Asianet Suvarna News Asianet Suvarna News

ಈ ಮಹಿಳೆಯರನ್ನು ಹೆಚ್ಚು ಕಾಡುತ್ತೆ ಗರ್ಭಾಶಯದ ಕ್ಯಾನ್ಸರ್

ಮಹಿಳೆಯರು ಅವರ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡ್ಬೇಕು. ಅದ್ರಲ್ಲೂ ಅವರ ಕೆಲವು ಅಂಗದ ಆರೈಕೆ ಬಹಳ ಮುಖ್ಯ. ಇತ್ತೀಚಿನ ದಿನಗಳಲ್ಲಿ ಗರ್ಭಾಶಯದ ಕ್ಯಾನ್ಸರ್ ಹೆಚ್ಚಾಗಿದ್ದು, ಮಹಿಳೆಯರು ಎಚ್ಚೆತ್ತುಕೊಳ್ಳುವ ಅಗತ್ಯವಿದೆ.
 

Uterus Cancer Symptoms In Women cause symptoms and solution
Author
Bangalore, First Published Aug 15, 2022, 1:09 PM IST

ಹೆಣ್ಣಿನ ದೇಹದ ಪ್ರಮುಖ ಭಾಗ ಗರ್ಭಕೋಶ. ಇದರ ಸಹಾಯದಿಂದ ಮಹಿಳೆ ತಾಯಿಯಾಗುವ ಆನಂದವನ್ನು ಪಡೆಯುತ್ತಾಳೆ.  ಆದರೆ ಈ ಅಂಗವು ದುರ್ಬಲಗೊಂಡರೆ, ಮಹಿಳೆಯರಿಗೆ ಅನೇಕ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಇದರಲ್ಲಿ ಗರ್ಭಾಶಯದ ಕ್ಯಾನ್ಸರ್ ಅತ್ಯಂತ ಅಪಾಯಕಾರಿ. ಏಕೆಂದರೆ ಗರ್ಭಾಶಯದ ಕ್ಯಾನ್ಸರ್ ಸಂಭವಿಸಿದಲ್ಲಿ, ಮಹಿಳೆಯು ತಾಯಿಯಾಗಲು ಸಾಧ್ಯವಾಗುವುದಿಲ್ಲ ಅಥವಾ ಭವಿಷ್ಯದಲ್ಲಿ ತಾಯಿಯಾಗುವ ಭರವಸೆ ಕಳೆದುಕೊಳ್ತಾರೆ.  ಗರ್ಭಾಶಯದ ಕ್ಯಾನ್ಸರ್ ಜೀವಕ್ಕೆ ಅಪಾಯವೂ ಆಗಬಹುದು. ಮಹಿಳೆಯರು ಗರ್ಭಾಶಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಕೆಲವು ಮಹಿಳೆಯರು ಗರ್ಭಾಶಯದ ಕ್ಯಾನ್ಸರ್ ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಗರ್ಭಾಶಯ (Uterus) ದ ಕ್ಯಾನ್ಸರ್ (Cancer ) ಮಹಿಳೆಯರಲ್ಲಿ ಕಾಡುವ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ. ಇದರ ಪ್ರಕರಣಗಳು ಈಗ ವೇಗವಾಗಿ ಹೆಚ್ಚುತ್ತಿವೆ. ಹೆಚ್ಚಿನ ಪ್ರಕರಣಗಳು 30 ರಿಂದ 35 ವರ್ಷ ವಯಸ್ಸಿನ ಮಹಿಳೆ (woman) ಯರಲ್ಲಿ ಕಾಣಿಸಿಕೊಳ್ತಿದೆ. 

ಯಾವ ಮಹಿಳೆಯರು ಹೆಚ್ಚು ಅಪಾಯದಲ್ಲಿದ್ದಾರೆ? : 
ಎಂದಿಗೂ ಗರ್ಭಿಣಿ (Pregnant) ಯಾಗದ ಅಥವಾ 55 ರ ನಂತರ ಋತುಬಂಧ ಹೊಂದಿರುವ ಮಹಿಳೆಯರಿಗೆ ಈ ಸಮಸ್ಯೆ ಕಾಡುವುದು ಹೆಚ್ಚು. ಪಿಸಿಓಎಸ್ ಅಥವಾ ಮಧುಮೇಹ ಇರುವವರಿಗೆ ಈ ಕ್ಯಾನ್ಸರ್ ಬರುವ ಅಪಾಯ ಹೆಚ್ಚು. ಮಧುಮೇಹ ಮತ್ತು ಗರ್ಭಾಶಯದ ಕ್ಯಾನ್ಸರ್ ನಡುವೆ ನೇರ ಸಂಬಂಧವಿದೆ ಎಂದು ಕೆಲವು ಅಧ್ಯಯನಗಳು ಸೂಚಿಸುತ್ತವೆ.ಹೆಚ್ಚಿನ ಕೊಬ್ಬಿನ ಕ್ಯಾಲೋರಿ ಆಹಾರವನ್ನು ಸೇವಿಸುವ ಮಹಿಳೆಯರಿಗೆ  ಬೊಜ್ಜು ಹೆಚ್ಚಾಗುವುದರ ಜೊತೆಗೆ ಕ್ಯಾನ್ಸರ್ ಬರುವ ಸಾಧ್ಯತೆಯೂ ಹೆಚ್ಚುತ್ತದೆ. ಕುಟುಂಬದ ಇತಿಹಾಸದಲ್ಲಿ ಕ್ಯಾನ್ಸರ್ ಇದ್ದಲ್ಲಿ ಶೇಕಡಾ 5ರಷ್ಟು ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಜನನ ನಿಯಂತ್ರಣ ಮಾತ್ರೆಗಳ ಅತಿಯಾದ ಬಳಕೆಯಿಂದಲೂ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ. 
 

Women Health: ಪಿಸಿಓಡಿಗೆ ಇಲ್ಲಿದೆ ಸರಿಯಾದ ಚಿಕಿತ್ಸೆ

ಗರ್ಭಾಶಯದ ಕ್ಯಾನ್ಸರ್‌ನ ಲಕ್ಷಣಗಳೇನು? : 
ಎಂಡೊಮೆಟ್ರಿಯಮ್ ಕೋಶಗಳು ವಿಪರೀತವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಗರ್ಭಾಶಯದ ಒಳಪದರವನ್ನು ಎಂಡೊಮೆಟ್ರಿಯಮ್ ಎಂದು ಕರೆಯಲಾಗುತ್ತದೆ. ಈ ಕಾರಣದಿಂದಾಗಿ, ಗರ್ಭಾಶಯದ ಕ್ಯಾನ್ಸರ್ ಸಂಭವಿಸುತ್ತದೆ.
ಮಹಿಳೆಗೆ ಪೆಲ್ವಿಕ್ ನಲ್ಲಿ ಅಸಹನೀಯ ನೋವು ಇರುತ್ತದೆ. ಅನಿಯಮಿತ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. 

ಮುಟ್ಟಿನ  ಹೊರತಾಗಿ  ಹಠಾತ್ ರಕ್ತಸ್ರಾವ ಅಥವಾ ಡಿಸ್ಚಾರ್ಜ್ ಕಾಣಿಸಿಕೊಳ್ಳುತ್ತಿದ್ದರೆ ಇದು ಕೂಡ ಕ್ಯಾನ್ಸರ್ ಲಕ್ಷಣವಾಗಿರುತ್ತದೆ. ಋತುಬಂಧದ ನಂತರವೂ ರಕ್ತಸ್ರಾವ ಮುಂದುವರಿಯುತ್ತದೆ. 
ಈ ಕ್ಯಾನ್ಸರ್ ನ ಇನ್ನೊಂದು ಲಕ್ಷಣವೆಂದ್ರೆ ತೂಕ ಕಡಿಮೆಯಾಗುತ್ತಿದೆ.

ಮೂತ್ರ ವಿಸರ್ಜನೆ ಆಗ್ತಿರುತ್ತದೆ. ಮೂತ್ರ ವಿಸರ್ಜನೆಯ ಸಮಯದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಂಭೋಗ ಮಾಡುವಾಗ ತುಂಬಾ ನೋವಾಗುತ್ತದೆ. ಇಂಥ ಲಕ್ಷಣ ಕಾಣಿಸಿಕೊಂಡ್ರೆ ತಕ್ಷಣ ಸ್ತ್ರೀರೋಗತಜ್ಞರನ್ನು  ಭೇಟಿ ಮಾಡಿ.  

ಗರ್ಭನಿರೋಧಕ ಬಳಕೆಯಿಂದ ಪಿರಿಯಡ್ಸ್ ಮೇಲೆ ಪರಿಣಾಮ ಬೀರುತ್ತದೆಯೇ?

ಗರ್ಭಾಶಯದ ಕ್ಯಾನ್ಸರ್‌ ಗೆ ಚಿಕಿತ್ಸೆ : ಎಂಡೊಮೆಟ್ರಿಯಲ್ ಕ್ಯಾನ್ಸರ್  ಗೆ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಇದಲ್ಲದೆ ಕೀಮೋಥೆರಪಿ, ರೇಡಿಯೇಶನ್ ಥೆರಪಿ, ಹಾರ್ಮೋನ್ ಥೆರಪಿ, ಇಮ್ಯುನೊಥೆರಪಿ ಇತ್ಯಾದಿಗಳನ್ನು ಸಹ ಮಾಡಬಹುದು. ಆದರೆ ಆರಂಭದಲ್ಲೇ ರೋಗಲಕ್ಷಣ ಪತ್ತೆಯಾದ್ರೆ ಅದನ್ನು ಕಡಿಮೆ ಮಾಡುವುದು ಸುಲಭ. ಜೀವನ ಶೈಲಿಯನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಕೂಡ ಬಹಳ ಮುಖ್ಯವಾಗುತ್ತದೆ.

ಆರೋಗ್ಯಕರವಾಗಿ ಆಹಾರ ಸೇವನೆ ಮಾಡಿದ್ರೆ  ತೂಕವನ್ನು ನಿಯಂತ್ರಣದಲ್ಲಿಡಬಹುದು. ಪ್ರತಿ ನಿತ್ಯ ಯೋಗ ಮತ್ತು ವ್ಯಾಯಾಮ ಮಾಡಬೇಕು. ಹೊರಗೆ ತಿನ್ನುವ ಬದಲು ಹಸಿರು ಎಲೆ, ತರಕಾರಿಗಳು, ಹಣ್ಣಿನ ರಸಗಳು, ಡ್ರೈ ಫ್ರೂಟ್ಸ್ ನಂತಹ ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಕರಿದ ಮತ್ತು ಹೆಚ್ಚು ಕೊಬ್ಬಿನ ಆಹಾರವನ್ನು ತಿನ್ನಬಾರದು. ಪಿರಿಯಡ್ಸ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ವೈದ್ಯರನ್ನು ಭೇಟಿಯಾಗಬೇಕು. ಸಮಸ್ಯೆಗೆ ತಕ್ಕಂತೆ ಸೂಕ್ತ ಚಿಕಿತ್ಸೆ ಪಡೆದರೆ ಬೇಗ ರೋಗವನ್ನು ಕಡಿಮೆ ಮಾಡಬಹುದು. ಕೊನೆ ಹಂತದಲ್ಲಿ ನೋವುಣ್ಣುವ ಬದಲು ಮೊದಲೇ ಚಿಕಿತ್ಸೆ ಪಡೆದ್ರೆ ಒಳ್ಳೆಯದು.   

Follow Us:
Download App:
  • android
  • ios