Asianet Suvarna News Asianet Suvarna News

The great Indian kitchen: ಹೆಸರಿಲ್ಲದವಳ ದಿನವಾರ್ತೆ, ಇದು ಹಲವು ಮನೆಗಳ ಕತೆ

ಅವಳು ಬೆಳಗ್ಗೆಯಿಂದ ರಾತ್ರಿವರೆಗೂ ಮನೆಯ ಗಂಡಸರ ಕ್ಷೇಮಸುಖಕ್ಕಾಗೇ ದುಡಿಯುತ್ತಾಳೆ. ಸದ್ದೇ ಇಲ್ಲದೆ ಹೇಗೆ ಅವಳನ್ನು ಪುರುಷ ಪ್ರಧಾನ ಮನೆಯ ವ್ಯವಸ್ಥೆಗೆ ಒಗ್ಗಿಸಲಾಗುತ್ತದೆ ಎಂಬುದು ಕಂಡೂ ಕಾಣದೆ ನಡೆಯುವ ದೌರ್ಜನ್ಯ.

The great Indian kitchen is a familiar tale of abuse skr
Author
Bangalore, First Published Dec 4, 2021, 1:24 PM IST

ಬೆಳಗ್ಗೆ ಇನ್ನೂ ಪತಿ, ಮಾವ ಗೊರಕೆ ಹೊಡೆವ ಸಮಯ. ಅವಳಾಗಲೇ ಎದ್ದು ತಿಂಡಿ ತಯಾರಿಯಲ್ಲಿ ತೊಡಗುತ್ತಾಳೆ. ಅದರ ಮಧ್ಯೆ ಎದ್ದವರಿಗೆ ಟೀ, ಕಾಫಿ ಮಾಡಿ ಕೊಡುತ್ತಾಳೆ. ತನಗೆ ಕುಡಿಯಲು ಸಮಯ ಸಾಲದೆ ಸುಮ್ಮನಾಗಿ ಮಧ್ಯಾಹ್ನದ ಅಡುಗೆ ತಯಾರಿಗೆ ತೊಡಗುತ್ತಾಳೆ. ಅದರಲ್ಲೂ ಕಲ್ಲಿನಲ್ಲಿ ಅರೆದೇ ಚಟ್ನಿ ಮಾಡಬೇಕು, ಬಸಿದೇ ಅನ್ನ ಮಾಡಬೇಕು, ಆಗಲೇ ರುಚಿ ಎಂಬಂಥ ಗಂಡಸರ ಬೇಡಿಕೆಗಳು. ಪ್ರತಿಯೊಂದನ್ನು ತಿನ್ನುವಾಗಲೂ ಹದ ಹೇಳುವ ಗಂಡಸರು. ಇಷ್ಟೆಲ್ಲ ಆಗುತ್ತಿದ್ದಂತೆ ಅಡುಗೆ ಮನೆ ಕ್ಲೀನ್ ಮಾಡಿಕೊಂಡು ಪಾತ್ರೆ ತೊಳೆಯುತ್ತಾಳೆ. ಮತ್ತೆ ಟೀ ಮಾಡಬೇಕು. ಅಯ್ಯಬ್ಬಾ ಮುಗಿಯಿತೆನ್ನುವಷ್ಟರಲ್ಲಿ ಕೆಟ್ಟು ಸೋರುವ ಅಡುಗೆ ಮನೆ(kitchen)ಯ ಸಿಂಕ್, ಅದನ್ನು ಸರಿಗೊಳಿಸುವಂತೆ ಹೇಳೀ ಹೇಳಿ ಕಡೆಗೆ ತಾನೇ ಸ್ವಚ್ಛಗೊಳಿಸುವ ಪರದಾಟ. ಅದನ್ನೂ ಮಾಡಿಬಿಟ್ಟರೆ ಗುಡಿಸಿ, ಒರೆಸುವ ಕೆಲಸ. ಆಯಿತೆನ್ನುವಷ್ಟರಲ್ಲಿ ಮತ್ತೆ ಕಾಫಿ, ಸಂಜೆ ಕುರುಕಲು ತಿಂಡಿ, ಮತ್ತೆ ರಾತ್ರಿಯ ಅಡುಗೆ(cooking)... 
ಮತ್ತೆ ಮರುಬೆಳಗ್ಗೆ ಇದೇ ದಿನಚರಿ. ಈ ಮಧ್ಯೆ ಆಗಾಗ ಬರುವ ನೆಂಟರಿಷ್ಟರು- ಅವರಿಗಾಗಿ ವಿಶೇಷ ಅಡುಗೆ ಮಾಡಿದಾಗಲೂ ಕೊಡುವ ಬಿಟ್ಟಿ ಸಲಹೆಗಳು..

ಗಂಡಸರು ಮಾತ್ರ ಟೇಬಲ್ ತುಂಬಾ ಗಲೀಜಾಗಿ ಬೀಳಿಸಿಕೊಂಡು ತಿಂದು ತೇಗುತ್ತಾ ತಿಂದ ತಟ್ಟೆಯನ್ನೂ ಎತ್ತದೆ ಎದ್ದು ಹೋಗುವವರು. ಕುಡಿದ ಲೋಟವನ್ನು ಎಲ್ಲೆಂದರಲ್ಲಿ ಇಟ್ಟು ಹೋಗುವವರು. ಸದಾ ಕಾಲ ಫೋನ್‌ನಲ್ಲಿ ಮುಳುಗಿರುವ ಮಾವ, ಯೋಗ(yoga) ಗೀಗ ಮಾಡಿಕೊಂಡು ಹಾಯಾಗಿರುವ ಪತಿರಾಯ. ರಾತ್ರಿ ಊಟವಾಗಿ ಮನೆಯ ಗಂಡಸರೆಲ್ಲ ಕೋಣೆ ಸೇರಿದರೂ ಮುಗಿಯದ ಅಡುಗೆ ಮನೆ ಕೆಲಸ. ಕೋಣೆಗೆ ಹೋಗುತ್ತಿದ್ದಂತೇ ಮತ್ತೆ ಗಂಡನನ್ನು ತೃಪ್ತಿಪಡಿಸೋ 'ಕೆಲಸ'. ತನ್ನ ಈ ಕಷ್ಟವನ್ನು ಅಮ್ಮನಿಗೋ, ಅಕ್ಕನಿಗೋ ಹೇಳಿಕೊಂಡರೆ, ಸೇರಿದ ಮನೆಯ ಸಂಪ್ರದಾಯಕ್ಕೆ ಸರಿಯಾಗಿ ಹೊಂದಿಕೊಂಡು ಹೋಗೆಂಬ ಉಪದೇಶ. 

Taliban bans Forced Marriage: ಸ್ತ್ರೀ ಒಪ್ಪಿಗೆ ಇಲ್ಲದ ಬಲವಂತದ ಮದುವೆ ನಿಷೇಧಿಸಿದ ತಾಲಿಬಾನ್‌

ಅಯ್ಯೋ ಇಲ್ಲಾ ಸ್ವಾಮಿ, ಹೆದರಬೇಡಿ, ನಿಮ್ಮ ಮನೆಯದೋ ಅಥವಾ ಅಕ್ಕಪಕ್ಕದ ಮನೆಯ ಕತೆಯನ್ನೋ ನಾನೇನು ಸಿಸಿ ಕ್ಯಾಮೆರಾ(CC camera)ದಲ್ಲಿ ಕದ್ದು ನೋಡಿ ಹೇಳುತ್ತಿರುವುದಲ್ಲ.. ಇದು ಮಲಯಾಳಂನ 'ದ ಗ್ರೇಟ್ ಇಂಡಿಯನ್ ಕಿಚನ್'(The great Indian kitchen) ಚಿತ್ರ. ಬಹುತೇಕ ಭಾರತೀಯರ ಮನೆಯೊಳಗಿನ ದೈನಂದಿನ ಬದುಕನ್ನು ಲೈವ್ ಬ್ರಾಡ್‌ಕಾಸ್ಟ್(live broadcast) ಮಾಡಿದರೆ ಹೇಗಿರುತ್ತೋ ಹಾಗೆಯೇ ಅನಿಸುವ ಚಿತ್ರ. ಭಾರತೀಯ ಮನೆಗಳು ಇನ್ನೂ ಹೇಗೆ ಪುರುಷ ಪ್ರಧಾನವಾಗಿವೆ ಎಂಬುದನ್ನು ಕೇವಲ ಅಡುಗೆಮನೆಯೊಂದನ್ನು ಇಟ್ಟುಕೊಂಡು ಸ್ಪಷ್ಟವಾಗಿ ಹೇಳುವ ಸಿನಿಮಾ ಇದು. ಇದರಲ್ಲಿ ಒಬ್ಬರ ಹೆಸರೂ ತಿಳಿಯುವುದಿಲ್ಲ. ಆದರೂ, ಈ ಪಾತ್ರಗಳೆಲ್ಲವೂ ಪರಿಚಿತವೆನಿಸುವುದು ಮಾತ್ರ ವಿಪರ್ಯಾಸ!

Women's Health Tips : ಮುಟ್ಟಾದಾಗ ಸೆಕ್ಸೆ ಓಕೇನಾ?

ವಿದೇಶದಲ್ಲಿ ಬೆಳೆದು ಬಂದ, ನೃತ್ಯ(dance) ಎಂಜಾಯ್ ಮಾಡುತ್ತಾ  ಸ್ವಲ್ಪ ಮುಂದುವರಿದ ಅಪ್ಪನ ಮನೆಯಲ್ಲಿ ಆರಾಮಾಗಿ ಬೆಳೆದ ಹುಡುಗಿಯೊಬ್ಬಳು ಸಂಪ್ರದಾಯಬದ್ಧ(traditional) ಮನೆಗೆ ಸೊಸೆಯಾಗಿ ಹೋದಾಗ ಎದುರಿಸುವ ಕಷ್ಟ, ಕಿರಿಕಿರಿಗಳು, ಅವಕ್ಕೆ ಹೊಂದಿಕೊಳ್ಳಲು ಅವಳು ನಡೆಸುವ ಪ್ರಾಮಾಣಿಕ ಪ್ರಯತ್ನ ಎಲ್ಲವೂ ಕಣ್ಣಿಗೆ ರಾಚುವಂತೆ ಚಿತ್ರಿಸಲಾಗಿದೆ. 

The great Indian kitchen is a familiar tale of abuse skr

ಮುಟ್ಟಾದ ಮಹಿಳೆಯು ಮನೆಯ ಸಣ್ಣ ಕತ್ತಲೆ ಕೋಣೆಯಲ್ಲಿ ನೆಲದ ಮೇಲೆ ಮಲಗಿಯೇ ಕಳೆಯಬೇಕು. ಎದ್ದು ಹೊಳೆಯಲ್ಲಿ ಹೋಗಿ ಸ್ನಾನ ಮಾಡಬೇಕು. ತಾನು ಮುಟ್ಟಿದ ಪ್ರತಿಯೊಂದನ್ನೂ ತೊಳೆಯಬೇಕು, ಬಟ್ಟೆಗಳನ್ನು ಯಾರಿಗೂ ಕಾಣದಂತೆ ಒಣಗಿಸಿಕೊಳ್ಳಬೇಕು. ಸದಾ ಫೋನ್‌ನಲ್ಲಿ ಮುಳುಗಿರುವ ಮಾವನಿಗೆ ಬ್ರಶ್ಶಿಗೆ ಪೇಸ್ಟನ್ನು ಕೂಡಾ ಹಾಕಿ ಕುಳಿತಲ್ಲಿಗೇ ಕೈಗೆ ತಂದಿಡಬೇಕು. ಅವಳು ಕೆಲಸಕ್ಕೆ ಸೇರುವುದನ್ನು ತಡೆವ ಮಾವ ಮದುವೆಯಲ್ಲಿ ಬಂದ ಒಡವೆಗಳನ್ನು ಮಾತ್ರ ಕೋಣೆಯಲ್ಲಿ ಭದ್ರವಾಗಿ ತೆಗೆದಿರಿಸುತ್ತಾನೆ. ಅವಳಿಗೆ ಬೆಡ್‌ರೂಂನಲ್ಲಿ ಏನು ಬೇಕೋ ಅದನ್ನು ಕೇಳಿದರೆ ಮಾತಿನಿಂದ ತಿವಿದು ಅವಮಾನಿಸುವ ಗಂಡ. ಗಂಡಸರ ಊಟವಾದ ಮೇಲಷ್ಟೇ ಹೆಂಗಸರು ತಿನ್ನಬೇಕೆಂಬ ಅಲಿಖಿತ ನಿಯಮ. ಪ್ರತಿಯೊಂದರಲ್ಲೂ ಗಂಡಸರ ಕಂಫರ್ಟ್ ಹಾಗೂ ಸುಖವಷ್ಟೇ ಮುಖ್ಯವೆಂದು ನಂಬಿ ಬಾಳಬೇಕೆಂಬ ನೀತಿ. ಕಡೆಗೂ ಆಕೆ ತನ್ನ ತಾಳ್ಮೆಯ ಕಟ್ಟೆಯೊಡೆದು ಗಂಡನ ಮನೆ ಬಿಟ್ಟು ತವರಿಗೆ ಮರಳುತ್ತಾಳೆ. ಅಬ್ಬಾ! ಎಂದು ನಿರಾಳದ ನಿಟ್ಟುಸಿರು ಬಿಡುವ ಮುನ್ನವೇ ಅವಳ ಜಾಗಕ್ಕೆ ಬದಲಿ ಪತ್ನಿ ತರುವ ಗಂಡ. ಮತ್ತದೇ ದೈನಂದಿನ ಬದುಕು ಅವನ ಮನೆಯಲ್ಲಿ ಮುಂದುವರಿಯುತ್ತದೆ. ಅನುಭವಿಸುವ ಹೆಣ್ಣು ಬೇರೆಯಷ್ಟೇ.

ಸಿನಿಮಾದ ಕತೆ ಬಿಡಿ, ಹಾಗೆಯೇ ಯೋಚಿಸಿ ನೋಡಿ- ಈಗಲೂ ಬಹುತೇಕ ಮನೆಗಳಲ್ಲಿ ಹೆಣ್ಣುಮಕ್ಕಳ ಪಾತ್ರವೆಂದರೆ ಅಡುಗೆ ಮಾಡುವುದು, ಸ್ವಚ್ಛ ಮಾಡುವುದು, ಹಾಗೂ ಸೆಕ್ಸ್ ಸ್ಲೇವ್‌(sex slave)ನಂತೆ ಬದುಕುವುದೇ ಆಗಿಲ್ಲವೇ? ಈಗ ಇಂಥವೆಲ್ಲ ಇಲ್ಲ ಎಂದು ನೀವು ವಾದಿಸಬಹುದು. ಹೆಣ್ಮಕ್ಳೇ ಸ್ಟ್ರಾಂಗು ಗುರೂ ಎಂದು ಬಾಯಿಮಾತಿಗೆ ಹೇಳಬಹುದು. ಆದರೂ ಈ ಚಿತ್ರ ನಿಮಗೆ ಫೆಮಿಲಿಯರ್ ಎನಿಸಿದ್ದು ಹೇಗೆ? 
ಹೇಗೆಂದರೆ, ಬದಲಾದ ಕುಟುಂಬಗಳಿಗಿಂತ ಹೀಗೆಯೇ ಇರುವ, ಆದರೆ, ತೋರಿಕೆಯಲ್ಲಿ ಬದಲಾದಂತೆ ಕಾಣುವ ಮನೆಗಳು ನಮ್ಮ ಸುತ್ತಲೇ ಬೇಕಾದಷ್ಟಿವೆ. ಬೇಕಿದ್ದರೆ ನಿಮ್ಮದೇ ಮನೆಯಲ್ಲಿ ಎರಡು ದಿನಕ್ಕೆ ಕ್ಯಾಮೆರಾ ಅಳವಡಿಸಿ ಮೂರನೆಯ ದಿನ ಅದು ಸೆರೆ ಹಿಡಿದ ಚಿತ್ರವನ್ನು ನೀವೇ ನೋಡಿ. ಆಮೇಲೆ ನೀವು ಸುಬುಗರೋ ಅಲ್ಲವೋ ಎಂದು ಪರಾಮರ್ಶಿಸಿಕೊಳ್ಳಿ!

Follow Us:
Download App:
  • android
  • ios