ್ಯಂತ ವಿಶೇಷ ಮತ್ತು ಸಾಮಾನ್ಯವಾದ ಕೆಲಸವೆಂದರೆ ತಮ್ಮ ಮಾಜಿ ಗೆಳೆಯನ ಪ್ರೊಫೈಲ್ ಅನ್ನು ಆಗಾಗ್ಗೆ ನೋಡುವುದು ಮತ್ತು ಅವನು ಈಗ ಯಾರೊಂದಿಗೆ ಡೇಟಿಂಗ್ ಮಾಡುತ್ತಿರಬಹುದು ಎಂದು ಯೋಚಿಸುವುದು. ಅವನು ಏನು ಮಾಡುತ್ತಿದ್ದಾನೆ, ಎಲ್ಲಿಗೆ ಹೋಗುತ್ತಿದ್ದಾನೆ, ಯಾರೊಂದಿಗೆ ಇದ್ದಾನೆ ಇತ್ಯಾದಿ.

Relationship : ಇಬ್ಬರು ಮಕ್ಕಳನ್ನು ಬಿಟ್ಟು ಓಡಿ ಹೋದ ಪತಿ… ಫೇಸ್ಬುಕ್ ನಲ್ಲಿ ಸಹಾಯ ಕೋರಿದ ಪತ್ನಿ..!

ಈಗಿನ ದಿನಗಳಲ್ಲಿ ಎಲ್ಲರ ಕೈನಲ್ಲಿ ಮೊಬೈಲ್ ಇದ್ದೇ ಇರುತ್ತೆ. ಹುಡುಗಿಯರ ಇನ್ನೊಂದು ಸಂಗಾತಿ ಮೊಬೈಲ್. ಕಿವಿಗೆ ಇಯರ್ ಫೋನ್ ಹಾಕಿಕೊಂಡು ಹುಡುಗಿಯರು ಸದಾ ಸಂಗೀತ ಕೇಳ್ತಾ ಎಂಜಾಯ್ ಮಾಡ್ತಿರುತ್ತಾರೆ. ರೀಲ್ಸ್, ಶಾರ್ಟ್ಸ್ ಸೇರಿದಂತೆ ಯುಟ್ಯೂಬ್ ವಿಡಿಯೋ ವೀಕ್ಷಣೆ ಅವರ ಫೆವರೆಟ್ ಕೆಲಸ. 

Follow Us:
Download App:
  • android
  • ios