ಗರ್ಭಾವಸ್ಥೆಯಲ್ಲಿ ಕೆಲವು ವಿಚಿತ್ರ ಆರೋಗ್ಯ ಸಮಸ್ಯೆಗಳು ಕಾಡುವುದಿದೆ. ಇನ್ನೂ ಕೆಲವೊಮ್ಮೆ ಪ್ರೆಗ್ನೆನ್ಸಿ ಮಿರಾಕಲ್‌ಗಳೂ ಆಗುತ್ತದೆ. ಇದು ಅಂಥಹದ್ದೇ ಒಂದು ಘಟನೆ, ಇಲ್ಲಿ ಮಹಿಳೆ ಸೂಪರ್ ಫರ್ಟೈಲ್. ಒಂದೇ ತಿಂಗಳಲ್ಲಿ ಎರಡು ಬಾರಿ ಗರ್ಭಿಣಿಯಾಗಿದ್ದಾಳೆ. ಮಾತ್ರವಲ್ಲ ಮುದ್ದಾದ ಮಕ್ಕಳಿಗೆ ಜನ್ಮ ಸಹ ನೀಡಿದ್ದಾರೆ.
ಗರ್ಭಾವಸ್ಥೆ ಪ್ರತಿಯೊಬ್ಬ ಮಹಿಳೆಗೂ ಖುಷಿ ನೀಡುವ ವಿಚಾರ. ಗರ್ಭದೊಳಗಿಂದ ಹೊರಬರುವ ಪುಟ್ಟ ಜೀವವನ್ನು ನೋಡಲು ಎಲ್ಲರೂ ಹಾತೊರೆಯುತ್ತಾರೆ. ಅವಳಿ, ತ್ರಿವಳಿ ಮಕ್ಕಳಾದರಂತೂ ಖುಷಿ ದುಪ್ಪಟ್ಟಾಗುತ್ತದೆ. ಆದರೆ ಎಲ್ಲರಿಗೂ ಮಕ್ಕಳಾಗುವುದಿಲ್ಲ. ಕೆಲವರಿಗೆ ಬಂಜೆತನದ ಸಮಸ್ಯೆ ಕಾಡುತ್ತದೆ. ಇನ್ನು ಕೆಲವೊಮ್ಮೆ ಗರ್ಭಾವಸ್ಥೆಯಲ್ಲಿ ಕೆಲವು ವಿಚಿತ್ರ ಆರೋಗ್ಯ ಸಮಸ್ಯೆಗಳು ಕಾಡುವುದಿದೆ. ಇನ್ನೂ ಕೆಲವೊಮ್ಮೆ ಪ್ರೆಗ್ನೆನ್ಸಿ ಮಿರಾಕಲ್‌ಗಳೂ ಆಗುತ್ತದೆ. ಇದು ಅಂಥಹದ್ದೇ ಒಂದು ಘಟನೆ, ಇಲ್ಲಿ ಮಹಿಳೆ ಸೂಪರ್ ಫರ್ಟೈಲ್. ಒಂದೇ ತಿಂಗಳಲ್ಲಿ ಎರಡು ಬಾರಿ ಗರ್ಭಿಣಿಯಾಗಿದ್ದಾಳೆ. ಮಾತ್ರವಲ್ಲ ಮುದ್ದಾದ ಮಕ್ಕಳಿಗೆ ಜನ್ಮ ಸಹ ನೀಡಿದ್ದಾರೆ.
ಸೋಫಿ ಸ್ಮಾಲ್ ಅವರ ಹೆಣ್ಣುಮಕ್ಕಳು ಬೇರೆ ಬೇರೆ ದಿನಾಂಕಗಳಲ್ಲಿ ಗರ್ಭಧರಿಸಿವೆ ಎಂದು ವೈದ್ಯರು ಕಂಡುಹಿಡಿರು. ಮಾತ್ರವಲ್ಲ ಹುಟ್ಟುವ ಮೊದಲು ಸ್ಕ್ಯಾನ್‌ಗಳಲ್ಲಿ ಮಕ್ಕಳು ವಿಭಿನ್ನ ಗಾತ್ರಗಳಲ್ಲಿರುವುದನ್ನು ನೋಡಿ ಗೊಂದಲಕ್ಕೊಳಗಾದರು. ಮಹಿಳೆ (Woman) 28 ದಿನಗಳ ಅಂತರದಲ್ಲಿ ತನ್ನ ಮಕ್ಕಳಿಗೆ ಗರ್ಭಧರಿಸಿದಳು. ಸೋಫಿ ಸ್ಮಾಲ್ ಮತ್ತು ಪತಿ ಜೊನಾಥನ್ ಪ್ರಗ್ನೆನ್ಸಿಯಲ್ಲಿ ಆಗಿರುವ ಈ ಅದ್ಭುತಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಗರ್ಭಧಾರಣೆಯ ಮೊದಲ ತಿಂಗಳಲ್ಲಿ ಇವುಗಳಿಂದ ದೂರ ಇದ್ರೆ ಮಗು ಆರೋಗ್ಯವಾಗಿರುತ್ತೆ!
ಸೂಪರ್‌ಫೆಟೇಶನ್ ಎಂದು ಕರೆಯಲ್ಪಡುವ ಅಪರೂಪದ ವಿದ್ಯಮಾನ
ಒಂದು ತಿಂಗಳ ಅಂತರದಲ್ಲಿ ಸೂಪರ್‌ಫೆಟೇಶನ್ ಎಂದು ಕರೆಯಲ್ಪಡುವ ಅಪರೂಪದ ವಿದ್ಯಮಾನದಿಂದಾಗಿ, ಈಗಾಗಲೇ ಸೋಫಿ ಗರ್ಭಿಣಿಯಾಗಿದ್ದರೂ ಹೊಸ ಗರ್ಭಧಾರಣೆಯು (Pregnancy) ಸಂಭವಿಸಿತು. ಮೊದಲ ಮಗುವಿಗೆ ಗರ್ಭಿಣಿಯಾದ ನಾಲ್ಕನೇ ವಾರದಲ್ಲಿ ಮಹಿಳೆ ಮತ್ತೊಮ್ಮೆ ಗರ್ಭಿಣಿಯಾದರು. 30 ವರ್ಷದ ಸೋಫಿ ಮಕ್ಕಳಿಗೆ ಹಾಲಿ ಮತ್ತು ಡಾರ್ಸಿ ಎಂದು ಹೆಸರಿಟ್ಟಿದ್ದಾರೆ. ನಾನು ಎರಡು ಬಾರಿ ತಾಯಿಯಾಗಿರುವುದನ್ನು ತಿಳಿದು ಅಚ್ಚರಿಪಟ್ಟೆ. ಇಬ್ಬರು ಮಕ್ಕಳಿಗೆ ಜನ್ಮ (Birth) ನೀಡಿರುವುದು ಖುಷಿ ನೀಡಿದೆ ಎಂದು ಸೋಫಿ ಹೇಳಿದ್ದಾರೆ. ಮೊದಲಿಗೆ ಎಲ್ಲರೂ ಇವರನ್ನು ಅವಳಿ ಮಕ್ಕಳೆಂದು ಅಂದುಕೊಂಡಿದ್ದರು. ಆದ್ರೆ ಇದು ಬೇರೆ ಬೇರೆ ಗರ್ಭಧಾರಣೆಯಿಂದ ಜನಿಸಿದ ಮಕ್ಕಳು (Children) ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಪ್ರಪಂಚದಲ್ಲಿ ಇದು ಅತ್ಯಂತ ಅಪರೂಪದವಾದ ವಿದ್ಯಮಾನವಾಗಿದೆ. ಜಗತ್ತಿನ ಕೇವಲ 0.3% ಗರ್ಭಿಣಿಯರಲ್ಲಿ ಹೀಗಾಗುತ್ತದೆ. ಹೀಗೆ ಆದಾಗಲೂ ಎರಡೂ ಮಕ್ಕಳು ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಎಂದು ವೈದ್ಯರು ತಿಳಿಸಿದ್ದಾರೆ.
ಗರ್ಭಾವಸ್ಥೆಯಲ್ಲಿ ಕಾಡೋ ಹೃದಯ ಸಂಬಂಧಿ ಸಮಸ್ಯೆ: ತಪ್ಪಿಸಲು ಇಲ್ಲಿವೆ ದಾರಿ!
ಬರೋಬ್ಬರಿ 12 ವರ್ಷ ಸತತವಾಗಿ ಗರ್ಭಿಣಿಯಾದ ಮಹಿಳೆ!
ಮಹಿಳೆ (Women) ಕೇವಲ 28 ವರ್ಷಕ್ಕೆ ಒಂಬತ್ತು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅದು ವರ್ಷಕ್ಕೊಂದು ಮಗುವಿನಂತೆ ಆಕೆಗೆ ಬರೋಬ್ಬರಿ 12 ವರ್ಷ ಮಕ್ಕಳಾಗಿತ್ತು. ಕೋರಾ ಡ್ಯೂಕ್ ಎಂದು ಗುರುತಿಸಲ್ಪಟ್ಟ ಮಹಿಳೆ 2001ರಲ್ಲಿ 17ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಗರ್ಭಿಣಿ (Pregnant)ಯಾದರು ಮತ್ತು ನಂತರ ಪ್ರತಿ ವರ್ಷವೂ ಮಗುವಿಗೆ ಜನ್ಮ (Birth) ನೀಡುತ್ತಲೇ ಬಂದರು. ಆಕೆಯ ಕೊನೆಯ ಮಗು 2012 ರಲ್ಲಿ ಜನಿಸಿತು. ಮಹಿಳೆಗೆ ಈಗ 39 ವರ್ಷ ವಯಸ್ಸು. ಸದ್ಯ ಅವರು ನೆವಾಡಾದ ಲಾಸ್ ವೇಗಾಸ್‌ನಲ್ಲಿ ತನ್ನ ಒಂಬತ್ತು ಮಕ್ಕಳು ಮತ್ತು ಗಂಡ ಆಂಡ್ರೆ ಡ್ಯೂಕ್‌ನೊಂದಿಗೆ ವಾಸಿಸುತ್ತಿದ್ದಾರೆ.
ನ್ಯೂಸ್‌ವೀಕ್‌ನ ವರದಿಯ ಪ್ರಕಾರ, ಕೋರಾ ಮತ್ತು ಆಂಡ್ರೆ ಈಗ 23 ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಕೋರಾ ಅವರು ಒಂಬತ್ತು ಮಕ್ಕಳನ್ನು ಹೊಂದಲು ಎಂದಿಗೂ ಯೋಜಿಸಲಿಲ್ಲ ಆದರೆ ಅವರು ತಾಯಿ (Mother)ಯಾಗುವ ಅನುಭವವನ್ನು ಇಷ್ಟಪಡುತ್ತಿದ್ದರು ಎಂದು ತಿಳಿದುಬಂದಿದೆ.'ತಾಯ್ತನ ನನಗೆ ಕಷ್ಟವೆನಿಸಲ್ಲಿಲ್ಲ. ನನ್ನ ಪತಿಯ ನೆರವಿನಿಂದ ಸಾಕಷ್ಟು ಅಡೆತಡೆಗಳನ್ನು ನಿವಾರಿಸಲು ಸಾಧ್ಯವಾಯಿತು' ಎಂದು ಕೋರಾ ಹೇಳಿದರು.
