ಖಾಲಿ ಫ್ಲೈಟ್‌ನಲ್ಲಿ Mera Yaar ಹಾಡಿಗೆ ನೃತ್ಯ ಮಾಡಿದ ಗಗನಸಖಿ.... ವಾಹ್‌ ಎಂದ ನೆಟ್ಟಿಗರು

  • ಖಾಲಿ ಫ್ಲೈಟ್‌ನಲ್ಲಿ ಗಗನಸಖಿಯ ಜಬರ್‌ದಸ್ತ್‌ ನೃತ್ಯ 
  • ಧವನಿ ಭಾನುಶಾಲಿ ಅವರ ಮೆರಾ ಯಾರ್‌ ಹಾಡಿಗೆ ಡಾನ್ಸ್
  • ವಾಹ್‌ ಎಂದ ನೆಟ್ಟಿಗರು
     
Spice Jet Air Hostess Dances in Empty Flight to Dhavi Bhanushalis Song Mera Yaar akb

ಮುಂಬೈ(ಡಿ.19): ಸ್ಪೈಸ್‌ ಜೆಟ್‌ (SpiceJet Air) ಗಗನಸಖಿಯೊಬ್ಬರು ಧವನಿ ಭಾನುಶಾಲಿ(Dhvani Bhanushali) ಅವರ ಮೆರಾ ಯಾರ್‌(Mera Yaar) ಹಾಡಿಗೆ ಖಾಲಿ ವಿಮಾನದಲ್ಲಿ ಜಬರ್‌ದಸ್ತ್‌ ಆಗಿ ನೃತ್ಯ ಮಾಡಿದ್ದು ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಿಂದೆಯೂ ಈ ಸ್ಪೈಸ್‌ಜೆಟ್‌ ಗಗನಸಖಿ ಉಮಾ ಮೀನಾಕ್ಷಿ (Uma Meenakshi), ನವ್ರೈ ಮಾಜಿ ಹಾಗೂ ಲೇಜಿ ಲಾಡ್‌ ಹಾಡುಗಳಿಗೆ  ನೃತ್ಯ ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. ಅವುಗಳಿಗೂ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಮಾಡಿರುವ ವಿಡಿಯೋದಲ್ಲಿ ಈ ಗಗನಸಖಿ ಧವನಿ ಭಾನುಶಾಲಿ ( Dhvani Bhanushali) ಹಾಗೂ ಆಶ್‌ ಕಿಂಗ್‌ (Ash King) ಅವರ ಮೆರಾ ಯಾರ್‌ ಹಾಡಿಗೆ ಇವರು ಡಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, 3,500 ಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ. 

ನನಗೆ ಈ ಹಾಡಿನ ಮೇಲೆ ಪ್ರೀತಿಯಾಗಿದೆ ಎಂದು ಶೀರ್ಷಿಕೆ ನೀಡಿ ತಮ್ಮ  yamtha.uma ಹೆಸರಿನಲ್ಲಿರುವ ಇನ್ಸ್ಟಾಗ್ರಾಮ್‌ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ. 
ಇವರು ಖಾಲಿ ವಿಮಾನದಲ್ಲಿ ಬಿಂದಾಸ್‌ ಆಗಿ ಸ್ಟೆಪ್‌ ಹಾಕುತ್ತಿದ್ದರೆ, ಉಮಾ  ಮೀನಾಕ್ಷಿ ಅವರ ಸಹೋದ್ಯೋಗಿಗಳು ಇವರ ಸುಂದರವಾದ ನೃತ್ಯವನ್ನು ಚಿತ್ರೀಕರಿಸಿದ್ದಾರೆ. ಇದನ್ನು ಸಾಕಷ್ಟು ಜನ ಲೈಕ್‌ ಮಾಡಿದ್ದು,  ಉಮಾ ಅವರ ನೃತ್ಯದ ಜೊತೆ ಅವರ ಎಕ್ಸ್‌ಪ್ರೆಶನ್‌ ಅನ್ನು ಕೂಡ ತುಂಬಾ ಇಷ್ಟ ಪಡುತ್ತಿದ್ದಾರೆ.  ಇದಕ್ಕೆ ಕೆಲವರು ಸೂಪರ್ ಎಂದು ಕಾಮೆಂಟ್‌ ಮಾಡಿದ್ದರೆ ಮತ್ತೂ ಕೆಲವರು ಈ ನೃತ್ಯ ನೋಡಿ ನಮಗೆ ನಿಮ್ಮ ಮೇಲೆ ಕೃಶ್‌ ಆಗಿದೆ ಎಂದು ಹೇಳಿದ್ದಾರೆ. ಮತ್ತೂ ಕೆಲವರು ಬ್ಯೂಟಿಫುಲ್‌ ಹಾಗೂ ಹಾಟ್‌ ಆಗಿದೆ ಎಂದು ಹೇಳಿದ್ದರೆ, ಇವರ ಡಾನ್ಸ್‌ ನೋಡಿ ಫುಲ್‌ ಫಿದಾ ಆದ ಹುಡುಗನೊಬ್ಬ ನಿಮಗೆ ಬಾಯ್‌ಫ್ರೆಂಡ್‌ ಇದ್ದಾನೆಯೇ ಎಂದೆಲ್ಲಾ ಪ್ರಶ್ನಿಸಿದ್ದಾನೆ. 

 
 
 
 
 
 
 
 
 
 
 
 
 
 
 

A post shared by Uma Meenakshi (@yamtha.uma)

 

ಈ ಹಿಂದೆ ಕಿಡಿ ವೈರಲ್ ಸಾಂಗ್ ಚಟ್‌ ಇಟ್‌ಗೆ ಇಂಡಿಗೋ ಗಗನಸಖಿ ಒಬ್ಬರು ಡ್ಯಾನ್ಸ್ ಮಾಡಿದ್ದರು. ಈ ಡಾನ್ಸ್‌ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಬಾಲಿವುಡ್ ಸೆಲೆಬ್ರಿಟಿಗಳಿಂದ ಹಿಡಿದು ಸೋಷಿಯಲ್ ಮೀಡಿಯಾ ಬಳಕೆದಾರರು ಕೂಡ ಈ ಹಾಡಿನ ಹಿಂದೆ ಬಿದ್ದಿದ್ದರು. ಈ ವಿಡಿಯೋವನ್ನು 550 ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ ಮಾಡಿದ್ದರು. ವೃಷ್ ಪಸ್ತೆಲ್ ಎನ್ನುವ ಗಗನಸಖಿ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಶೇರ್ ಮಾಡಿದ್ದು ನಂತರ ಎಲ್ಲೆಡೆ ವೈರಲ್‌ ಆಗಿತ್ತು. 

SpiceJet air hostess: ಲೇಜಿ ಲಾಡ್‌ ಹಾಡಿಗೆ ಡ್ಯಾನ್ಸ್ ಮಾಡಿದ ಸ್ಪೈಸ್ ಜೆಟ್ ಗಗನಸಖಿಯ ವಿಡಿಯೋ ವೈರಲ್

ಮೊದಲೆಲ್ಲಾ ನಮ್ಮಲ್ಲಿ ಏನೇ ಪ್ರತಿಭೆಗಳಿದ್ದರೂ ಪ್ರದರ್ಶಿಸುವ ಅವಕಾಶ ಸಿಗಲಿಲ್ಲ. ನಮ್ಮ ಪ್ರತಿಭೆಗೆ ತಕ್ಕ ವೇದಿಕೆ ಸಿಗಲಿಲ್ಲ ಎಂಬ ಕೊರಗು ಅನೇಕರಲ್ಲಿ ಇತ್ತು.  ಆದರೆ ಈಗ ಹಾಗಿಲ್ಲ. ಕಾಲ ಬದಲಾಗಿದೆ. ಯಾರೂ ನಿಮಗೆ ಅವಕಾಶ ನೀಡದೇ ಇದ್ದರೂ  ಒಂದು ಸ್ಮಾರ್ಟ್‌ ಫೋನ್‌, ಸೋಶಿಯಲ್‌ ಮೀಡಿಯಾ ಅಕೌಂಟ್‌ ನಿಮ್ಮ ಬಳಿ ಇದ್ದರೆ ಸಾಕು. ನೀವು ಒಳ್ಳೆ ವೇದಿಕೆಗಾಗಿಯೂ ಯಾರದಾರೂ ಅವಕಾಶ ನೀಡುತ್ತಾರೋ ಎಂದು ಯಾರಿಗೂ ಕಾಯುವ ಅಗತ್ಯವಿಲ್ಲ. ನಿಮ್ಮ ಪ್ರತಿಭೆಯನ್ನು ರೆಕಾರ್ಡ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಾಕಿದರೆ ಸಾಕು. ನಿಮ್ಮ ಪ್ರತಿಭಾ ಪ್ರದರ್ಶನ ಚೆನ್ನಾಗಿದ್ದರೆ  ಸಾಮಾಜಿಕ ಜಾಲತಾಣಗಳೇ ನಿಮಗೆ ಅವಕಾಶ ಒದಗಿಸುವುದು. ಪ್ರಚಾರ, ಸನ್ಮಾನ ಮೆಚ್ಚುಗೆಗಳು ನಿಮ್ಮನರಸಿ ಬರುವವು. 

ಖಾಲಿ ಫ್ಲೈಟ್‌ನಲ್ಲಿ ಟಚ್ ಇಟ್ ಸಾಂಗ್‌ಗೆ ಗಗನ ಸಖಿ ಡ್ಯಾನ್ಸ್

Latest Videos
Follow Us:
Download App:
  • android
  • ios