Health Tips: ಚಳಿಗಾಲದ ಕಿರಿಕಿರಿ ಬೇಡವಾದ್ರೆ ಹೀಗ್ಮಾಡಿ
ಚಳಿಗಾಲ ಆರಂಭವಾಗುವಾಗ ಖುಷಿಯಾಗುತ್ತದೆ. ಆಹಾ ಚಳಿ, ಎಂದು ಆಸ್ವಾದಿಸುವ ಮನಸ್ಸಾಗುತ್ತದೆ. ಆದರೆ, ದಿನಕಳೆದಂತೆ ಚಳಿಗಾಲದ ವಿವಿಧ ಕಿರಿಕಿರಿಗಳು ದೇಹವನ್ನಿಡಿ ಆಕ್ರಮಿಸಿಕೊಂಡಾಗ ಯಾಕಪ್ಪಾ ಈ ಚಳಿ ಎನಿಸುತ್ತದೆ. ನಿಮಗೂ ಹಾಗೆಯೇ ಆಗುತ್ತಿದೆಯೇ? ಅನೇಕ ಕಿರಿಕಿರಿಗಳನ್ನು ದೂರವಿಡಲು ಹೀಗ್ಮಾಡಿ.
ಅಬ್ಬಬ್ಬಾ...ಚಳಿ (Cold) ಎನ್ನುತ್ತ ಅನೇಕರು ಬೆಳಗ್ಗಿನ ವಾಕಿಂಗ್ (Walking) ಗೆ ವಿದಾಯ (Goodbye) ಹೇಳಿದ್ದಾರೆ. ಚಳಿಗಾಳಿಗೆ ಮುದುಡಿ ಮಲಗುವ ಆಸೆಗೆ ಬಹಳಷ್ಟು ಜನ ತಮ್ಮ ದೈನಂದಿನ ದಿನಚರಿಯನ್ನೇ ಬದಲಿಸಿಕೊಂಡಿದ್ದಾರೆ. ಚಳಿ ಮನುಷ್ಯರನ್ನು ಇಷ್ಟೆಲ್ಲ ಹೆದರಿಸುತ್ತದೆ ಎಂದಾದರೆ ಅದರ ತಾಕತ್ತನ್ನು ಊಹಿಸಬಹುದು!
ಈಗಾಗಲೇ ವಿವಿಧ ಸಮಸ್ಯೆ ಉಳ್ಳವರಿಗೆ ಚಳಿಗಾಲ(Winter)ದ ಕಿರಿಕಿರಿಯೂ ಸೇರಿಕೊಂಡು ದೇಹ ಇನ್ನಷ್ಟು ಜರ್ಜರಿತವಾಗಿದೆ. ಈ ಕಿರಿಕಿರಿ ಬೇಡ ಎಂದಾದರೆ, ಚಳಿಗೆ ಹೆದರುವುದನ್ನು ಬಿಟ್ಟುಬಿಡಬೇಕು. ಬದಲಿಗೆ, ಸ್ವಲ್ಪ ಕಾಳಜಿ ತೆಗೆದುಕೊಳ್ಳಬೇಕು.
ಚರ್ಮ(Skin)ದ ಬಗ್ಗೆ ಇರಲಿ ಎಚ್ಚರಿಕೆ
ಸೂಕ್ಷ್ಮ ಚರ್ಮದವರನ್ನು ಚಳಿಗಾಲ ಕಾಡಿಸಿಬಿಡುತ್ತದೆ. ಚರ್ಮರೋಗಗಳು ಹೆಚ್ಚಾಗಬಹುದು. ಪ್ರತಿದಿನ ಸ್ನಾನವಾದ ಬಳಿಕ, ರಾತ್ರಿ ಮಲಗುವ ಮುನ್ನ ಮುಖ, ಮೈ ಕೈಗಳಿಗೆ ಅಗತ್ಯ ಮಾಯಿಶ್ಚರೈಸ್ (Moisturise) ಕ್ರೀಮ್ ಗಳನ್ನು ಬಳಕೆ ಮಾಡಬೇಕು. ಹಿಮ್ಮಡಿ ಬಿರುಸಾಗದಿರಲು ಪ್ರತಿದಿನ ಸ್ನಾನವಾದ ಬಳಿಕ ವ್ಯಾಸಲಿನ್ ಅಥವಾ ಮಾಯಿಶ್ಚರೈಸ್ ಕ್ರೀಮ್ ಹಚ್ಚಬೇಕು. ವಾರಕ್ಕೆ ಎರಡು ದಿನ ರಾತ್ರಿ ಮಲಗುವ ಮುನ್ನ ಬಿಸಿ ನೀರಿನಲ್ಲಿ ಪಾದಗಳನ್ನು ಇಟ್ಟುಕೊಂಡ ನಂತರ ಮಾಯಿಶ್ಚರೈಸ್ ಕ್ರೀಮ್ ಹಚ್ಚಿಕೊಳ್ಳಬೇಕು.
ಅಸ್ತಮಾ (Asthma) ಹುಷಾರು
ಅಸ್ತಮಾ ಸೇರಿದಂತೆ ಶ್ವಾಸಕೋಶ(Lungs) ದ ಎಲ್ಲ ಸಮಸ್ಯೆಗಳಿಗೆ ಚಳಿಗಾಲ ಪ್ರಮುಖ ಶತ್ರು. ಯೋಗಾಸನ(Yoga), ಪ್ರಾಣಾಯಾಮ (Pranayama) ಗಳನ್ನು ನಿತ್ಯವೂ ಮಾಡುವುದು ಸೂಕ್ತ. ಶೀತ, ಕೆಮ್ಮು, ಕಫ ಕಟ್ಟಿದಂತಾಗುವುದು ಸಾಮಾನ್ಯ. ಹೀಗಾಗಿ, ಕಫ ಹೆಚ್ಚಿಸುವ ಯಾವುದೇ ಪದಾರ್ಥಗಳನ್ನು ಸೇವಿಸದಿರುವುದು ಕ್ಷೇಮ.
ಕರಿದ ತಿಂಡಿ (Fried Food) ಯಿಂದ ದೂರವಿರಿ
ಚಳಿಗಾಲದಲ್ಲಿ ಅಲರ್ಜಿ (Allergy) ಕೆಮ್ಮು ಹೆಚ್ಚು. ಬಿಸಿಬಿಸಿಯಾಗಿ ಏನಾದರೂ ತಿನ್ನಬೇಕು, ಕುಡಿಯಬೇಕು ಎಂದೆನಿದರೂ ಆದರೂ ಕಾಫಿ-ಟೀ, ಕರಿದ ತಿಂಡಿಗಳು, ಸಿಹಿ ಪದಾರ್ಥಗಳನ್ನು ಹೆಚ್ಚು ಸೇವಿಸಬಾರದು. ಕಫ ಕಟ್ಟಿಕೊಂಡಾಗ ಕರಿದ ತಿಂಡಿಗಳು ಭಾರೀ ಸಮಸ್ಯೆ ತಂದೊಡ್ಡುತ್ತವೆ. ಮಕ್ಕಳಿಗೆ ಈ ಸಮಯದಲ್ಲಿ ಚಾಕೊಲೇಟ್ (Chocolate) ನೀಡುವುದು ಸಹ ಸರಿಯಲ್ಲ. ಬದಲಾಗಿ, ಮನೆಯ ಆಹಾರ ಸೇವಿಸಬೇಕು.
ದೇಹ ಉಷ್ಣ(Heat) ವಾಗುತ್ತದೆ ಗೊತ್ತೇ?
ಚಳಿಗಾಲದಲ್ಲಿ ನಿದ್ರಾಹೀನತೆ (sleeping problem) ಹೆಚ್ಚು. ರಾತ್ರಿ ಬೇಗ ನಿದ್ರೆ ಬಾರದೆ ಬೆಳಗ್ಗೆ ಏಳಲು ಕಷ್ಟವಾಗುತ್ತದೆ. ದೇಹ ಉಷ್ಣವಾದಾಗ ನಿದ್ರೆ ಕಡಿಮೆಯಾಗುತ್ತದೆ. ದೇಹವನ್ನು ತಂಪಾಗಿರಿಸಿಕೊಳ್ಳಲು ದಿನವೂ ಬಾರ್ಲಿ ಗಂಜಿ, ರಾಗಿ ಗಂಜಿ ಸೇವನೆ ಮಾಡಬಹುದು. ಇಸಬ್ ಗೋಲ್ ನೆನೆಸಿಕೊಂಡು ಕುಡಿಯಬಹುದು.
Hiccups Problem: ನಾಲಗೆಯನ್ನು ಹೊರ ಹಾಕಿದ್ರೆ ಬಿಕ್ಕಳಿಕೆ ನಿಲ್ಲುತ್ತೆ..!
ವ್ಯಾಯಾಮ (Exersice) ಅತ್ಯಗತ್ಯ
ಚಳಿಗಾಲದಲ್ಲಿ ಮುದುಡಿ ಮಲಗುವ ಆಸೆ ಸಹಜವಾದರೂ ವ್ಯಾಯಾಮ ಮಾಡದಿದ್ದರೆ ಆರೋಗ್ಯದ ಮೇಲೆ ಭಾರೀ ಪರಿಣಾಮ ಗ್ಯಾರಂಟಿ. ತಾಪಮಾನ (Temperature)ಕಡಿಮೆಯಿರುವಾಗ ರಕ್ತನಾಳಗಳು ಸಂಕುಚಿತಗೊಳ್ಳುತ್ತವೆ. ಹೀಗಾಗಿಯೇ, ಈ ಸಮಯದಲ್ಲಿ ರಕ್ತದೊತ್ತಡ ಏರಿಕೆಯಾಗುತ್ತದೆ. ರಕ್ತನಾಳಗಳು ಸಂಕುಚಿತಗೊಳ್ಳುವುದರಿಂದ ಹೃದಯ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಚಳಿಗಾಲದಲ್ಲಿ ಹೃದಯಾಘಾತ ಹೆಚ್ಚು. ಸೂಕ್ತ ವ್ಯಾಯಾಮದಿಂದ ಈ ಸಮಸ್ಯೆ ಕಾಣಿಸುವುದಿಲ್ಲ. ವ್ಯಾಯಾಮ ಮಾಡುವುದರಿಂದ ಮಂಡಿ ನೋವು ಸೇರಿದಂತೆ ಅನೇಕ ನೋವುಗಳನ್ನು ದೂರವಿಡಬಹುದು.
Miss Universe 2021: ವಯಸ್ಸಾದ ಶ್ರೀಮಂತ ಬೇಡ, ಬಡವನ ಡೇಟ್ ಮಾಡ್ತಾರಂತೆ ಭುವನ ಸುಂದರಿ ಹರ್ನಾಝ್
ಅಬ್ಬಬ್ಬಾ ತಲೆಹೊಟ್ಟು (Dandruff)
ತಲೆಯಲ್ಲಿ ಹೊಟ್ಟು ಹೆಚ್ಚಾಗಿ, ಬಿಳಿ ಪುಡಿಯಂತೆ ಉದುರುವುದು ಚಳಿಗಾಲದಲ್ಲಿ ಹೆಚ್ಚು. ಗುಣಮಟ್ಟದ ಶಾಂಪೂ ಬಳಕೆ ಮಾಡಿ. ಹೆಚ್ಚಾದರೆ ವೈದ್ಯರನ್ನು ಕಾಣಿ. ವಾರಕ್ಕೆ ಎರಡು ದಿನವಾದರೂ ತಲೆಗೆ ಉತ್ತಮ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳಿ. ಸುಡುವ ಬಿಸಿನೀರಿನ ಸ್ನಾನ ಈ ಸಮಯದಲ್ಲಿ ಬೇಡ.
ವಿಂಟರ್ ಬ್ಲೂಸ್ (Winter Blues)
ಚಳಿಗಾಲದಲ್ಲಿ “ವಿಂಟರ್ ಬ್ಲೂಸ್’ ಎಂದು ಕರೆಯುವ ಖಿನ್ನತೆ ಬಹಳಷ್ಟು ಜನರಲ್ಲಿ ಉಂಟಾಗಬಹುದು. ಅಪಾರ ಆಲಸ್ಯ, ಉತ್ಸಾಹ ಇಲ್ಲದಿರುವುದು, ಹೆಚ್ಚು ನಿದ್ರೆ, ಆದರೂ ಸುಸ್ತು ಇದರ ಪ್ರಮುಖ ಲಕ್ಷಣಗಳು. ಇದನ್ನು ಸಹ ಸೂಕ್ತ ವ್ಯಾಯಾಮ, ದೈಹಿಕ ಚಟುವಟಿಕೆಯಿಂದ ನಿಯಂತ್ರಿಸಬಹುದು.