Asianet Suvarna News Asianet Suvarna News

Watch: ಮಹಿಳೆಯರ ಹಸ್ತ ಮೈಥುನದ ಬಗ್ಗೆ ಮಾತನಾಡಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸುಮುಖಿ ಯಾರು?

ಮಹಿಳೆಯರಿಗಾಗಿ ಹಸ್ತಮೈಥುನದ ಕ್ಲಿಪ್ 'ಲಸ್ಟ್ ಸ್ಟೋರೀಸ್' ಮತ್ತೊಮ್ಮೆ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಫಕ್ತ್‌ಮಹಿಳಾಸಂಠಿ (#फक्तमहिलांसाठी) ಎನ್ನುವ ಹ್ಯಾಶ್‌ಟ್ಯಾಗ್‌ನಲ್ಲಿ ಚರ್ಚೆ ಆಗುತ್ತಿದೆ.
 

Video clip of Sumukhi Suresh masturbation manual for women from Lust Stories goes viral san
Author
First Published Oct 21, 2023, 4:31 PM IST

ಅನುರಾಗ್‌ ಕಶ್ಯಪ್‌, ಜೋಯಾ ಅಖ್ತರ್‌, ದಿಬಾಕರ್‌ ಬ್ಯಾನರ್ಜಿ ಮತ್ತು ಕರಣ್‌ ಜೋಹರ್‌ನ ನಾಲ್ಕು ಕಿರುಚಿತ್ರಗಳ ಸಂಕಲನ ಲಸ್ಟ್‌ ಸ್ಟೋರೀಸ್‌  ಸಿನಿಮಾ ಬಿಡುಗಡೆಯಾಗಿ ವರ್ಷಗಳೇ ಕಳೆದಿವೆ. ಸಿನಿಮಾಕ್ಕಿಂತ  ಹೆಚ್ಚಾಗಿ ಸಿನಿಮಾದಲ್ಲಿನ ಹಸ್ತಮೈಥುನ ಸೀನ್‌ ಸಖತ್‌ ವೈರಲ್‌ ಆಗಿತ್ತು. ನಟಿ ಕಿಯಾರಾ ಆಡ್ವಾಣಿ ಈ ಚಿತ್ರದ ಈ ಸೀನ್‌ನಲ್ಲಿ ನಟಿಸಿದ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲಿಯೀ ದೊಡ್ಡ ಹೆಸರು ಮಾಡಿದರು.  ಲಸ್ಟ್‌ ಸ್ಟೋರೀಸ್‌ ಚಿತ್ರ ಬಿಡುಗಡಯಾಗಿ ವರ್ಷಗಳೇ ಕಳೆದಿದ್ದರೂ, ಇಂದಿಗೂ ಚಿತ್ರ ಜನರ ನಡುವೆ ಮಾತುಕತೆಯಲ್ಲಿರುವ ನಾನಾ ಕಾರಣಗಳಿವೆ. ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿರುವ ಈ ಸಿನಿಮಾ ಇತ್ತೀಚೆಗೆ ಮತ್ತೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗಿದೆ. ಇದು ಮಹಿಳೆಯರ ಲೈಂಗಿಕ ಬಯಕೆಗಳ ಕುರಿತಾಗಿ ಇರುವ ಚಿತ್ರವಾಗಿದೆ. ನಾಲ್ಕು ವಿಭಿನ್ನ ಕಥೆಗಳನ್ನು ತನ್ನನ್ನು ತಾನು ಸಂತೋಷಪಡಿಸಿಕೊಳ್ಳುವ ಅಂದರೆ, ಹಸ್ತಮೈಥುನ ಮಾಡಿಕೊಳ್ಳುವ ಅವರ ಹಕ್ಕುಗಳ ಬಗ್ಗೆ ಪ್ರತಿಪಾದಿಸುತ್ತದೆ. ಆದರೆ, ಸಾಂಪ್ರದಾಯಿಕ ಭಾರತದಲ್ಲಿ ಇದನ್ನು ನಿಷೇಧಿತ ಎಂದು ಬಿಂಬಿಸಲಾಗಿರುವ ಕಾರಣ, ಈ ಚಿತ್ರದ ಹಸ್ತಮೈಥುನದ ಸೀನ್‌ ಸೋಶಿಯಲ್‌ ಮೀಡಿಯಾದಲ್ಲಿ ಕೋಲಾಹಲ ಎಬ್ಬಿಸಿತ್ತು.

ಈಗ ಲಸ್ಟ್‌ ಸ್ಟೋರೀಸ್‌ ಚಿತ್ರದಲ್ಲಿ ಸ್ಟ್ಯಾಂಡ್‌ಅಪ್‌ ಕಾಮೆಡಿಯನ್‌ ಸುಮುಖಿ ಸುರೇಶ್‌ ಅವರ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಕ್ಲಿಪ್‌ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ. ವೀಡಿಯೊದಲ್ಲಿ, ಕಲಾವಿದರು ಮಹಿಳೆಯರಿಗೆ ಸ್ವಯಂ-ಸಂತೋಷದ ಕೈಪಿಡಿಯನ್ನು ನೀಡುತ್ತಿದ್ದಾರೆ. ಈ ವೀಡಿಯೊ ಲಸ್ಟ್ ಸ್ಟೋರೀಸ್‌ನ ಮೊದಲ ಕಥೆಯ ಕ್ಲಿಪ್ ಆಗಿದ್ದು, ಇದರಲ್ಲಿ ರಾಧಿಕಾ ಆಪ್ಟೆ ನಟಿಸಿದ್ದಾರೆ ಮತ್ತು ಅನುರಾಗ್ ಕಶ್ಯಪ್ ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಫಕ್ತ್‌ಮಹಿಳಾಸಂಠಿ (#फक्तमहिलांसाठी)  ಮತ್ತು #LustStoryForWomen ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟ್ವಿಟ್ಟರ್‌ನಲ್ಲಿ ಈ ವಿಡಿಯೋ ಟ್ರೆಡಿಂಗ್‌ ಆಗುತ್ತಿರುವುದು ಮಾತ್ರವಲ್ಲ, ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಇಲ್ಲಿ ಮಹಿಳೆಯರು ಲಸ್ಟ್ ಸ್ಟೋರೀಸ್ ಮ್ಯಾನ್ಯುಯೆಲ್‌ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.

ಕುತೂಹಲಕಾರಿಯಾಗಿ, ಸ್ತ್ರೀ ಹಸ್ತಮೈಥುನ ಕುರಿತು ಚರ್ಚೆಯನ್ನು ಹುಟ್ಟುಹಾಕಿದ ಕ್ಲಿಪ್ ಪ್ರಮುಖವಾಗಿ ಹೃತಿಕ್ ರೋಷನ್ ಹೆಸರನ್ನು ಸ್ತ್ರೀ ಫ್ಯಾಂಟಸಿ ಹೆಸರಾಗಿ ಒಳಗೊಂಡಿದೆ. ಹೃತಿಕ್‌ ರೋಶನ್‌ ಹೆಸರನ್ನು ಹೇಳಿಕೊಂಡು ಹಸ್ತಮೈಥುನ ಮಾಡಿಕೊಳ್ಳುತ್ತಾರೆ ಎಂದು ಅದರಲ್ಲಿ ಹೇಳಲಾಗಿದೆ. ಅದರ ಬಗ್ಗೆ ನಟ ಏನು ಹೇಳುತ್ತಾರೆಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಲಸ್ಟ್ ಸ್ಟೋರೀಸ್ ಮ್ಯಾನ್ಯುಯೆಲ್‌ ಎಂದು ಹೆಸರಿಸಲಾದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸದ್ದು ಮಾಡಿದ್ದು, ಮಹಿಳಾ ನೆಟಿಜನ್‌ಗಳು ಈ ಕುರಿತಾಗಿ ಹೆಚ್ಚಿನ ಅಭಿಪ್ರಾಯ ನೀಡಲು ಕೇಳಲಾಗಿದೆ.

ಬೆಡ್‌ರೂಮ್‌ ಸೀನ್‌ಗಾಗಿಯೇ 1 ಕೋಟಿ ಜಾಸ್ತಿ ಸಂಭಾವನೆ ಕೇಳಿದ್ರಾ ತಮನ್ನಾ?

'ಹೃತಿಕ್‌ ರೋಶನ್‌ ಹೆಚ್ಚಿನ ಮಹಿಳೆಯರ ಲಸ್ಟ್‌ನ ಫೇಸ್‌ ಆಗಿರುವುದು ನಿಜ' ಎಂದು ಪೂನಮ್‌ ಶರ್ಮಾ ಎನ್ನುವವರು ಬರೆದುಕೊಂಡಿದ್ದಾರೆ.' ಮಹಿಳೆ ಲೈಂಗಿಕವಾಗಿ ಸಕ್ರಿಯವಾಗಿರಲು ಮತ್ತು ಅವಳ ಆಸೆಗಳನ್ನು ತಾನಾಗಿಯೇ ಈಡೇರಿಸಿಕೊಳ್ಳುವುದರಲ್ಲಿ ಯಾವದೇ ತಪ್ಪಿಲ್ಲ. ಪುರುಷರು ಲಸ್ಟ್‌ ಹೊಂದಿರಬಹುದು ಎಂದಾದಲ್ಲಿ ಮಹಿಳೆಯರಲ್ಲಿ ಯಾಕೆ ಇರಬಾರದು' ಎಂದು ಮೋನಾ ಎನ್ನುವವರು ಪ್ರಶ್ನೆ ಮಾಡಿದ್ದಾರೆ. 'ಹೆಂಗಸರು ತಮ್ಮ ಕಾಮ, ಆಸೆ, ಕನಸುಗಳ ಬಗ್ಗೆ ತಮಗೆ ಸರಿ ಮತ್ತು ತಪ್ಪು ಯಾವುದು ಎಂದು ಹೇಳದೆ ಮಾತನಾಡಲು ಆರಂಭಿಸಿರುವ ಕಾಲವಿದು..'ಎಂದು ಊರ್ವಶಿ ರೌಟೇಲಾ ಜೋನ್‌ ಟ್ವಿಟರ್‌ ಹ್ಯಾಂಡಲ್‌ ಪೋಸ್ಟ್‌ ಮಾಡಿದೆ.

ಕುಟುಂಬದ ಜೊತೆ 'ಲಸ್ಟ್ ಸ್ಟೋರಿ' ನೋಡಿದ ಅನುಭವ ಬಿಚ್ಚಿಟ್ಟ ನಟಿ ತಮನ್ನಾ

Follow Us:
Download App:
  • android
  • ios