Asianet Suvarna News Asianet Suvarna News

ಎದೆ ಹಾಲುಣಿಸುವಾಗ ಮೊಬೈಲ್ ಬಳಸ್ತೀರಾ? ಎಚ್ಚರ..ಇದು ಮಗುವಿನ ಆರೋಗ್ಯಕ್ಕೆ ಡೇಂಜರ್‌

ಮಗುವಿನ ಆರೋಗ್ಯಕ್ಕೆ ಎದೆಹಾಲು ತುಂಬಾ ಅವಶ್ಯಕ. ಆದರೆ ಅದನ್ನು ಕುಡಿಸೋ ರೀತಿ ಸಹ ಸರಿಯಾಗಿರಬೇಕು. ಬಹುತೇಕ ಮಹಿಳೆಯರು ಮಕ್ಕಳಿಗೆ ಹಾಲೂಡಿಸುವಾಗ ಮೊಬೈಲ್ ಬಳಸುವ ಅಭ್ಯಾಸ ಹೊಂದಿರುತ್ತಾರೆ. ಆದ್ರೆ ಇದು ಮಕ್ಕಳ ಆರೋಗ್ಯಕ್ಕೆ ಮಾರಕ ಅನ್ನೋದು ನಿಮ್ಗೆ ಗೊತ್ತಿದ್ಯಾ?

Use phone while breastfeeding, know how heavy this mistake of yours will be on the baby Vin
Author
First Published Mar 23, 2023, 12:18 PM IST

ಹೆಣ್ಣಿನ ಜೀವನದಲ್ಲಿ ಗರ್ಭಾವಸ್ಥೆ ಎಂಬುದು ಎಷ್ಟು ಮುಖ್ಯವೋ ಹೆರಿಗೆಯ ನಂತರದ ದಿನಗಳು ಸಹ ಅಷ್ಟೇ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಹೆರಿಗೆಯ ನಂತರವೂ ಮಹಿಳೆ ತನ್ನ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಹೆಚ್ಚೆಚ್ಚು ಕಾಳಜಿಯನ್ನು ವಹಿಸಬೇಕು. ಅದರಲ್ಲೂ ಮಗುವಿನ ಆಹಾರದ ಬಗ್ಗೆ ಆರಂಭದ ದಿನಗಳಲ್ಲೇ ಕಾಳಜಿ ವಹಿಸಬೇಕಾದುದು ಅಗತ್ಯವಾಗಿದೆ. ನವಜಾತ ಶಿಶುವಿನ ಆರೋಗ್ಯಕ್ಕೆ ತಾಯಿಯ ಎದೆಹಾಲು ತುಂಬಾ ಅಗತ್ಯ ಅನ್ನೋದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಆದ್ರೆ ಅದನ್ನು ಕುಡಿಸೋ ರೀತಿ ಸರಿಯಾಗಿದ್ದರೆ ಮಾತ್ರ ಇದು ಮಗುವಿನ ಆರೋಗ್ಯಕ್ಕೆ ಪ್ರಯೋಜನವನ್ನುಂಟು ಮಾಡಬಹುದು.

ಗರ್ಭಾವಸ್ಥೆಯಲ್ಲಿ ಹಾಗೂ ಹೆರಿಗೆಯ ನಂತರದ ದಿನಗಳಲ್ಲಿ ಮಹಿಳೆಯರು (Women) ಸಮಯದ ಕೊರತೆಯನ್ನು ಅನುಭವಿಸುತ್ತಾರೆ. ಹೆರಿಗೆಯ ನಂತರ ಮಗುವಿನ ಲಾಲನೆ-ಪಾಲನೆಯಲ್ಲಿಯೇ ಹೆಚ್ಚು ಸಮಯ ಕಳೆದು ಹೋಗುತ್ತದೆ. ಹೀಗಾಗಿ ಬಹುತೇಕ ಮಹಿಳೆಯರಿಗೆ ಪರ್ಸನಲ್ ಟೈಂ ಎಂಬುದು ಸಿಗುವುದೇ ಇಲ್ಲ. ಹೀಗಾಗಿ ಮಗುವಿಗೆ ಹಾಲು ಕುಡಿಸೋ (Breastfeeding) ಸಮಯದಲ್ಲಿ ಮೊಬೈಲ್ ಬಳಸೋ ಅಭ್ಯಾಸ ಹೊಂದಿರುತ್ತಾರೆ. ಆದ್ರೆ ಹೀಗೆ ಮಾಡೋದು ಸರೀನಾ, ಹಾಲೂಡಿಸುವಾಗ ಮೊಬೈಲ್ ಬಳಸೋದ್ರಿಂದ ಮಗುವಿನ ಆರೋಗ್ಯಕ್ಕೆ (Health) ತೊಂದ್ರೆಯಾಗೋದಿಲ್ವಾ? ಈ ಬಗ್ಗೆ ರೂಬಿ ಹಾಲ್ ಕ್ಲಿನಿಕ್‌ನ ಮುಖ್ಯ ಐವಿಎಫ್ ಸಲಹೆಗಾರರು ಮತ್ತು ಎಂಡೋಸ್ಕೋಪಿಸ್ಟ್ ಡಾ.ಸುನೀತಾ ತಂಡುಲ್ವಾಡ್ಕರ್ ಮಾಹಿತಿ ನೀಡುತ್ತಾರೆ. ಹಾಲುಣಿಸುವ ತಾಯಿ ಸ್ಮಾರ್ಟ್‌ಫೋನ್ ಬಳಸಬೇಕೇ ಅಥವಾ ಬೇಡವೇ ಎಂಬುದನ್ನು ವಿವರಿಸುತ್ತಾರೆ.

ಮಕ್ಕಳಿಗೆ ಆರು ತಿಂಗಳ ವರೆಗೆ ಹಾಲುಣಿಸಲೇಬೇಕು ಅನ್ನೋದು ಯಾಕೆ ?

ಹಾಲೂಡಿಸುವಾಗ ಮೊಬೈಲ್ ಬಳಸುವುದು ಸರಿಯಲ್ಲ
ನವಜಾತ ಶಿಶುಗಳ ತಾಯಂದಿರು ಶುಶ್ರೂಷೆ ಮಾಡುವಾಗ ವಿಶ್ರಾಂತಿ ಪಡೆಯಲು ಕಡಿಮೆ ಸಮಯವನ್ನು ಹೊಂದಿರುತ್ತಾರೆ ಮತ್ತು ಕೆಲವೊಮ್ಮೆ ಸ್ತನ್ಯಪಾನ ಮಾಡುವಾಗ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು  ಆದ್ರೆ ಇದು ಸರಿಯಲ್ಲ ಎಂದು ಡಾ.ಸುನೀತಾ ತಂಡುಲ್ವಾಡ್ಕರ್ ಹೇಳುತ್ತಾರೆ. ಪಾಲಕರು ಮತ್ತು ಮಕ್ಕಳು (Children) ಪರಸ್ಪರ ಹತ್ತಿರವಿರುವಾಗ ಮೊಬೈಲ್ ಫೋನ್ ಬಳಸಬಾರದು ಎಂದು ಡಾ.ಸುನೀತಾ ಸಲಹೆ ನೀಡುತ್ತಾರೆ. ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನವನ್ನು ಸುಲಭಗೊಳಿಸಿದ್ದರೆ, ಮತ್ತೊಂದೆಡೆ ಹಾಲುಣಿಸುವ ಸಮಯದಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆಯು ತಾಯಿಯ ಮಗುವಿನ ಗಮನ ಮತ್ತು ತಾಯಿಯ ದೈಹಿಕ ಪ್ರಚೋದನೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ವೈಜ್ಞಾನಿಕ ಜ್ಞಾನದ ಕೊರತೆಯಿದೆ ಎಂದು ಡಾ ಸುನೀತಾ ಹೇಳುತ್ತಾರೆ. 

ಹಾಲುಣಿಸುವ ಸಮಯದಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ತಾಯಿಯ ಭಂಗಿ ಮತ್ತು ಮಗುವಿನೊಂದಿಗೆ ಸಂವಹನದ (communication) ಮೇಲೆ ಪರಿಣಾಮ ಬೀರಬಹುದು. ಈ ಕಾರಣದಿಂದಾಗಿ, ತಾಯಿಗೆ ಬೆನ್ನು ನೋವು (Backpain) ಇರಬಹುದು. ಹಲವಾರು ಅಧ್ಯಯನಗಳು ಮೊಬೈಲ್ ಬಳಕೆ, ತಾಯಂದಿರಲ್ಲಿ ಮಗುವಿನೊಂದಿಗಿನ ಸಂವಹನವನ್ನು ಕಡಿಮೆ ಮಾಡುತ್ತವೆ ಎಂಬುದನ್ನು ಹೇಳಿದೆ. ಶಿಶುವಿಗೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯಕ್ಕೆ ಅಡ್ಡಿಯಾಗಬಹುದು ಮತ್ತು ಆ ಮೂಲಕ ಮಗುವಿನಲ್ಲಿ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಜ್ಞಾಪಕ ಸಾಮರ್ಥ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಸೂಚಿಸಿದೆ.

ತಾಯಿಯ ಎದೆಹಾಲನ್ನು ಹೆಚ್ಚಿಸುವ ಎಂಟು ಸೂಪರ್ ಆಹಾರಗಳು

ತಾಯಿ-ಮಗುವಿನ ಸಂವಹನದ ಮೇಲೆ ಪರಿಣಾಮ ಬೀರುತ್ತೆ ಮೊಬೈಲ್ ಬಳಕೆ
ಶುಶ್ರೂಷಕರು ಮತ್ತು ಆರೋಗ್ಯ ವಿಜ್ಞಾನದಲ್ಲಿ ಪ್ರಕಟವಾದ ಅಧ್ಯಯನವು ಹಾಲುಣಿಸುವ ಸಮಯದಲ್ಲಿ ತಾಯಿಯ ಸ್ಮಾರ್ಟ್‌ಫೋನ್ ಬಳಕೆ ಮತ್ತು ತಾಯಿ-ಶಿಶುವಿನ ಪರಸ್ಪರ ಕ್ರಿಯೆಯ ಗುಣಮಟ್ಟದ ಮೇಲೆ ಅದರ ಪ್ರಭಾವವನ್ನು ಪರಿಶೀಲಿಸಿದೆ. ಸ್ಮಾರ್ಟ್‌ಫೋನ್‌ ಬಳಕೆಯ ಸಂದರ್ಭ ಹಾಗೂ ಸ್ಮಾರ್ಟ್‌ಫೋನ್‌ ಬಳಸದೇ ಹಾಲು ಕುಡಿಸುವ ಸಂದರ್ಭ ತಾಯಿ-ಮಗುವಿನ ಆರೋಗ್ಯವನ್ನು ಪರಿಶೀಲಿಸಿದೆ.

ಎರಡು ಪರಿಸ್ಥಿತಿಗಳ ನಡುವಿನ ತಾಯಿ-ಶಿಶು ಸಂವಹನದ ಗುಣಮಟ್ಟವನ್ನು ಮೌಲ್ಯಮಾಪನ ಮಾಡಲು, ತಾಯಿ-ಶಿಶುವಿನ ಸಂವೇದನಾಶೀಲತೆಯ (AMIS) ಮೌಲ್ಯಮಾಪನದ ಜಪಾನೀಸ್ ಮಾರ್ಪಡಿಸಿದ ಆವೃತ್ತಿಯನ್ನು ಬಳಸಲಾಯಿತು. ಹಾಲುಣಿಸುವ ಸಮಯದಲ್ಲಿ ಸ್ಮಾರ್ಟ್‌ಫೋನ್ ಬಳಕೆ ಮಗುವಿನ ಪ್ರತಿಕ್ರಿಯೆ ಸಮಯ ಮತ್ತು ತಾಯಿಯತ್ತ ಗಮನ ಹರಿಸುವುದರ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಕಂಡು ಹಿಡಿಯಲಾಯಿತು.

Follow Us:
Download App:
  • android
  • ios