Asianet Suvarna News Asianet Suvarna News

ಬೇಕಿತ್ತಾ ಇಂಥಾ ಕೆಲ್ಸ ! ಮಹಿಳೆಯರ ಒಳಉಡುಪು ಕದಿಯೋಕೆ ಹೋಗಿ ಸಿಕ್ಕಿಬಿದ್ರು

ಎಂಥೆಂಥಾ ಕಳ್ಳರಿರ್ತಾರೆ ನೋಡಿ. ಹಣ, ಚಿನ್ನಾಭರಣ, ವಿಗ್ರಹ, ಫರ್ನೀಚರ್ ಸೇರಿ ಇತರ ಬೆಲೆಬಾಳುವ ವಸ್ತುಗಳನ್ನು ಕಳುವು ಮಾಡೋ ಕಳ್ಳರ ಬಗ್ಗೆ ಕೇಳಿರ್ತೀರಿ. ಆದ್ರೆ ಈ ಕಳ್ಳರು ಅಂಥಾ ವಸ್ತುವನ್ನೆಲ್ಲಾ ಎಡಗೈನಲ್ಲೂ ಮುಟ್ಟಲ್ಲ. ಇವ್ರಿಗೆ ಬೇಕಾಗಿರೋದು ಮತ್ತೇನು ಅಲ್ಲ. ಮಹಿಳೆಯರ ಒಳಉಡುಪು.

Thief Steals Womens Undergarments in MPs Gwalior, Caught On CCTV Vin
Author
First Published Sep 6, 2022, 2:32 PM IST

ಮಹಿಳೆಯರ ವರ್ತನೆಗಳು ನಿಜವಾಗಿಯೂ ವಿಚಿತ್ರವಾಗಿರುತ್ತವೆ. ಒಬ್ಬೊಬ್ಬ ಮನುಷ್ಯನಿಗೆ ಒಂದೊಂದು ರೀತಿಯ ಗೀಳಿರುತ್ತದೆ. ಅದು ಸಾಮಾನ್ಯ ಗೀಳುಗಳಲ್ಲ. ಕೇಳುವಾಗಲೇ ಎಲ್ಲರನ್ನು ನಿಬ್ಬೆರಗಾಗಿಸುವ ಅಭ್ಯಾಸಗಳು. ದುಡಿಯಲು ಆಗದ ಸೋಮಾರಿಗಳು, ಐಷಾರಾಮಿ ಜೀವನಕ್ಕೆ ಆಸೆ ಪಟ್ಟವರು ಕಳ್ಳತನಕ್ಕೆ ಇಳೀತಾರೆ. ಹಣ, ಚಿನ್ನಾಭರಣ, ವಿಗ್ರಹ, ಫರ್ನೀಚರ್ ಸೇರಿ ಇತರ ಬೆಲೆಬಾಳುವ ವಸ್ತುಗಳನ್ನು ಕದೀತಾರೆ. ಮತ್ತೆ ಅವುಗಳನ್ನು ಮಾರಿ ಐಷಾರಾಮಿ ಜೀವನ ನಡೆಸ್ತಾರೆ, ಆದ್ರೆ ಈ ಕಳ್ಳರು ಮಾತ್ರ ಅವೆಲ್ಲಕ್ಕಿಂತ ವಿಭಿನ್ನ. ಒಂದು ರೀತಿ ವಿಚಿತ್ರವೆಂದೇ ಹೇಳಬಹುದು. ಈ ಕಳ್ಳರಿಗೆ ಹಣ, ಒಡವೆ ಬೇಡವೇ ಬೇಡ. ಇವ್ರೇನಿದ್ದರೂ ರಾತ್ರೋ ರಾತ್ರಿ ಪ್ಲಾನ್ ಮಾಡಿ ಮಹಿಳೆಯರ ಒಳಉಡುಪುಗಳನ್ನು ಕದೀತಾರೆ.

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಯುವಕ (Youth) ನೊಬ್ಬ ಮಹಿಳೆಯರ (Woman) ಒಳ ಉಡುಪುಗಳನ್ನು ಕದಿಯುತ್ತಿರುವ ವಿಲಕ್ಷಣ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ವರದಿಗಳ ಪ್ರಕಾರ, ಕಳ್ಳನು ಮಧ್ಯರಾತ್ರಿ ಮನೆಗಳನ್ನು ಛಾವಣಿ ಅಥವಾ ಪೈಪ್ ಮೂಲಕ ಪ್ರವೇಶಿಸುತ್ತಾನೆ ಮತ್ತು ಒಣಗಲು ಬಿಟ್ಟ ಒಳ ಉಡುಪುಗಳನ್ನು (Undergarments) ಕದಿಯುತ್ತಾನೆ. ಇಡೀ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ವೀಡಿಯೋ ಸಾಕಷ್ಟು ಸಂಚಲನವನ್ನು ಸೃಷ್ಟಿಸಿದೆ. ಸ್ಪಷ್ಟವಾಗಿ, ಅಂತಹ ಅನೇಕ ಕಳ್ಳತನಗಳು (Theft) ಈ ಪ್ರದೇಶದಲ್ಲಿ ನಡೆದಿವೆ ಆದರೆ ಹೆಚ್ಚಿನ ಜನರು ಮುಜುಗರ ಅಥವಾ ಸಾಕ್ಷ್ಯಾಧಾರದ ಕೊರತೆಯಿಂದಾಗಿ ದೂರು ದಾಖಲಿಸಲಿಲ್ಲ ಎಂದು ತಿಳಿದುಬಂದಿದೆ.

ಝೋಮ್ಯಾಟೋ ಬಾಯ್ ವೇಷದಲ್ಲಿ Chain Snatchers ಬಲೆಗೆ ಕೆಡವಿದ ಪೊಲೀಸರು

ಮಧ್ಯರಾತ್ರಿಯಲ್ಲಿ ಕಳ್ಳ (Thief)ನೊಬ್ಬ ತನ್ನ ಮನೆಗೆ ನುಗ್ಗಿ ತನ್ನ ಪತ್ನಿಯ ಒಳ ಉಡುಪುಗಳನ್ನು ಕದ್ದಿದ್ದಾನೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ಪೊಲೀಸ್ ವರದಿಯನ್ನು ದಾಖಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. ಆತನ ದೂರಿನ ಮೇರೆಗೆ ಕಾರ್ಯಾಚರಣೆ (Operation) ನಡೆಸಿದ ಪೊಲೀಸರು ಆರೋಪಿಯನ್ನು ಸ್ಥಳೀಯ ನಿವಾಸಿ ಆಕಾಶ್ ವರ್ಮಾ ಎಂದು ಗುರುತಿಸಿದ್ದಾರೆ. ಶೀಘ್ರವೇ ಆರೋಪಿ (Accused)ಯನ್ನು ಹಿಡಿಯುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ, ಮೀರತ್‌ನಲ್ಲೂ ಇದೇ ರೀತಿಯ ಪ್ರಕರಣ ಬಯಲಿಗೆ ಬಂದಿತ್ತು. ಇದರಲ್ಲಿ ಇಬ್ಬರು ಯುವಕರು ಒಣಗಲು ಹಾಕಲಾಗಿದ್ದ ಮಹಿಳೆಯರ ಒಳ ಉಡುಪುಗಳನ್ನು ಕದಿಯಲು ಹೋಗಿ ಸಿಕ್ಕಿಬಿದ್ದಿದ್ದರು. ಕಳ್ಳತನ ಮಾಡುವ ಸಂದರ್ಭದಲ್ಲಿ ಇಂಥಾ ವಿಚಿತ್ರ ಘಟನೆ ಈ ಹಿಂದೆಯೂ ನಡೆದಿದೆ.

ಗೋಡೌನ್‌ನಿಂದ 17 ಲಕ್ಷ ರೂಪಾಯಿ ಮೌಲ್ಯದ ಕ್ಯಾಡ್ಬರಿ ಚಾಕೊಲೇಟ್‌ ಕಳ್ಳತನ..!

ತನ್ನ ಪ್ರೇಯಸಿ ಓಲೈಕೆಗೆ ದುಬಾರಿ ಮೌಲ್ಯದ ಮೊಬೈಲ್‌ ಉಡುಗೊರೆ ನೀಡಲು ಎಲೆಕ್ಟ್ರಾನಿಕ್‌ ಉಪಕರಣ ಮಾರಾಟ ಮಳಿಗೆಯೊಂದರ ಶೌಚಾಲಯದಲ್ಲಿ ರಾತ್ರಿಯಿಡೀ ಅವಿತು ಕುಳಿತು ಮುಂಜಾನೆ ಆ ಅಂಗಡಿಯಲ್ಲಿ ಮೊಬೈಲ್‌ ಕದ್ದು ಪರಾರಿಯಾಗಿದ್ದ ಚಾಲಾಕಿ ಜೆ.ಪಿ.ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಬಿಟಿಎಂ ಲೇಔಟ್‌ನ ಅಬ್ದುಲ್‌ ಮುನ್ನಾಫ್‌ ಬಂಧಿತನಾಗಿದ್ದು, ಆರೋಪಿಯಿಂದ .5 ಲಕ್ಷ ಮೌಲ್ಯದ 6 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ಜೆ.ಪಿ.ನಗರದ 2ನೇ ಹಂತದ ಕ್ರೋಮಾ ಎಲೆಕ್ಟ್ರಾನಿಕ್‌ ಉಪಕರಣ ಮಾರಾಟ ಮಳಿಗೆಯಲ್ಲಿ ಆರೋಪಿ ಈ ಕೃತ್ಯ ಎಸಗಿದ್ದ. ಅಂಗಡಿ ವ್ಯವಸ್ಥಾಪಕರು ನೀಡಿದ ದೂರಿನನ್ವಯ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಅರಳಿದ ಪ್ರೇಮ:
ಬಿಹಾರ ಮೂಲದ ಅಬ್ದುಲ್‌, ಬಿಟಿಎಂ ಲೇಔಟ್‌ನ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ಆತನಿಗೆ ಯುವತಿಯೊಬ್ಬಳು ಪರಿಚಯವಾಗಿದ್ದಳು. ಕ್ರಮೇಣ ಚಾಟಿಂಗ್‌ ಬಳಿ ಆಕೆ ಮೇಲೆ ಅವನಿಗೆ ಪ್ರೇಮವಾಯಿತು. ಹೇಗಾದರೂ ಮಾಡಿ ಗೆಳತಿಯನ್ನು ಓಲೈಸಿಕೊಳ್ಳಬೇಕು ಎಂದು ಭಾವಿಸಿದ ಅಬ್ದುಲ್‌, ಗೆಳತಿಗೆ ದುಬಾರಿ ಮೌಲ್ಯದ ಮೊಬೈಲ್‌ ಉಡುಗೊರೆ ನೀಡಲು ನಿರ್ಧರಿಸಿದ್ದ. ಆದರೆ ಜೇಬಿನಲ್ಲಿ ಬಿಡಿಗಾಸಿರಲಿಲ್ಲ. ಹೀಗಾಗಿ ಜೆ.ಪಿ.ನಗರದ ಕ್ರೋಮಾ ಎಲೆಕ್ಟ್ರಾನಿಕ್‌ ಅಂಗಡಿಗೆ ಮೊಬೈಲ್‌ ಖರೀದಿ ನೆಪದಲ್ಲಿ ತೆರಳಿ ಆ ಮಳಿಗೆಯ ಮಹಿಳೆಯರ ಶೌಚಾಲಯದಲ್ಲಿ ರಾತ್ರಿ ಅವಿತುಕೊಂಡು ಮುಂಜಾನೆ ಅಂಗಡಿ ಬಾಗಿಲು ತೆರೆಯುವ ಹೊತ್ತಿಗೆ ಮೊಬೈಲ್‌ ಕಳ್ಳತನಕ್ಕೆ ಸಂಚು ರೂಪಿಸಿದ.

Follow Us:
Download App:
  • android
  • ios