Asianet Suvarna News Asianet Suvarna News

ಮೊನಾಲಿಸಾಗೆ ದೇಸಿ ಲುಕ್ ಕೊಟ್ಟ Online artist..! ಯಾವ ರಾಜ್ಯದಲ್ಲಿದ್ರೆ ಮೊನಾ ಹೆಂಗಿರ್ತಿದ್ಲು ನೋಡಿ

ಟ್ವಿಟ್ಟರ್‌ ಬಳಕೆದಾರರೊಬ್ಬರು ಮೊನಾಲಿಸಾಗೆ ಭಾರತೀಯ ದೇಶಿ ಲುಕ್  ನೀಡಿದ್ದು, ಫೋಟೋಗಳು ವೈರಲ್ ಆಗಿವೆ.

twitter user created indian looking monalisa, 16th centuries great art and put name her statewise akb
Author
First Published Sep 26, 2022, 12:25 PM IST

ನವದೆಹಲಿ: ಫ್ರೆಂಚ್‌ ಕಲಾವಿದ ಲಿಯೋನಾರ್ಡೋ ವಿಂಚಿ ಬಗ್ಗೆ ಇತಿಹಾಸದ ಪಠ್ಯದಲ್ಲಿ ನಾವು ನೀವೆಲ್ಲರೂ ಕೇಳಿದ್ದೇವೆ. 16ನೇ ಶತಮಾನದ ಈ ಕಲಾವಿದನ ಕಲಾಕೃತಿ ಮೊನಾಲಿಸಾ ಇಂದಿಗೂ ಕಲಾಕಾರರ, ಕಲಾಪ್ರಿಯರ ಪಾಲಿಗೆ ಒಂದು ಅದ್ಭುತ. ಮಂದಸ್ಮಿತದ ಈ ಮೊನಾಲಿಸಾ ಕಲಾಕೃತಿಯನ್ನು ಇಂದಿಗೂ ಅನೇಕರು ಜೀವಂತವಿರುವವರ ನಗುವಿಗೆ ಹೋಲಿಕೆ ಮಾಡುತ್ತಾರೆ. ಏನ್ ಮೊನಾಲಿಸಾ ತರ ನಗ್ತಿದ್ದೀಯಾ ಅಂತ ಕೇಳುವವರು ಇದ್ದಾರೆ. ಏನ್ ಮೊನಾಲಿಸಾ ತರ ಲುಕ್ ಕೊಡ್ತಿದ್ದೀಯಾ ಅಂತ ಕೇಳುವವರಿದ್ದಾರೆ. ಅದೆಲ್ಲಾ ನಮ್ಗೂ ಗೊತ್ತು ಮೊನಾಲಿಸಾ ವಿಷ್ಯ ಈಗ ಯಾಕೆ ಹೇಳಿ ಅಂತೀರಾ ಅದಕ್ಕೂ ಕಾರಣ ಇದೆ. ಮುಂದೆ ಓದಿ...

ಜಗತ್ತಿನ ಅದ್ಭುತ ಕಲಾಕೃತಿ ಎನಿಸಿದ ಈ ಮೊನಾಲಿಸಾಗೆ ನಮ್ಮ ಭಾರತೀಯ ಕಲಾವಿದರು (Indian artist) ದೇಶಿ ಲುಕ್ (Desi look) ನೀಡಿದ್ದಾರೆ. ಭಾರತ ಹೇಳಿ ಕೇಳಿ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ, ಒಂದೊಂದು ರಾಜ್ಯ ಒಂದೊಂದು ಭಾಷೆ (Language) ಸಂಸ್ಕೃತಿ (culture) ಆಚಾರ ವಿಚಾರ ಹೊಂದಿದ್ದು, ವೇಷ ಭೂಷಣ  ಭಾಷೆ ಎಲ್ಲವೂ ಒಂದಕ್ಕಿಂತ ಒಂದು ಭಿನ್ನ ವಿಭಿನ್ನ. ಹಾಗೆಯೇ ಮನುಷ್ಯರು ಕೂಡ ಒಂದೊಂದು ಕಡೆಯ ಜನ ಇಲ್ಲಿ ನೋಡಲು ಒಂದೊಂದು ರೀತಿ ಕಾಣಿಸುತ್ತಾರೆ. ಇದೇ ಕಾರಣಕ್ಕೆ ಟ್ವಿಟ್ಟರ್ ಬಳಕೆದಾರರೊಬ್ಬರು ಈ ಮೊನಾಲಿಸಾ ಬೇರೆ ಬೇರೆ ರಾಜ್ಯದಲ್ಲಿ ಇದ್ದಿದ್ದರೆ ಹೇಗೆ ಕಾಣಿಸುತ್ತಿದ್ದಿರಬಹುದು ಎಂಬುದನ್ನು ಚಿತ್ರಿಸಿದ್ದಾರೆ. ಆ ಫೋಟೋಗಳು ನೋಡಲು ತುಂಬಾ ಸೊಗಸಾಗಿದ್ದು, ಫ್ರೆಂಚ್ ಕಲಾವಿದ ಬಿಡಿಸಿದ ಮೊನಾಲಿಸಾ (Monalisa) ನಮ್ಮವಳೇ ಎಂದು ಭಾಸವಾಗುವಂತೆ ಮಾಡುತ್ತದೆ. 


ಫೋಟೋ ಎಡಿಟಿಂಗ್ ಮಾಡುವುದರಲ್ಲಿ ನಮ್ಮ ಹುಡುಗ ಹುಡುಗಿಯರು ಮೊದಲೇ ಹುಷಾರು, ಬಿಳಿ ಇರುವವನ್ನು ಕೆಂಪು ಮಾಡಿ, ಕಪ್ಪು ಇರುವವರನ್ನು ಬಿಳಿ ಮಾಡಿ ಕೆಂಪಿರುವವರಿಗೆ ಗೋದಿ ಮೈ ಬಣ್ಣ ನೀಡಿ ಅವಾಂತರ ಮಾಡೋದನ್ನು ಯಾರಿಗೂ ಹೇಳಿ ಕೊಡಬೇಕಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ಈ ಟ್ವಿಟ್ಟರ್ ಬಳಕೆದಾರ ಮಾಡಿದ ಈ ಕ್ರಿಯೇಟಿವಿಟಿ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ (viral) ಆಗುತ್ತಿದೆ. ಪೂಜಾ ಸಂಗ್ವಾನ್ (Pooja sangwan) ಎಂಬ ಟ್ವಿಟ್ಟರ್ ಬಳಕೆದಾರರು ರೀತಿ ಮಾಡಿದ್ದು, ಇವರ ಸೃಜನಶೀಲತೆಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಆಯಾಯ ರಾಜ್ಯಕ್ಕೆ ತಕ್ಕಂತೆ ಮೊನಾಲಿಸಾಳನ್ನು ಚಿತ್ರಿಸಿ ರಾಜ್ಯಕ್ಕೆ ತಕ್ಕುನಾದ ಹೆಸರನ್ನು ನೀಡಿದ್ದಾರೆ. ಒಂದು ವೇಳೆ ಮೊನಾಲಿಸಾ ದಕ್ಷಿಣ ದೆಹಲಿಯಲ್ಲಿ ಜನಿಸಿದ್ದರೆ ಲೀಸಾ ಮೌಸಿ ಎಂದು ಹೆಸರಿರುತ್ತಿತ್ತಂತೆ

 

ಹಾಗೆಯೇ ಮಹಾರಾಷ್ಟ್ರದವರಾಗಿದ್ದರೆ ಲೀಸಾ ಥೈ

 

ಬಿಹಾರದವಳಾಗಿದ್ದಿದ್ದರೆ ಲೀಸಾ ದೇವಿ

 

ರಾಜಸ್ಥಾನದವಳಾಗಿದ್ದರೆ ಮಹಾರಾಣಿ ಲೀಸಾ

 

ಒಂದು ವೇಳೆ ಕೋಲ್ಕತ್ತಾದವಳಾಗಿದ್ದರೆ ಶೋನಾ ಲೀಸಾ

 

ಹಾಗೆಯೇ ಕೇರಳದವಳಾಗಿದ್ದಾರೆ ಲೀಸಾ ಮೋಳ್

 

ತೆಲಂಗಾಣದವರಾಗಿದ್ದರೆ ಲೀಸಾ ಬೊಮ್ಮ

 

ಗುಜರಾತ್‌ನವರಾಗಿದ್ದರೆ ಲೀಸಾ ಬೇನ್ ಹೀಗೆ 


ಭಾರತೀಯರು ಈ ರೀತಿ ಕ್ರಿಯೇಟಿವಿಟಿ ಮಾಡುವುದರಲ್ಲಿ ಎತ್ತಿದ ಕೈ. ಆದರೆ ಈ ಮೊನಾಲಿಸಾಳನ್ನು ಮೊದಲ ಬಾರಿ ಬಿಡಿಸಿದ ಲಿಯೋನಾರ್ಡೋ ವಿಂಚಿ  ಒಂದು ವೇಳೆ ಬದುಕಿದ್ದರೆ, ಈ ಭಾರತೀಯ ವೆರೈಟಿ ಮೊನಾಲಿಸಾರನ್ನು ನೋಡಿ ಒಂದು ಕ್ಷಣ ದಂಗಾಗ್ತಿದ್ದಿದ್ದಂತೂ ಪಕ್ಕಾ ಬಿಡಿ.

ಅಂದಹಾಗೆ ಲಿಯೊನಾರ್ಡೊ ಡಾ ವಿನ್ಸಿ ಈ ಮೊನಲಿಸಾ ಕಲಾಕೃತಿಯನ್ನು 1503ರಲ್ಲಿ ಬಿಡಿಸಲು ಆರಂಭಿಸಿ  1517 ರಲ್ಲಿ ಕೊನೆಗೊಳಿಸಿದರು. ಕಲಾವಿದ ವಿಂಚಿಗೆ ಈ ಮೊನಾಲಿಸಾಳ ತುಟಿಯನ್ನು ರಚಿಸಲು ಬರೋಬ್ಬರಿ 12 ವರ್ಷಗಳೇ ಬೇಕಾಯಿತಂತೆ. 1519 ರಲ್ಲಿ ವಿಂಚಿ ಮರಣದ ನಂತರ ಆ ಪೇಂಟಿಂಗ್ ಅನ್ನು ಪ್ಯಾರಿಸ್‌ನ ಲೌವ್ರೆ ಮ್ಯೂಸಿಯಂನಲ್ಲಿ ಇರಿಸಲಾಗಿತ್ತಂತೆ. ಕೆಲ ವರ್ಷಗಳ ಹಿಂದೆ ಮೊನಾಲಿಸಾ ನಗು ಸಹಜವಲ್ಲ ಎಂಬ ವಿಚಾರ ಚರ್ಚೆಯಾಗಿತ್ತು.

Follow Us:
Download App:
  • android
  • ios