ವರ್ಷಗಟ್ಟಲೆ ಉರುಳಿ ಹೋದರೂ ಜನರ ಚಿಂತನೆಗಳು ಬದಲಾಗಿಲ್ಲ, ಜನರು ಇಂಥಾ ಮಾತುಗಳನ್ನು ಹೇಳುವುದನ್ನು ನಿಲ್ಲಿಸಿಲ್ಲ. ಹೆಣ್ಮಕ್ಕಳು ಕೇಳಿ ಕೇಳಿ ರೋಸಿ ಹೋಗಿರೋ ಆ ಮಾತುಗಳು ಯಾವುವು ತಿಳಿಯೋಣ.

ಭಾರತೀಯ ಸಮಾಜ ತನ್ನದೇ ಆದ ಸಂಸ್ಕೃತಿ, ಪ್ರಾಚೀನ ಆಚಾರ-ವಿಚಾರಗಳನ್ನು ಹೊಂದಿರುವ ಹಾಗೆಯೇ ನಿರ್ಧಿಷ್ಟ ಸಾಮಾಜಿಕ ಚೌಕಟ್ಟನ್ನು ಹೊಂದಿದೆ. ಕುಟುಂಬ, ಸಮಾರಂಭಗಳು ಹೇಗಿರಬೇಕು ಎಂಬುದನ್ನು ನಿರ್ದೇಶಿಸುತ್ತದೆ. ಅದರಲ್ಲೂ ಮಹಿಳೆಯರಿಗೆ ಸಾಮಾಜಿಕ ಚೌಕಟ್ಟುಗಳು ತುಸು ಹೆಚ್ಚೇ ಇದೆ. ಹೆಣ್ಣುಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ಮುಂದುವರಿದು ಸ್ವಾವಲಂಬಿಯಾಗಿ ಬದುಕುತ್ತಿದ್ದರೂ ಇವತ್ತಿಗೂ ಮಹಿಳೆಯರು ದಿನಾ ಕೇಳಬೇಕಾಗಿ ಬರುವ ಕೆಲವೊಂದು ಮಾತುಗಳಿವೆ. ವರ್ಷಗಟ್ಟಲೆ ಉರುಳಿ ಹೋದರೂ ಜನರ ಚಿಂತನೆಗಳು ಬದಲಾಗಿಲ್ಲ, ಜನರು ಇಂಥಾ ಮಾತುಗಳನ್ನು ಹೇಳುವುದನ್ನು ನಿಲ್ಲಿಸಿಲ್ಲ. ಹೆಣ್ಮಕ್ಕಳು ಕೇಳಿ ಕೇಳಿ ರೋಸಿ ಹೋಗಿರೋ ಆ ಮಾತುಗಳು ಯಾವುವು ತಿಳಿಯೋಣ.

ಸರಿಯಾಗಿ ಬಟ್ಟೆ ಹಾಕೋದನ್ನು ಕಲಿ
ಹೆಣ್ಣು ಮಕ್ಕಳನ್ನು ಸಾಮಾನ್ಯವಾಗಿ ಅವರು ಹಾಕೋ ಬಟ್ಟೆಯಿಂದಲೃ ಜಡ್ಜ್‌ ಮಾಡಲಾಗುತ್ತದೆ. ಮೊಣಕಾಲಿನ ವರೆಗಿನ ಸ್ಕರ್ಟ್‌, ಸ್ಲೀವ್‌ಲೆಸ್‌ ಬ್ಲೌಸ್‌ ಹಾಕಿದರೆ ಅವಳ ಕ್ಯಾರೆಕ್ಟರ್‌ನ್ನೇ ಜಡ್ಸ್ ಮಾಡಿಬಿಡುತ್ತಾರೆ. ಮೊದಲು ಸರಿಯಾಗಿ ಬಟ್ಟೆ ಹಾಕೋದನ್ನು ಕಲಿ ಎಂದು ಬಿಡುತ್ತಾರೆ. ಆದ್ರೆ ಗಂಡು ಮಕ್ಕಳು ಮೊಣಕಾಲಿನ ವರೆಗೆ ಬಟ್ಟೆ ಹಾಕಿದರೂ, ಸ್ಲೀವ್‌ಲೆಸ್ ಬನಿಯನ್ ಹಾಕಿದರೂ ಯಾರಿಗೂ ಅದು ದೊಡ್ಡ ವಿಷಯವಾಗುವುದಿಲ್ಲ.

ಸುಶಿಕ್ಷಿತೆ, ಉದ್ಯೋಗಸ್ಥ ಮಹಿಳೆಯನ್ನ ಮದ್ವೆ ಆಗೋದು ಕೆಟ್ಟ ನಿರ್ಧಾರ ಅಂದ ಆರ್ಥಿಕತಜ್ಞನಿಗೆ ಫುಲ್ ಕ್ಲಾಸ್

ಮದುವೆ ಯಾವಾಗ
ಭಾರತದಲ್ಲಿ ಬಹುಶಃ ಬಹುತೇಕ 90% ಹೆಣ್ಣುಮಕ್ಕಳು ಕುಟುಂಬ, ಬಂಧುಬಳಗ, ಸ್ನೇಹಿತರು, ಸಮಾಜದಿಂದ ಕೇಳಿ ಬರೋ ಇಂಥಾ ಪ್ರಶ್ನೆಗೆ ಭಯಪಟ್ಟೇ ಮದುವೆಯಾಗಿದ್ದಾರೇನೋ. ಅಷ್ಟರಮಟ್ಟಿಗೆ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಬೇಗ ಮದುವೆಯಾಗುವಂತೆ ಒತ್ತಡ ಹೇರುತ್ತಾರೆ. ಇಪ್ಪತ್ತರ ವಯಸ್ಸು ಆದೊಡನೆ ಮದುವೆಯಾಗುವಂತೆ ಪಟ್ಟು ಹಿಡಿಯುತ್ತಾರೆ. ಹೆಣ್ಣುಮಕ್ಕಳು ತಮ್ಮ ವೈಯಕ್ತಿಕ ಆಕಾಂಕ್ಷೆಗಳನ್ನು ಬದಿಗಿಟ್ಟು ಒಲ್ಲದ ಮನಸ್ಸಿನಿಂದ ಮದುವೆಯಾಗಬೇಕಾಗುತ್ತದೆ.

ದೊಡ್ಡ ದನಿಯಲ್ಲಿ ಮಾತನಾಡಬೇಡ
ದೇವರು ಮನುಷ್ಯರು ಮಾತನಾಡಲಿ ಅಂತ ಬಾಯಿ ಕೊಟ್ಟಿದ್ದಾನೆ, ದನಿ ನೀಡಿದ್ದಾನೆ. ಪುರುಷರು ಹೀಗೆ ಮಾತನಾಡಬೇಕು, ಹೆಂಗಸರು ಹೀಗೆ ಮಾತನಾಡಬೇಕು ಅನ್ನೋ ನಿಬಂಧನೆಯನ್ನು ಹೇರಿಲ್ಲ. ಅದರೂ ಹೆಣ್ಣುಮಕ್ಕಳು ದೊಡ್ಡ ದನಿಯಲ್ಲಿ ಮಾತನಾಡುವುದನ್ನು ಪುರುಷ ಸಮಾಜ ಇಷ್ಟಪಡುವುದಿಲ್ಲ. ಮಹಿಳೆಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಆತ್ಮವಿಶ್ವಾಸದಿಂದ ತಮ್ಮನ್ನು ತಾವು ಪ್ರತಿಪಾದಿಸಲು ಬಿಡುವುದಿಲ್ಲ. ಬದಲಿಗೆ ಸಣ್ಣ ದನಿಯಲ್ಲಿ ಮಾತನಾಡುವಂತೆ ಪ್ರತಿಬಾರಿಯೂ ಹೇಳುತ್ತಲೇ ಬರುತ್ತಾರೆ

ಅಡುಗೆ ಕಲಿಯಿರಿ, ಮದುವೆಗೆ ಇದು ಅತ್ಯಗತ್ಯ
ಅಡುಗೆ ಪ್ರತಿಯೊಬ್ಬರಿಗೂ ಗೊತ್ತಿರಬೇಕಾದ ಅಥವಾ ಯಾರಾದೂ ಕಲಿಯಬಹುದಾದ ಒಂದು ವಿಚಾರ. ಆದರೆ ಭಾರತೀಯ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಅಡುಗೆ ಗೊತ್ತಿರಲೇಬೇಕು ಅನ್ನೋ ಮಾತಿದೆ. ಹುಡುಗಿಯರಿಗೆ ಅಡುಗೆ ಗೊತ್ತಿಲ್ಲ ಎಂದು ಹೇಳಿದರೆ ವಿಚಿತ್ರವಾಗಿ ನೋಡುತ್ತಾರೆ. ಅದೇ ಗಂಡು ಮಕ್ಕಳಿಗೆ ಅಡುಗೆ ಗೊತ್ತಿಲ್ಲವಾದರೆ ಅದು ದೊಡ್ಡ ವಿಷಯವಾಗುವುದಿಲ್ಲ. ಅಡುಗೆ ಕೌಶಲ್ಯಗಳು ಮಹಿಳೆ ಮದುವೆಗೆ ಸಿದ್ಧವಾಗಿದ್ದಾಳೆ ಎಂಬಂತೆ ಸಮಾಜ ನೋಡುತ್ತದೆ.

ಪತಿಯಿಂದ ದುಬಾರಿ ಗಿಫ್ಟ್, ದುಡ್ಡು ಬಂದಿದ್ದೆಲ್ಲಿಂದವೆಂದು ಗೊತ್ತಾದ ಕೂಡ್ಲೇ ರಣಾಂಗಣವಾಯ್ತು ಮನೆ!

ಮದುವೆಯಾದರೆ ಕೆಲಸ ಬಿಡ್ತೀಯಾ?
ಉದ್ಯೋಗ ಅನ್ನೋದು ಪುರುಷರು ಅಥವಾ ಮಹಿಳೆಯರು ಅನ್ನೋ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬರೂ ಸ್ವಾವಲಂಬಿಗಳಾಗಲು ಅಗತ್ಯವಾಗಿ ಬೇಕಾಗಿರುವ ವಿಷಯ. ಆದರೆ ಹೆಣ್ಣುಮಕ್ಕಳ ಪಾಲಿಗೆ ಮದುವೆಯಾದ ನಂತರ ಎಲ್ಲವೂ ಬದಲಾಗಿ ಬಿಡುತ್ತದೆ. ಕೆಲವೊಬ್ಬರು ಮದುವೆಯಾದ ನಂತರ ಕೆಲಸ ಬಿಡಲೇಬೇಕು ಅನ್ನೋ ಕಂಡೀಷನ್ಸ್ ಸಹ ಹಾಕುತ್ತಾರೆ.

ಏನಾದ್ರೂ ವಿಶೇಷವಿದ್ಯಾ?
ಮದುವೆ ಯಾವಾಗ ಎಂದು ಕೇಳುವ ಮಂದಿ ವಿಶೇಷ ಇದ್ಯಾ, ಮಕ್ಕಳು ಮಾಡಿಕೊಳ್ಳೋ ಪ್ಲಾನ್ ಇಲ್ವಾ, ಎಷ್ಟು ಮಕ್ಕಳು ಅನ್ನೋ ಮತ್ತದೇ ಸರಣಿ ಪ್ರಶ್ನೆಗಳನ್ನು ಕೇಳಲು ಕಾತುರರಾಗಿರುತ್ತಾರೆ. ಮಕ್ಕಳು ಯಾವಾಗ ಮಾಡಿಕೊಳ್ಳಬೇಕು ಅನ್ನೋದು ಪತಿ-ಪತ್ನಿಯ ವೈಯುಕ್ತಿಕ ನಿರ್ಧಾರವಾಗಿದ್ದರೂ ಈ ವಿಷಯದಲ್ಲಿ ಮೂಗು ತೂರಿಸೋದನ್ನು ಬಿಡೋದಿಲ್ಲ.

ಅಡ್ಜೆಸ್ಟ್ ಮಾಡ್ಕೋ
ಬಹುಶಃ ಚಿಕ್ಕ ವಯಸ್ಸಿನಿಂದಲೇ ಹೆಣ್ಣು ಮಕ್ಕಳು ಈ ಮಾತನ್ನು ಕೇಳುತ್ತಲೇ ಬೆಳೆಯುತ್ತಿರುತ್ತಾರೆ. ಗಂಡು ಮಕ್ಕಳು ಹಾಯಾಗಿ ಮಲಗಿದ್ದರೆ, ಹೆಣ್ಣು ಮಕ್ಕಳು ಎದ್ದು ಕೆಲಸ ಮಾಡಬೇಕು, ಒಲ್ಲದ ಹುಡುಗನನ್ನು ಮದುವೆಯಾಗಬೇಕು. ಪರ್ವಾಗಿಲ್ಲ ಒಳ್ಳೆ ಹುಡುಗ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡಿರು ಎಂದು ಹೇಳಿ ಕಳುಹಿಸಿ ಬಿಡುತ್ತಾರೆ. ಗಂಡನ ಮನೆಯಲ್ಲಿ ಜಗಳವಾದರೂ ಮತ್ತದೇ ರಾಗ, ಅವನು ಗಂಡಸು ಹಾಗೇ ಇರ್ತಾನೆ, ನೀನೇ ಸ್ಪಲ್ಪ ಅಡ್ಜೆಸ್ಟ್ ಮಾಡ್ಕೊಂಡಿರು..ಇಂಥಾ ಮಾತುಗಳಲ್ಲಿಯೇ ಹೆಣ್ಣುಮಕ್ಕಳ ಜೀವನ ಮುಗಿದುಬಿಡುತ್ತದೆ.