ಮದುವೆಯ ನಂತರ ಯುವತಿಯರು ಗೂಗಲ್‌ನಲ್ಲಿ ಹುಡುಕುವ ವಿಷಯಗಳ ಕುರಿತು ಸಂಶೋಧನೆ ನಡೆದಿದ್ದು,ಕೆಲವು ಪ್ರಮುಖ ವಿಷಯಗಳ ಕುರಿತು ಹೆಚ್ಚು ಹುಡುಕಾಟ ನಡೆಸುತ್ತಾರೆ ಎಂದು ತಿಳಿದುಬಂದಿದೆ.
ನವದೆಹಲಿ: ಗೂಗಲ್ ಸರ್ಚ್ ಇಂಜಿನ್ ಮದುವೆ ಬಳಿಯ ಯುವತಿಯರು ಇಂಟರ್‌ನೆಟ್‌ನಲ್ಲಿ ಹುಡುಕುತ್ತಾರೆ ಎಂಬ ಮಾಹಿತಿ ರಿವೀಲ್ ಆಗಿದೆ. ಮದುವೆ ಬಳಿಕ ಹೆಣ್ಣಿನ ಜೀವನ ಸಂಪೂರ್ಣ ಬದಲಾಗುತ್ತದೆ. ಹುಟ್ಟಿದ ಮನೆ ತೊರೆದು ಗಂಡನ ನಿವಾಸಕ್ಕೆ ಬಂದು ಅಲ್ಲಿಯ ಹೊಸ ಜನರೊಂದಿಗೆ ಜೀವನ ನಡೆಸಬೇಕಾಗುತ್ತದೆ. ಇಂದು ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಾದ್ರೆ ಗೂಗಲ್ ಸಹಾಯ ಪಡೆಯುತ್ತಾರೆ. ಮದುವೆಯಾದ ಬಂದ ಯುವತಿಯರು ಕೆಲ ವಿಷಯಗಳ ಬಗ್ಗೆ ಅತ್ಯಧಿಕವಾಗಿ ಸರ್ಚ್ ಮಾಡುತ್ತಾರೆ. ಮದುವೆ ಬಳಿಕ ನವವಿವಾಹಿತೆ ಗೂಗಲ್‌ನಲ್ಲಿ ಏನು ಸರ್ಚ್ ಮಾಡುತ್ತಾಳೆ ಎಂಬ ಮಾಹಿತಿ ರಿವೀಲ್ ಆಗಿದೆ.
ಇತ್ತೀಚೆಗಷ್ಟೇ ಗೂಗಲ್ ಸರ್ಚ್ ಗೆ ಸಂಬಂಧಿಸಿದಂತೆ ಒಂದು ಸಂಶೋಧನೆ ನಡೆದಿದ್ದು, ಅದರ ಮಾಹಿತಿ ನೋಡಿ ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ವಿವಾಹಿತ ಮಹಿಳೆಯರಿಗೆ ಸಂಬಂಧಿಸಿದ ಮಾಹಿತಿ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ. ಮದುವೆಯ ನಂತರ ಮಹಿಳೆಯರು Google ನಲ್ಲಿ ಯಾವ ರೀತಿಯ ವಿಷಯಗಳನ್ನು ಹುಡುಕುತ್ತಾರೆ ಎಂದು ತಿಳಿದರೆ ಪುರುಷರಿಗೆ ಅಚ್ಚರಿಯಾಗುತ್ತದೆ.
1.ಪತಿಯನ್ನು ಆಕರ್ಷಿಸೋದು ಹೇಗೆ?
ಮದುವೆ ಬಳಿಕ ಮಹಿಳೆಯರು ಪತಿಯನ್ನು ಹೇಗೆ ಆಕರ್ಷಿಸಿಬೇಕು ಎಂದು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅಧ್ಯಯನದ ವರದಿ ಪ್ರಕಾರ, ಪತಿಗೆ ಆಕರ್ಷಕವಾಗಿ ಕಾಣಲು ಏನು ಮಾಡಬೇಕು ಎಂದು ತಿಳಿದುಕೊಳ್ಳಲು ಹಲವು ಲೇಖನಗಳನ್ನು ಓದುತ್ತಾರೆ ಮತ್ತು ವಿಡಿಯೋಗಳನ್ನು ನೋಡುತ್ತಿರುತ್ತಾರೆ.
2.ಗಂಡನ ಇಷ್ಟ
ಸಾಮಾನ್ಯವಾಗಿ ಪುರುಷರಿಗೆ ಯಾವ ರೀತಿಯ ಕೆಲಸಗಳು ಇಷ್ಟವಾಗುತ್ತವೆ ಎಂಬುದನ್ನು ಗೂಗಲ್‌ನಲ್ಲಿ ಹುಡುಕುತ್ತಾರೆ. ಗಂಡ-ಹೆಂಡತಿ ಜಗಳಕ್ಕೆ ಯಾವ ವಿಷಯಗಳು ಕಾರಣವಾಗುತ್ತವೆ? ಜಗಳ ಉಂಟಾದರೆ ಅದನ್ನು ಬಗೆಹರಿಸೋದು ಹೇಗೆ ಎಂಬುದನ್ನು ತಿಳಿಯಲು ಗೂಗಲ್‌ನಿಂದ ಸಹಾಯ ಪಡೆಯುತ್ತಾರೆ. ಇದರ ಜೊತೆಗೆ ಗಂಡನನ್ನು ಸಂತೋಷಪಡಿಸೋದು ಹೇಗೆ ಎಂಬ ಪ್ರಶ್ನೆಗೆ ಉತ್ತರಕ್ಕೂ ಗೂಗಲ್ ಸಹಾಯವನ್ನು ತೆಗೆದುಕೊಳ್ಳುತ್ತಾರೆ.
3.ಗಂಡನನ್ನು ಮೆಚ್ಚಿಸೋದು ಹೇಗೆ?
ಮದುವೆಯಾದ ನಂತರವೂ ಗಂಡನ ಮನ ಗೆಲ್ಲುವುದು ಹೇಗೆ ಎಂಬ ಪ್ರಶ್ನೆ ಹೆಣ್ಣು ಮಕ್ಕಳಲ್ಲಿರುತ್ತದೆ. ಪತಿಯೊಂದಿಗೆ ಹೇಗೆ ವ್ಯವಹರಿಸಬೇಕು? ಹೇಗೆ ತನ್ನ ಹತ್ತಿರವೇ ಉಳಿಸಿಕೊಳ್ಳಬೇಕು? ಎಂಬಿತ್ಯಾದಿ ಹುಡುಕಾಟಗಳನ್ನು ಗೂಗಲ್‌ನಲ್ಲಿಯೂ ವ್ಯಾಪಕವಾಗಿ ಮಾಡಲಾಗುತ್ತದೆ.
ಇದನ್ನೂ ಓದಿ: ಹೆಂಡ್ತಿ ಸತ್ತ ಮೇಲೆ ಮರು ಮದುವೆ ಆಗೋದು ಹೇಗೆ ಅಂತ ಸರ್ಚ್ ಮಾಡಿದವ ಅರೆಸ್ಟ್
4.ಕುಟುಂಬ ಸದಸ್ಯರಿಂದ ಅಭಿನಂದನೆಗಳನ್ನು ಹೇಗೆ ಪಡೆಯುವುದು?
ಮದುವೆ ಬಳಿಕ ಯುವತಿಯರು ಗೂಗಲ್‌ನಲ್ಲಿ ಅತ್ತೆಯನ್ನು ಮೆಚ್ಚಿಸಲು ಮಾರ್ಗಗಳನ್ನು ಹುಡುಕುತ್ತಾರೆ. ಈ ಮೂಲಕ ಅತ್ತೆ ಜೊತೆ ಸಂತೋಷವಾಗಿರಲು ಇಷ್ಟಪಡುತ್ತಾರೆ. ತಮ್ಮ ಕುಟುಂಬದ ಸದಸ್ಯರಿಗೆ ರುಚಿಕರವಾದ ಆಹಾರವನ್ನು ಅಡುಗೆ ಮಾಡುವ ಮೂಲಕ ಮತ್ತು ಅವರ ಅಗತ್ಯಗಳನ್ನು ನೋಡಿಕೊಳ್ಳೋದರ ಬಗ್ಗೆಯೂ ಗೂಗಲ್ ಸರ್ಚ್ ಮಾಡುತ್ತಾರೆ.
5.ಕುಟುಂಬದ ಜವಾಬ್ದಾರಿಗಳು
ಮದುವೆಯ ನಂತರ ಮನೆಯ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುವುದು? ಕುಟುಂಬದ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸಬಹುದು ಎಂಬುದರ ಕುರಿತು ಜನರು ಪ್ರತಿದಿನ Google ನಲ್ಲಿ ಹುಡುಕುತ್ತಾರೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: Google Search 2024: ಪಾಕಿಸ್ತಾನಿಯರು ಗೂಗಲ್ ಸರ್ಚ್ ಮಾಡಿದ್ದೇನು? ಕೇಳಿದ್ರೆ ಭಾರತೀಯರಿಗೆ ಹೆಮ್ಮೆ ಆಗುತ್ತೆ
