Success Story: ಭಾರತದ ಮೊದಲ ಮಹಿಳಾ ಮ್ಯೂಜಿಕ್ ತಂಡದ ವಿಶೇಷತೆ ಏನು?
ಭಾರತೀಯ ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತು ಮೂಡಿಸುತ್ತಿದ್ದಾರೆ. ಮ್ಯೂಜಿಕ್ ಬ್ಯಾಂಡ್ ನಲ್ಲೂ ಅವರು ಹಿಂದೆ ಬಿದ್ದಿಲ್ಲ. ಭಾರತದ ಮೊದಲ ಮಹಿಳಾ ಮ್ಯೂಜಿಕ್ ಬ್ಯಾಂಡ್ ಎಲ್ಲರ ಗಮನ ಸೆಳೆಯುತ್ತಿದೆ. ಅದ್ರ ವಿಶೇಷತೆ ಏನು ಎಂಬ ವಿವರ ಇಲ್ಲಿದೆ.
ಮ್ಯೂಜಿಕ್ ಬ್ಯಾಂಡ್ ಎಂದಾಗ ನಮಗೆ ಯುವ ಹುಡುಗರು ಅಥವಾ ಪುರುಷರ ತಂಡ ಕಣ್ಮುಂದೆ ಬರುತ್ತದೆ. ಮ್ಯೂಜಿಕ್ ಬ್ಯಾಂಡ್ ನಲ್ಲಿ ಮಹಿಳೆಯರ ಸಂಖ್ಯೆ ಬಹಳ ಅಪರೂಪ. ಒಂದೋ ಎರಡೂ ಹುಡುಗಿಯರನ್ನು ತಂಡದಲ್ಲಿ ನೋಡ್ಬಹುದು. ಅದೂ ಮದುವೆ ಆಗುವವರೆಗೆ ತಂಡದಲ್ಲಿ ಆಗ ಈಗ ಕಾಣಿಸಿಕೊಳ್ಳುವ ಹುಡುಗಿಯರು ಮದುವೆ ಆದ್ಮೇಲೆ ಸಂಪೂರ್ಣ ಕಾಣೆಯಾಗ್ತಾರೆ. ಮ್ಯೂಜಿಕ್ ಬ್ಯಾಂಡ್ ನಲ್ಲಿ ಹುಡುಗಿಯರು ಪಾಲ್ಗೊಳ್ಳೋದನ್ನು ಪಾಲಕರು ಪ್ರೋತ್ಸಾಹಿಸೋದು ಕೂಡ ಕಡಿಮೆ.
ಈಗ ಸಮಾಜ (Society), ಜನರ ಆಲೋಚನೆ ಬದಲಾಗಿದೆ. ಹುಡುಗಿಯರು ಎಲ್ಲ ಕ್ಷೇತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಪುರುಷರ ಕ್ಷೇತ್ರವನ್ನು ನಿಧಾನವಾಗಿ ಕಬಳಿಸಿಕೊಳ್ತಿದ್ದಾರೆ. ಅದಕ್ಕೆ ಮ್ಯೂಜಿಕ್ (Music) ಬ್ಯಾಂಡ್ ಕೂಡ ಹೊರತಾಗಿಲ್ಲ. ಕೆಲ ದಿನಗಳ ಹಿಂದೆ ಅಜ್ಜಿಯಂದಿರುವ ಮ್ಯೂಜಿಕ್ ಬ್ಯಾಂಡ್ (Band) ಶುರು ಮಾಡಿ, ಪ್ರೇಕ್ಷಕರ ಮನಸ್ಸು ಕದಿಯುತ್ತಿರುವ ಸುದ್ದಿ ಬಂದಿತ್ತು. ಇಂದು ಭಾರತದ ಮೊದಲ ಮಹಿಳಾ ಮ್ಯೂಜಿಕ್ ಬ್ಯಾಂಡ್ ತಂಡದ ಬಗ್ಗೆ ಮಾಹಿತಿ ನೀಡ್ತೇವೆ. ಈ ತಂಡ ತನ್ನ ಭಿನ್ನ ಶೈಲಿಯಿಂದ ಎಲ್ಲರ ಗಮನ ಸೆಳೆಯುತ್ತಿದೆ. ಮಹಿಳೆಯರೇ ಈ ತಂಡದಲ್ಲಿದ್ದು, ಮಹಿಳೆಯರಿಗಾಗಿಯೇ ಈ ತಂಡ ಹೆಚ್ಚು ಶ್ರಮಿಸುತ್ತಿದೆ.
BSFಗೆ ಮೊದಲ ಮಹಿಳಾ ಸ್ನೈಪರ್; ಶಾರ್ಪ್ ಶೂಟಿಂಗ್‌ನಲ್ಲಿ ಇವ್ರನ್ನ ಮೀರಿಸೋರಿಲ್ಲ!
ಮಹಿಳಾ ಮ್ಯೂಜಿಕ್ ಬ್ಯಾಂಡ್ : ಮಹಿಳೆಯರು ನಡೆಸುತ್ತಿರುವ ಈ ಮ್ಯೂಜಿಕ್ ಬ್ಯಾಂಡ್ ಹೆಸರು ಮೇರಿ ಜಿಂದಗಿ. ತಮ್ಮ ಅದ್ಭುತ ಸಂಗೀತದೊಂದಿಗೆ ಜನರನ್ನು ಮಂತ್ರಮುಗ್ಧಗೊಳಿಸುತ್ತಿದೆ. ಸಿನಿಮಾ ಹಾಡು ಅಥವಾ ಮನರಂಜನಾ ಹಾಡುಗಳನ್ನು ಹೇಳುವ ಬಾಯ್ಸ್ ಮ್ಯೂಜಿಕ್ ಬ್ಯಾಂಡ್ ಸಂಖ್ಯೆ ಸಾಕಷ್ಟಿದೆ. ಆದ್ರೆ ಈ ಮೇರಿ ಜಿಂದಗಿ ಮ್ಯೂಜಿಕ್ ಬ್ಯಾಂಡ್ ನಂತೆ ಕೆಲಸ ಮಾಡುವವರು ಅಪರೂಪಕ್ಕೆ ಸಿಗ್ತಾರೆ. ಈ ಬ್ಯಾಂಡ್ ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಿದೆ.
ಮೇರಿ ಜಿಂದಗಿ ಮ್ಯೂಜಿಕ್ ಬ್ಯಾಂಡ್ ಪಶ್ಚಿಮ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ಹುಟ್ಟಿಕೊಂಡಿದೆ. ಐದು ಸದಸ್ಯರು ಈ ತಂಡದಲ್ಲಿದ್ದಾರೆ. ಡಾ. ಜಯ ತಿವಾರಿ, ಪೂರ್ವಿ ಮಾಳವಿಯಾ, ನಿಹಾರಿಕಾ ದುಬೆ, ಮೇಘನಾ ಶ್ರೀವಾಸ್ತವ ಮತ್ತು ಸೌಭಾಗ್ಯ ದೀಕ್ಷಿತ್ ತಂಡದಲ್ಲಿದ್ದಾರೆ. ಲಕ್ನೋ ನಿವಾಸಿ ಡಾ.ಜಯಾ ತಿವಾರಿ ಇದನ್ನು ಹುಟ್ಟುಹಾಕಿದ್ರು. 2010ರಲ್ಲಿ ಮೇರಿ ಜಿಂದಗಿ ಟೀಂ ಶುರುವಾಯ್ತು.
ಮನರಂಜನೆ ಹಾಡುಗಳಿಗೆ ಮೇರಿ ಜಿಂದಗಿ ತಂಡ ಮೀಸಲಾಗಿಲ್ಲ. ಮಹಿಳೆಯರು, ಮಹಿಳೆಯರ ಸಮಸ್ಯೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಶಿಕ್ಷಣ, ಸಾಮಾಜಿಕ ಸಮಸ್ಯೆ, ಹೆಣ್ಣು ಭ್ರೂಣ ಹತ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ತಮ್ಮ ಹಾಡಿನ ಮೂಲಕ ಜನರಿಗೆ ತಿಳಿಸುವುದಲ್ಲದೆ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಡಾ. ಜಯಾ ತ್ರಿವಾರಿ, ಮ್ಯೂಜಿಕ್ ಬ್ಯಾಂಡ್ ನಡೆಸೋದು ಮಾತ್ರವಲ್ಲದೆ ಸಮಾಜ ಸೇವೆ ಮಾಡ್ತಿದ್ದಾರೆ. ಅನೇಕ ಬಡ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಇಂತ ಅಭ್ಯಾಸ ಇರೋ ಮಹಿಳೆಯರಲ್ಲಿ ಹೃದಯಾಘಾತ ಸಮಸ್ಯೆ ಜಾಸ್ತಿ !
ಮೇರಿ ಜಿಂದಗಿ ಬ್ಯಾಂಡ್ ಅನೇಕ ವಿಷ್ಯದಲ್ಲಿ ವಿಶೇಷತೆಯನ್ನು ಪಡೆದಿದೆ. ಇವರು ಎಲ್ಲರು ಬಳಸುವಂತೆ ಸಂಗೀತ ಸಲಕರಣೆ ಬಳಸುವ ಬದಲು ಲಟ್ಟಣಿಗೆ, ಇಕ್ಕುಳ, ಕುಟ್ಟುಗಲ್ಲಿನಂತಹ ಅಡುಗೆಗೆ ಬಳಸುವ ವಸ್ತುಗಳನ್ನು ತಮ್ಮ ಸಂಗೀತದ ವೇಳೆ ಬಳಸ್ತಾರೆ. ಅಡುಗೆ ಮನೆಯಲ್ಲಿರುವ ವಸ್ತುಗಳನ್ನು ಬಳಸಿಕೊಂಡು ಮ್ಯೂಜಿಕ್ ಬ್ಯಾಂಡ್ ಮಾಡುವ ಮೂಲ ಉದ್ದೇಶ, ಗೃಹಿಣಿಯರನ್ನು ಹುರಿದುಂಬಿಸುವುದಾಗಿದೆ ಎಂದು ಡಾ. ಜಯಾ ತ್ರಿವಾರಿ ಹೇಳ್ತಾರೆ.
ಮೇರಿ ಜಿಂದಗಿ ರಾಜಸ್ಥಾನಕ್ಕೆ ಮಾತ್ರ ಸೀಮಿತವಾಗಿಲ್ಲ. 50 ಕ್ಕೂ ಹೆಚ್ಚು ನಗರಗಳಲ್ಲಿ 550 ಕ್ಕೂ ಹೆಚ್ಚು ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಿದೆ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ತಂಡದ ಜೊತೆ ಕೈಜೋಡಿಸಲಿ ಎನ್ನುವ ಆಸೆಯನ್ನು ಈ ಬ್ಯಾಂಡ್ ಹೊಂದಿದೆ.