Asianet Suvarna News Asianet Suvarna News

Interesting Facts: ಮೊಘಲ್ ರಾಜಕುಮಾರಿಯರು ಮದುವೆ ಆಗ್ತಿರಲಿಲ್ವಾ?

ಭಾರತ ಅನೇಕ ರಾಜರ ಆಳ್ವಿಕೆಯನ್ನು ನೋಡಿದೆ. ಕೆಲವರು ಭಾರತವನ್ನು ಕೊಳ್ಳೆ ಹೊಡೆದ್ರೆ ಮತ್ತೆ ಅನೇಕರು ಭಾರತಕ್ಕಾಗಿ ಶ್ರಮಿಸಿದ್ದಾರೆ. ಆಯಾ ರಾಜರು ತಮ್ಮ ಆಳ್ವಿಕೆಯಲ್ಲಿ ಅನೇಕ ನಿಯಮಗಳನ್ನು ಜಾರಿಗೆ ತರ್ತಿದ್ದರು. ಮೊಘಲ್ ರಾಜರು ಕೂಡ ರೂಲ್ಸ್ ಗೆ ಹೆಸರುವಾಸಿಯಾದವರು.
 

Truth Of Banning Mughal Princess getting Marriages
Author
First Published Oct 3, 2022, 12:17 PM IST

ಭಾರತ ಅನೇಕ ವರ್ಷಗಳ ಕಾಲ ಮೊಘಲ್ ಚಕ್ರವರ್ತಿಗಳ ಆಳ್ವಿಕೆಗೆ ಒಳಪಟ್ಟಿತ್ತು. ಅನೇಕ ಮೊಘಲ್ ಚಕ್ರವರ್ತಿಗಳು ಭಾರತವನ್ನು ಆಳಿದ್ದರು. ಕೆಲ ಚಕ್ರವರ್ತಿಗಳು ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಮತ್ತೆ ಕೆಲವರ ಹೆಸರು ಕೂಡ ನೆನಪಿನಲ್ಲಿಲ್ಲ. ಆದ್ರೆ ಮೊಘಲ್ ಚಕ್ರವರ್ತಿಗಳು ಮಾಡಿದ ನಿಯಮಗಳು ಮಾತ್ರ ನೆನಪಿನಲ್ಲಿವೆ. ಮೊಘಲ್ ಚಕ್ರವರ್ತಿಗಳು ಬೇಗಂಗಳಿಗೆ ಸಾಕಷ್ಟು ನಿಯಮಗಳನ್ನು ಮಾಡಿದ್ದರು. ನಾವಿಂದು ಮೊಘಲ್ ಸಾಮ್ರಾಜ್ಯದಲ್ಲಿ ಜಾರಿಯಲ್ಲಿದ್ದ ರಾಜಕುಮಾರಿಯರ ಮದುವೆ ನಿಯಮಗಳ ಬಗ್ಗೆ ನಿಮಗೆ ತಿಳಿಸ್ತೇವೆ. 

ಭಾರತ (India) ದಲ್ಲಿ ಮೊಘಲ್ (Mughal) ಆಳ್ವಿಕೆ ಶುರುವಾಗಿದ್ದು ಯಾವಾಗ?: ಭಾರತದಲ್ಲಿ ಮೊಘಲ್ ಆಳ್ವಿಕೆ  1526 ರಿಂದ 1707 ರವರೆಗೆ ಇತ್ತು ಎನ್ನಲಾಗುತ್ತದೆ. ಮೊದಲ ಪಾಣಿಪತ್ ಯುದ್ಧದಲ್ಲಿ ಇಬ್ರಾಹಿಂ ಲೋದಿ (Ibrahim Lodi ) ಯನ್ನು ಸೋಲಿಸಿ ಬಾಬರ್ (Babur) ಮೊಘಲ್ ಸಾಮ್ರಾಜ್ಯದ ಸ್ಥಾಪನೆ ಮಾಡಿದ. ಇದರ ನಂತರ ಮೊಘಲ್ ಸಾಮ್ರಾಜ್ಯದ ಆಳ್ವಿಕೆಯನ್ನು ವಿಸ್ತರಿಸಲು ಅನೇಕ ವೀರ ಚಕ್ರವರ್ತಿಗಳು ಶ್ರಮವಹಿಸಿದ್ದರು. ಉದಾಹರಣೆಗೆ, ಹುಮಾಯೂನ್, ಅಕ್ಬರ್, ಜಹಾಂಗೀರ್, ಷಹಜಹಾನ್ ಮತ್ತು ಔರಂಗಜೇಬ್ ಮುಖ್ಯ ಚಕ್ರವರ್ತಿಗಳು. ಈ ಚಕ್ರವರ್ತಿಗಳು ಸಾಕಷ್ಟು ನಿಯಮಗಳನ್ನು ಜಾರಿಗೆ ತಂದಿದ್ದರು ಎಂಬುದನ್ನು ನಾವು ಅನೇಕ ದಾಖಲೆ ಮೂಲಕ ನೋಡಬಹುದು. 

ಮೊಘಲ್ ಸಾಮ್ರಾಜ್ಯದ ರಾಜಕುಮಾರಿ ಮದುವೆಗೆ ಸಂಬಂಧಿಸಿದ ಕುತೂಹಲಕಾರಿ ವಿಷ್ಯಗಳು : ಮೊದಲೇ ಹೇಳಿದಂತೆ ಅನೇಕ ವರ್ಷಗಳ ಕಾಲ ದೇಶವನ್ನು ಆಳಿದ ಮೊಘಲರು, ಅನೇಕ ನಿಯಮಗಳನ್ನು ಜಾರಿಗೆ ತಂದಿದ್ದರು. ಮೊಘಲ್ ರಾಜಕುಮಾರಿಯರ ಮದುವೆ ಕೂಡ ಆಸಕ್ತಿದಾಯಕವಾಗಿತ್ತು. ಮೊಘಲ್ ಚಕ್ರವರ್ತಿಗಳು ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡ್ತಿರಲಿಲ್ಲ.  

ರಾಜಕುಮಾರಿಯರ ಮದುವೆ ಏಕೆ ಆಗ್ತಿರಲಿಲ್ಲ? : ಮೊಘಲರು ರಾಜಕುಮಾರಿಯರನ್ನು ಅಂದ್ರೆ ಮಗಳು, ಮೊಮ್ಮಗಳು, ಮರಿಮೊಮ್ಮಕ್ಕಳ ಮದುವೆ ಮಾಡ್ತಿರಲಿಲ್ಲ. ಅವರ ವಿವಾಹವನ್ನು ನಿಷೇಧಿಸಲಾಗಿತ್ತು. ಅದಕ್ಕೆ ಅಕ್ಬರ್ ಕಾರಣವೆಂದು ಅನೇಕರ ಹೇಳ್ತಾರೆ. ಆದ್ರೆ ಇದು ವದಂತಿ, ಇದ್ರಲ್ಲಿ ಹುರುಳಿಲ್ಲ ಎನ್ನಲಾಗುತ್ತದೆ. ಯಾಕೆಂದ್ರೆ  ಅಕ್ಬರ್ ನಾಮ, ಜಹಾಂಗೀರ್ನಾಮ, ಷಹಜಹಾನಾಮಾ ಅಥವಾ ಔರಂಗಜೇಬನ ರಾಜಮನೆತನದ ಇತಿಹಾಸದಲ್ಲಿ ಮೊಘಲ್ ರಾಜಕುಮಾರಿಯ ವಿವಾಹವನ್ನು ನಿಷೇಧಿಸಿದ ಬಗ್ಗೆ ಹಾಗೂ ಅದನ್ನು ಅಕ್ಬರ್ ನಿಷೇಧಿಸಿದ್ದರು ಎನ್ನುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. 

ಲೈಫ್‌ನಲ್ಲಿ ಸರಿಯಾದ ನಿರ್ಧಾರ ತಗೊಳೋಕೆ ಆಗ್ದೆ ಒದ್ದಾಡ್ತಿದ್ದೀರಾ?

ಮೊಘಲ್ ರಾಜಕುಮಾರಿಯರ ಮದುವೆ ಪದ್ಧತಿ ಹೇಗಿತ್ತು ? : ಅವರು ಮದುವೆಯಾಗ್ತಿರಲಿಲ್ಲ ಎನ್ನುವುದು ಸುಳ್ಳು. ಮೊಘಲ್ ರಾಜಕುಮಾರಿಯರು ಮದುವೆಯಾಗ್ತಿದ್ದರು. ಆದರೆ ಅವರೆಲ್ಲರೂ ತಮ್ಮ ಹತ್ತಿರದ ಸಂಬಂಧಿಕರೊಂದಿಗೆ ಮಾತ್ರ ಮದುವೆಯಾಗುತ್ತಿದ್ದರು. ಇದು ಮೊಘಲರ ಸಂಪ್ರದಾಯವಾಗಿತ್ತು. ಇದಕ್ಕೆ ನಿಖರವಾದ ಕಾರಣ ಪತ್ತೆಯಾಗಿಲ್ಲ. ಆದ್ರೆ ತಮ್ಮ ಸಂಬಂಧಿಕರಿಗೇ ಚಕ್ರವರ್ತಿ ಸ್ಥಾನ ನೀಡಬೇಕು ಎನ್ನುವ ಕಾರಣಕ್ಕೆ ರಾಜರು ಹೀಗೆ ಮಾಡ್ತಿದ್ದರು ಎನ್ನಲಾಗಿದೆ.  ತಮ್ಮವರಿಗೆ ಚಕ್ರವರ್ತಿ ಪಟ್ಟ ಸಿಗಲಿ ಎನ್ನುವ ಕಾರಣಕ್ಕೆ ರಾಜಕುಮಾರಿಯರನ್ನು ಹತ್ತಿರದ ಸಂಬಂಧಿಕೆ ಮದುವೆ ಮಾಡ್ತಿದ್ದರು ಎನ್ನಲಾಗಿದೆ.  

ಸಂಬಂಧಿಕರ ಜೊತೆ ಮದುವೆಯಾಗಲು ಇದೂ ಕಾರಣವಾಗಿತ್ತು : ಮೊಘಲರು ತಮ್ಮ ಅಳಿಯಂದಿರು ಮೊಘಲ್ ಸಿಂಹಾಸನಕ್ಕೆ ಸ್ಪರ್ಧಿಸುವುದನ್ನು ಬಯಸಿರಲಿಲ್ಲ. ಹಾಗಾಗಿ ಸಹೋದರ ಸಹೋದರಿಯರ ಮಕ್ಕಳಿಗೆ ರಾಜಕುಮಾರಿಯರನ್ನು ಮದುವೆ ಮಾಡಿಸ್ತಿದ್ದರು. ಒಂದ್ವೇಳೆ ಅಳಿಯ ಚಕ್ರವರ್ತಿಯಾದ್ರೂ ಆತ ರಕ್ತ ಸಂಬಂಧಿ ಎನ್ನುವ ಸಮಾಧಾನ ಅವರಿಗಿರುತ್ತಿತ್ತು. 

ವೆಯಿಟ್ ಟ್ರೈನಿಂಗ್ ಮೂಲಕ ಮತ್ತಷ್ಟು ಯಂಗ್ ಆಗಿರಿ

ಅನೇಕ ಮೊಘಲ್ ರಾಜರು ಸಂಬಂಧಿಕರನ್ನೇ ಮದುವೆಯಾಗಿದ್ದಾರೆ. ಅಕ್ಬರ್ ಪತ್ನಿ ತನ್ನ ಸೋದರಸಂಬಂಧಿ ರುಕೈಯಾ ಮತ್ತು ಸಲೀಮಾರನ್ನು  ಮದುವೆಯಾಗಿದ್ದ. ಅಕ್ಬರನ ಎಲ್ಲಾ ಹೆಣ್ಣುಮಕ್ಕಳು ಅದರಲ್ಲಿ ಅರಾಮ್ ಬಾನೋ ಬೇಗಂ ಅವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಸಂಬಂಧಿಕರೊಂದಿಗೆ ವಿವಾಹವಾಗಿದ್ದರು. ಜಹಾಂಗೀರ್ ಸ್ವತಃ ತನ್ನ ಮೊದಲ ಮೂರು ಮದುವೆಗಳನ್ನು ತನ್ನ ರಜಪೂತ ಸೋದರಸಂಬಂಧಿಗಳಾದ ಮನ್ವತಿ, ಜೋಧ್ ಬಾಯಿ ಮುಂತಾದವರೊಂದಿಗೆ  ಆಗಿದ್ದ.
 

Follow Us:
Download App:
  • android
  • ios