Asianet Suvarna News Asianet Suvarna News

Women's Health Tips : ಮುಟ್ಟಾದಾಗ ಸೆಕ್ಸೆ ಓಕೇನಾ?

ಮುಟ್ಟಿನ ಸಮಯದಲ್ಲಿ ಸೆಕ್ಸ್ ಎಂಬ ವಿಷ್ಯ ಕೇಳಿದ್ರೆ ಜನರು ಮುಖಮುರಿಯುತ್ತಾರೆ. ಆದ್ರೆ ಮುಟ್ಟಿನ ಸಮಯದಲ್ಲಿ ಸೆಕ್ಸ್ ಸಾಕಷ್ಟು ಪ್ರಯೋಜನಕಾರಿ. ಅದರ ಲಾಭವೇನು? ಆ ಸಮಯದಲ್ಲಿ ಏನು ಎಚ್ಚರಿಕೆ ತೆಗೆದುಕೊಳ್ಳಬೇಕು ಗೊತ್ತಾ? ಇಲ್ಲಿದೆ ಅದರ ಬಗ್ಗೆ ಮಾಹಿತಿ.

 

womens health taking care sex health and periods
Author
Bangalore, First Published Dec 3, 2021, 7:53 PM IST

ಮುಟ್ಟು ಒಂದು ನೈಸರ್ಗಿಕ ಕ್ರಿಯೆ. ಮುಟ್ಟಿನ ಮೂರು ದಿನ ಮಹಿಳೆಯರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೆಲವರಿಗೆ ಹೊಟ್ಟೆ ನೋವು,ಕಿಬ್ಬೊಟ್ಟೆ ನೋವು ಕಾಣಿಸಿಕೊಂಡರೆ ಮತ್ತೆ ಕೆಲವರಿಗೆ ಕೈ-ಕಾಲು ಸೆಳೆತ ಕಾಣಿಸಿಕೊಳ್ಳುತ್ತದೆ. ಇನ್ನೂ ಕೆಲ ಮಹಿಳೆಯರಿಗೆ ವಿಪರೀತ ರಕ್ತಸ್ರಾವವಾಗುತ್ತದೆ. ಮೂರು ದಿನಗಳ ಕಾಲ ಯಮ ಯಾತನೆ ಅನುಭವಿಸುವ ಮಹಿಳೆಯರಿದ್ದಾರೆ. ಬೆರಳೆಣಿಕೆಯಷ್ಟು ಮಹಿಳೆಯರಿಗೆ ಮಾತ್ರ ಮುಟ್ಟಿನ ಸಮಯದಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ. ಅಂತವರನ್ನು ಅದೃಷ್ಟವಂತರ ಎನ್ನಬಹುದು. ಮುಟ್ಟು ಕೇವಲ ದೈಹಿಕ ನೋವಿನ ಜೊತೆಗೆ ಮಾನಸಿಕ ಸಮಸ್ಯೆಯಗೂ ಕಾರಣವಾಗುತ್ತದೆ. ಮುಟ್ಟು ಶುರುವಾಗುವ ವಾರದ ಮೊದಲೇ ಕೆಲವು ಮಹಿಳೆಯರು ಕಿರಿಕಿರಿ,ಕೋಪ,ಒತ್ತಡಕ್ಕೆ ಒಳಗಾಗುತ್ತಾರೆ. ಈ ಎಲ್ಲ ಸಮಸ್ಯೆಗಳ ಮಧ್ಯೆ ಶಾರೀರಿಕ ಸಂಬಂಧ ಎಂಬ ಮಾತು ಬಂದಲ್ಲಿ,ಮಹಿಳೆಯರು ದಂಗಾಗುವುದು ಸಹಜ. 

ಶಾರೀರಿಕ ಸಂಬಂಧದಿಂದ(Physical Relatinship) ದೂರವಿರಲು ಮುಟ್ಟಿನ ನೋವು,ಕಿರಿಕಿರಿಯಲ್ಲದೆ ನೈರ್ಮಲ್ಯ ಕೂಡ ಒಂದು ಕಾರಣವಾಗುತ್ತದೆ. ಬಹುತೇಕರಿಗೆ ಮುಟ್ಟಿನ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸುವುದರಿಂದ ಆಗುವ ಲಾಭಗಳು ತಿಳಿದಿಲ್ಲ. ಮುಟ್ಟಿನ ವೇಳೆ ಶಾರೀರಿಕ ಸಂಬಂಧ ಹಿಂಸೆಯೆನಿಸಿದ್ರೂ ಅದರಿಂದ ಸಾಕಷ್ಟು ಲಾಭವಿದೆ. 

ವಿಜ್ಞಾನಿಗಳು ಹೇಳುವುದೇನು? : ವಿಜ್ಞಾನಿಗಳ ಪ್ರಕಾರ,ಮುಟ್ಟಿನ ದಿನಗಳಲ್ಲಿ ಮಹಿಳೆಯರು ಹೆಚ್ಚು ಉತ್ತೇಜಿತರಾಗಿರುತ್ತಾರೆ. ಮೊದಲ ಎರಡು ದಿನ ರಕ್ತಸ್ರಾವ (Bleeding) , ನೋವು (Pain) ,ಕಿರಿಕಿರಿ ಇರುವುದು ಸಾಮಾನ್ಯ. ಆ ಸಮಯದಲ್ಲಿ ಶಾರೀರಿಕ ಸಂಬಂಧ ಬೆಳೆಸದೆ ದೂರ ಇರುವುದು ಒಳ್ಳೆಯದು. ಮೂರನೇ ದಿನ ಸಂಭೋಗ ಬೆಳೆಸಬಹುದು. 

ಸಂಭೋಗದಿಂದ ನೋವು ಕಡಿಮೆ : ಸಂಭೋಗದ (Sexual Intercourse) ನಂತರ ಹಾರ್ಮೋನುಗಳು,ಎಂಡಾರ್ಫಿನ್, ಸ್ಟ್ರೆಸ್ ಬೂಸ್ಟಿಂಗ್ ಕೆಮಿಕಲ್ ಬಿಡುಗಡೆಯಾಗುತ್ತದೆ. ಇವು ಮುಟ್ಟಿನ ಸಮಯದಲ್ಲಿ ಆಗುವ ನೋವನ್ನು ಕಡಿಮೆ ಮಾಡುತ್ತವೆ. ಕಾಲು ಸೆಳೆತ,ಕಿಬ್ಬೊಟ್ಟೆ ನೋವು ಇದರಿಂದ ಕಡಿಮೆಯಾಗುತ್ತದೆ. 

ಮುಟ್ಟಿನ ಅವಧಿ ಕಡಿಮೆ : ಮುಟ್ಟಿನ ದಿನಗಳಲ್ಲಿ ಸಂಭೋಗ ಬೆಳೆಸುವುದರಿಂದ ಜನನಾಂಗದ ಸ್ನಾಯುಗಳು ಸಡಿಲಗೊಳ್ಳುತ್ತವೆ. ಕೊಳಕು ಕಡಿಮೆ ಸಮಯದಲ್ಲಿ ದೇಹದಿಂದ ಹೊರಗೆ ಬರುತ್ತದೆ. ಮುಟ್ಟಿನ ಅವಧಿ ಇದರಿಂದ ಕಡಿಮೆಯಾಗುತ್ತದೆ. 

ಎಚ್ಚರಿಕೆ : ಮುಟ್ಟಿನ ವೇಳೆ ಶಾರೀರಿಕ ಸಂಬಂಧ ಬೆಳೆಸುವ ಮೊದಲು ಎಚ್ಚರಿಕೆ ತೆಗೆದುಕೊಳ್ಳಬೇಕು. ಸುರಕ್ಷತೆ ಈ ವೇಳೆ ಬಹಳ ಮುಖ್ಯವಾಗುತ್ತದೆ. ಶಾರೀರಿಕ ಸಂಬಂಧ ಬೆಳೆಸುವ ವೇಳೆ ಕಾಂಡೋಮ್ ಬಳಕೆ ಮಾಡಬೇಕು. ಇದು ಸೋಂಕಿನ ಅಪಾಯದಿಂದ ರಕ್ಷಣಿಸುತ್ತದೆ.ಸಂಬಂಧದ ನಂತರ ಯೋನಿಯನ್ನು ಸ್ವಚ್ಛ ಮಾಡಬೇಕು. 

ಗರ್ಭಧಾರಣೆ ಅಪಾಯ : ಮುಟ್ಟಿನ ವೇಳೆ ಶಾರೀರಿಕ ಸಂಬಂಧ ಬೆಳೆಸುವುದು ಗರ್ಭಧಾರಣೆ ದೃಷ್ಟಿಯಿಂದ ಉತ್ತಮ ಎಂದು ಕೆಲವರು ನಂಬಿದ್ದಾರೆ. ಗರ್ಭಧಾರಣೆ ಅಪಾಯವಿಲ್ಲ. ಕಾಂಡೋಮ್ ಧರಿಸುವ ಅಗತ್ಯವಿಲ್ಲ ಎಂಬ ತಪ್ಪು ಕಲ್ಪನೆ ಅನೇಕರಲ್ಲಿದೆ. ಸಂಶೋಧನೆಯ ಪ್ರಕಾರ, ಮುಟ್ಟಿನ ವೇಳೆ ಸಂಭೋಗ ಬೆಳೆಸಿದರೆ ಗರ್ಭಧಾರಣೆ ಸಾಧ್ಯತೆಯನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಇತ್ತೀಚಿಗೆ ಟ್ಯಾಂಪೋನ್ (Tamphoon) ಹಾಗೂ ಕಪ್ (Menstrual Cups) ಬಳಕೆ ಹೆಚ್ಚಾಗಿದೆ. ಸಂಭೋಗದ ವೇಳೆ ಇವೆರಡನ್ನೂ ತೆಗೆಯುವ ಅವಶ್ಯಕತೆಯಿದೆ. ಮುಟ್ಟಿನ ವೇಳೆ ಸಂಭೋಗ ಬೆಳೆಸಿ ಮುಜುಗರಕ್ಕೀಡಾಗುವವರು ಅನೇಕರಿದ್ದಾರೆ. ರೂಮಿನಲ್ಲಿ ಸಂಬಂಧ ಬೆಳೆಸುವ ಬದಲು ಶವರ್ ಕೆಳಗೆ ಸಂಬಂಧ ಬೆಳೆಸುವುದು ಯೋಗ್ಯ. ರೂಮಿನಲ್ಲಿ ಸಂಬಂಧ ಬೆಳೆಸುವವರು,ಬೆಡ್ ಶೀಟ್ ಬಣ್ಣವನ್ನು ಗಮನಿಸಬೇಕು. ಪ್ಲಾಸ್ಟಿಕ್ ಕ್ಲಾತ್ ಬಳಸುವುದು ಉತ್ತಮ. ಕೊಳಕು ಕಾಣದ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬೇಕು. ಕೆಲವರಿಗೆ ಮುಟ್ಟಿನ ಮೂರನೇ ದಿನವೂ ಹೆಚ್ಚು ನೋವು ಕಾಡುತ್ತದೆ. ಅಂಥವರು ಶಾರೀರಿಕ ಸಂಬಂಧ ಬೆಳೆಸದೆ ದೂರವಿರುವುದು ಒಳ್ಳೆಯದು. 

ಭಂಗಿ : ಯಾವ ಭಂಗಿ ಉತ್ತಮ ಎಂಬ ಪ್ರಶ್ನೆ ಬಂದಾಗ ತಜ್ಞರು  ಮುಖಾಮುಖಿ ಭಂಗಿಗೆ ಆದ್ಯತೆ ನೀಡಿದ್ದಾರೆ. ಹೆಚ್ಚಿನ ಪ್ಲೋ ಆಗದಂತೆ ಇದು ತಡೆಯುತ್ತದೆ.ಸ್ಪೂನಿಂಗ್ ಹಾಗೂ ಮಿಷನರಿ ಭಂಗಿಯನ್ನೂ ಆಯ್ಕೆ ಮಾಡಿಕೊಳ್ಳಬಹುದು.  
 

Follow Us:
Download App:
  • android
  • ios