Asianet Suvarna News Asianet Suvarna News

Sub Inspector Exam: ಅಮ್ಮ-ಮಗಳೂ ಇಬ್ಬರೂ ಪಾಸ್, ಸಾಧನೆ ಅಂದ್ರೆ ಇದು!

ವರ್ಷ 30 ಆಗ್ತಿದ್ದಂತೆ ಅನೇಕರು ಸಾಹಸಕ್ಕೆ ಕೈ ಹಾಕಲು ಹಿಂದೇಟು ಹಾಕ್ತಾರೆ. ಆದ್ರೆ ಸಾಧಿಸಬೇಕೆಂಬ ಗುರಿಯಿದ್ರೆ ವಯಸ್ಸು ಲೆಕ್ಕಕ್ಕೆ ಬರೋದಿಲ್ಲ. ಇದಕ್ಕೆ ತೆಲಂಗಾಣದ ತಾಯಿ ಉದಾಹರಣೆಯಾದ್ರೆ, ತಾಯಿಯನ್ನೇ ಮಾದರಿಯಾಗಿಟ್ಟುಕೊಂಡ ಮಗಳು ಕೂಡ ಅಮ್ಮನ ದಾರಿ ತುಳಿದಿದ್ದಾಳೆ. 
 

Telangana Mother And Daughter Cleared Sub Inspector Exam
Author
First Published Dec 21, 2022, 3:05 PM IST

ಮನಸ್ಸಿದ್ದರೆ ಮಾರ್ಗ ಎಂಬ ಮಾತಿದೆ. ಸಾಧಿಸುವ ಮನಸ್ಸು ಮಾಡಿದ್ರೆ ಅದಕ್ಕೆ ಯಾವುದೂ ಅಡ್ಡಿಯಾಗಲಾರದು.  ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತೆ. ಇದಕ್ಕೆ ವಯಸ್ಸು ಮುಖ್ಯವಾಗೋದಿಲ್ಲ. ಇದಕ್ಕೆ ತೆಲಂಗಾಣದ ತಾಯಿ ಮತ್ತು ಮಗಳು ಉತ್ತಮ ನಿದರ್ಶನ. ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ತೆಲಂಗಾಣದ ತಾಯಿ-ಮಗಳು ಸಾಧನೆ ಮಾಡಲು ಹೊರಟಿದ್ದಾರೆ. 

ತೆಲಂಗಾಣ (Telangana) ಪೊಲೀಸ್‌ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ (Sub Inspector) ಹುದ್ದೆಯನ್ನು ಇಬ್ಬರೂ ಅಲಂಕರಿಸಲಿದ್ದು, ಅದಕ್ಕೆ ಇನ್ನೊಂದೇ ಮೆಟ್ಟಿಲು ಬಾಕಿಯಿದೆ. ತಾಯಿ ಹಾಗೂ ಮಗಳು ಇಬ್ಬರೂ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ನಡೆದ ದೈಹಿಕ (physical) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ತೆಲಂಗಾಣದ ತಾಯಿ-ಮಗಳು ಜೋಡಿಯ ಯಶಸ್ವಿ ಪಯಣದ ಬಗ್ಗೆ ನಾವಿಂದು ಮಾಹಿತಿ ನೀಡ್ತೆವೆ.

ಸಬ್ ಇನ್ಸ್ಪೆಕ್ಟರ್ ಪರೀಕ್ಷೆ ಬರೆದ ತಾಯಿ – ಮಗಳು ಯಾರು ? : ಮೊದಲೇ ಹೇಳಿದಂತೆ ಇವರು ತೆಲಂಗಾಣ ಮೂಲದವರು. ತೆಲಂಗಾಣದ ಖಮ್ಮಂ ಜಿಲ್ಲೆಯ ನೈಲ್ ಕೊಂಡಪಲ್ಲಿ ಮಂಡಲದ ಚೆನ್ನರಂ ಗ್ರಾಮದ ನಿವಾಸಿಗಳು. ತಾಯಿ ಹೆಸರು ದಾರೆಲ್ಲಿ ನಾಗಮಣಿ. ಅವರ ವಯಸ್ಸು 38 ವರ್ಷ. ಮಗಳ ಹೆಸರು ತ್ರಿಲೋಕಿನಿ. ವಯಸ್ಸು 21 ವರ್ಷ. ಕಠಿಣ ಪರಿಶ್ರಮ ಮತ್ತು ಗುರಿ ಮುಟ್ಟುವ ಉತ್ಸಾಹದಿಂದ ಪೊಲೀಸ್ ನೇಮಕಾತಿ ಫಿಟ್‌ನೆಸ್ ಪರೀಕ್ಷೆಯಲ್ಲಿ ಇಬ್ಬರೂ ತೇರ್ಗಡೆಯಾಗಿದ್ದಾರೆ. ತಾಯಿ ಮತ್ತು ಮಗಳು ಇಬ್ಬರೂ ಶೀಘ್ರದಲ್ಲೇ ಪೊಲೀಸ್ ಸೇವೆಗೆ ಸೇರಲಿದ್ದಾರೆ. ನಾಗಮಣಿ ಮತ್ತು ತ್ರಿಲೋಕಿನಿ ಖಾಕಿ ಸಮವಸ್ತ್ರವನ್ನು ಧರಿಸಿ ಸಬ್ ಇನ್ಸ್ಪೆಕ್ಟರ್ ಹುದ್ದೆ ಅಲಂಕರಿಸಲಿದ್ದಾರೆ. 

ಪೊಲೀಸ್ ಸೇವೆಯಲ್ಲಿದ್ದ ತಾಯಿಯೇ ಸ್ಪೂರ್ತಿ : ಸಬ್ಇನ್‌ಸ್ಪೆಕ್ಟರ್ ಆಗಲು ಬಯಸುತ್ತಿರುವ ತಾಯಿ ನಾಗಮಣಿ, ತೆಲಂಗಾಣ ಪೊಲೀಸ್‌ನಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಗಳು ಸಹ ಬಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಪೊಲೀಸ್ ನೇಮಕಾತಿಗೆ ತಯಾರಿ ಆರಂಭಿಸಿದ್ದರು. ತಾಯಿ ಪೊಲೀಸ್ ಸೇವೆಯಲ್ಲಿದ್ದ ಕಾರಣ ಮಗಳಿಗೂ ಪೊಲೀಸ್ ಸೇವೆ ಮಾಡುವ ಆಸೆ ಇತ್ತು. ಈ ಕಾರಣಕ್ಕಾಗಿ ತ್ರಿಲೋಕಿನಿ ಬಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಪೊಲೀಸ್ ನೇಮಕಾತಿಗೆ ತಯಾರಿ ಆರಂಭಿಸಿದ್ದರು. ನಂತರ ತಾಯಿ ಮತ್ತು ಮಗಳು ಇಬ್ಬರೂ ಪೊಲೀಸ್ ಕವಾಯತು ಮೈದಾನದಲ್ಲಿ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರು.  ಈ ಪರೀಕ್ಷೆಯಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ತಾಯಿ ಮತ್ತು ಮಗಳು ಇಬ್ಬರೂ ದೈಹಿಕ ಪರೀಕ್ಷೆಯನ್ನು ತೇರ್ಗಡೆಯಾಗಿದ್ದಾರೆ.  ತಾಯಿ – ಮಗಳಿಬ್ಬರೂ ಒಟ್ಟಿಗೆ ಖಾಕಿ ಸಮವಸ್ತ್ರ ಧರಿಸಿ ಸಬ್ ಇನ್ಸ್ ಪೆಕ್ಟರ್ ಗಳಾಗುತ್ತಿರುವುದು ಭಾರತಕ್ಕೆ ಹೆಮ್ಮೆಯ ಸಂಗತಿ.

ಡಾಕ್ಟರ್‌ ಆಗೋಕು ಸೈ, ಜನಸೇವೆಗೂ ಜೈ; ಗ್ರಾ.ಪಂ ಚುನಾವಣೆ ಗೆದ್ದ ಎಂಬಿಬಿಎಸ್ ವಿದ್ಯಾರ್ಥಿನಿ

ಎಲ್ಲರಿಗೂ ಮಾದರಿಯಾದ ತಾಯಿ – ಮಗಳು : ನಿರ್ದಿಷ್ಟ ಗುರಿಯಿದ್ದರೆ ಯಾವುದೇ ಕನಸನ್ನಾದ್ರೂ ಸುಲಭವಾಗಿ ಈಡೇರಿಸಿಕೊಳ್ಳಬಹುದು ಎನ್ನುವುದಕ್ಕೆ ಇವರು ಮಾದರಿಯಾಗಿ ನಿಲ್ಲುತ್ತಾರೆ.  

ಕುಟುಂಬಕ್ಕೆ ಆಸರೆಯಾಗಿದ್ದ ತಾಯಿ ನಾಗಮಣಿ : ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ತಾಯಿ ನಾಗಮಣಿ 2005 ರಲ್ಲಿ ಅಂಗನವಾಡಿಯಲ್ಲಿ ಕೆಲಸ ಮಾಡಿದ್ದರು. ನಂತರ 2020 ರಲ್ಲಿ ಅವರು ಗೃಹರಕ್ಷಕರಾಗಿ ಸೇವೆ ಶುರು ಮಾಡಿದ್ದರು. ಹಲವು ಕ್ರೀಡೆಗಳಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿದ್ದ ನಾಗಮಣಿ ಯಾರಿಗೂ ಕಮ್ಮಿ ಇಲ್ಲ ಎಂಬುದನ್ನು ಸಾಭೀತುಪಡಿಸಿದ್ದಾರೆ. ಈಗ ದೈಹಿಕ ಪರೀಕ್ಷೆ ಪಾಸ್ ಆಗಿದ್ದಾರೆ. ಏನೂ ಸಾಧ್ಯವಿಲ್ಲವೆಂದು ಬೇಸರಪಟ್ಟುಕೊಳ್ಳುವ ಅನೇಕ ಭಾರತೀಯ ಮಹಿಳೆಯರಿಗೆ ಇವರು ಸ್ಪೂರ್ತಿಯಾಗಿದ್ದಾರೆ. 

Women Career: ಹಳ್ಳಿಯಲ್ಲಿರೋ ಮಹಿಳೆಯರಿಗೂ ಇದೆ ಹಣ ಸಂಪಾದಿಸುವ ಅವಕಾಶ

ಇನ್ನೊಂದೇ ಮೆಟ್ಟಿಲು : ತಾಯಿ ಮತ್ತು ಮಗಳು ಇಬ್ಬರೂ ಲಿಖಿತ ಪರೀಕ್ಷೆ ಬರೆಯಬೇಕಿದೆ. ಲಿಖಿತ ಪರೀಕ್ಷೆಯಲ್ಲಿ ಪಾಸ್ ಆಗುವ ಭರವಸೆಯನ್ನು ಇಬ್ಬರೂ ಹೊಂದಿದ್ದಾರೆ. ಲಿಖಿತ ಪರೀಕ್ಷೆಯಲ್ಲಿ ಪಾಸ್ ಆದ್ರೆ ಇಬ್ಬರೂ ಸಬ್ ಇನ್ಸ್ಪೆಕ್ಟರ್ ಜವಾಬ್ದಾರಿ ಹೊರಲಿದ್ದಾರೆ.  

Follow Us:
Download App:
  • android
  • ios