ಯಾರ ಅದೃಷ್ಟ ಹೇಗಿದೆ ಹೇಳೋದು ಅಸಾಧ್ಯ. ಬೀದಿಯಲ್ಲಿದ್ದವರು ಬಂಗಲೆಗೆ ಬರಬಹುದು. ಕೈನಲ್ಲಿ ಬಿಡಿಕಾಸಿಲ್ಲ ಅನ್ನೋರ ಕೈನಲ್ಲಿ ಹಣ ಕುಣಿಯಬಹುದು. ಕೆಲವೊಂದು ದಿನ ಅದೃಷ್ಟ ನಮ್ಮ ಕೈ ಹಿಡಿದಿರುತ್ತದೆ. ಇದಕ್ಕೆ ಲಾರೆನ್ಸ್ ಉತ್ತಮ ನಿದರ್ಶನ. 

ರೆಸ್ಟೋರೆಂಟ್ ಗೆ ಹೋದಾಗ ನಾವು ಆಹಾರ ಸೇವನೆ ಮಾಡಿ, ಬಿಲ್ ಪಾವತಿಸಿ ಟಿಪ್ಸ್ ನೀಡಿ ಬರ್ತೇವೆ. ಎಲ್ಲರೂ ವೇಟರ್ ಗೆ ಟಿಪ್ಸ್ ನೀಡ್ಲೇಬೇಕು ಎನ್ನುವ ನಿಯಮವಿಲ್ಲ. ಕೆಲವರು ನೀಡಿದ್ರೆ ಮತ್ತೆ ಕೆಲವರು ಹಾಗೆ ಬರ್ತಾರೆ. ನೀಡೋರು ಕೂಡ ಐದರಿಂದ 100 ರೂಪಾಯಿ ಒಳಗೆ ಟಿಪ್ಸ್ ನೀಡಿದ್ರೆ ಹೆಚ್ಚು. ಭಾರತದಲ್ಲಿ ಬಹುತೇಕರ ಟಿಪ್ಸ್ 10 ರೂಪಾಯಿಯೇ ಆಗಿರುತ್ತೆ ಅಂದ್ರೆ ತಪ್ಪಾಗಲಾರದು. ಆಸ್ಟ್ರೇಲಿಯಾದ ಹೊಟೇಲ್ ಒಂದು ಕೆಲ ದಿನಗಳ ಹಿಂದೆ ಟಿಪ್ಸ್ ವಿಷ್ಯಕ್ಕೆ ಸುದ್ದಿ ಮಾಡಿತ್ತು. ರೆಸ್ಟೊರೆಂಟ್ ನಲ್ಲಿ ಕೆಲಸ ಮಾಡ್ತಿದ್ದ ಹುಡುಗಿಗೆ 4 ಲಕ್ಷ ರೂಪಾಯಿ ಟಿಪ್ಸ್ ರೂಪದಲ್ಲಿ ಸಿಕ್ಕಿತ್ತು. ಈ ಕಥೆ ಏನು ಹಾಗೆ ಟಿಪ್ಸ್ ಕೊಟ್ಟೋರು ಯಾರು ಅನ್ನೋದರ ವಿವರ ಇಲ್ಲಿದೆ.

ಲಕ್ಕಿ ಲಾರೆನ್ಸ್ (Lawrence) : 10 ರೂಪಾಯಿ ಟಿಪ್ಸ್ (Tips) ಸಿಕ್ಕಿದ್ರೂ ಸಾಕು ಎನ್ನುವವರಿದ್ದಾರೆ. ಅವರ ಮಧ್ಯೆ 4 ಲಕ್ಷ ರೂಪಾಯಿ ಟಿಪ್ಸ್ ರೂಪದಲ್ಲಿ ಸಿಕ್ಕಿದ್ರೆ ಮೂರ್ಚೆ ಹೋಗೋದು ಕಾಮನ್. ಲಾರೆನ್ಸ್ ಕೂಡ ಇದೇ ಶಾಕ್ ನಲ್ಲಿದ್ದಳು. ಘಟನೆ ನಡೆದಿದ್ದು ಮೆಲ್ಬೋರ್ನ್ ನ ಸೌತ್ ಯಾರ್ರಾದ ಗಿಲ್ಸನ್ (Gilson) ರೆಸ್ಟೋರೆಂಟ್ ನಲ್ಲಿ. ಅದು ಲಾರೆನ್ಸ್ ಗೆ ಅದೃಷ್ಟದ ದಿನ. ಆಕೆಯ ಆರ್ಥಿಕ ಸ್ಥಿತಿಯನ್ನು ಬದಲಿಸಿದ ದಿನ. ಅಂದು ಗಿಲ್ಸನ್ ರೆಸ್ಟೋರೆಂಡ್ ಗೆ ನಾಲ್ಕು ಮಂದಿ ಗ್ರಾಹಕರು ಬಂದಿದ್ದರಂತೆ. ಲಾರೆನ್ಸ್ ಅವರಿಗೆ ಪ್ರೀತಿಯಿಂದ ಸರ್ವ್ ಮಾಡಿದ್ದಾಳೆ. ಅವಳ ಕೆಲಸ ಮೆಚ್ಚಿದ ಗ್ರಾಹಕರು ಟಿಪ್ಸ್ ನೀಡಿದ್ದಾರೆ. ಸಿಕ್ಕಿದ್ದು ಹತ್ತೋ, ಇಪ್ಪತ್ತೋ ರೂಪಾಯಿಯಲ್ಲ. ಬರೋಬ್ಬರಿ ನಾಲ್ಕು ಲಕ್ಷ ರೂಪಾಯಿ.

Hair Waxing: ಬೇಡದ ರೋಮಗಳ ನಿವಾರಣೆಗೆ ಇವೆ ನಾನಾ ವಿಧಾನಗಳು

ಆತಂಕಕ್ಕೊಳಗಾದ ಲಾರೆನ್ಸ್ : ಒಮ್ಮೆಲೇ ದೊಡ್ಡ ಮೊತ್ತದ ಟಿಪ್ಸ್ ನೋಡಿ ಲಾರೆನ್ಸ್ ದಂಗಾಗಿದ್ದಾಳೆ. ಆತಂಕದಲ್ಲಿಯೇ ನೀವು ಇಷ್ಟೊಂದು ಹಣವನ್ನು ನೀಡಿದ್ದೀರಿ, ಇದು ಮಿಸ್ ಆಗಿ ಬಂದಿರಬೇಕು ಎಂದಿದ್ದಾಳೆ. ಆದ್ರೆ ಟಿಪ್ಸ್ ನೀಡಿದೋರು ಸ್ಪಷ್ಟವಾಗಿ ಇಲ್ಲ ಈ ಟಿಪ್ಸ್ ನಿನಗೆ ಎಂದಿದ್ದಾರೆ.ತಟ್ಟೆಯಲ್ಲಿದ್ದ 4000 ಪೌಂಡ್ ನಲ್ಲಿ ಶೇಕಡಾ 30ರಷ್ಟನ್ನು ಉಳಿದ ಸಿಬ್ಬಂದಿ ಹಂಚಿಕೊಳ್ಳಲಿ. ಶೇಕಡಾ 70ರಷ್ಟನ್ನು ಲಾರೆನ್ಸ್ ಇಟ್ಟುಕೊಳ್ಳಬೇಕು ಎಂದು ಟಿಪ್ಸ್ ನೀಡಿದೋರು ಹೇಳಿದ್ರು. ಇದನ್ನು ಕೇಳಿ ಲಾರೆನ್ಸ್ ಅಲ್ಲೇ ಅಳಲು ಶುರು ಮಾಡಿದ್ದಾಳೆ. ಹೊಟೇಲ್ ಗೆ ಬಂದವರು 518 ಡಾಲರ್ ಅಂದ್ರೆ ಸುಮಾರು 42 ಸಾವಿರ ಬಿಲ್ ಮಾಡಿದ್ದಾರೆ. ಅದ್ರ ಜೊತೆಗೆ ಟಿಪ್ಸ್ ನೀಡಿದ್ದಾರೆ. 

ಲಾರೆನ್ಸ್ ಯಾರು? : ಇಷ್ಟೊಂದು ಟಿಪ್ಸ್ ಪಡೆದ ಲಾರೆನ್ಸ್ ಫುಲ್ ಟೈಂ ಕೆಲಸಗಾರ್ತಿಯಲ್ಲ. ಆಕೆ ಕಾಲೇಜು ವಿದ್ಯಾರ್ಥಿನಿ. ಬಿಡುವಿನ ಸಮಯದಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಾಳೆ. 

ಪತ್ತೆಯಾಗಿದೆ ಟಿಪ್ಸ್ ನೀಡಿದವರ ಗುರುತು : ಇಷ್ಟು ದಿನ ಆಸ್ಟ್ರೇಲಿಯಾದ ಲಾರೆನ್ಸ್ ಗೆ ಟಿಪ್ಸ್ ಸಿಕ್ಕಿದೆ ಎಂಬುದು ಮಾತ್ರ ಸುದ್ದಿಯಾಗಿತ್ತು. ಇದನ್ನು ಬೆನ್ನುಹತ್ತಿ ಹೋದವರು, ಯಾರು ಟಿಪ್ಸ್ ನೀಡಿದ್ದಾರೆ ಎಂಬುದನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆನ್ಲೈನ್ ನಲ್ಲಿ ಅವರ ಫೋಟೋವನ್ನು ಹಂಚಿಕೊಳ್ಳಲಾಗಿದೆ. ವರದಿಗಳ ಪ್ರಕಾರ, ಟಿಪ್ಸ್ ನೀಡಿದವರು 68.9 ಮಿಲಿಯನ್ ಡಾಲರ್ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರ ಹೆಸರು ಎಡ್ ಕ್ರಾವೆನ್ ಎನ್ನಲಾಗಿದೆ. ಅವರು ಯಶಸ್ವಿ ಉದ್ಯಮಿ. ಇವರು ಮೆಲ್ಬೋರ್ನ್ ಮೂಲದ ಕ್ರಿಪ್ಟೊ ಬಿಲಿಯನೇರ್ ಮತ್ತು ಆಸ್ಟ್ರೇಲಿಯಾದ ಕಿರಿಯ ಬಿಲಿಯನೇರ್ ಆಗಿದ್ದಾರೆ.
ಕ್ರಾವೆನ್ ಮೂರು ಸ್ನೇಹಿತರೊಂದಿಗೆ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದರು. ದೊಡ್ಟ ಮೊತ್ತದ ಬಿಲ್ ಪಾವತಿಸಿದ್ರು. ಅದ್ರ ಜೊತೆಗೆ ಟಿಪ್ಸ್ ನೀಡಿದ್ರು. 

Momo Twins : ಒಂದಾದ್ಮೇಲೆ ಒಂದರಂತೆ ಎರಡು ಜೋಡಿ ಅವಳಿಗೆ ಜನ್ಮ ನೀಡಿದ ಮಹಾ ತಾಯಿ

ಗರ್ಭಿಣಿಗೆ ಸಿಕ್ಕಿತ್ತು ಇಷ್ಟೊಂದು ಟಿಪ್ಸ್ : ಕೆಲ ದಿನಗಳ ಹಿಂದೆ ಇನ್ನೊಂದು ಸುದ್ದಿ ಬೆಳಕಿಗೆ ಬಂದಿತ್ತು. ಅದ್ರಲ್ಲಿ ಗರ್ಭಿಣಿ ವೇಟರ್ ಗೆ ಗ್ರಾಹಕರೊಬ್ಬರು ಒಂದು ಲಕ್ಷ ರೂಪಾಯಿ ಟಿಪ್ಸ್ ನೀಡಿದ್ದರು.