ಹೋಳಿಯಲ್ಲಿ ಎಲ್ಲರ ಮುಂದೆ ಮಿಂಚಬೇಕೆಂದ್ರೆ ಹೀಗಿರಲಿ makeup
ಮೈಗೆಲ್ಲ ಬಣ್ಣ ಬಳಿದುಕೊಂಡಾಗ್ಲೂ ಸುಂದರವಾಗಿ ಕಾಣ್ಬೇಕೆಂದು ನಾವೆಲ್ಲ ಬಯಸ್ತೇವೆ. ಎಷ್ಟೇ ಮೇಕಪ್ ಮಾಡಿರಲಿ ಹೋಳಿ ಬಣ್ಣ ಮೈಮೇಲೆ ಬೀಳ್ತಿದ್ದಂತೆ ಎಲ್ಲ ಅಸ್ತವ್ಯಸ್ತವಾಗಿರುತ್ತೆ. ಫೋಟೋದಲ್ಲಿ ಮುಖ ಗುರ್ತಿಸೋದೆ ಕಷ್ಟವಾಗುತ್ತೆ. ಆದ್ರೆ ಬಣ್ಣ ಹಚ್ಚಿದ ಮೇಲೂ ಆಕರ್ಷಕವಾಗಿ ಕಾಣ್ಬೇಕೆಂದ್ರೆ ಕೆಲ ಟಿಪ್ಸ್ ಅನುಸರಿಸಿ.
ಪೂಜೆ, ಆರಾಧನೆ, ಸಿಹಿ ತಿಂಡಿಗಳ ಜೊತೆ ಹಬ್ಬ (Festival) ದ ಸಂದರ್ಭದಲ್ಲಿ ನಾವು ಸೌಂದರ್ಯ (Beauty) ಕ್ಕೂ ಮಹತ್ವವನ್ನು ನೀಡ್ತೇವೆ. ಹಬ್ಬದಲ್ಲಿ ಸುಂದರವಾಗಿ ಕಾಣಬೇಕೆಂದು ಬಯಸ್ತೇವೆ. ಸೀರೆ, ಚೂಡಿ ಸೇರಿದಂತೆ ಸಾಂಪ್ರದಾಯಿಕ ಉಡುಗೆಗಳನ್ನು ತೊಡುತ್ತೇವೆ. ಸಾಮಾನ್ಯವಾಗಿ ಹೋಳಿ (Holi) ಹಬ್ಬದಲ್ಲಿ ಜನರು ಹಳೆ ಬಟ್ಟೆ ಧರಿಸ್ತಾರೆ. ಯಾಕೆಂದ್ರೆ ಬಣ್ಣದಿಂದ ಬಟ್ಟೆ ಹಾಳಾಗುತ್ತೆ ಎಂಬ ಕಾರಣಕ್ಕೆ. ಆದ್ರೆ ಅದ್ರಲ್ಲೂ ಚೆಂದ ಕಾಣ್ಬೇಕೆಂಬ ಬಯಕೆ ಕಾಮನ್. ಇನ್ನು ಬಣ್ಣಗಳು ಮೈಮೇಲೆ ಬಿದ್ದಾಗ ಕೆಲವರಿಗೆ ಅಲರ್ಜಿಯಾಗುತ್ತದೆ. ಮತ್ತೆ ಕೆಲವರ ಮೈ-ಮುಖಕ್ಕೆ ಬಣ್ಣ ಅಂಟಿಕೊಳ್ಳುತ್ತದೆ. ಎಷ್ಟು ತೊಳೆದ್ರೂ ಅದು ಹೋಗುವುದಿಲ್ಲ. ಹೋಳಿ ನಂತ್ರ ಮುಖದ ಸೌಂದರ್ಯ ಹಾಳಾಗುತ್ತದೆ. ಓಕುಳಿ ಮುಗಿದ ಮೇಲೆ ಸ್ನಾನ ಮಾಡಿ, ಸುಂದರ ಬಟ್ಟೆ ಧರಿಸಿ ಜನರು ಪಾರ್ಟಿ ಮಾಡಲು ಇಚ್ಛಿಸುತ್ತಾರೆ. ಆದ್ರೆ ಅಲ್ಲಲ್ಲಿ ಅಂಟಿಕೊಂಡಿರುವ ಬಣ್ಣ ಪಾರ್ಟಿ ಲುಕ್ ಹಾಳು ಮಾಡುತ್ತೆ. ಹಾಗಾಗಿ ಹೋಳಿ ಸಂದರ್ಭದಲ್ಲಿ ಮೇಕಪ್ ಮಾಡಿಕೊಳ್ಳುವ ವೇಳೆ ಕೆಲ ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಬೇಕು. ಆಗ ನಿಮ್ಮ ಮುಖಕ್ಕೆ ಬಣ್ಣ ಅಂಟಿಕೊಳ್ಳುವುದಿಲ್ಲ ಜೊತೆಗೆ ಮೇಕಪ್ ಕೂಡ ಹಾಳಾಗುವುದಿಲ್ಲ.
ಹೋಳಿ ಹಬ್ಬದ ಸಮಯದಲ್ಲಿ ವಾಟರ್ ಪ್ರೂಫ್ (Water Proof ) ಮೇಕಪ್ ಬೆಸ್ಟ್. ಇದು ಸೌಂದರ್ಯವನ್ನು ಕಾಪಾಡುವುದಲ್ಲದೇ, ಎಲ್ಲ ಬಣ್ಣಗಳಿಂದ ನಿಮ್ಮ ತ್ವಚೆಯನ್ನು ರಕ್ಷಿಸುತ್ತದೆ.
ಹೋಳಿ ದಿನ ಈ ಮೇಕಪ್ ಬಳಸಿ
ವಾಟರ್ ಪ್ರೂಫ್ ಫೌಂಡೇಶನ್ : ಮೇಕಪ್ ಅಂದ್ಮೇಲೆ ಫೌಂಡೇಶನ್ ಇರ್ಲೇಬೇಕು. ಹೋಳಿ ಹಬ್ಬದಲ್ಲಿ ಸಿಕ್ಕಾಪಟ್ಟೆ ಮಸ್ತಿ ಮಾಡುವ ಪ್ಲಾನ್ ಮಾಡಿದ್ದು,ಚರ್ಮಕ್ಕೆ ಬಣ್ಣ ಅಂಟಿಕೊಳ್ಳುವುದನ್ನು ಇಷ್ಟಪಡುವುದಿಲ್ಲವೆಂದಾದ್ರೆ ವಾಟರ್ ಪ್ರೂಫ್ ಫೌಂಡೇಶನ್ ಹಚ್ಚಿಕೊಳ್ಳಿ. ಇದು ಚರ್ಮ ರಕ್ಷಿಸುವ ಜೊತೆಗೆ ಒಳ್ಳೆ ಟೋನ್ ನೀಡುತ್ತದೆ.
ವಾಟರ್ ಪ್ರೂಫ್ ಮಸ್ಕರಾ : ಮೇಕಪ್ ಅದ್ಮೇಲೆ ಕಣ್ಣು ಮರೆಯಲು ಸಾಧ್ಯವಿಲ್ಲ. ಕಣ್ಣು ಮುಖದ ಆಕರ್ಷಣೆಯ ಕೇಂದ್ರ. ಅನೇಕರು ಮುಖಕ್ಕೆ ಮೇಕಪ್ ಮಾಡದೆ ಬರೀ ಕಣ್ಣಿಗೆ ಮೇಕಪ್ ಮಾಡಿರ್ತಾರೆ. ಅದು ಕೂಡ ಗಮನ ಸೆಳೆಯುತ್ತದೆ. ಹೋಳಿ ಸಂದರ್ಭದಲ್ಲಿ ಅನೇಕರು ನೀರಿನಲ್ಲಿ ಆಡ್ತಾರೆ. ಆಗ ಸಾಮಾನ್ಯ ಮೇಕಪ್ ಮುಖವನ್ನು ಹಾಳು ಮಾಡುತ್ತದೆ. ಮಸ್ಕರಾ ನೀರಿಗೆ ಹಾಳಾಗುತ್ತದೆ. ಹಾಗಾಗಿ ವಾಟರ್ ಪ್ರೂಫ್ ಮಸ್ಕರಾ ಬಳಸಿ. ಇದು ದೀರ್ಘ ಸಮಯ ಕಣ್ಣಿನ ರೆಪ್ಪೆ ಮೇಲಿರುವುದಲ್ಲದೆ ನಿಮ್ಮ ಕಣ್ಣಿನ ಮೆರಗು ಹೆಚ್ಚಿಸುತ್ತದೆ.
Holi Hair Care: ಹೋಳಿಯ ರಂಗಿನಿಂದ ಕೂದಲು ಹಾನಿಯಾಗದಿರಲು ಹೀಗೆ ಮಾಡಿ
ವಾಟರ್ ಪ್ರೂಫ್ ಲಿಪ್ ಸ್ಟಿಕ್ : ಮುಖದ ಮೇಕಪ್ ವಿಷ್ಯಕ್ಕೆ ಬಂದಾಗ ಲಿಪ್ ಸ್ಟಿಕ್ ಅನ್ವಯಿಸುವುದು ಸಹ ಅಗತ್ಯವಾಗಿದೆ. ಬಣ್ಣಗಳ ಹಬ್ಬವಾದ ಹೋಳಿ ಸಂದರ್ಭದಲ್ಲಿ ವಾಟರ್ ಪ್ರೂಫ್ ಲಿಪ್ ಸ್ಟಿಕ್ ಹಚ್ಚಿ ಸೌಂದರ್ಯ ಹೆಚ್ಚಿಸಬಹುದು. ಲಿಪ್ಸ್ಟಿಕ್ ತುಂಬಾ ಚಿಕ್ಕದಾಗಿರುತ್ತದೆ. ನೀವು ಅದನ್ನು ನಿಮ್ಮೊಂದಿಗೆ ಹೋಳಿ ಪಾರ್ಟಿಗೆ ಸುಲಭವಾಗಿ ಕೊಂಡೊಯ್ಯಬಹುದು. ಯಾವುದೇ ಫೋಟೋ ಕ್ಲಿಕ್ ಮಾಡುವ ಮೊದಲು ವಾಟರ್ ಫ್ರೂಪ್ ಲಿಪ್‌ಸ್ಟಿಕ್ ಅನ್ನು ಅನ್ವಯಿಸುವುದರಿಂದ ಎಲ್ಲ ಫೋಟೋಗಳಲ್ಲಿ ನೀವು ಮಿಂಚೋದ್ರಲ್ಲಿ ಎರಡು ಮಾತಿಲ್ಲ.
ವಾಟರ್ ಪ್ರೂಫ್ ಐಲೈನರ್ : ಐಲೈನರ್ ಕೂಡ ಕಣ್ಣಿನ ಸೌಂದರ್ಯ ಹೆಚ್ಚಿಸುತ್ತದೆ. ಆದ್ರೆ ಎಷ್ಟೇ ದುಬಾರಿ ಐಲೈನರ್ ಆಗಿದ್ದರೂ ಅದು ನೀರಿನಲ್ಲಿ ಬೆರೆತು ಹೋಗುತ್ತದೆ. ಹಾಗಾಗಿ ಹೋಳಿ ಸಂದರ್ಭದಲ್ಲಿ ನೀವು ವಾಟರ್ ಪ್ರೂಫ್ ಐಲೈನರ್ ಬಳಸಿ.
Holi 2022: ಬಣ್ಣದೋಕುಳಿಯಲ್ಲಿ ಕಣ್ಣುಗಳನ್ನು ರಕ್ಷಿಸುವುದು ಹೇಗೆ ?
ವಾಟರ್ ಪ್ರೂಫ್ ಸನ್ಸ್ಕ್ರೀನ್ : ಸನ್‌ಸ್ಕ್ರೀನ್ ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುತ್ತದೆ. ಹೋಳಿ ಪಾರ್ಟಿಯನ್ನು ಮನೆಯಿಂದ ಹೊರಗೆ ಮಾಡ್ತೇವೆ. ಬಿಸಿಲ ಝಳ ಈಗಾಗಲೇ ಶುರುವಾಗಿದೆ. ತುಂಬಾ ಸಮಯ ಸೂರ್ಯನ ಕಿರಣಕ್ಕೆ ಮೈ ಒಡ್ಡಿದಾಗ ಚರ್ಮದ ಬಣ್ಣ ಬದಲಾಗುತ್ತದೆ. ಚರ್ಮವನ್ನು ರಕ್ಷಿಸಲು ಹೋಳಿಯಲ್ಲಿ ವಾಟರ್ ಪ್ರೂಫ್ ಸನ್‌ಸ್ಕ್ರೀನ್ ಬಳಸಿ.