ಮಾತು ಮಾತಿಗೂ ಸಿಡುಕುವ ಮಧ್ಯ ವಯಸ್ಕ ಮಹಿಳೆ; ಕಾರಣವೇನು?

40 ವರ್ಷ ದಾಟಿದ ಮಹಿಳೆಯರಲ್ಲಿ ಆತ್ಮಹತ್ಯೆಯ ಯೋಚನೆಗಳು ಹೆಚ್ಚುತ್ತವೆ. ಅವರಿಗೆ ಸಣ್ಣ ಪುಟ್ಟ ವಿಷಯಕ್ಕೂ ಕಿರಿಕಿರಿಯಾಗುತ್ತದೆ. ಇದೇಕೆ ಹೀಗಾಗುತ್ತದೆ ಎಂಬುದನ್ನು ಫಾಸ್ಟಿಂಗ್ ಮತ್ತುಹಾರ್ಮೋನ್ ಎಕ್ಸ್‌ಪರ್ಟ್ ಡಾ ಮೈಂಡಿಪೆಲ್ಜ್ ವಿವರಿಸಿದ್ದಾರೆ. 

Suicidal thoughts in mid age women is common reason is here skr

45-55 ಈ ದಶಕದಲ್ಲಿ ಮಹಿಳೆಯರಲ್ಲಿ ಆತ್ಮಹತ್ಯೆಯ ಆಲೋಚನೆಗಳು ಹೆಚ್ಚಾಗಿ ಬರುತ್ತವೆ. ಅವರು ಆತ್ಮಹತ್ಯೆಯ ದಾರಿಯನ್ನೂ ಹಿಡಿಯುತ್ತಾರೆ, ಇದೇಕೆ ಎಂದು ಫಾಸ್ಟಿಂಗ್ ಮತ್ತು ಹಾರ್ಮೋನ್ ಎಕ್ಸ್‌ಪರ್ಟ್ ಡಾ ಮೈಂಡಿಪೆಲ್ಜ್ ಹೇಳುತ್ತಾರೆ.

ಇದೇಕೆ ಹೀಗೆ, ಈ ವಯಸ್ಸಿನಲ್ಲಿ ಅಂಥ ಯೋಚನೆಗಳು ಬರಲು ಕಾರಣವೇನು ಎಂಬುದನ್ನು ಅವರ ವಿವರಿಸುವುದು ಹೀಗೆ; 40 ವರ್ಷವಾಗುತ್ತಿದ್ದಂತೆ ನಮ್ಮ ಸೆಕ್ಸ್ ಹಾರ್ಮೋನ್‌ಗಳಲ್ಲಿ ಇಳಿಕೆಯಾಗುತ್ತದೆ. ಈಸ್ಟ್ರೋಜನ್ ಏರಿಳಿಕೆ ಕಾಣುತ್ತಲೇ ಇರುತ್ತದೆ. ಹಾಗಾಗಿ, ಒಂದು ದಿನ ಈ ಮಹಿಳೆಯನ್ನು ನೋಡಿದರೆ ಎಂಥ ಅದ್ಭುತ ಎಂದು ನಿಮಗನ್ನಿಸಬಹುದು. ಆದರೆ, ಮರುದಿನವೇ ಯಾರಪ್ಪಾ ಇವಳು, ಈಕೆಗೇನಾಗಿದೆ ಎನಿಸಬಹುದು. ಅಂಥಾ ಮೂಡ್ ಸ್ವಿಂಗ್ಸ್ ಆಕೆಯಲ್ಲಿ ಸಾಮಾನ್ಯವಾಗಿರುತ್ತದೆ.

ಇನ್ನು 35ರ ನಂತರ ಪ್ರೊಜೆಸ್ಟೆರೋನ್ ಸಂಖ್ಯೆ ಇಳಿಕೆಯಾಗುತ್ತದೆ. ಇದು ಕಡಿಮೆಯಾದಾಗ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಇಳಿಕೆಯಾಗುತ್ತದೆ. ಆಗ ಸಣ್ಣ ಸಣ್ಣ ವಿಷಯಕ್ಕೂ ಸಿಟ್ಟು ಬರಲಾರಂಭಿಸುತ್ತದೆ. ಮುಂಚೆ ಕಿರಿಕಿರಿಯಾಗದ ವಿಷಯಗಳಿಗೂ ಈಗ ಕಿರಿಕಿರಿಯೆನಿಸುತ್ತದೆ. ನಿಮಗೂ ಈಗೀಗ ಹೀಗೆ ಆಗುತ್ತಿದೆ ಎಂದರೆ ನಿಮಗೆ ಅಗತ್ಯವಿರುವುದು ವಿಶ್ರಾಂತಿ, ಮತ್ತು ಪ್ರೀತಿ ಕಾಳಜಿ ತೋರಿಸುವ ಜೀವ. ಹಾಗಾಗಿ ಮೆನೋಪಾಸ್ ಹತ್ತಿರದಲ್ಲಿದ್ದಾಗ ಪ್ರೀತಿಪಾತ್ರರಿಂದ ಹೆಚ್ಚು ಪ್ರೀತಿ ಬೇಕಾಗುತ್ತದೆ. ಏಕೆಂದರೆ, ಮುಂಚಿನಂತೆ ಎಲ್ಲವನ್ನೂ ಹ್ಯಾಂಡಲ್ ಮಾಡುವ ಮನಸ್ಥಿತಿ ಇರುವುದಿಲ್ಲ. 

ಮೆನೋಪಾಸ್ ಬಳಿಕವಂತೂ ಎಲ್ಲದಕ್ಕೂ ಅಳು ಬರುವುದು, ವಿಷಯಗಳು ಸುಲಭವಾಗಿ ಮರೆತು ಹೋಗುವುದು, ದುಃಖವಾಗುವುದು ಸಾಮಾನ್ಯವಾಗುತ್ತದೆ. 

 

ಸಂಗಾತಿಯ ಕರ್ತವ್ಯ
ಅಂದರೆ, ವಯಸ್ಸಾದಂತೆಲ್ಲ ಮಹಿಳೆಯರಿಗೆ ಬೇಕಾಗುವುದು ಪತಿ, ಮಕ್ಕಳ ಕಾಳಜಿ, ಕೊಂಚ ಪ್ರೀತಿಯ ಮಾತುಗಳು ಮತ್ತು ಅವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವವರು. ಹೆಚ್ಚು ಸಕ್ರಿಯವಾಗಿರಿಸಲು ನೀವು ಅವರನ್ನು ವಾಕ್ ಮಾಡಲು, ಈಜಲು ಅಥವಾ ಯೋಗ ತರಗತಿಯನ್ನು ಪ್ರಯತ್ನಿಸಲು ಪ್ರೋತ್ಸಾಹಿಸಬಹುದು. ಆಲ್ಕೋಹಾಲ್ ಅನ್ನು ಕಡಿಮೆ ಮಾಡುವುದು ಮತ್ತು ಧೂಮಪಾನವನ್ನು ತ್ಯಜಿಸುವುದು ಋತುಬಂಧದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಸಾಕಷ್ಟು ಸಮಯವನ್ನು ಆಕೆಗಾಗಿ ವ್ಯಯಿಸುವುದು ಎಲ್ಲಕ್ಕಿಂತ ದೊಡ್ಡ ಮೆಡಿಸಿನ್. 
ಅಷ್ಟು ನೀವು ಮಾಡಿದಿರಾದರೆ, ಈ ಡೇಂಜರ್ ಝೋನನ್ನು ಆಕೆ ಸುಲಭವಾಗಿ ದಾಟುತ್ತಾಳೆ. 
 

Latest Videos
Follow Us:
Download App:
  • android
  • ios