ಈ ದೇಶದಲ್ಲಿ ವಧು ಸಿಗ್ತಿಲ್ಲ, ಖರೀದಿಸಿದ ಹೆಣ್ಣನ್ನೇ ಹಂಚಿ ತಿಂತಾರೆ ಕ್ರೂರಿಗಳು!
ಗಂಡ್ಮಕ್ಕಳ ಪ್ರೀತಿಯಲ್ಲಿ ಜನರು ಹೆಣ್ಣು ಭ್ರೂಣಹತ್ಯೆಗೆ ಶರಣಾಗಿದ್ರು. ಆದ್ರೀಗ ಹೆಣ್ಮಕ್ಕಳೇ ಇಲ್ಲದಂತಾಗಿದೆ. ಇದ್ರಿಂದಾಗಿ ಕೆಲ ದೇಶಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಹೆಣ್ಮಕ್ಕಳು ಒಂಟಿಯಾಗಿರೋದು ಕಷ್ಟವಾಗಿದೆ. ಒಂದು ಹೆಣ್ಣು ಅನೇಕರ ಪಾಲಾಗ್ತಿದ್ದಾಳೆ.

ಹೆಣ್ಮಕ್ಕಳ ಕಳ್ಳಸಾಗಣೆ ಚೀನಾದಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಚೀನಾದಲ್ಲಿ ಹೆಣ್ಣುಮಕ್ಕಳ ಕೊರತೆ. ಚೀನಾದಲ್ಲಿ ಪುರುಷರಿಗೆ ಹೋಲಿಕೆ ಮಾಡಿದ್ರೆ ಮಹಿಳೆಯರ ಸಂಖ್ಯೆ ಬಹಳ ಕಡಿಮೆ ಇದೆ. ಇದಕ್ಕೆ ಚೀನಾದ ನಿಯಮಗಳೇ ಮುಖ್ಯ ಕಾರಣ. ನಮ್ಮ ನೆರೆ ದೇಶದಲ್ಲಿ ನಮ್ಮ ದೇಶದಂತೆ ಜನಸಂಖ್ಯೆ ಹೆಚ್ಚಿದೆ. ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾದ ಸರ್ಕಾರ ಒನ್ ಚೈಲ್ಡ್ ಪಾಲಿಸಿಯನ್ನು ಜಾರಿಗೆ ತಂದಿತ್ತು. ಅನೇಕ ವರ್ಷಗಳ ಕಾಲ ಜನರು ಒಂದು ಮಗು ನೀತಿಯನ್ನು ಅನುಸರಿಸಿದ್ರು. ಎರಡನೇಯದಾಗಿ ಚೀನಾದ ಜನರು ಹೆಣ್ಮಕ್ಕಳಿಗಿಂತ ಗಂಡು ಮಕ್ಕಳ ಮೇಲೆ ಹೆಚ್ಚು ಮೋಹ ಹೊಂದಿದ್ದರು. ಹೆಣ್ಣು ಭ್ರೂಣ ಹತ್ಯೆ ಅಲ್ಲಿ ಹೆಚ್ಚಾಗಿತ್ತು. ಈ ಕಾರಣಕ್ಕೆ ಚೀನಾದಲ್ಲಿ ಹೆಣ್ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಈಗ ಅಲ್ಲಿನ ಜನರಿಗೆ ಮದುವೆಯಾಗಲು ವಧು ಸಿಗ್ತಿಲ್ಲ. ಹಾಗಾಗಿ ಅವರು ನೆರೆ ದೇಶಗಳ ಹೆಣ್ಮಕ್ಕಳನ್ನು ಖರೀದಿಸುವ ದಂಧೆ ಶುರುಮಾಡಿದ್ದಾರೆ. ಮಹಿಳೆಯರ ಕಳ್ಳಸಾಗಣೆ ಚೀನಾದಲ್ಲಿ ಎಲ್ಲೆ ಮೀರಿದೆ.
ಹುಡುಗಿಯರಿಗೆ ನೀಡಲಾಗ್ತಿದೆ ಇಷ್ಟೊಂದು ಹಣ: ಈ ದಂಧೆಯ ಅಡಿಯಲ್ಲಿ 25 ಸಾವಿರ ರೂಪಾಯಿಗೂ ಹೆಚ್ಚು ಹಣ (Money) ವನ್ನು ನೀಡಿ ಹುಡುಗಿಯನ್ನು ಖರೀದಿಸಲಾಗುತ್ತದೆ. ಮದುವೆ (Marriage) ಯಾಗಲು ವಧು ಸಿಗ್ತಿಲ್ಲ ಎನ್ನುವ ಕಾರಣಕ್ಕೆ ಅವರು ಹೆಣ್ಮಕ್ಕಳನ್ನು ಹಣಕೊಟ್ಟು ಖರೀದಿ ಮಾಡ್ತಿದ್ದಾರೆ ಎಂಬ ಕಲ್ಪನೆಯಲ್ಲಿ ನೀವಿದ್ದರೆ ತಪ್ಪು. ಹೆಣ್ಮಕ್ಕಳನ್ನು ಖರೀದಿ (Purchase) ಮಾಡುವ ಚೀನಿಯರು ಆಕೆಯನ್ನು ತಮ್ಮ ಚಟ ತೀರಿಸಿಕೊಳ್ಳಲು ಬಳಸಿಕೊಳ್ತಿದ್ದಾರೆ. ಅಂದ್ರೆ ಒಂದು ಹುಡುಗಿಯನ್ನು ಖರೀದಿ ಮಾಡಿ ಎಲ್ಲ ಪುರುಷರು ಅತ್ಯಾಚಾರವೆಸಗುತ್ತಿದ್ದಾರೆ. ಅತ್ಯಂತ ಆಘಾತಕಾರಿ ಸಂಗತಿಯೆಂದರೆ ಹುಡುಗಿ ಸಾಯುವವರೆಗೂ ಆಕೆಯ ಮೇಲೆ ಅತ್ಯಾಚಾರವೆಸಗಲಾಗುತ್ತದೆ.
ಎರಡನೇ ಬಾರಿ ಗರ್ಭ ಧರಿಸುವಾಗ ಎಷ್ಟು ತಿಂಗಳ ಅಂತರ ಬೇಕು?
ಸತ್ಯ ಬಿಚ್ಚಿಟ್ಟ ಉತ್ತರ ಕೋರಿಯಾ ಹುಡುಗಿ : ವಿದೇಶಗಳಿಂದ ಬಡ ಕುಟುಂಬದ ಹುಡುಗಿಯರನ್ನು ಚೀನಾ ಹುಡುಗರು ಖರೀದಿ ಮಾಡ್ತಾರೆ. ಉತ್ತರ ಕೊರಿಯಾದ ಯೆನ್ಮಿ ಪಾರ್ಕ್ ಎಂಬ ಮಹಿಳೆ ಈ ಕಹಿ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಯೆನ್ಮಿಯನ್ನು ಯಾರೂ ಬಲವಂತವಾಗಿ ಚೀನಾಕ್ಕೆ ಕರೆದೊಯ್ದಿರಲಿಲ್ಲ. ಉತ್ತಮ ಮತ್ತು ಶಾಂತಿಯುತ ಜೀವನವನ್ನು ಹುಡುಕಿಕೊಂಡು ಉತ್ತರ ಕೊರಿಯಾದಿಂದ ಚೀನಾಕ್ಕೆ ಪಲಾಯನ ಮಾಡಿರುವುದಾಗಿ ಸಂದರ್ಶನವೊಂದರಲ್ಲಿ ಯೆನ್ಮಿ ಹೇಳಿದ್ದಾಳೆ. ಉತ್ತರ ಕೊರಿಯಾದಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಳ್ವಿಕೆಯಿಂದ ಉಸಿರುಗಟ್ಟಿದ ಭಾವನೆ ಹೊಂದಿದ್ದ ಯೆನ್ಮಿ, ಚೀನಾಕ್ಕೆ ತೆರಳಿದ್ದರು. ಆದ್ರೆ ಚೀನಾ ಜೀವನ ಮತ್ತಷ್ಟು ನರಕವಾಗಿತ್ತು ಎನ್ನುತ್ತಾಳೆ ಯೆನ್ಮಿ.
ಮಹಿಳೆಯರು Orgasm ಸಮಸ್ಯೆಯಿಂದ ಬಳಲೇನು ಕಾರಣ?
ಚೀನಾದಲ್ಲಿ ನರಕಯಾತನೆ ಅನುಭವಿಸಿದ ಯೆನ್ಮಿ : ಉತ್ತರ ಕೋರಿಯಾಗಿಂತ ಚೀನಾ ಜೀವನ ಚೆನ್ನಾಗಿರುತ್ತೆ ಎಂದು ಯೆನ್ಮಿ ಬಯಸಿದ್ದಳು. ಆದ್ರೆ ಅಲ್ಲಿ ಆಕೆ ಮಾನವ ಕಳ್ಳಸಾಗಣೆ ದಂಧೆಗೆ ಬಲಿಯಾದ್ಲು. ಯೆನ್ಮಿ ಜೀವನ ಮಾತ್ರವಲ್ಲ ಆಕೆ ತಾಯಿ ಜೀವನ ಕೂಡ ಹಾಳಾಯ್ತು ಎನ್ನುತ್ತಾಳೆ ಯೆನ್ಮಿ.
ಇಷ್ಟು ಹಣಕ್ಕೆ ಮಾರಾಟವಾದ ಯೆನ್ಮಿ : ಯೆನ್ಮಿ ತಾಯಿ ಹಾಗೂ ಯೆನ್ಮಿಯನ್ನು ದಲ್ಲಾಳಿಗಳು ಖರೀದಿಸಿದ್ದಾರೆ. ಯೆನ್ಮಿಯನ್ನು 8500 ರೂಪಾಯಿಗೆ ಮಾರಿದ್ದರು. ಇವಳನ್ನು 25,000 ರೂಪಾಯಿಗೆ ಮಾರಾಲಾಗಿತ್ತಂತೆ. ಖರೀದಿಸಿದ ವ್ಯಕ್ತಿ ಏಕಸಾಮ್ಯ ಹೊಂದಿರಲಿಲ್ಲವಂತೆ. ಎಲ್ಲರೂ ನಮ್ಮನ್ನು ಬಳಸಿಕೊಳ್ತಿದ್ದರು ಎಂದು ಯೆನ್ಮಿ ಹೇಳಿದ್ದಾರೆ.
ಚೀನಾದಲ್ಲಿ ಏಕಾಂಗಿಯಾಗಿದ್ದಾರೆ ಇಷ್ಟು ಪುರುಷರು : ಚೀನಾದಲ್ಲಿ ಒಂದು ಮಗು ನೀತಿ ಅನುಸರಿಸಿದ್ದ ಕಾರಣ ೪ ಲಕ್ಷ ಪುರುಷರಿಗೆ ಮಹಿಳೆಯರಿಲ್ಲ. ಇದೇ ಕಾರಣಕ್ಕೆ ಅವರು ಹೆಣ್ಮಕ್ಕಳನ್ನು ಖರೀದಿ ಮಾಡ್ತಿದ್ದಾರೆ ಎಂದು ಯೆನ್ಮಿ ಹೇಳಿದ್ದಾಳೆ. ಆಕೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನರು ಈ ಘಟನೆಗೆ ಆತಂಕ ವ್ಯಕ್ತಪಡಿಸಿದ್ದಾರೆ.