ಕುಟುಂಬದ ಜೊತೆ 'ಲಸ್ಟ್ ಸ್ಟೋರಿ' ನೋಡಿದ ಅನುಭವ ಬಿಚ್ಚಿಟ್ಟ ನಟಿ ತಮನ್ನಾ

ಕುಟುಂಬದ ಜೊತೆ 'ಲಸ್ಟ್ ಸ್ಟೋರಿ 2' ನೋಡಿದ ತಮನ್ನಾ. ಹಸಿಬಿಸಿ ದೃಶ್ಯಗಳನ್ನು ನೋಡುವಾಗ ಅನುಭವ ಹೇಗಿತ್ತೆಂದು ಮಿಲ್ಕಿ ಬ್ಯೂಟಿ ಬಹಿರಂಗ ಪಡಿಸಿದ್ದಾರೆ. 

Tamannaah Bhatia reveals how she felt watching her intimate scenes in Lust Stories 2 with family sgk

ಖ್ಯಾತ ನಟಿ ತಮನ್ನಾ, ನೀನಾ ಗುಪ್ತಾ, ಕಾಜೋಲ್, ವಿಜಯ್ ವರ್ಮಾ, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರು ನಟಿಸಿರುವ ಲಸ್ಟ್ ಸ್ಟೋರಿ 2 ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸ್ಟಾರ್ ನಟಿಯರು ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ತಮನ್ನಾ ಮೊದಲ ಬಾರಿಗೆ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೆಯಲ್ಲದೇ ವಿಜಯ್ ವರ್ಮಾ ಜೊತೆ ಬೆಡ್ ರೂಮ್ ಸೀನ್‌ಗಳಲ್ಲಿ ಮಾಡಿದ್ದಾರೆ. ತಮನ್ನಾ ಕಿಸ್ಸಿಂಗ್ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹಲ್‌ಚಲ್ ಎಬ್ಬಿಸಿವೆ. ಸದ್ಯ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆರಂಭಿಸಿರುವ 'ಲಸ್ಟ್ ಸ್ಟೋರಿ' ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿರುವ ನಟಿ ತಮನ್ನಾ ತನ್ನ ಕುಟುಂಬದೊಂದಿಗೆ ಈ ದೃಶ್ಯಗಳನ್ನು ನೋಡಿದಾಗ ತನಗೆ ಹೇಗೆ ಅನಿಸಿತು ಎಂಬುದನ್ನು ಬಹಿರಂಗಪಡಿಸಿದ್ದಾರೆ. ತಮನ್ನಾ ಕುಟುಂಬದ ಜೊತೆ ಕುಳಿತು ಹಸಿಬಿಸಿ ದೃಶ್ಯಗಳನ್ನು ನೋಡುವುದು ತುಂಬಾ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ. 'ನಾನು ಲಸ್ಟ್ ಸ್ಟೋರಿ 2 ನಲ್ಲಿ ನಟಿಸಿದ್ದೇನೆ. ನಾನು ನಟಿಯಾಗಿ ತನ್ನ ಅಭಿಮಾನಿಗಳ ನಿರೀಕ್ಷೆಯನ್ನು ಪೂರೈಸುವುದು. ಕುಟುಂಬದ ಜೊತೆ ಆ ದೃಶ್ಯಗಳನ್ನು ನೋಡುವಾಗ ಸ್ವಲ್ಪ ಕಷ್ಟವಾಗುತ್ತಿತ್ತು. ಆ ದೃಶ್ಯಗಳನ್ನು ಶೂಟ್ ಮಾಡುವಾಗ ಕೂಡ ಕಷ್ಟವಾಗಿತ್ತು. ಆದರೆ ಅದೇ ಸಮಯದಲ್ಲಿ ನಾನು ಒಬ್ಬಳು ಕಲಾವಿದೆ ಎಂದು ಭಾವಿಸುತ್ತೇನೆ. ನನ್ನ ಕೆಲಸದಲ್ಲಿ ನನಗೆ ಬೇಕಾದುದನ್ನು ಮಾಡಲು ನಾನು ಸಂತೋಷಪಡುತ್ತೇನೆ' ಎಂದು ತಮನ್ನಾ ಹೇಳಿದ್ದಾರೆ. 

ಅಂದಹಾಗೆ ತಮನ್ನಾ ಮತ್ತು ವಿಜಯ್ ವರ್ಮಾ ಇಬ್ಬರೂ ಪ್ರೀತಿಯಲ್ಲಿದ್ದಾರೆ. ವಿಜಯ್ ವರ್ಮಾಗಾಗಿ ತಮನ್ನಾ ಇಂಥ ದೃಶ್ಯಗಳಲ್ಲಿ ನಟಿಸಿದ್ದಾರೆ. ಈ ಮೂಲಕ ತನ್ನ 18 ವರ್ಷಗಳ ನೋ ಕಿಸ್ಸಿಂಗ್ ನಿಯಮವನ್ನು ಬ್ರೇಕ್ ಮಾಡಿದ್ದಾರೆ. ತೆರೆಮೇಲೆ ಚುಂಬಿಸಿದ ಮೊದಲ ಸಹನಟ ವಿಜಯ್ ವರ್ಮಾ ಎಂದು ಹೇಳಿದ್ದರು. ತಮನ್ನಾ ಮಾತಿಗೆ ಬಾಯ್ ಫ್ರೆಂಡ್ ವಿಜಯ್ ವರ್ಮಾ ಧನ್ಯವಾದವನ್ನು ತಿಳಿಸಿದ್ದರು. ಅಂದಹಾಗೆ ಇಬ್ಬರ ಕೆಮಿಸ್ಟ್ರಿ ಲಸ್ಟ್ ಸ್ಟೋರಿ 2 ನಲ್ಲಿ ಅಭಿಮಾನಿಗಳ ಹೃದಯ ಗೆದ್ದಿದೆ.  

ಲಸ್ಟ್ ಸ್ಟೋರೀಸ್ 2 ಸ್ಕ್ರೀನಿಂಗ್‌: ಒಟ್ಟಿಗೇ ಕಾಣಿಸಿಕೊಂಡ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ!

ವಿಜಯ್ ಜೊತೆ ಸೇಫ್ ಫೀಲ್ ಆಗ್ತಿತ್ತು ಎಂದ ತಮನ್ನಾ 

ಲಸ್ಟ್ ಸ್ಟೋರಿ 2ನಲ್ಲಿ ಹಾಟ್ ಸೀನ್ ಮಾಡುವಾಗ ಹೇಗನಿಸಿತು ಎಂದು ತಮನ್ನಾ ಈ ಮೊದಲು ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದರು. ವಿಜಯ್ ವರ್ಮಾ ತುಂಬಾ ಸೇಫ್ ಫೀಲ್ ನೀಡಿದ್ರು ಎಂದು ಹೇಳಿದ್ದರು ತಮನ್ನಾ ಹೇಳಿದ್ದರು. 'ನಟರ ಜೊತೆ ನಟಿಸುವಾಗ ನನಗೆ ಯಾವಾಗಲೂ ತುಂಬಾ ಸೇಫ್ ಅಂತ ಅನಿಸುತ್ತಿರಲಿಲ್ಲ. ಕಲಾವಿದರಿಗೆ ನಿಜವಾಗಿಯೂ ಇದು ಮುಖ್ಯ. ನೀವು ನಿಜಕ್ಕೂ ಅಂತ ಸುರಕ್ಷತತೆಯನ್ನು ಅನುಭವಿಸಬೇಕು. ಇದು ವಿಶೇಷವಾಗಿ ಇಂತಹ ಚಿತ್ರದಲ್ಲಿ ನೀವು ತೆಗೆದುಕೊಳ್ಳುವ ಜಂಪ್ ಆಗಿದೆ. ನಾನು ಏನನ್ನೂ ಹೇಳಲು, ಏನನ್ನೂ ಮಾಡಲು, ಒಂದು ನಿರ್ದಿಷ್ಟ ರೀತಿಯಲ್ಲಿ ಭಾವೋದ್ರಿಕ್ತನಾಗಲು ಹೆದರಿಲ್ಲ ನನಗೆ ತುಂಬಾ ಸೇಫ್ ಫೀಲ್ ಮಾಡಿದ್ರು. ತುಂಬಾ ಸುಲಭ ಎನ್ನುವ ಭಾವನೆ ಮುಡಿಸಿದ್ರು. ಅದು ತುಂಬಾ ಇಷ್ಟವಾಯಿತು' ಎಂದು ವಿಜಯ್ ವರ್ಮಾ ಬಗ್ಗೆ ಹೇಳಿದ್ದರು.

ತಮನ್ನಾ-ವಿಜಯ್​ ವರ್ಮಾ ಮೊದಲ ಡೇಟಿಂಗ್​ನಲ್ಲಿ ಸೆಕ್ಸ್​ ಮಾಡಿದ್ರಾ? ಜೋಡಿ ಹೇಳಿದ್ದೇನು?

ವಿಜಯ್ ನನ್ನ ಪ್ರೀತಿಯ ಖಜಾನೆ 

ಲಸ್ಟ್ ಸ್ಟೋರೀಸ್ 2 ಸೆಟ್‌ಗಳಲ್ಲಿ ವಿಜಯ್‌ ವರ್ಮಾ ಜೊತೆ ಪ್ರೀತಿ ಶುರುವಾಯಿತಾ ಎಂದು ಕೇಳಿದ ಪ್ರಶ್ನೆಗೆ   ತಮನ್ನಾ, 'ಹೌದು' ಎಂದು ಹೇಳಿದರು. ಬಳಿಕ ವಿಜಯ್ ವರ್ಮರನ್ನು ವಿವರಿಸಿದರು. ವಿಜಯ್ ವರ್ಮಾ ನನ್ನ ಖುಷಿಯ ಖಜಾನೆ ಎಂದು ಹೇಳಿದರು. 'ನಮ್ಮ ಸಂಬಂಧ ಬಹಳ ನೈಸರ್ಗಿಕ ರೀತಿಯಲ್ಲಿ ಯಾವುದೇ ಒತ್ತಡಗಳಿಲ್ಲದೆ ಶುರುವಾಯ್ತು' ಎಂದು ಹೇಳುವ ಮೂಲಕ ಮೊದಲ ಬಾರಿಗೆ ಪ್ರೀತಿ ವಿಚಾರ ಬಹಿರಂಗ ಪಡಿಸಿದರು. 

Latest Videos
Follow Us:
Download App:
  • android
  • ios