Winter Care: ನಿಮ್ಮ ಮೇಕಪ್‌ನಿಂದಲೇ ಚರ್ಮ ಒಣಗುತ್ತಿರಬಹುದು, ಎಚ್ಚರ!
ಚಳಿಗಾಲದಲ್ಲಿ ಮುಖ ಹಾಗೂ ದೇಹದ ಚರ್ಮ ಶುಷ್ಕವಾಗುತ್ತದೆ. ಮುಖವಂತೂ ನೆರಿಗೆ ಮೂಡಿ ಶುಷ್ಕವಾಗುವುದು ಸಾಮಾನ್ಯ. ಈ ದಿನಗಳಲ್ಲಿ ಐದು ಅಂಶಗಳನ್ನು ಒಳಗೊಂಡಿರುವ ಪ್ರಸಾಧನಗಳ ಬಳಕೆಯಿಂದ ದೂರವಿರಬೇಕು.
ಏನೇ ಪ್ರಯತ್ನ ಮಾಡಿದರೂ ಚಳಿಗಾಲ(Winter)ದಲ್ಲಿ ಮುಖದ ಚರ್ಮ (Skin) ಸ್ವಲ್ಪ ಕಳೆಗುಂದುತ್ತದೆ. ಶುಷ್ಕ (Dry) ವಾತಾವರಣಕ್ಕೆ ತ್ವಚೆಯಲ್ಲಿನ ತೈಲದಂಶ (Oily) ಆರಿಹೋಗಿ ಮುಖದಲ್ಲಿ ನೆರಿಗೆ ಬೀಳುತ್ತದೆ. ಎಲ್ಲಾದರೂ ಕಾರ್ಯಕ್ರಮ, ಮದುವೆಗಳಿಗೆ ಹೋಗಬೇಕೆಂದರೆ ಮುಖದ ಸೌಂದರ್ಯ(Beauty)ದ ಕುರಿತು ಚಿಂತಿಸುವಂತಾಗುತ್ತದೆ.
ಚಳಿಗಾಲದಲ್ಲಿ ಮುಖದ ತ್ವಚೆಯನ್ನು ಆರೋಗ್ಯವಾಗಿಟ್ಟುಕೊಳ್ಳುವಲ್ಲಿ ನಾವು ಉಪಯೋಗಿಸುವ ಕೆಲವು ಸೌಂದರ್ಯ ಪ್ರಸಾಧನಗಳ (Beautycare Products) ಕೊಡುಗೆಯೂ ಇದೆ. ಚಳಿಗಾಲದಲ್ಲಿ ತೈಲದಂಶ ಹೆಚ್ಚಿರುವ ಜಿಡ್ಡಿನಂತಹ ಪ್ರಸಾಧನಗಳ ಬಳಕೆ ಸೂಕ್ತ. ಆದರೆ, ಕೆಲವು ಪ್ರಸಾಧನಗಳಲ್ಲಿರುವ ಹಲವು ಅಂಶಗಳು ಚರ್ಮ ಮತ್ತು ಕೂದಲಿಗೆ ಹಾನಿ ಉಂಟುಮಾಡುತ್ತವೆ. ಹೀಗಾಗಿ, ಆ ಅಂಶಗಳನ್ನು ಹೊಂದಿರದ ಪದಾರ್ಥಗಳನ್ನು ಮಾತ್ರ ಬಳಕೆ ಮಾಡುವುದು ಈ ಸಮಯದಲ್ಲಿ ಅತ್ಯಗತ್ಯ. ಕೆಲವು ನಿಮ್ಮ ಫೇವರಿಟ್ ಪ್ರಸಾಧನಗಳೂ ಆಗಿರಬಹುದು. ಆದರೂ ಅವುಗಳನ್ನು ಚಳಿಗಾಲದಲ್ಲಿ ದೂರವಿಡುವುದು ಮುಖದ ಚರ್ಮ ಹಾಗೂ ಕೂದಲಿನ ಆರೋಗ್ಯದ ದೃಷ್ಟಿಯಿಂದ ಉತ್ತಮ. ಹಾಗಿದ್ದರೆ ಆ ಅಂಶಗಳಾವುವು?
• ಕೂದಲಿಗೆ ಕಲರಿಂಗ್ (Coloring) ಮತ್ತು ಮುಖಕ್ಕೆ ಬ್ಲೀಚ್ (Bleach)
ಯಾವುದಾದರೂ ಫಂಕ್ಷನ್ ಇರುವಾಗ ಹೇರ್ ಕಲರಿಂಗ್, ಮುಖಕ್ಕೆ ಬ್ಲೀಚ್ ಮಾಡಿಸಿಕೊಳ್ಳುವುದು ಸಾಮಾನ್ಯ. ಮುಖಕ್ಕೆ ಬ್ಲೀಚ್ ಮಾಡಿಸಿಕೊಂಡಾಕ್ಷಣ ತ್ವಚೆ ಫ್ರೆಶ್ ಅನ್ನಿಸಿದರೂ ಬಳಿಕ ಸಿಕ್ಕಾಪಟ್ಟೆ ಶುಷ್ಕವಾಗುತ್ತದೆ. ಕೂದಲಿಗೆ ಕಲರಿಂಗ್ ಮಾಡುವುದರಿಂದ ಎಣ್ಣೆಯಂಶವನ್ನು ಕಳೆದುಕೊಂಡು ಮತ್ತಷ್ಟು ಬಡವಾಗುತ್ತದೆ.
• ಪೆಟ್ರೋಲಿಯಂ ಜೆಲ್ (Petrolium) ಬಳಕೆ ಬೇಡ
ಚಳಿಗಾಲದಲ್ಲಿ ಮುಖ ಹಾಗೂ ಕೈಕಾಲುಗಳಿಗೆ ಪೆಟ್ರೋಲಿಯಂ ಜೆಲ್ ಬಳಕೆ ಮಾಡುವವರೂ ಸಾಕಷ್ಟಿದ್ದಾರೆ. ಆದರೆ ಇದರಿಂದ ಚರ್ಮಕ್ಕೆ ಹೆಚ್ಚಿನ ಹಾನಿಯಾಗುವುದಿಲ್ಲವಾದರೂ ಮೊಡವೆಯಿದ್ದರೆ ಸಮಸ್ಯೆ ಆಗಬಲ್ಲದು. ಏಕೆಂದರೆ, ಈ ಜೆಲ್ ಗಳು ಮೊಡವೆ(Acne)ಯ ರಂಧ್ರ(Pore)ಗಳನ್ನು ಮುಚ್ಚಿಬಿಡುತ್ತವೆ. ಇದರಿಂದ ಮೊಡವೆಯ ಕಲೆಗಳು ಉಳಿದುಕೊಳ್ಳಬಹುದು.
• ಬಾರ್ ಸೋಪ್ (Bar Soap)ನಿಂದ ದೂರವಿರಿ
ಬಾರ್ ಸೋಪ್ ಗಳಲ್ಲಿರುವ ಕೆಲವು ಅಂಶಗಳು ಚರ್ಮವನ್ನು ಶುಷ್ಕವಾಗಿಸುವ ಗುಣ ಹೊಂದಿವೆ. ಚಳಿಗಾಲದಲ್ಲಿ ಇವುಗಳನ್ನು ಬಳಕೆ ಮಾಡುವುದರಿಂದ ಚರ್ಮದಲ್ಲಿರುವ ತೈಲದಂಶ ಆರಿಹೋಗಿ ಬಿರುಸಾಗುತ್ತದೆ. ಸಾಮಾನ್ಯವಾಗಿ ಎಲ್ಲ ಸೋಪ್ ಗಳಲ್ಲಿರುವ ಸೋಡಿಯಂ ಲಾರಿಲ್ ಸಲ್ಫೇಟ್ (Sodium Lauryl Sulphate) ಎನ್ನುವ ಅಂಶದಿಂದ ಮುಖದ ಚರ್ಮ ಶುಷ್ಕವಾಗುತ್ತದೆ. ಅಸಲಿಗೆ ಈ ಅಂಶದಿಂದಲೇ ದೇಹದ ಹಾಗೂ ಮುಖದ ಜಿಡ್ಡು ಹೋಗುತ್ತದೆ. ಆದರೆ, ಚಳಿಗಾಲದಲ್ಲಿ ಸೋಪನ್ನು ನೇರವಾಗಿ ಮುಖಕ್ಕೆ ಹಚ್ಚಬಾರದು.
Business Woman : ಬೇರೆಯವರ ವಾರ್ಡ್ರೋಬ್ ಕ್ಲೀನ್ ಮಾಡಿ ಗಳಿಸ್ತಾಳೆ 50 ಸಾವಿರ..!
• ಆಸ್ಟ್ರಿಂಜೆಂಟ್ಸ್ (Atringents)
ಶಾಂಪೂವಿನಂತಹ ಸ್ಕಿನ್ ಕೇರ್ (Skin Care) ಪ್ರಸಾಧನಗಳನ್ನು ಆಸ್ಟ್ರಿಂಜೆಂಟ್ಸ್ ಎನ್ನಲಾಗುತ್ತದೆ. ಅಧಿಕ ಜಿಡ್ಡಿನಂಶ ನಿವಾರಿಸಲು, ಚರ್ಮದ ರಂಧ್ರ ಬಿಗಿಯಾಗಲು ಹಾಗೂ ಮೇಕಪ್ ಅನ್ನು ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಮುಖಕ್ಕೆ ಬಳಸುವ ಟೋನರ್ ನಂತೆಯೇ ಬಹುತೇಕ ಅಂಶ ಹೊಂದಿರುತ್ತದೆ. ಬೇಸಿಗೆ ಸಮಯದಲ್ಲಿ ಹೆಚ್ಚಿನ ಜಿಡ್ಡಿನಂಶ ತೆಗೆಯಲು ಇದು ಉತ್ತಮ. ಸಾಮಾನ್ಯವಾಗಿ ಇದರಲ್ಲಿ ಆಲ್ಕೋಹಾಲ್ (Alcohal) ಅಂಶವಿರುತ್ತದೆ. ಇದು ಚರ್ಮವನ್ನು ಶುಷ್ಕಗೊಳಿಸುತ್ತದೆ.
ಕೈಕಾಲು ಗಟ್ಟಿಯಿರುವಾಗಲೇ ಕಾಶಿಗೆ ಹೋಗಿ: Sonu Gowda
• ಪರಿಮಳಭರಿತ (Fragrance) ಪ್ರಸಾಧನಗಳು
ಚಳಿಗಾಲದಲ್ಲಿ ಪರಿಮಳರಹಿತ ಪ್ರಸಾಧನಗಳನ್ನು ಬಳಕೆ ಮಾಡುವುದು ಸೂಕ್ತ. ಏಕೆಂದರೆ, ಸಿಂಥೆಟಿಕ್ ಪರಿಮಳಭರಿತ ಪ್ರಸಾಧನಗಳು ಚರ್ಮದ ಕಿರಿಕಿರಿಯನ್ನು ಹೆಚ್ಚಿಸುತ್ತವೆ. ಒಣಚರ್ಮದವರಂತೂ ಇವುಗಳಿಂದ ದೂರವಿರಲೇಬೇಕು. ಒಮ್ಮೊಮ್ಮೆ ನೈಸರ್ಗಿಕ ತೈಲಗಳನ್ನು ಒಳಗೊಂಡಿರುವ ಗುಣಮಟ್ಟದ ವಸ್ತುಗಳನ್ನು ಬಳಕೆ ಮಾಡಿದರೂ ಚರ್ಮ ಸೂಕ್ಷ್ಮವಾಗಿ ಸ್ಪಂದಿಸುತ್ತದೆ. ಹೀಗಾಗಿ, ಸೆಂಟ್, ಬಾಡಿಯೋಡರ್ ಇವುಗಳನ್ನು ಈ ಸಮಯದಲ್ಲಿ ಹೆಚ್ಚಾಗಿ ಬಳಸದಿರುವುದು ಉತ್ತಮ. ಇದರಿಂದ ಮೊಡವೆಗಳು ಏಳಬಹುದು. ಚರ್ಮ ಉರಿಯಬಹುದು ಹಾಗೂ ತುರಿಕೆ ಆರಂಭವಾಗಬಹುದು. ಅಷ್ಟೇ ಅಲ್ಲ, ಪರಿಮಳಭರಿತ ಪ್ರಸಾಧನಗಳು ಅಸ್ತಮಾ ಸಮಸ್ಯೆಯನ್ನು ಸಹ ಹೆಚ್ಚಿಸಬಲ್ಲವು ಎನ್ನುವುದು ನೆನಪಿನಲ್ಲಿ ಇರಲಿ.