Chanakya Niti: ಗ್ಲಾಮರ್‌ ಬಗ್ಗೆ ಚಾಣಕ್ಯ ಹೇಳೋ ಮಾತು ನಿಮ್ಮ ಹುಬ್ಬೇರಿಸಬಹುದು!

ರಾಜ್ಯಭಾರದಲ್ಲಿ ಗ್ಲಾಮರ್‌ ಮತ್ತು ಸೌಂದರ್ಯದ ಮಹತ್ವವನ್ನು ಚಾಣಕ್ಯ ತಮ್ಮ ಅರ್ಥಶಾಸ್ತ್ರದಲ್ಲಿ ವಿವರಿಸಿದ್ದಾರೆ. ರಾಜನ ಸುತ್ತ ಸುಂದರಿಯರು, ಬೇಹುಗಾರಿಕೆಯಲ್ಲಿ ಮಹಿಳೆಯರ ಪಾತ್ರ, ವೇಶ್ಯಾಗೃಹಗಳ ಮೇಲ್ವಿಚಾರಣೆ ಮತ್ತು ಆಕರ್ಷಕ ಪುರುಷ ರಾಯಭಾರಿಗಳ ಬಳಕೆಯ ಬಗ್ಗೆ ಚಾಣಕ್ಯ ನೀತಿ ಸಲಹೆ ನೀಡುತ್ತದೆ.

What Chanakya Niti says about glamour in ancient politics bni

ಗ್ಲಾಮರ್‌, ಬ್ಯೂಟಿ ಅನ್ನೋದು ಇಂದು ಎಂಟರ್‌ಟೇನ್‌ಮೆಂಟ್‌ ಇಂಡಸ್ಟ್ರಿಯಲ್ಲಿ ತುಂಬಾ ಇಂಪಾರ್ಟೆಂಟು. ಸಿನಿಮಾ, ಕಿರುತೆರೆಯಲ್ಲಿ ನಟರಿಗಾಗಲೀ, ನಟಿಯರಿಗಾಗಲೀ ಗ್ಲಾಮರ್‌ ಅನ್ನೋದು ಇಲ್ಲದೆ ಮಾತೇ ಇಲ್ಲ. ಗ್ಲಾಮರ್‌ ಅಂದರೆ ಸೆಕ್ಸಿಯಾಗಿರೋದು ಅನ್ನೋದು ಒಂದು ಭಾಗ. ಸೆಕ್ಸೀ ಅಲ್ಲದೆಯೂ ಗ್ಲಾಮರಸ್‌ ಆಗಿ ಇರಬಹುದು. ಅದು ಬೇರೆ ಮಾತು. ಆದ್ರೆ ಸೌದರ್ಯ, ಗ್ಲಾಮರ್‌ ಅಥವಾ ಮಾದಕತೆಯ ಮಹತ್ವದ ಬಗ್ಗೆ ಆಚಾರ್ಯ ಚಾಣಕ್ಯ ತಮ್ಮ ಅರ್ಥಶಾಸ್ತ್ರದಲ್ಲಿ ನೂರಾರು ವರ್ಷಗಳ ಹಿಂದೆಯೇ ಬಹಳ ಮಹತ್ವದ ವಿಷಯಗಳನ್ನು ಹೇಳಿದ್ದಾರೆ ಅನ್ನೋದು ನಿಮಗೆ ಗೊತ್ತೇ? ಗೊತ್ತಿರಲಿಕ್ಕಿಲ್ಲ. ಆ ಬಗ್ಗೆ ಇಲ್ಲಿದೆ ವಿವರ.

ಸೌಂದರ್ಯದಿಂದ ಜೀವಂತಿಕೆ: ರಾಜನು ರಾಜ್ಯವನ್ನು ನಡೆಸುವವನು. ಅವನ ಮನಸ್ಸು ಸದಾ ಪ್ರಫುಲ್ಲವಾಗಿರಬೇಕು. ಹಾಗಿರಬೇಕಾದರೆ ಅವನ ಸುತ್ತ ಸುಂದರಿಯರಾದ ನಾರಿಯರು ತುಂಬಿರಬೇಕು. ಪಟ್ಟಮಹಿಷಿ ಅಂದರೆ ಮಹಾರಾಣಿಯಾದವಳು ಈ ನಾರಿಯರಿಗೆಲ್ಲ ಕಿರೀಟದಂತಿರುವವಳು. ಅವಳು ಸೌಂದರ್ಯದ ಜೊತೆಗೆ ಬುದ್ಧಿವಂತಿಕೆಯನ್ನೂ ಹೊಂದಿರಬೇಕಾದುದು ಅವಶ್ಯ. ರಾಜನು ನಾರಿಯರಿಗೆ, ಕುಟುಂಬಕ್ಕೆ ಸಂಬಂಧಿಸಿದ ಯೋಜನೆಗಳಿಗೆ ಹೊರಡುವ ಮುನ್ನ ಈ ಪಟ್ಟಮಹಿಷಿಯ ಸಲಹೆಯನ್ನು ಅವಶ್ಯ ಪಡೆಯಬೇಕು. ಅರಮನೆಯಲ್ಲಿ ಇರುವ ನಾರಿಯರಿಗೆ ಸೌಂದರ್ಯ ಇರಬೇಕು, ಆದರೆ ಅದನ್ನು ಕೆಟ್ಟ ಕಾರ್ಯಗಳಿಗೆ ಉಪಯೋಗಿಸುವವರು ಆಗಿರಕೂಡದು. ಅಂಥವರು ಅರಮನೆಗೆ ಕೆಟ್ಟ ಹೆಸರು ತರುತ್ತಾರೆ. ಅನ್ಯ ರಾಜರಿಗೆ, ಶತ್ರುಗಳಿಗೆ ಇಲ್ಲಿಂದ ಬೇಹುಗಾರಿಕೆ ಮಾಡುವವರೂ ಇರುತ್ತಾರೆ. ಅಂಥವರನ್ನು ಪತ್ತೆಹಚ್ಚಲು ವ್ಯವಸ್ಥೆ ಇರಬೇಕು. ಅವರನ್ನು ಹೊರಹಾಕಬೇಕು ಅಥವಾ ಶಿಕ್ಷಿಸಬೇಕು. 

ಗೂಢಚಾರಿಕೆಗೆ ಸ್ತ್ರೀಯರು: ಚೆಲುವಾಗಿರುವ ಹೆಣ್ಣುಗಳು ಚುರುಕಾಗಿದ್ದರೆ, ಗೂಢಚಾರಿಕೆಯಲ್ಲಿ ಆಸಕ್ತರಾಗಿದ್ದರೆ, ಅಂಥವರನ್ನು ಬೇಹುಗಾರಿಕೆಗೆ ನಿಯೋಜಿಸಬೇಕು. ಹೆಣ್ಣುಮಕ್ಕಳಲ್ಲಿ ಸ್ವಾಭಾವಿಕವಾಗಿಯೇ ಸ್ವಲ್ಪಮಟ್ಟಿನ ಬೇಹುಗಾರಿಕೆಯ ಸ್ವಭಾವ ಇರುವುದು ನಿಜವು. ಇದನ್ನು ಬಳಸಿಕೊಳ್ಳಬೇಕು. ಇವರನ್ನು ರಾಜನು ತನ್ನ ಶತ್ರುಗಳ ಬಳಿಯಲ್ಲಿ, ಶತ್ರುರಾಜರ ಬಳಿಯಲ್ಲಿ, ಸಾಮಂತರ ಬಳಿಯಲ್ಲಿ, ಮಂತ್ರಿಗಳ ಹಾಗೂ ದಂಡನಾಯಕರ ನಿವಾಸದಲ್ಲಿ ನಿಯೋಜಿಸಬೇಕು. ಚಾಣಕ್ಯರ ಈ ಸಲಹೆಯನ್ನು ನಾವು ಇಂದಿಗೆ ಬೇಕಾದಂತೆ ಉಪಯೋಗಿಸಬಹುದು. 

ನರ್ತಕಿಯರು: ಆಸ್ಥಾನದಲ್ಲಿ ಲಲಿತಕಲೆಗಳ ಪರಿಣತಿಯನ್ನು ಹೊಂದಿದ ನಾರಿಯರು ಇರತಕ್ಕದ್ದು. ಇವರೂ ಸುಂದರಿಯರಾಗಿರುವುದು ಅವಶ್ಯ. ಗಾಯನ ನರ್ತನ ಇತ್ಯಾದಿಗಳಿಂದ ರಾಜನ ಹಾಗೂ ಆಸ್ಥಾನಿಕರ ಮನಸ್ಸನ್ನು ಇವರು ಸಂತೋಷಪಡಿಸುತ್ತಾರೆ. ಅನ್ಯ ರಾಜ್ಯಗಳಿಂದ ಬಂದ ಗಣ್ಯರು ಇವುಗಳನ್ನು ಕಂಡು ಮನಸೂರೆ ಹೋಗುತ್ತಾರೆ ಮತ್ತು ತಮ್ಮ ರಾಜ್ಯಗಳಿಗೆ ಹೋದಾಗ ಈ ರಾಜನ ವೈಭೋಗವನ್ನು ಅಲ್ಲಿ ಪ್ರಚಾರ ಮಾಡುತ್ತಾರೆ. ಇದು ರಾಜನ ವರ್ಚಸ್ಸನ್ನು ಹೆಚ್ಚಿಸಲು ಅವಶ್ಯಕ.

ವೇಶ್ಯಾಗೃಹಗಳು: ಒಂದು ನಾಗರಿಕತೆ, ನಗರ ಅಂತಿದ್ದ ಮೇಲೆ ಅಲ್ಲಿ ವೇಶ್ಯಾಗೃಹಗಳು ಇದ್ದೇ ಇರುತ್ತವೆ. ಸಂಸಾರ ಸುಖವನ್ನು ಹೊಂದಿಲ್ಲದ ಪುರುಷರು ಇಲ್ಲಿ ಬಂದು ತೃಪ್ತರಾಗಿ ತೆರಳುತ್ತಾರೆ. ಈ ವೇಶ್ಯಾಗೃಹಗಳು ಇರುವ ಪ್ರದೇಶ ನಗರದ ತುಂಬಾ ಒಳಗೆ ಇರಬಾರದು, ಹಾಗೇ ತುಂಬಾ ದೂರವೂ ಇರಬಾರದು. ವೇಶ್ಯಾಗೃಹಗಳಿಂದ ಸೂಕ್ತ ಕರಭಾರವನ್ನು ರಾಜನು ಪಡೆಯಬೇಕು. ಆದರೆ ಈ ವೇಶ್ಯಾಗೃಹಗಳು ಗೂಢಚಾರಿಕೆಯ ಆವಾಸ ಆಗದಂತೆ ಎಚ್ಚರ ವಹಿಸಬೇಕು. ತನ್ನ ಆಸ್ಥಾನದ ಅಧಿಕಾರಿಗಳು ಇಲ್ಲಿಗೆ ಹೋಗುತ್ತಾರೆಯೇ, ಅಲ್ಲಿ ಯಾರ ಜೊತೆಗೆ ಅವರಿಗೆ ಹೆಚ್ಚು ಸಂಪರ್ಕ ಇದೆ ಎಂಬುದೆಲ್ಲ ರಾಜನಿಗೆ ತಿಳಿಯಬೇಕು. 

Chanakya Niti: ಗೆಳೆಯನ ಹೆಂಡತಿ ಜೊತೆ ಹೇಗಿರಬೇಕು? ಚಾಣಕ್ಯ ಹೇಳೋದೇನು?

ಗ್ಲಾಮರ್‌ ಪುರುಷರು: ಚಂದದ ಕಟ್ಟುಮಸ್ತಾದ ಯುವಕರನ್ನು ರಾಜ್ಯದ ಹೊರಗಿನ ರಾಜಕಾರ್ಯಗಳಿಗೆ, ರಾಯಭಾರಗಳಿಗೆ ನಿಯೋಜಿಸಬೇಕು. ಅಲ್ಲಿ ಅವರು ಅಲ್ಲಿನ ಹೆಣ್ಣುಗಳನ್ನು ಆಕರ್ಷಿಸಬಹುದು. ಆದರೆ ತನ್ನ ದೇಶದ ಗುಟ್ಟುಗಳನ್ನು ಬಿಟ್ಟುಕೊಡದೆ ಅಲ್ಲಿನ ರಹಸ್ಯಗಳನ್ನು ಸಂಗ್ರಹಿಸುವವರಾಗಿರಬೇಕು. 

ತಾತ್ಪರ್ಯ ಇಷ್ಟೆ: ಕುರೂಪವು ಯಾರನ್ನೂ ಆಕರ್ಷಿಸುವುದಿಲ್ಲ. ಬದಲಾಗಿ ಸೌಂದರ್ಯವು ಎಲ್ಲರನ್ನೂ ತನ್ನ ಕಡೆಗೆ ಸೆಳೆಯುತ್ತದೆ. ಈ ಸೌಂದರ್ಯ ಹಗೂ ನಯವಾದ ಮಾತುಗಾರಿಕೆಯ ಮೂಲಕ ಕೆಲಸಗಳು ಆಗುತ್ತವೆ. ಅಂಥವರನ್ನು ಹುಡುಕಿ ಹುಡುಕಿ ಎಲ್ಲ ಕಡೆಗೂ ಸೇವೆಗೆ ನಿಯೋಜಿಸುವುದರಿಂದ ರಾಜ್ಯದ ಘನತೆ ಗೌರವಗಳು ಇತರೆಡೆಯ ಜನರ ಕಣ್ಣಿನಲ್ಲಿ ಹೆಚ್ಚುತ್ತದೆ.  

ಹುಡುಗರೇ.. ಈ ಗುಣಗಳಿದ್ದರೆ ಹುಡುಗಿಯರು ನಿಮ್ಮನ್ನು ಇಷ್ಟಪಡುತ್ತಾರೆ!
 

 

Latest Videos
Follow Us:
Download App:
  • android
  • ios