Asianet Suvarna News Asianet Suvarna News

ಸಾಕಪ್ಪ ಈ ಕಿರಿಕಿರಿ! ಇದರಿಂದ ಹೊರ ಬರಲು ಇಲ್ಲಿದೆ ಮಾಹಿತಿ!

ಯಾವುದೇ ವಿಚಾರಕ್ಕೆ(Matter) ಅದು ಸಣ್ಣ ವಿಷಯವಿರಲಿ ದೊಡ್ಡದೇ ಇರಲಿ ಮನಸ್ಸಿಗೆ ಕಿರಿಕಿರಿ(Irritation) ಉಂಟು ಮಾಡಿದರೆ ಅದರಿಂದ ಹೊರಬರುವುದು ಬಹಳ ಕಷ್ಟ. ಈ ಕಿರಿಕಿರಿಯನ್ನು ಯಾರಿಗಾದರೂ ಬೈಯ್ಯುವುದು(Scold), ಹೊಡೆಯುವುದು(Beating) ಅಥವಾ ಯಾವುದನ್ನಾದರೂ ಒಡೆಯುವ, ಎಸೆಯುವ(Throw) ಮೂಲಕ ಒತ್ತಡವನ್ನು ಹೊರ ಹಾಕುತ್ತೇವೆ. ಇದು ಸಣ್ಣ ವಿಚಾರ ಎನಿಸಿದರೂ ಕೆಲವೊಮ್ಮೆ ವ್ಯಕ್ತಿಗೆ ದೊಡ್ಡ ಆಘಾತ ನೀಡುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

Tips to control Irritation in Regular Life!
Author
Bangalore, First Published Jun 26, 2022, 1:41 PM IST

ಯಾವುದೇ ವಿಚಾರಕ್ಕೆ(Matter) ಅದು ಸಣ್ಣ ವಿಷಯವಿರಲಿ ದೊಡ್ಡದೇ ಇರಲಿ ಮನಸ್ಸಿಗೆ ಕಿರಿಕಿರಿ(Irritation) ಉಂಟು ಮಾಡಿದರೆ ಅದರಿಂದ ಹೊರಬರುವುದು ಬಹಳ ಕಷ್ಟ. ಈ ಕಿರಿಕಿರಿಯನ್ನು ಯಾರಿಗಾದರೂ ಬೈಯ್ಯುವುದು(Scold), ಹೊಡೆಯುವುದು(Beating) ಅಥವಾ ಯಾವುದನ್ನಾದರೂ ಒಡೆಯುವ, ಎಸೆಯುವ(Throw) ಮೂಲಕ ಒತ್ತಡವನ್ನು ಹೊರ ಹಾಕುತ್ತೇವೆ. ಇದು ಸಣ್ಣ ವಿಚಾರ ಎನಿಸಿದರೂ ಕೆಲವೊಮ್ಮೆ ವ್ಯಕ್ತಿಗೆ ದೊಡ್ಡ ಆಘಾತ ನೀಡುತ್ತದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಯಾವುದೊ ವಿಷಯಕ್ಕೆ ಅಥವಾ ಯಾರಿದಲಾದರೂ ಮನಸ್ಸಿಗೆ ಕಿರಿಕಿರಿಯಾದರೆ ಅದನ್ನು ಹೊರ ಹಾಕಲು ಮಾರ್ಗಗಳು ಹಲವು. ಆದರೆ ಎಷ್ಟೇ ಕಂಟ್ರೋಲ್(Control) ಮಾಡಿಕೊಂಡರೂ ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಬದಲಾಗಿ ಈ ಕಿರಿಕಿರಿ ಇನ್ನಷ್ಟು ಹೆಚ್ಚಾಗುತ್ತದೆ. ವಾಸ್ತವವಾಗಿ, ಕಿರಿಕಿರಿ ಎಂಬುದು ಭಾವನಾತ್ಮಕ ಮಾಲಿನ್ಯಕಾರಕ(Emotional  States) ಕಾರ್ಬನ್ ಮಾನಾಕ್ಸೆöÊಡ್(Carbon Monoxide) ಆಗಿದೆ. 

ವ್ಯಕ್ತಿಯ ಮನಸ್ಥಿತಿಯನ್ನು ಕೆರಳಿಸುವ ಋಣಾತ್ಮಕ(Negative) ಹಾಗೂ ಒತ್ತಡವನ್ನು ಉಂಟು ಮಾಡುವ ಕಂಪನಗಳನ್ನು ಬಿಡುಗಡೆ ಮಾಡಬಹುದು. ಅದು ಆಫೀಸ್(Office), ಮನೆ(Home) ಅಥವಾ ತರಗತಿಗಳಿರಲಿ ಎಲ್ಲಿಬೇಕಾದಲ್ಲಿ ಕಿರಿಕಿರಿ ಉಂಟಾದರೆ ಅದು ನಕಾರಾತ್ಮಕ ಪರಿಣಾಮ(Negative Energy) ಬೀರುತ್ತದೆ. ಕಿರಿಕಿರಿ ಅನುಭವಿಸಿದಾಗ ಮುಂಗೋಪ, ಹುಚ್ಚುತನ ಮತ್ತು ಹುಳಿಯನ್ನು ಅನುಭವಿಸುತ್ತೇವೆ. 

Skin Care : ಸುಗಂಧ ದ್ರವ್ಯ ಬಳಸುವ ವೇಳೆ ಈ ತಪ್ಪು ಮಾಡ್ಬೇಡಿ

ವ್ಯಕ್ತಿಯಲ್ಲಿನ ಸಹಿಸುವ ಶಕ್ತಿ ಕಡಿಮೆಯಾಗಿದೆ ಮತ್ತು ನಾವು ಸಾಮಾನ್ಯವಾಗಿ ನುಣುಚಿಕೊಳ್ಳುವ ಸಣ್ಣ ಹತಾಶೆಗಳಿಂದ ತೊಂದರೆಗೊಳಗಾಗುವ ಸಾಧ್ಯತೆಗಳು ಹೆಚ್ಚು. ಆಫೀಸ್‌ನಲ್ಲಿ ಬಾಸ್(Boss) ಕಿರಿಕಿರಿ ಮುಷ್ಯನಾಗಿದ್ದರೆ ಆತನ ಕುರಿತಾದ ಮಾತುಗಳು(Talks) ಗಾಳಿಯಂತೆ(Air) ಹಬ್ಬಿಬಿಡುತ್ತದೆ. ಪೋಷಕರು ಆಫೀಸ್‌ನಿಂದ ಮನೆಗೆ ಕಿರಿಕಿರಿಯಿಂದ ಬಂದಾಗ ಮಕ್ಕಳು ಸ್ವಲ್ಪ ಸಮಯ ಕಾದು ಅವರ ಸಮಸ್ಯೆ ಆಲೈಸಿ ನಂತರ ಅಲ್ಲಿಂದ ಜಾಗ ಕೀಳುತ್ತಾರೆ. ಕಿರಿಕಿರಿ ಅನುಭವಿಸುತ್ತಿರುವ ವ್ಯಕ್ತಿಗೆ ಯಾವುದೇ ಚಿಕಿತ್ಸೆ(Treatment) ನೀಡುವುದಿಲ್ಲ.  ಹೆಚ್ಚಿನ ಜನರು ಸಂತೋಷದಿAದ ಚಪ್ಪಾಳೆ ತಟ್ಟುತ್ತಾರೆ, ಇನ್ನು ಕೆಲವರು ಈ ವಿಷಕಾರಿ ಭಾವನಾತ್ಮಕ ಸ್ಥಿತಿಯನ್ನು(Emotional) ತೊಡೆದುಹಾಕುತ್ತಾರೆ. ಯಾವುದಾದರು ವಿಷಯದಲ್ಲಿ ಕಿರಿಕಿರಿಯಾದಾಗ ಅದರಿಂದ ಹೊರ ಬರಲು ಕೆಲ ಟಿಪ್ಸ್ ಇಲ್ಲಿದೆ.

1.ಮನಸ್ಸಿನ ಕಿರಿಕಿರಿಗೆ ಏನು ಕಾರಣ ಎಂಬುದು ತಿಳಿದುಕೊಳ್ಳುವುದು ಬಹಳ ಮುಖ್ಯ.  ಕಿರಿಕಿರಿ ಮೂಡುವಾಗ ಗುರುತಿಸಿ ಮತ್ತು ನಿಮಗೆ ಏನಯ ಅಡ್ಡಿಪಡಿಸಬಹುದು ಎಂಬುದನ್ನು ಪರಿಗಣಿಸಿ. ಈ ಸಮಯದಲ್ಲಿ ಅದು ಸಣ್ಣದಿದ್ದರೂ ಸಮಸ್ಯೆ(Small Problems) ಸರಳವಾಗಿರಬಹುದು. ಅದರಿಂದ ಹೊರ ಬರುವುದಕ್ಕೆ ಪ್ರಯತ್ನಿಸಿ.

2. ಕೆಲವರಿಗೆ ಕಾಫಿ ಕುಡಿಯುವ(Coffee), ಮದ್ಯ(Alcohol) ಸೇವಿಸುವ ಚಟವಿರುತ್ತದೆ. ಆದರೆ ಅಧ್ಯಯನದ ಪ್ರಕಾರ ಹಗಲಲ್ಲಿ(Day Time) ಹೆಚ್ಚಿನ ಸಂಖ್ಯೆಯಲ್ಲಿ ಕಾಫಿ ಸೇವಿಸುವುದು ಹಾಗೂ ರಾತ್ರಿಯಲ್ಲಿ(Night) ಕಂಟಪೂರ್ತಿ ಮದ್ಯಸೇವಿಸುವುದು ಸಹ ಕಿರಿಕಿರಿಗೆ ಕಾರಣ ಎಂದು ಹೇಳಲಾಗಿದೆ. ಹಾಗಾಗಿ ಕಾಫಿ ಹಾಗೂ ಮದ್ಯ ಎರಡನ್ನು ಮಿತವಾಗಿ ಸೇವಿಸುವುದು ಒಳ್ಳೆಯದು.

Health Tips: ಚಳಿಗಾಲದ ಕಿರಿಕಿರಿ ಬೇಡವಾದ್ರೆ ಹೀಗ್ಮಾಡಿ

3. ನಮ್ಮೊಳಗೆ ಕರುಣಾಮಯಿಗಳಾಗಿದ್ದರೆ(Compassion) ಪದೇ ಪದೇ ಕೆದಕುವ ಕಿರಿಕಿರಿ ಉಂಟು ಮಾಡುವ ವಿಷಯಗಳಿಂದ ದೂರ ಇರಬಹುದು. ಈ ಸಂದರ್ಭದಲ್ಲಿ ನಮ್ಮ ಬಗ್ಗೆ ಯಾರು ಕಾಳಜಿ(Care) ತೋರಿಸುತ್ತಾರೊ ಅವರಿಂದ ಒಂದು ಅಪ್ಪುಗೆ(Hug) ಪಡೆದಾಗ ಸಮಾಧಾನ ಆಗುತ್ತದೆ. ಈ ಸಮಾಧಾನದಿಂದ ಮನಸ್ಸಿನ ಕಿರಿಕಿರಿ ಕಡಿಮೆಯಾಗುತ್ತದಲ್ಲದೆ, ಬೇಡದ ವಿಷಯಗಳಿಂದ ದೂರ ಉಳಿಯಬಹುದು.

4. ಸಣ್ಣ ಹಾಗೂ ಸಾಧಾರಣ ವಿಷಯಗಳಿಗೂ ಕಿರಿಕಿರಿ ಅನುಭವಿಸುತ್ತಿದ್ದರೆ, ಅದಕ್ಕೆ ಕೆಲ ದಿನಗಳು(Days) ಹಾಗೂ ವಾರಗಳೇ(Week) ಬೇಕಾಗುತ್ತದೆ. ಈ ವೇಳೆ ಜೀವನದ ಕುರಿತಾದ ದೃಷ್ಟಿಕೋನದ(Perspective) ಬಗ್ಗೆ ಯೋಚಿಸುವುದು ಒಳ್ಳೆಯದು. ಬದುಕಿನಲ್ಲಿ ಏನೆಲ್ಲಾ ಸರಿ ಇದೆ, ಯಾವುದು ಸರಿ ಇಲ್ಲ, ಕೆಲಸ ಬದಲಾಯಿಸುವ ಬಗ್ಗೆ, ಮುಂದಿನ ದಿನಗಳ ಬಗ್ಗೆ, ಬೆಳವಣಿಗೆ ಕುರಿತಾದ ವಿಷಯಗಳ ಬಗ್ಗೆ ಯೋಚಿಸಿದರೆ ಈ ಕಿರಿಕಿರಿಯಾಗುವ ವಿಷಯಗಳಿಗೆ ಜಾಗವಿರುವುದಿಲ್ಲ. ನಮ್ಮ ದೃಷ್ಟಿಕನ ಹೆಚ್ಚಿಸಿಕೊಳ್ಳುವುದರಿಂದ ಈ ರೀತಿಯಾದ ಸಮಸ್ಯೆಗಳಿಂದ ಹೊರಬರಬಹುದು. 

ಸೊಳ್ಳೆ ಕಡಿತದ ತುರಿಕೆ, ಕಜ್ಜಿ... ಮಾಯ ಮಾಡುತ್ತೆ ಈ ಮನೆಮದ್ದು

5. ಕೆಲವೊಮ್ಮೆ ವ್ಯಕ್ತಿಗೆ ಮೇಲಿಂದ ಮೇಲೆ ಯಾವುದೋ ವಿಷಯದಲ್ಲಿ ಕಿರಿಕಿರಿ ಅನ್ನಿಸಬಹುದು. ಈ ವೇಳೆ ಅದನ್ನು ಎದುರಿಸಲು ಸಾಧ್ಯವಾಗದಿದ್ದಲ್ಲಿ ಕೆಲ ಚಟುವಟಿಕೆಗಳಲ್ಲಿ(Activity) ತೊಡಗಿಕೊಳ್ಳಬೇಕಾಗುತ್ತದೆ. ವಾಕಿಂಗ್(Walking) ಮಾಡುವುದು, ರನ್ನಿಂಗ್(Running), ಸೈಕ್ಲಿಂಗ್ ಹಿಗೆ ಹಲವು ರೀತಿಯ ಚಟುವಟಿಕೆಗಳನ್ನು ಬಿಡುವು ಮಾಡಿಕೊಂಡಾದರೂ ಮಾಡುವುದು ಒಳ್ಳೆಯದು. ಈ ರೀತಿಯ ವ್ಯಾಯಾಮಗಳಿಂದ(Exercise) ದೈಹಿಕವಾಗಿ(Physical) ಹಾಗೂ ಮಾನಸಿಕವಾಗಿ(Mentally) ಕೆಟ್ಟ ಸಂದರ್ಭಗಳಿAದ ಹೊರಬರಲು ಸಾಧ್ಯ.

6. ಯಾರಿಂದಲಾದರು ಅಥವಾ ಯಾವುದೇ ವಿಷಯದಿಂದಾದರೂ ಕಿರಿಕಿರಿ ಅನಿಸಿದಲ್ಲಿ ಅದಕ್ಕೆ ಬೆಸ್ಟ್ ಮೆಡಿಸಿನ್ ಎಂದರೆ ಸುಮ್ಮನಿರುವುದು(Keep Quite) ಅಥವಾ ಒಂಟಿಯಾಗಿರುವುದು(Alone). ಈ ಸಂದರ್ಭದಲ್ಲಿ ನಮಗೆ ಸೂಕ್ತ ಎನಿಸಿದ ಜಾಗದಲ್ಲಿ ಒಬ್ಬರೇ ಇದ್ದು, ಒಳ್ಳೆಯ ವಿಷಯಗಳ ಬಗ್ಗೆ ಯೋಚಿಸುವುದು ಒಳ್ಳೆಯದು. ಕಿರಿಕಿರಿಯಾಗುವುದು ಎಂದರೆ ಅದರ ಅರ್ಥ ನಮ್ಮ ಮನಸ್ಸಿಗೆ ಸ್ವಲ್ಪ ಬ್ರೇಕ್(Break) ಬೇಕಿದೆ ಎಂದು. ಹಾಗಾಗಿ ಈ ಸಮಯದಲ್ಲಿ ಒಬ್ಬರೆ ಇರುವುದು, ಯಾವುದಾದರೊಂದು ಚಟುವಟಿಕೆಯಲ್ಲಿ ತೊಡಗುವುದು, ಸಂಗೀತ(Music) ಕೇಳುವುದು, ಯೋಗ(Yoga), ಧ್ಯಾನ(Meditation) ಅಥವಾ ಬಬಲ್ ಬಾತ್(Bubble Bath) ಮಾಡುವುದರಿಂದ ಸಮಸ್ಯೆಯಿಂದ ಹೊರಬರಲು ಸಾಧ್ಯ. ಕಿರಿಕಿರಿಯನ್ನು ಸಹಿಸಲಾಗುವುದೇ ಇಲ್ಲ ಎನ್ನುವ ಸಂದರ್ಭದಲ್ಲಿ ಒಬ್ಬರೆ ಇದ್ದು ದೀರ್ಘ ಉಸಿರು(Deep Breath) ತೆಗೆದುಕೊಂಡು ಬಿಡುವುದು ಹಾಗೂ ಹೊಸ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಒಳ್ಳೆಯದು. ಇದರಿಂದ ಸ್ವಲ್ಪ ಸಮಾಧಾನ ಆಗುವುದಲ್ಲದೆ ಮೊದಲಿನ ಸ್ಥಿತಿಗೆ ಮರಳಲು ಸಾಧ್ಯವಾಗುತ್ತದೆ.

Follow Us:
Download App:
  • android
  • ios