Asianet Suvarna News Asianet Suvarna News

ಡಾಕ್ಟರ್‌ ಆಗೋಕು ಸೈ, ಜನಸೇವೆಗೂ ಜೈ; ಗ್ರಾ.ಪಂ ಚುನಾವಣೆ ಗೆದ್ದ ಎಂಬಿಬಿಎಸ್ ವಿದ್ಯಾರ್ಥಿನಿ

ಇವತ್ತಿನ ಕಾಲದಲ್ಲಿ ಯುವಜನತೆ ಏನಿದ್ರೂ ಇಂಜಿನಿಯರಿಂಗ್‌, ಡಾಕ್ಟರ್ ಕಲೀಬೇಕು. ಫಾರಿನ್‌ನಲ್ಲಿ ಸೆಟ್ಲ್‌ ಆಗ್ಬೇಕು ಅಂದ್ಕೊಳ್ತಾರೆ. ಆದ್ರೆ ಇದೆಲ್ಲದರ ನಡುವೆ ಮಹಾರಾಷ್ಟ್ರದಲ್ಲೊಬ್ಬ ಯುವತಿ ಎಂಬಿಬಿಎಸ್  ಕಲಿತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

MBBS student returns from Georgia, wins sarpanch poll Vin
Author
First Published Dec 21, 2022, 10:34 AM IST

ಇವತ್ತಿನ ಕಾಲದಲ್ಲಿ ಯುವಜನತೆ ಏನಿದ್ರೂ ಇಂಜಿನಿಯರಿಂಗ್‌, ಡಾಕ್ಟರ್ ಕಲೀಬೇಕು. ಫಾರಿನ್‌ನಲ್ಲಿ ಸೆಟ್ಲ್‌ ಆಗ್ಬೇಕು ಅಂದ್ಕೊಳ್ತಾರೆ. ಆದ್ರೆ ಇದೆಲ್ಲದರ ನಡುವೆ ಮಹಾರಾಷ್ಟ್ರದಲ್ಲೊಬ್ಬ ಯುವತಿ (Girl) ಎಂಬಿಬಿಎಸ್  ಕಲಿತು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾಳೆ. ಆಕೆಯ ಹೆಸರು ಯಶೋಧರ ಶಿಂಧೆ. 21 ವರ್ಷದ ಯಶೋಧರ, ಜಾರ್ಜಿಯಾದಲ್ಲಿ ವೈದ್ಯಕೀಯ ಪದವಿಯನ್ನು ಓದುತ್ತಿದ್ದಾಗ ಅವಳ ತಂದೆಯಿಂದ ಕರೆ ಬಂತು. ಅದು ಅವಳ ಜೀವನವನ್ನೇ ಸಂಪೂರ್ಣವಾಗಿ ಬದಲಾಯಿಸಿತು.

ಸಾಂಗ್ಲಿ ಜಿಲ್ಲೆಯ ವಡ್ಡಿ ಗ್ರಾಮದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಯಶೋಧರ
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಡ್ಡಿ ಗ್ರಾಮದ ಸರಪಂಚ್ ಹುದ್ದೆಗೆ ಚುನಾವಣೆಗೆ (Election) ಸ್ಪರ್ಧಿಸಲು ಯಶೋಧರ ತಂದೆ ಆಕೆಯನ್ನು ವಿದೇಶದಿಂದ (Foriegn) ಹಿಂತಿರುಗುವಂತೆ ಕೇಳಿಕೊಂಡರು. ಕೂಡಲೇ ಆಕೆ ಎಲ್ಲವನ್ನೂ ಪ್ಯಾಕ್ ಮಾಡಿ ಭಾರತಕ್ಕೆ ಮರಳಿದಳು. ಬಹಳ ಬೇಸರದಿಂದಲೇ ಯಶೋಧರ ಊರಿಗೆ ಮರಳಿದರೂ ಆಕೆ ಖುಷಿಯಾಗುವ ಸರದಿಯೂ ಬಂದಿತ್ತು. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಯಶೋಧರ ಗ್ರಾಮದ ಅಧ್ಯಕ್ಷರಾಗಿ ಆಯ್ಕೆಯಾದರು. 147 ಮತಗಳಿಂದ ನಿಕಟ ಪೈಪೋಟಿಯ ನಂತರ ಯಶೋಧರ ಗೆಲುವು (Win) ಸಾಧಿಸಿದರು. 

Women Career: ಹಳ್ಳಿಯಲ್ಲಿರೋ ಮಹಿಳೆಯರಿಗೂ ಇದೆ ಹಣ ಸಂಪಾದಿಸುವ ಅವಕಾಶ

ಹಳ್ಳಿಯಲ್ಲೇ ಹುಟ್ಟಿ ಬೆಳೆದಿರುವ ಕಾರಣ ಜನರ ಸಮಸ್ಯೆಯ ಬಗ್ಗೆ ತಿಳಿದಿದೆ:
'ನಾನು ಹಳ್ಳಿಯಲ್ಲಿ (Village) ವಾಸವಾಗಿದ್ದೇನೆ, ನನ್ನ ದೊಡ್ಡಪ್ಪ ಮತ್ತು ನನ್ನ ಅಜ್ಜಿ ಇಬ್ಬರೂ 15 ವರ್ಷಗಳಿಂದ ನೆರೆಯ ನರ್ವಾಡ ಗ್ರಾಮದ ಸರಪಂಚ್ ಆಗಿ ಕೆಲಸ ನೀಡಿದ್ದಾರೆ. ಇಲ್ಲಿಯ ಜನರು ನನ್ನ ಕುಟುಂಬದಿಂದ ಯಾರಾದರೂ ಈ ಸ್ಥಾನಕ್ಕೆ ಸ್ಪರ್ಧಿಸಬೇಕೆಂದು ಬಯಸಿದ್ದರು, ಅವರು ಮತ್ತೊಮ್ಮೆ ಅಭಿವೃದ್ಧಿಯನ್ನು ನೋಡುತ್ತಾರೆ ಎಂದು ಆಶಿಸುತ್ತಿದ್ದಾರೆ.' ಎಂದು ಯಶೋಧರ ತಿಳಿಸಿದ್ದಾರೆ.
'ನನ್ನ ಹಳ್ಳಿಯ ಜನರು ತನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು (Trust) ನಾನು ಉಳಿಸಿಕೊಳ್ಳುತ್ತೇನೆ' ಎಂದು ಯಶೋಧರ ಹೇಳಿದರು. 'ನಾನು ಇಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವುದರಿಂದ ನನ್ನ ಹೃದಯದಲ್ಲಿ ಹಳ್ಳಿಗೆ ವಿಶೇಷ ಸ್ಥಾನವಿದೆ, ಇಲ್ಲಿನ ಸಮಸ್ಯೆಗಳು, ಅಗತ್ಯವಿರುವ ಮೂಲಭೂತ ಸೌಕರ್ಯಗಳ ಬಗ್ಗೆ ನನಗೆ ತಿಳಿದಿದೆ, ಮಹಿಳೆಯರು (Women) ಮತ್ತು ಮಕ್ಕಳ ಆರೋಗ್ಯದ ಬಗ್ಗೆ ತುರ್ತು ಗಮನಹರಿಸಬೇಕಾಗಿದೆ' ಎಂದು ಅವರು ಹೇಳಿದರು. 

ಆದರೆ, ಎಂಬಿಬಿಎಸ್ ವಿದ್ಯಾರ್ಥಿಯಾಗಿರುವ ಯಶೋಧರ ತನ್ನ ಅಧ್ಯಯನವನ್ನು ನಿಲ್ಲಿಸಲು ಬಯಸುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ. 'ನಾನು ಪ್ರಸ್ತುತ ನಾಲ್ಕನೇ ವರ್ಷದಲ್ಲಿದ್ದೇನೆ, ನನ್ನ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿ ಕೇವಲ ಒಂದೂವರೆ ವರ್ಷಗಳು ಉಳಿದಿವೆ. ನಾನು ಅದನ್ನು ಆನ್‌ಲೈನ್‌ನಲ್ಲಿ ಮಾಡುತ್ತೇನೆ. ಜಾರ್ಜಿಯಾದ ನನ್ನ ಸ್ನೇಹಿತರು ನನ್ನನ್ನು ಅಭಿನಂದಿಸಿದ್ದಾರೆ. ಮಾತ್ರವಲ್ಲ ಸಾಧ್ಯವಿರುವ ಎಲ್ಲಾ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.. ಸದಾ ವೈದ್ಯನಾಗಬೇಕೆಂಬ ಹಂಬಲವಿದ್ದು, ನನ್ನ ಕನಸನ್ನು ನನಸಾಗಿಸಿಕೊಳ್ಳಲಿದ್ದೇನೆ.ಇದೇ ಸಮಯದಲ್ಲಿ ಸರಪಂಚ್ ಹುದ್ದೆಯು ಕಷ್ಟದಲ್ಲಿರುವ ಜನರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ನನ್ನ ಮುಂದೆ ಇಟ್ಟಿದೆ. ಅದನ್ನು ಸಹ ನೆರವೇರಿಸುತ್ತೇನೆ' ಎಂದು ಅವರು ಹೇಳಿದರು.

Women Welfare : ಸ್ವಾವಲಂಬಿಯಾಗಲು ಮಹಿಳೆಯರಿಗೆ ಸರಕಾರದ ನೆರವು

4,500 ಜನಸಂಖ್ಯೆಯನ್ನು ಹೊಂದಿರುವ ಗ್ರಾಮದಲ್ಲಿ ಮೂಲಭೂತ ಅವಶ್ಯಕತೆಗಳ ಕೊರತೆಯಿದೆ. ಮಗಳು ಚಿಕ್ಕವಳು ಮತ್ತು ಅವಳಿಗೆ  ರಾಜಕೀಯದ ಬಗ್ಗೆ ಹೆಚ್ಚು ತಿಳಿದಿಲ್ಲ. ಆದರೆ ಅವಳಿಗೆ ನಮ್ಮ ಕುಟುಂಬದ ಬೆಂಬಲವಿದೆ. ನನ್ನ ಕುಟುಂಬದ ಸದಸ್ಯರ ಅನುಭವವು ರಾಜಕೀಯ ಅಥವಾ ಅಭಿವೃದ್ಧಿಯ ರಂಗದಲ್ಲಿ ಭವಿಷ್ಯದ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಯಶೋಧರ ಅವರ ತಂದೆ ಹೇಳಿದರು. ಮಹೇಂದ್ರಸಿಂಗ್ ಮತ್ತು ಅಜ್ಜಿ ಮಂದಾಕಿನಿರಾಜೇ ನೇತೃತ್ವದ ಸಮಿತಿಯು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಎಲ್ಲಾ 12 ಸ್ಥಾನಗಳನ್ನು ಗೆದ್ದಿದೆ.

Follow Us:
Download App:
  • android
  • ios