Asianet Suvarna News Asianet Suvarna News

ಅಬ್ಬಬ್ಬಾ..ವೀರ್ಯ ಬಳಸಿ ಮುತ್ತಿನ ನೆಕ್ಲೇಸ್ ತಯಾರಿಸ್ತಿದ್ದಾಳೆ ಮಹಿಳೆ !

ಫ್ಯಾಷನ್‌, ಜ್ಯುವೆಲ್ಲರಿಯನ್ನು ಹೆಣ್ಣು ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ತಾವು ಧರಿಸೋ ಆಭರಣಗಳು ಹೆಚ್ಚು ಡಿಫರೆಂಟ್ ಆಗಿರಬೇಕೆಂದು ಬಯಸುತ್ತಾರೆ. ಹಾಗೇ ಎಲ್ಲಕ್ಕಿಂತ ವಿಭಿನ್ನವಾಗಿರೋ ನೆಕ್ಲೇಸ್ ಧರಿಸಬೇಕೆಂದು ಬಯಸಿದ ಮಹಿಳೆಯೊಬ್ಬಳು ವೀರ್ಯದಿಂದ ನೆಕ್ಲೇಸ್ ತಯಾರಿಸಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

This Woman Is Making Pearl Necklaces From Peoples Sperm Vin
Author
First Published Sep 1, 2022, 11:15 AM IST

ಆಭರಣ ಬಗ್ಗೆ ಹೆಣ್ಣುಮಕ್ಕಳಿಗಿರುವ ಕ್ರೇಜ್ ಅಷ್ಟಿಷ್ಟಲ್ಲ. ಭಿನ್ನ-ವಿಭಿನ್ನ ಶೈಲಿಯ ಆಭರಣಗಳನ್ನು ಖರೀದಿಸಿ ದರಿಸುತ್ತಾರೆ. ನ್ಯೂ ಡಿಸೈನ್, ಪ್ಯಾಟರ್ನ್‌ಗಳನ್ನು ಹುಡುಕುತ್ತಲೇ ಇರುತ್ತಾರೆ. ಇತ್ತೀಚಿಗೆ ಮಹಿಳೆಯೊಬ್ಬರು ಎದೆಹಾಲನ್ನು ಬಳಸಿ ನೆಕ್ಲೇಸ್‌, ರಿಂಗ್‌, ಬಳೆ ಮೊದಲಾದವುಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವಿಚಾರ ಸುದ್ದಿಯಾಗಿತ್ತು. ಅದೇ ರೀತಿ ಇಲ್ಲೊಬ್ಬಳು ಮಹಿಳೆ ಡಿಫರೆಂಟ್ ನೆಕ್ಲೇಸ್ ತಯಾರಿಸುತ್ತಿದ್ದಾಳೆ. ಆದರೆ ಇಲ್ಲಾಕೆ ಬಳಸ್ತಿರೋದು ಎದೆಹಾಲನ್ನಲ್ಲ. ಬದಲಿಗೆ ವೀರ್ಯವನ್ನು. ಹೌದು ಅಚ್ಚರಿಯೆನಿಸಿದರೂ ಇದು ನಿಜ. ಕೆನಡಾದ ಆಭರಣ ವ್ಯಾಪಾರಿಯೊಬ್ಬರು 'ಮುತ್ತಿನ ನೆಕ್ಲೇಸ್'ಗಳನ್ನು ರಚಿಸಲು ಮಾನವ ವೀರ್ಯವನ್ನು ಬಳಸುತ್ತಾರೆ.

ವೀರ್ಯವನ್ನು ಬಳಸಿ ಸಿದ್ಧಪಡಿಸುವ ನೆಕ್ಲೇಸ್
2021ರಲ್ಲಿ ತನ್ನ ವ್ಯವಹಾರವನ್ನು ಪ್ರಾರಂಭಿಸಿದ ಶಿಲ್ಪಿ ಮತ್ತು ಆಭರಣ (Jewellery) ವ್ಯಾಪಾರಿ ಅಮಂಡಾ ಬೂತ್, ಅವರ ಅನುಯಾಯಿಗಳಲ್ಲಿ ಒಬ್ಬರು ಟಿಕ್‌ಟಾಕ್‌ನಲ್ಲಿ ಸಲಹೆ ನೀಡಿದ ನಂತರ ವೀರ್ಯ (Sperm)ವನ್ನು ಬಳಸಿ ಆಭರಣಗಳನ್ನು ತಯಾರಿಸಲು ಪ್ರಾರಂಭಿಸಿದರು. ಈ ಬಗ್ಗೆ ಮಹಿಳೆ (Woman) ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ತಿಳಿದುಬಂದಿದೆ. ಗ್ರಾಹಕರು ತಮ್ಮ ವೀರ್ಯದ ಮಾದರಿಗಳನ್ನು ಅಮಂಡಾ ಅವರ ಕಾರ್ಯಾಗಾರಕ್ಕೆ ಕಳುಹಿಸುತ್ತಾರೆ, ಅಲ್ಲಿ ಅವುಗಳನ್ನು ನಿರ್ಜಲೀಕರಣಗೊಳಿಸಲಾಗುತ್ತದೆ, ಪುಡಿಮಾಡಲಾಗುತ್ತದೆ ಮತ್ತು ಧರಿಸಬಹುದಾದ ಮಣ್ಣಿನ ಮಣಿಗಳು ಅಥವಾ ಟ್ರಿಂಕೆಟ್‌ಗಳಾಗಿ ಪರಿವರ್ತಿಸಲಾಗುತ್ತದೆ.

ಗರ್ಭಧಾರಣೆಗೆ ಗಂಡಸು ಬೇಕಿಲ್ಲ ! ಪುರುಷನ ಸಂಪರ್ಕವಿಲ್ಲದೆ ಮಗುವಿಗೆ ಜನ್ಮ ನೀಡಿದ ಮಹಿಳೆ

ಬೂತ್ ಆರಂಭದಲ್ಲಿ ತನ್ನ ಪತಿ ವೀರ್ಯವನ್ನು ಬಳಸಿಕೊಂಡು ಪ್ರಕ್ರಿಯೆಯನ್ನು ಪರೀಕ್ಷಿಸಿದಳು. ವೀರ್ಯದ ನೆಕ್ಲೇಸ್ ಯಶಸ್ವಿಯಾದ ನಂತರ ಜನರಿಂದ ಆರ್ಡರ್‌ ತೆಗೆದುಕೊಳ್ಳಲು ಆರಂಭಿಸಿದಳು. ವೀರ್ಯದ ಈ ನೆಕ್ಲೇಸ್ ಧರಿಸುವ ಮಹಿಳೆಯರು ವಿಶೇಷ ಖುಷಿಯನ್ನು ಹೊಂದುತ್ತಾರೆ. ಹುಟ್ಟಲಿರುವ ಮಕ್ಕಳು ಜೊತೆಯಲ್ಲೇ ಇದ್ದಾರೆಂದು ಅಂದುಕೊಳ್ಳುತ್ತಾರೆ. ಬೂತ್ ಜನರ ಎದೆಹಾಲು, ಪ್ರೀತಿಪಾತ್ರರ ಅಥವಾ ಸಾಕುಪ್ರಾಣಿಗಳ ಸುಡುವ ಅವಶೇಷಗಳು, ತುಪ್ಪಳ ಮತ್ತು ಕೂದಲಿನಿಂದ ಆಭರಣಗಳನ್ನು ತಯಾರಿಸುತ್ತಾರೆ.

ವೀರ್ಯ ಆಭರಣ ಪಡೆಯುವ ಹಿಂದಿನ ಕಾರಣ ಭಾವನಾತ್ಮಕ
ವೀರ್ಯ ಆಭರಣಗಳನ್ನು ಪಡೆಯುವ ಹಿಂದಿನ ಕಾರಣಗಳು ಸಾಮಾನ್ಯವಾಗಿ ಭಾವನಾತ್ಮಕವಾಗಿರುತ್ತವೆ. ಜನರು ತಮ್ಮ ಫಲವತ್ತತೆ ಅಥವಾ ಪರಸ್ಪರ ಪ್ರೀತಿಯನ್ನು ಆಚರಿಸಲು ಬಯಸಬಹುದು. ಕೆಲವರು ಲಿಂಗ ಪುನರ್ವಿತರಣೆ, ಫಲವತ್ತತೆ ಚಿಕಿತ್ಸೆ ಮತ್ತು ಕ್ಯಾನ್ಸರ್ ಚಿಕಿತ್ಸೆಯ ಮೂಲಕ ಹೋಗುತ್ತಿದ್ದಾರೆ ಎಂದು ವೀರ್ಯ ಆಭರಣ ಆಯೋಗಗಳನ್ನು ತೆಗೆದುಕೊಳ್ಳುವ ಕುಂಬ್ರಿಯಾ ಲೈಫ್ ಕಾಸ್ಟಿಂಗ್‌ನ ವಿಕ್ಟೋರಿಯಾ ರುಡ್ಕಿನ್ ತಿಳಿಸಿದರು.

ಇತ್ತೀಚಿಗಷ್ಟೇ ಬ್ರೆಸ್ಟ್‌ ಮಿಲ್ಕ್‌ ಜ್ಯುವೆಲ್ಲರಿ ಅಥವಾ ಎದೆಹಾಲಿನ ಆಭರಣ ಟ್ರೆಂಡ್ ಆಗಿತ್ತು. ತಾಯಿ ಮತ್ತು ಮಗುವಿನ ನಡುವಿನ ವಿಶೇಷ ಬಾಂಧವ್ಯದ ಸ್ಮರಣಿಕೆಯನ್ನು ಮಾಡಲು ಬಯಸುವವರು ಎದೆ ಹಾಲಿನ ಆಭರಣ (Jewellery)ತಯಾರಿಸಿ ಇಟ್ಟುಕೊಳ್ಳುತ್ತಾರೆ. ಇದೇ ರೀತಿ ಮಹಿಳೆಯೊಬ್ಬರು ಎದೆಹಾಲನ್ನು ಮಾರಿ ವಾರ್ಷಿಕಾವಗಿ 15 ಕೋಟಿ ರೂ. ಸಂಪಾದಿಸಿದ್ದಾರೆ. ಇವರು ಎದೆಹಾಲಿನ ಆಭರಣಗಳನ್ನು ತಯಾರಿಸಿ ಮಾರುತ್ತಿದ್ದರು. ಸ್ತನ ಹಾಲಿನ ಆಭರಣವು ಎದೆ ಹಾಲಿನಿಂದ ತುಂಬಿದ ಕಲ್ಲು ಹೊಂದಿರುವ ಆಭರಣವಾಗಿದೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ. ಅನೇಕ ಹೆಸರಾಂತ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳು ತಾಯಂದಿರಿಗಾಗಿ ಈ ಆಭರಣವನ್ನು ತಯಾರಿಸಿ ಕೊಡುತ್ತಿವೆ.

31ರ ಹರೆಯದಲ್ಲಿ 48 ಮಕ್ಕಳಿಗೆ ತಂದೆಯಾದ ಮಹಾ ಅಪ್ಪ: ಈತ ಅಮೆರಿಕಾದ ವಿಕ್ಕಿ ಡೋನರ್!

ಎದೆ ಹಾಲಿನ ಆಭರಣವನ್ನು ಹೇಗೆ ತಯಾರಿಸಲಾಗುತ್ತದೆ ?
ಎದೆಹಾಲನ್ನು ಉಪಯೋಗಿಸಿ ನೆಕ್ಲೇಸ್ ಪೆಂಡೆಂಟ್, ಉಂಗುರ ಹೀಗೆ ಹಲವು ಆಭರಣಗಳನ್ನು ತಯಾರಿಸಲಾಗುತ್ತದೆ. ಹಾಲನ್ನು ಸಂರಕ್ಷಿಸಲು ರಾಸಾಯನಿಕಗಳನ್ನು ಬಳಸುವ ಮೂಲಕ ಹಾಲು ಬಿಸಿ ಮತ್ತು ತಂಪಾಗಿಸುವ ತೀವ್ರ ಪ್ರಕ್ರಿಯೆಗೆ ಒಳಗಾಗುತ್ತದೆ. ಇದರಿಂದ ಹಾಲನ್ನು ಅಗತ್ಯವಿರುವಂತೆ ಅಚ್ಚು ಮಾಡಲು ಮತ್ತು ಆಕಾರವನ್ನು ಪಡೆಯಲು ಸುಲಭವಾಗುತ್ತದೆ. ನಂತರ ಇದನ್ನು ಎದೆ ಹಾಲಿನ ನೆಕ್ಲೇಸ್, ಉಂಗುರ, ಕಿವಿಯೋಲೆಗಳು ಇತ್ಯಾದಿಗಳನ್ನು ತಯಾರಿಸಲು ಬಳಸಬಹುದು.

ಎದೆಹಾಲಿನ ಆಭರಣ ಮಾರಿ ಕೋಟಿ ಕೋಟಿ ಸಂಪಾದನೆ
ಲಂಡನ್‌ನ ಮಹಿಳೆಯೊಬ್ಬರು ಎದೆಹಾಲನ್ನು ಬಳಸಿ ಆಭರಣ ತಯಾರಿಸುತ್ತಿದ್ದಾರೆ. ಮೂರು ಮಕ್ಕಳ ತಾಯಿ ಎದೆಹಾಲನ್ನು ಬಳಸಿ ಆಭರಣಗಳನ್ನು ತಯಾರಿಸಿ ಮಾರುತ್ತಿದ್ದಾರೆ. ಸಫಿಯಾ ರಿಯಾದ್ ಮತ್ತು ಅವರ ಪತಿ ಆಡಮ್ ರಿಯಾದ್ ಅವರು ಮೆಜೆಂಟಾ ಫ್ಲವರ್ಸ್ ಎಂಬ ಕಂಪನಿಯನ್ನು ನಡೆಸುತ್ತಿದ್ದಾರೆ. ಇವರು ತಾಯಿ ಮತ್ತು ಬಾಂಧವ್ಯವನ್ನು ಇನ್ನಷ್ಟು ಸ್ಮರಣೀಯವಾಗಿ ಮಾಡಲು ಎದೆಹಾಲು ಸೇರಿಸಿದ ರಿಂಗ್‌, ಪೆಂಡೆಂಟ್‌, ಕಿವಿಯೋಲೆ, ಕಲ್ಲುಗಳನ್ನು ತಯಾರಿಸುತ್ತಿದ್ದಾರೆ.

Follow Us:
Download App:
  • android
  • ios