ಭಾರತೀಯರ ಈ ಹತ್ತು ದಾರಿಗಳು ನನ್ನ ಜೀವನವನ್ನೇ ಸ್ವರ್ಗ ಮಾಡಿವೆ: ಅಮೆರಿಕನ್ ಮಹಿಳೆ!
ಅಮೆರಿಕದ ಈ ಕಂಟೆಂಟ್ ಕ್ರಿಯೇಟರ್ ಕ್ರಿಸ್ಟನ್ ಫಿಸ್ಕರ್ ತಮ್ಮ ಜೀವನ ಶೈಲಿಯಲ್ಲಿ ಮಾಡಿಕೊಂಡ ಬದಲಾವಣೆ ಬಗ್ಗೆ ಹೇಳಿ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಬರೋಬ್ಬರಿ 2 ಮಿಲಿಯನ್ ಹತ್ತಿರ ವೀಕ್ಷಣೆ ಪಡೆದು..
ಕ್ರಿಸ್ಟನ್ ಫಿಸ್ಕರ್ ಶೇರ್ ಮಾಡಿರುವ ವಿಡಿಯೋ ಒಂದು ಜಗತ್ತನ್ನೆಲ್ಲಾ ಸುತ್ತುತ್ತಿದ್ದು ಸಾಕಷ್ಟು ವೈರಲ್ ಆಗುತ್ತಿದೆ. ಅಮೆರಿಕದ ಈ ಕಂಟೆಂಟ್ ಕ್ರಿಯೇಟರ್ ಕ್ರಿಸ್ಟನ್ ಫಿಸ್ಕರ್ ತಮ್ಮ ಜೀವನ ಶೈಲಿಯಲ್ಲಿ ಮಾಡಿಕೊಂಡ ಬದಲಾವಣೆ ಬಗ್ಗೆ ಹೇಳಿ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋ ಸದ್ಯ ಬರೋಬ್ಬರಿ 2 ಮಿಲಿಯನ್‌ಗಿಂತ ಸಮೀಪ ವೀಕ್ಷಣೆ ಪಡೆದು ಭಾರೀ ವೈರಲ್ ಆಗಿದೆ. ಹಾಗಿದ್ದರೆ ಅದರಲ್ಲೇನಿದೆ ಅಂತ ನೋಡೋಣ ಅಲ್ವಾ?
ಕ್ರಿಸ್ಟನ್ ಫಿಸ್ಕರ್ ಹೇಳಿದ್ದಾರೆ, ನಾನು ಅಮೆರಿಕಾದಿಂದ ಇಂಡಿಯಾಗೆ ಬಂದು ನನ್ನ ಜೀವನ ಶೈಲಿ ಕ್ರಮದಲ್ಲಿ ಹತ್ತು ವಿಧಗಳಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ. ಇದು ನನಗೆ ತುಂಬಾ ಸಹಾಯಕವಾಗಿದೆ. ಭಾರತೀಯ ಜೀವನ ಪದ್ಧತಿ, ಆಹಾರ ಕ್ರಮ, ಮೊದಲಾದವು ನಿಜವಾಗಿಯೂ ಗ್ರೇಟ್ ಎಂದಿದ್ದಾರೆ ಕ್ರಿಸ್ಟನ್ ಫಿಸ್ಕರ್. ಹಾಗಿದ್ದರೆ ಅವರೇನು ಬದಲಾವಣೆ ಮಾಡಿಕೊಂಡಿದ್ದಾರೆ ಎಂಬುದು ಇಲ್ಲಿದೆ ನೋಡಿ..
1. ನಾನು ಸಸ್ಯಾಹಾರಿ ಆಗಿದ್ದೇನೆ: ಮೊದಲನೆಯದಾಗಿ ಮಾಂಸಾಹಾರಿ ಆಗಿದ್ದ ನಾನು ಇಲ್ಲಿ ಸಸ್ಯಾಹಾರಿ ಆಗಿದ್ದೇನೆ. ಭಾರತದ ಆಹರ ಪದ್ಧತಿ, ಅಂದರೆ ಊಟ ಮಾಡುವ ಪದ್ಧತಿ ಚೆನ್ನಾಗಿದೆ. ಅದು ಸಸ್ಯಾಹಾರವೂ ಸೇರಿದಂತೆ, ಪ್ರಾಣಿ ಹಿಂಸೆ ಬಿಟ್ಟು ಸಸ್ಯಾಹಾರ ಸೇವಿಸುತ್ತಿರುವ ನನಗೆ ಆರೋಗ್ಯ ಸುಸ್ಥಿತಿಗೂ ಕಾರಣವಾಗಿದೆ. ಜೊತೆಗೆ, ಸಸ್ಯಾಹಾರವು ಮೆದುಳಿಗೂ ಒಳ್ಳೆಯದು' ಎಂದಿದ್ದಾರೆ ಕ್ರಿಸ್ಟನ್ ಫಿಸ್ಕರ್.
ತುಕ್ಕು ನಿರೋಧಕ ಉಕ್ಕು: ಜನಜೀವನದಲ್ಲಿ ಸ್ಟೇನ್‌ಲೆಸ್ ಸ್ಟೀಲಿನ ಮಹತ್ವ
2. ಕ್ರಿಸ್ಟನ್ ಫಿಸ್ಕರ್ ಅವರು ಹೇಳಿದ್ದಾರೆ, ನಾನು ಇಲ್ಲಿ ಈಗ ಇಂಡಿಯನ್ ಬಟ್ಟೆಗಳನ್ನೇ ಧರಿಸುತ್ತಿದ್ದೇನೆ. ಲೈಟ್ ವೇಟ್ ಇರುವ ಹತ್ತಿ ಬಟ್ಟೆಗಳು ಇಲ್ಲಿನ ಹಾಟ್ ವೆದರ್‌ಗೆ ಸೂಕ್ತವಾಗಿದೆ. ಇಲ್ಲಿನ ಕುರ್ತಗಳನ್ನು ನಾನು ದಿನಾಲೂ ಧರಿಸುತ್ತಿದ್ದು, ಇದು ತುಂಬಾ ಸುಧರವಾಗಿಯೂ ಹಿತವಾಗಿಯೂ ಇದೆ.
3. ಭಾರತದ ದೆಹಲಿಯಲ್ಲಿ ಸಾರ್ವಜನಿಕ ಸಾರಿಗೆ ಸೇವೆ ಅಂದರೆ, ಪಬ್ಲಿಕ್ ಟ್ರಾನ್ಸ್‌ಪೋರ್ಟ್ (Public Transport) ತುಂಬಾ ಚೆನ್ನಾಗಿದೆ. ಜಗತ್ತಿನಲ್ಲೇ ಡೆಲ್ಲಿಯಲ್ಲಿ ಉತ್ತಮವಾದ ಕೆಲವು ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಸೌಲಭ್ಯವಿದ್ದು, ಇಲ್ಲಿ ಸ್ವಂತ ಕಾರ್ ಅಗತ್ಯ ತುಂಬಾ ಕಡಿಮೆ. ಅಮೆರಿಕಾದಲ್ಲಿ ಇಂತಹ ಸೌಲಭ್ಯ ತುಂಬಾ ಕಡಿಮೆ, ಎಲ್ಲಾ ಕಡೆ ಹೋಗಲು ಕಾರ್ ಅವಲಂಬಿಸಬೇಕಿದೆ.
4. ಭಾರತೀಯರು ಟೀ ಸೇವನೆಯನ್ನು ತಮ್ಮ ಜೀವನದ ಅವಿಭಾಜ್ಯ ಅಂಗ ಎನ್ನುವಂತೆ ಮಾಡಿಕೊಂಡಿದ್ದಾರೆ. ಹೆಚ್ಚಿನವರು ಇಲ್ಲಿ ದಿನಾಲೂ ಟೀ ಸೇವಿಸುತ್ತಾರೆ. ಈ ಮೊದಲು ನನಗೆ ಟೀ ಸೇವನೆ ಅಭ್ಯಾಸ ಇರಲಿಲ್ಲ. ಇಲ್ಲಿ ಬಂದ ಬಳಿಕ ನಾನು ರೂಢಿ ಮಾಡಿಕೊಂಡಿದ್ದು, ಇದು ನನ್ನ ಅಚ್ಚುಮೆಚ್ಚಿನ ಪೇಯವಾಗಿದೆ. ಥ್ಯಾಂಕ್ಸ್ ಟು ಇಂಡಿಯಾ, ಎಂದಿರುವ ಕ್ರಿಸ್ಟನ್ ಫಿಸ್ಕರ್, ಬಹುಶಃ ಇದು ನನ್ನ ಜೀವನದಲ್ಲಿ ನೆನಪಿನಲ್ಲಿಟ್ಟುಕೊಳ್ಳುವ ತುಂಬಾ ಉತ್ತಮ ದಿನಗಳೆಂದು ಹೇಳುವೆ. ಹಾಗೂ ನಾನು ಇಲ್ಲಿನ ಜೀವನವನ್ನು ಅನುಭವಿಸುವುದಕ್ಕೆ ಸಿಕ್ಕಿರುವ ಚಿಕ್ಕ ವಿರಾಮ ಎಂದುಕೊಂಡಿದ್ದೇನೆ.
5. ಕ್ರಿಸ್ಟನ್ ಫಿಸ್ಕರ್ ಅವರು ತಮ್ಮ ಮಕ್ಕಳನ್ನು ಇಲ್ಲಿನ ಪ್ರೈವೇಟ್ ಸ್ಕೂಲಿಗೆ ಸೇರಿಸಿದ್ದಾರೆ. ಇಲ್ಲಿನ ಪ್ರೈವೇಟ್ ಸ್ಕೂಲ್‌ಗಳು ತುಂಬಾ ಕಡಿಮೆ ಖರ್ಚು ಹಾಗು ಉತ್ತಮ ಗುಣಮಟ್ಟದಿಂದ ಕೂಡಿವೆ. ಆದರೆ, ಅಮೆರಿಕಾದಲ್ಲಿ ಹೀಗೆ ಶಿಕ್ಷಣವನ್ನು ಇಷ್ಟು ಕಡಿಮೆ ಖರ್ಚಿನಲ್ಲಿ ಕೊಡಿಸಲು ಅಸಾಧ್ಯ. ಇಲ್ಲಿನ ಖಾಸಗಿ ಶಾಲೆಗಳಲ್ಲಿ ಕಲಿತ ನನ್ನ ಮಕ್ಕಳು ಖಂಡಿತವಾಗಿ ಜೀವನದಲ್ಲಿ ಸಕ್ಸಸ್ ಪಡೆಯುತ್ತಾರೆ ಎಂದಿದ್ದಾರೆ ಕ್ರಿಸ್ಟನ್ ಫಿಸ್ಕರ್.
6. ಕ್ರಿಸ್ಟನ್ ಫಿಸ್ಕರ್ ಅವರು ಹೇಳಿದ್ದಾರೆ, ನಾನು ಇಲ್ಲಿ ನನ್ನ ಕೈಯಿಂದ ಊಟ ಮಾಡುತ್ತೇನೆ. ಮೊದಮೊದಲು ನನಗೆ ಕೈಯಿಂದ ಊಟ ಮಾಡುವುದು ತುಂಬಾ ಕಷ್ಟಕರ ಎನ್ನಿಸುತ್ತಿತ್ತು. ಜೊತೆಗೆ, ತುತ್ತು ಎಲ್ಲೆಲ್ಲೋ ಹೋಗಿ ರಾದ್ಧಾಂತ ಆಗುತ್ತಿತ್ತು. ಆದರೆ ಈಗ ನಾನು ಕೈಯಿಂದಲೇ ಊಟ ಮಾಡುತ್ತಿದ್ದು, ಇದು ತುಂಬಾ ರುಚಿಕರ ಕೂಡ ಎನ್ನಿಸುತ್ತಿದೆ.
7. ನಾನು ಭಾರತಕ್ಕೆ ಬಂದ ಬಳಿಕ ಹಿಂದಿ ಭಾಷೆಯನ್ನು ಕಲಿತಿದ್ದೇನೆ. ಇಲ್ಲಿ, ದೆಹಲಿಯಲ್ಲಿ ಹಿಂದಿ ಭಾಷೆ ಕಲಿತಿಲ್ಲವೆಂದರೆ ಜೀವನ ಮಾಡುವುದು ತುಂಬಾ ಕಷ್ಟ. ನನಗೆ ಹಿಂದಿ ಭಾಷೆ ಕಲಿಯುವುದು ಕಷ್ಟ ಎನ್ನಿಸಿದರೂ ನಿರಂತರ ಪ್ರಯತ್ನದಿಂದ ಹಿಂದಿ ಕಲಿತು, ಮಾತನಾಡುತ್ತಿದ್ದೇನೆ ಎಂದಿದ್ದಾರೆ ಕ್ರಿಸ್ಟನ್ ಫಿಸ್ಕರ್.
8. ಅಮೆರಿಕಾಕ್ಕೆ ಹೋಲಿಸಿದರೆ ಇಲ್ಲಿ ಮನೆ ನಿಭಾಯಿಸುವ ರೀತಿ ಬೇರೆಯದೇ ಆಗಿದೆ. ಅಲ್ಲಿ ನಾವು ಕಿಚನ್ ಹಾಗೂ ಮನೆಯನ್ನು ಕ್ಲೀನ್ ಮಾಡಲು ಡಿಶ್ ವಾಶರ್ಸ್, ಡ್ರೈಯರ್ಸ್, ಗಾರ್ಬೆಜ್ ಡಿಸ್‌ಪೋಸಲ್ಸ್ ಹಾಗೂ ರೂಂಬಾಸ್‌ಗಳನ್ನು ಉಪಯೋಗಿಸುತ್ತೇವೆ. ಆದರೆ, ಇಂಡಿಯಾದಲ್ಲಿ ನಾನು ಹೊಸ ರೀತಿಯಲ್ಲಿ ಮಶಿನ್ ಬಳಸದೇ ಎಲ್ಲವನ್ನೂ ಮಾಡಲು ಕಲಿತಿದ್ದೇನೆ ಎಂದಿದ್ದಾರೆ ಕ್ರಿಸ್ಟನ್ ಫಿಸ್ಕರ್.
9. ಅಮೆರಿಕಾದಲ್ಲಿ ಎಲ್ಲವೂ ಪ್ರಿಜ್ಡ್‌ನಲ್ಲಿಟ್ಟ, ಹಳೆಯ ತಿಂಡಿಗಳನ್ನೇ ಬಳಸುತ್ತಾರೆ. ಆದರೆ ಭಾರತದಲ್ಲಿ ಹಾಗಲ್ಲ. ಇಲ್ಲಿ ಇಡಿಯ ಆಹಾರ, ಆರೋಗ್ಯಕರವಾಗಿದ್ದು ತುಂಬಾ ತಾಜಾ ತರಕಾರಿಗಳು, ಸೊಪ್ಪುಗಳನ್ನು ಬಳಸುತ್ತಾರೆ. ಅಮೆರಿಕಾದಲ್ಲಿ ಆಹಾರವು ಸುಲಭ, ಬೇಗ ಹಾಗು ಪರಿಶ್ರಮವಿಲ್ಲದೇ ತಕ್ಷಣದ ಅಗತ್ಯವನ್ನು ಅವಲಂಬಿಸಿದೆ. ಆದರೆ, ಭಾರತದಲ್ಲಿ ಹಾಗಲ್ಲ, ಆಹಾರವು ಆರೋಗ್ಯಕ್ಕೆ ಸಹಕಾರಿಯಾಗಿದೆ. ನಾನು ಇಲ್ಲಿ ಬಂದ ಮೇಲೆ ಬಹಳಷ್ಟು ತಿಂಡಿಗಳು, ಊಟದ ಐಟಂಗಳನ್ನು ಮಾಡಲು ಕಲಿತಿದ್ದೇನೆ.
ಇನ್ನು ಐದೇ ವರ್ಷದಲ್ಲಿ ಭೂಮಿಗೆ ಕಾದಿದ್ಯಾ ಕ್ಷುದ್ರಗ್ರಹ ಕಂಟಕ: ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದೇನು?
10. ಅಷ್ಟೇ ಅಲ್ಲ, ನಾನು ಮೊದಲು ಭಾರತೀಯರು ಉಪಯೋಗಿಸುವ ಟಾಯ್ಲೆಟ್ ಸ್ಪ್ರೇಯರ್ ಬಳಸಲು ಹಿಂದೇಟು ಹಾಕುತ್ತಿದ್ದೆ. ಆದರೆ, ಈಗ ಅಭ್ಯಾಸ ಮಾಡಿಕೊಂಡಿದ್ದೇನೆ. ಇದು, ಕ್ಲೀನ್, ಸುಳಭ ಹಾಗು ಎಲ್ಲಕ್ಕಿಂತ ಉತ್ತಮ ಮಾರ್ಗವಾಗಿದೆ ಎಂದಿದ್ದಾರೆ ಕ್ರಿಸ್ಟನ್ ಫಿಸ್ಕರ್.
ಒಟ್ಟಿನಲ್ಲಿ, ಅಮೆರಿಕಾದಿಂದ ಇಂಡಿಯಾಗೆ ಬಂದು ಇಲ್ಲಿನ ಜೀವನ ಪದ್ಧತಿಯನ್ನು ಕಲಿತು ಅದನ್ನು ಕಲಿತು ಅದನ್ನು ಅಳವಡಿಸಿಕೊಂಡ ಮೇಲೆ ಭಾರತೀಯ ಪದ್ಧತಿ ತುಂಬಾ ಒಳ್ಳೆಯದು ಎಂಬುದು ಕ್ರಿಸ್ಟನ್ ಫಿಸ್ಕರ್ ಅವರಿಗೆ ಅರ್ಥವಾಗಿದೆ. ಅದನ್ನು ಅವರು ಜಗತ್ತಿಗೇ ಸಾರಿದ್ದಾರೆ. ಆದರೆ, ಇಲ್ಲಿನವರೇ ಕೆಲವರು ನಮ್ಮ ಭಾರತೀಯ ಪದ್ಧತಿಯನ್ನು ಅವಹೇಳನ ಮಾಡುವುದು, ಅಮೆರಿಕಾದ ಜೀವನ ಶೈಲಿ ಅಳವಡಿಸಿಕೊಂಡು ಒದ್ದಾಡುವುದನ್ನು ಕಾಣಬಹುದು.