185 ಜನರ ಪ್ರಾಣ ಉಳಿಸಿದ ಕ್ಯಾಪ್ಟನ್ ಮೋನಿಕಾ ಖನ್ನಾಗೆ ಜಗದ ಮೆಚ್ಚುಗೆ!
ಕ್ಯಾಪ್ಟನ್ ಮೋನಿಕಾ ಖನ್ನಾ ತಮ್ಮ ಕೆಲಸವನ್ನು ಅದ್ಭುತವಾಗಿ ಮಾಡಿದ್ದಾರೆ ಮಾಡಿದ್ದಾರೆ ಎಂದು ವಿಮಾನಯಾನ ತಜ್ಞರು ಪೈಲಟ್ ಅನ್ನು ಶ್ಲಾಘಿಸಿದ್ದಾರೆ. ಪಾಟ್ನಾ ಹಾಗೂ ದೆಹಲಿ ನಡುವೆ ಸ್ಟೈಸ್‌ಜೆಟ್ ಬೋಯಿಂಗ್ 737 ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಅವರು ತುರ್ತು ಭೂಸ್ಪರ್ಶ ಮಾಡಿದ್ದರು.
ಪಾಟ್ನಾ (ಜೂನ್ 20): ಇಂಜಿನ್‌ನಲ್ಲಿ ದೋಷ ಕಾಣಿಸಿಕೊಂಡು ಪಾಟ್ನಾದಿಂದ ದೆಹಲಿಗೆ ಹೊರಟಿಟ್ದ ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನ ( SpiceJet Boeing 737) ಪಾಟ್ನಾ ವಿಮಾನ ನಿಲ್ದಾಣದಲ್ಲಿ (Patna Airport) ತುರ್ತು ಭೂಸ್ಪರ್ಶ ಮಾಡಿತ್ತು. ಈ ವೇಳೆ ಸಮಯಪ್ರಜ್ಞೆ ಮೆರೆದ ವಿಮಾನದ ಕ್ಯಾಪ್ಟನ್ ಮೋನಿಕಾ ಖನ್ನಾಗೆ (Captain Monicaa Khanna) ಈಗ ಮೆಚ್ಚುಗೆಗಳ ಮಹಾಪೂರವೇ ಹರಿದಿದೆ.
ಇಂಜಿನ್ ನಂಬರ್ -1ರಲ್ಲಿ ಸ್ಪಾರ್ಕ್ಸ್ ಬರುತ್ತಿರುವ ಬಗ್ಗೆ ವಿಮಾನದ ಕ್ಯಾಪ್ಟನ್ ಇನ್ ಚಾರ್ಜ್ ಆಗಿದ್ದ ಮೋನಿಕಾ ಖನ್ನಾ ಅವರಿಗೆ ಕ್ಯಾಬಿನ್ ಸಿಬ್ಬಂದಿ ತಿಳಿಸಿದ್ದರು. ಈ ಮಾಹಿತಿಯನ್ನು ಪಡೆದ ಬೆನ್ನಲ್ಲಿಯೇ ಕ್ಯಾಪ್ಟನ್ ಮೋನಿಕಾ ಖನ್ನಾ, ಸ್ಪಾರ್ಕ್ ಬರುತ್ತಿದ್ದ ಇಂಜಿನ್ ನಂ.1 ಅನ್ನು ಸ್ವಿಚ್ ಆಫ್ ಮಾಡಿದ್ದರು. ಬಳಿಕ ಫರ್ಸ್ಟ್ ಆಫೀಸರ್ ಬಲ್ಪ್ರೀತ್ ಸಿಂಗ್ ಭಾಟಿಯಾ (First Officer Balpreet Singh Bhatia) ಅವರೊಂದಿಗೆ ಎಸ್ಜಿ 723 ವಿಮಾನದ ಓವರ್‌ವೇಟ್ ಲ್ಯಾಂಡಿಂಗ್ ಮಾಡುವುದಾಗಿ ಹೇಳಿದ್ದಲ್ಲದೆ, ಅದನ್ನು ಅತ್ಯಂತ ಕೌಶಲದಿಂದ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತುರ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನದಲ್ಲಿದ್ದ ಒಟ್ಟು 185 ಪ್ರಯಾಣಿಕರ ಪೈಕಿ ಯಾರಿಗೂ ಒಂಚೂರು ಗಾಯಗಳಾಗಿರಲಿಲ್ಲ.
ವಿಮಾನವು ಲ್ಯಾಂಡ್ ಮಾಡುವ ವೇಳೆ ಕೇವಲ ಒಂದೇ ಇಂಜಿನ್ ಕಾರ್ಯನಿರ್ವಹಣೆ ಮಾಡುತ್ತಿತ್ತು. ವಿಮಾನ ಲ್ಯಾಂಡ್ ಆದ ಬೆನ್ನಲ್ಲಿಯೇ ಇಂಜಿನಿಯರ್‌ಗಳು ವಿಮಾನದ ಪರಿಶೀಲನೆ ನಡೆಸಿದ್ದಾರೆ. ವಿಮಾನದ ಇಂಜಿನ್‌ಗೆ ಹಕ್ಕಿ ಡಿಕ್ಕಿ ಹೊಡೆದ ಕಾರಣ ಫ್ಯಾನ್ ಬ್ಲೇಡ್ ಮತ್ತು ಇಂಜಿನ್‌ಗೆ ಹಾನಿಯಾಗಿದೆ' ಎಂದು ಸ್ಪೈಸ್‌ಜೆಟ್‌ನ ಫ್ಲೈಟ್ ಕಾರ್ಯಾಚರಣೆಗಳ ಮುಖ್ಯಸ್ಥ ಗುರುಚರಣ್ ಅರೋರಾ ಹೇಳಿದ್ದಾರೆ.
"ಕ್ಯಾಪ್ಟನ್ ಮೋನಿಕಾ ಖನ್ನಾ ಮತ್ತು ಫರ್ಸ್ಟ್ ಆಫೀಸರ್ ಬಲ್ಪ್ರೀತ್ ಸಿಂಗ್ ಭಾಟಿಯಾ ಈ ಘಟನೆಯ ಸಮಯದಲ್ಲಿ ಬಹಳ ಮುತುವರ್ಜಿಯಿಂದ ಕಾರ್ಯನಿರ್ವಹಣೆ ಮಾಡಿದ್ದಾರೆ. ಇಡೀ ಘಟನೆಯ ಉದ್ದಕ್ಕೂ ಅವರು ಶಾಂತವಾಗಿದ್ದರು, ವಿಮಾನ ಹಾಗೂ ಪ್ರಯಾಣಿಕರಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಂಡರು. ಇವರಿಬ್ಬರೂ ಅನುಭವಿ ಅಧಿಕಾರಿಗಳಾಗಿದ್ದು ನಾವು ಅವರ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ಅರೋರಾ ಹೇಳಿದ್ದಾರೆ.
ಕ್ಯಾಪ್ಟನ್ ಮೋನಿಕಾ ಖನ್ನಾ 2018ರಲ್ಲಿ ಸ್ಪೈಸ್ ಜೆಟ್ ಗೆ ಸೇರಿದ್ದರೆ, ಎಮಿರೇಟ್ಸ್ ಏವಿಯೇಷನ್ ವಿವಿಯಿಂದ ಪದವಿ ಪಡೆದ ಬಳಿಕ ಎರಡು ವರ್ಷ ಜೆಟ್ ಏರ್‌ವೇಸ್ ವಿಮಾನ ಕಂಪನಿಯಲ್ಲಿ ಕೆಲಸ ಮಾಡಿದ ಬಳಿಕ, 2019ರಲ್ಲಿ ಸ್ಪೈಸ್‌ಜೆಟ್ ಕಂಪನಿಯನ್ನು ಸೇರಿದ್ದರು.
ಪೈಲಟ್‌ಗಳು 185 ಜೀವಗಳನ್ನು ಉಳಿಸಿದ್ದು ಹೇಗೆ?: ನಾಗರಿಕ ವಿಮಾನಯಾನ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, ಕಾಕ್‌ಪಿಟ್ ಸಿಬ್ಬಂದಿ ಎಂಜಿನ್ ಒಂದಕ್ಕೆ ಹಕ್ಕಿ ಹೊಡೆದಿದೆ ಎಂದು ಶಂಕಿಸಿದ್ದಾರೆ. ಹಾಗಿದ್ದರೂ, ಅವರು ಯಾವುದೇ ಅಸಹಜ ಪರಿಸ್ಥಿತಿಯನ್ನು ಎದುರಿಸದ ಕಾರಣ, ವಿಮಾನ ಟೇಕ್ ಆಫ್ ಆಗಲು ಮುಂದುವರಿದಿತ್ತು.
"ಆ ಬಳಿಕ ಕ್ಯಾಬಿನ್ ಸಿಬ್ಬಂದಿ, ಇಂಜಿನ್ ನಂ.1 ರಿಂದ ಕಿಡಿಗಳನ್ನು ಗಮನಿಸಿದರು. ಅವರು ಇಂಜಿನ್ ಬೆಂಕಿಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನ (SOP) ಅನ್ನು ನಡೆಸಿ ಪೈಲಟ್ ಉಸ್ತುವಾರಿಗೆ ಮಾಹಿತಿ ನೀಡಿದರು, ನಂತರ ಎಂಜಿನ್ ಸ್ಥಗಿತಗೊಳಿಸಲಾಯಿತು. ನಂತರ ಅವರು ವಾಯು ಸಂಚಾರ ನಿಯಂತ್ರಣಕ್ಕೆ PA-PAN ಎಚ್ಚರಿಕೆಯನ್ನು ಸೂಚಿಸಿ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ' ಎಂದು ಹೇಳಿದ್ದಾರೆ.
185 ಪ್ರಯಾಣಿಕರಿದ್ದ SpiceJet ವಿಮಾನದಲ್ಲಿ ಬೆಂಕಿ, ಪಾಟ್ನಾದಲ್ಲಿ ತುರ್ತು ಭೂ ಸ್ಪರ್ಶ
ಪಾಟ್ನಾದಲ್ಲಿ ವಿಮಾನ ಸುರಕ್ಷಿತವಾಗಿ ಇಳಿದ ಬಳಿಕ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಆ ಬಳಿಕ ನಡೆದ ಪರಿಶೀಲನೆಯಲ್ಲಿ ಹಕ್ಕಿಯೊಂದು ಬಡಿದ ಬಳಿಕ ಫ್ಯಾನ್‌ನ ಮೂರು ಬ್ಲೇಡ್ ಗಳಿಗೆ ಹಾನಿಯಾಗಿದೆ ಎಂದು 19 ನಿಮಿಷದ ಆತಂಕಕಾರಿ ವಿಮಾನ ಹಾರಾಟದ ಬಗ್ಗೆ ಸ್ಪೈಸ್ ಜೆಟ್ ಹೇಳಿದೆ. ಖನ್ನಾ ಮತ್ತು ಭಾಟಿಯಾ ಇಬ್ಬರೂ ಡಿಜಿಸಿಎ (DGCA) ಮತ್ತು ಆಂತರಿಕವಾಗಿ ಸ್ಪೈಸ್ ಜೆಟ್ ನಡೆಸಿದ ತನಿಖೆಗೆ ಸೇರಿಕೊಂಡಿದ್ದಾರೆ. ಮುಂದಿನ ಕೆಲವು ದಿನಗಳವರೆಗೆ ವಿಮಾನ ಕಾರ್ಯಾಚರಣೆಗಳಿಗೆ ಅವರನ್ನು ನಿಯೋಜಿಸಲಾಗುವುದಿಲ್ಲ.
ಖಾಲಿ ಫ್ಲೈಟ್‌ನಲ್ಲಿ Mera Yaar ಹಾಡಿಗೆ ನೃತ್ಯ ಮಾಡಿದ ಗಗನಸಖಿ.... ವಾಹ್ ಎಂದ ನೆಟ್ಟಿಗರು
"ಕ್ಯಾಪ್ಟನ್ ಮೋನಿಕಾ ಖನ್ನಾ ಉತ್ತಮ ಕೆಲಸ ಮಾಡಿದ್ದಾರೆ. ಪಾಟ್ನಾ ಅತ್ಯುತ್ತಮ ಸಮಯದಲ್ಲೂ ಒಂದು ದುಃಸ್ವಪ್ನ ವಿಮಾನ ನಿಲ್ದಾಣವಾಗಿದೆ ಮತ್ತು ಅಂತಹ ಕಷ್ಟಕರ ಸಂದರ್ಭಗಳಲ್ಲಿ ಈ ನಿರ್ಣಾಯಕ ವಿಮಾನ ನಿಲ್ದಾಣದಲ್ಲಿ ಓವರ್ ವೇಟ್ ಲ್ಯಾಂಡಿಂಗ್ ಅನ್ನು ಶ್ಲಾಘಿಸಲು ಯೋಗ್ಯವಾಗಿದೆ. ದಶಕಗಳಿಂದ, ಪಾಟ್ನಾ ಮತ್ತೊಂದು ವಿಮಾನ ನಿಲ್ದಾಣವನ್ನು ಪಡೆಯುತ್ತದೆ ಎಂದು ನಾವು ಕೇಳುತ್ತಲೇ ಇದ್ದೇವೆ ಆದರೆ ಕೇವಲ ಮಾತಾಗಿಯೇ ಉಳಿದಿದೆ" ಎಂದು ಭಾರತೀಯ ಉನ್ನತ ವಿಮಾನಯಾನ ಸಂಸ್ಥೆಯ ಹಿರಿಯ ಕಮಾಂಡರ್ ಒಬ್ಬರು ಹೇಳಿದ್ದಾರೆ.