Asianet Suvarna News Asianet Suvarna News

Business Woman : ಬೇರೆಯವರ ವಾರ್ಡ್ರೋಬ್ ಕ್ಲೀನ್ ಮಾಡಿ ಗಳಿಸ್ತಾಳೆ 50 ಸಾವಿರ..!

ಕಪಾಟಿನಲ್ಲಿರುವ ಬಟ್ಟೆ ನೋಡಿದ್ರೆ ತಲೆ ಸುತ್ತುತ್ತೆ ಎನ್ನುವವರಿದ್ದಾರೆ. ಒಂದು ತೆಗೆದ್ರೆ ಇನ್ನೊಂದು ಬೀಳುತ್ತೆ, ಬಟ್ಟೆ ಮಡಚಿಡಲು ಸಮಯವಿಲ್ಲ ಅಂತಾ ನೀವೂ ಅನೇಕ ಬಾರಿ ಗೊಣಗಿರಬಹುದು. ಅಂಥವರೇ ನಮ್ಮ ಎಲಾ ಗ್ರಾಹಕರು. ದುಡ್ಡು ಕೊಟ್ಟರೆ ವಾರ್ಡ್ರೋಬ್ ಕ್ಲೀನ್ ಮಾಡ್ತೆನೆ ಎನ್ನುವ ಹುಡುಗಿ, ಲಕ್ಷಾಂತರ ರೂಪಾಯಿ ಗಳಿಸಿದ್ದಾಳೆ.
 

Girl Organizes Wardrobes Of Strangers And Earing 50000 Per Month
Author
Bangalore, First Published Jan 21, 2022, 6:34 PM IST

ಜಗತ್ತಿ (world)ನಲ್ಲಿ ಒಬ್ಬರಿದ್ದಂತೆ ಇನ್ನೊಬ್ಬರಿಲ್ಲ. ಕೆಲವರು ಮನೆ (Home),ಸುತ್ತಮುತ್ತಲಿನ ಪರಿಸರ ಅಚ್ಚುಕಟ್ಟಾಗಿರಬೇಕೆಂದು ಬಯಸ್ತಾರೆ. ಇಸ್ತ್ರಿ ಹಾಕಿದ ಬಟ್ಟೆ (Clothes)ಯನ್ನೇ ಧರಿಸುವವರಿದ್ದಾರೆ. ಟವೆಲ್ ಇರಬೇಕಾದ ಜಾಗದಲ್ಲಿಯೇ ಇರಬೇಕು,ದಿಂಬಿನ ಕವರ್ ಸರಿಯಾಗಿರಬೇಕು,ಇದೇ ಜಾಗದಲ್ಲಿ ಕುಳಿತುಕೊಳ್ಳಬೇಕು, ಹೀಗೆ ಕೆಲ ನಿಯಮಗಳನ್ನು ಪಾಲಿಸುವವರಿರುತ್ತಾರೆ. ಅವರ ಈ ಶಿಸ್ತು ಕೆಲವೊಮ್ಮೆ ಕಿರಿಕಿರಿ ಎನ್ನಿಸುತ್ತದೆ. ಬೇರೆಯವರ ಬಗ್ಗೆ ಚಿಂತಿಸದ ಅವರು ತಮಗೆ ಸರಿ ಎನ್ನಿಸಿದ್ದನ್ನು ಮಾಡ್ತಾರೆ. ಬಟ್ಟೆಗಳನ್ನು ಇಡುವ ವಾರ್ಡ್ರೋಬ್ (Wardrobe) ವಿಷ್ಯದಲ್ಲೂ ಜನರು ಭಿನ್ನವಾಗಿ ಆಲೋಚನೆ ಮಾಡ್ತಾರೆ. ಕೆಲವರು ಅಗತ್ಯವಿರುವ ಬಟ್ಟೆ ಒಂದು ಕಡೆಯಾದ್ರೆ, ಅಗತ್ಯವಿಲ್ಲದ ಬಟ್ಟೆ ಇನ್ನೊಂದು ಕಡೆ ಜೋಡಿಸಿಟ್ಟಿರುತ್ತಾರೆ. ಮತ್ತೆ ಕೆಲವರ ವಾರ್ಡ್ರೋಬ್ ತೆಗೆದ್ರೆ ಬಟ್ಟೆಗಳು ಒಂದಾದ್ಮೇಲೆ ಒಂದರಂತೆ ನಮ್ಮ ಮೈಮೇಲೆ ಬಿದ್ದಿರುತ್ತದೆ. ಬಟ್ಟೆಯನ್ನು ಸುಂದರವಾಗಿಟ್ಟುಕೊಳ್ಳುವುದು ಒಂದು ಕಲೆ. ಇದನ್ನು ಅನೇಕರು ಪಾಲಿಸ್ತಾರೆ. ಆದ್ರೆ ಇಲ್ಲೊಬ್ಬ ಹುಡುಗಿ ಇದನ್ನೇ ವ್ಯಾಪಾರ ಮಾಡಿಕೊಂಡಿದ್ದಾಳೆ. ಬೇರೆಯವರ ಕೊಳಕಾದ ವಾರ್ಡ್ರೋಬ್ ಆಕೆಯ ಗಳಿಕೆಗೆ ಮೂಲವಾಗಿದೆ.ಯಸ್,ಇಂದು  ಹವ್ಯಾಸವನ್ನು ಬ್ಯುಸಿನೆಸ್ (Business )ಮಾಡಿಕೊಂಡ ಹುಡುಗಿಯ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಕೊಡ್ತೆವೆ. 

ಸಂಬಂಧಿಕರು-ಸ್ನೇಹಿತರಿಂದ ಶುರುವಾಯ್ತು ಆರಂಭ : ಇಂಗ್ಲೆಂಡಿ (England)ನ ಲೀಸೆಸ್ಟರ್‌ನಲ್ಲಿ ವಾಸಿಸುವ ಎಲಾ ಮೆಕ್ ಮಹೊನ್ ((Ella McMahon) ), ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುವ ಹವ್ಯಾಸ ಹೊಂದಿದ್ದಾಳೆ. ಬಾಲ್ಯದಿಂದಲೂ ಕಲರ್ ಕಾಂಬಿನೇಷನ್ ಹಾಗೂ ವಸ್ತುಗಳನ್ನು ಸರಿಯಾಗಿಡಲು ಹೆಚ್ಚು ಆಸಕ್ತಿ ತೋರುತ್ತಿದ್ದಳಂತೆ. ಆಕೆಯ ಈ ಅಭ್ಯಾಸದ ಬಗ್ಗೆ ಸ್ನೇಹಿತರು ಛೇಡಿಸುತ್ತಿದ್ದರಂತೆ. ಎಲಾ ಈ ಬಗ್ಗೆ ಎಂದಿಗೂ ತಲೆಕೆಡಿಸಿಕೊಂಡಿರಲಿಲ್ಲ. ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಬದುಕುವ ಅಭ್ಯಾಸವನ್ನು ಈಗ ತನ್ನ ವ್ಯಾಪಾರವನ್ನು ಮಾಡಿಕೊಂಡಿದ್ದಾಳೆ. ಆರಂಭದಲ್ಲಿ ಸಂಬಂಧಿಕರು ಹಾಗೂ ಸ್ನೇಹಿತರ ವಾರ್ಡ್ರೋಬ್ ಸ್ವಚ್ಛಗೊಳಿಸುತ್ತಿದ್ದ ಎಲಾ, ನಂತ್ರ ಇದನ್ನು ಬ್ಯುಸಿನೆಸ್ ಮಾಡಿಕೊಳ್ಳುವ ಆಲೋಚನೆ ಮಾಡಿದಳಂತೆ.

19ನೇ ವಯಸ್ಸಿನಲ್ಲಿಯೇ ಗಳಿಕೆ ಶುರು : ಎಲಾ ಮೆಕ್ 19ನೇ ವಯಸ್ಸಿನಲ್ಲಿಯೇ ಗಳಿಕೆ ಶುರು ಮಾಡಿದ್ದಾಳೆ. ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ಆಕೆ, ಫ್ಯಾಷನ್ ಡಿಸೈನಿಂಗ್ ನಲ್ಲಿ ಆಸಕ್ತಿ ಹೊಂದಿದ್ದಾಳೆ. ವಿದ್ಯಾಭ್ಯಾಸದ ಜೊತೆ ಪಾರ್ಟ್ ಟೈಂ ಕೆಲಸ ಮಾಡ್ತಾಳೆ. ದಿನದ 9 ಗಂಟೆಯನ್ನು ತನ್ನ ವ್ಯಾಪಾರಕ್ಕೆ ನೀಡುವ ಎಲಾ, ತಿಂಗಳಲ್ಲಿ ಸಾವಿರಾರು ರೂಪಾಯಿ ಗಳಿಸುತ್ತಾಳೆ.  

Woman Health : ವೈದ್ಯರ ಬಳಿ ಮಹಿಳೆಯರು ಎಂದೂ ಈ ಸಂಗತಿ ಮುಚ್ಚಿಡಬೇಡಿ!

ವಾರ್ಡ್ರೋಬ್ ಅಲಂಕಾರಕ್ಕೆ 3 ಗಂಟೆ : ಫ್ಯಾಷನ್ ಡಿಸೈನಿಂಗ್ ಕಲಿಯುತ್ತಿರುವ ಎಲಾ,ಕೋರ್ಸ್ ಗೆ ತಕ್ಕಂತೆ ಮನೆ ಸಿಂಗರಿಸಲು ಬಯಸ್ತಾಳೆ. ಆಕೆ ಒಂದು ವಾರ್ಡ್ರೋಬ್ ಜೋಡಿಸಲು 3 ಗಂಟೆಗಳ ಸಮಯ ತೆಗೆದುಕೊಳ್ಳುತ್ತಾಳೆ. ಒಂದು ಗಂಟೆಗೆ 200-250 ರೂಪಾಯಿ ಚಾರ್ಜ್ ಮಾಡ್ತಾಳಂತೆ ಎಲಾ. 

ವರ್ಷದ ಗಳಿಕೆ : ಎಲಾ ಈ ಅರೆಕಾಲಿಕ ಉದ್ಯೋಗದಿಂದ ಒಂದು ತಿಂಗಳಲ್ಲಿ 50 ಸಾವಿರ ರೂಪಾಯಿಗಳನ್ನು ಆರಾಮವಾಗಿ ಗಳಿಸುತ್ತಿದ್ದಾಳೆ. ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಹೆಚ್ಚಿದೆ. ಮನೆ ಬಾಡಿಗೆಯನ್ನು ಇದ್ರಲ್ಲಿಯೇ ಕಟ್ಟುತ್ತಾಳಂತೆ ಎಲಾ. ಎಲಾ 20  ಗ್ರಾಹಕರನ್ನು ಹೊಂದಿದ್ದಾಳೆ. ಅವರು ಪ್ರತಿ ಎರಡು ವಾರಕ್ಕೊಮ್ಮೆ ಎಲಾಗೆ ಕರೆ ಮಾಡ್ತಾರಂತೆ. ಎಲಾ, ಮನೆಗೆ ಹೋಗಿ ವಾರ್ಡ್ರೋಬ್ ಸರಿ ಮಾಡಿ ಬರ್ತಾಳೆ. ಅದಕ್ಕೆ ಇಷ್ಟು ಎಂದು ಚಾರ್ಜ್ ಮಾಡ್ತಾಳೆ. ಈ ಕೆಲಸ ಎಲಾಗೆ ತುಂಬಾ ತೃಪ್ತಿ ತಂದಿದೆಯಂತೆ. 

Acne Problem: ಮಧ್ಯವಯಸ್ಸಲ್ಲಿ ಮೊಡವೆಯೇ? ಕಾರಣ ಅರಿಯಿರಿ

ಸಣ್ಣ ಹವ್ಯಾಸ,ದೊಡ್ಡ ವ್ಯಾಪಾರ : ಅನೇಕರಿಗೆ ವಾರ್ಡ್ರೋಬ್ ಸ್ವಚ್ಛವಾಗಿಡಲು ಸಮಯವಿರುವುದಿಲ್ಲ. ಕೆಲಸದ ಆತುರದಲ್ಲಿ ಎಲ್ಲವನ್ನೂ ಒಟ್ಟಿಗೆ ಹಾಕಿ ಹೋಗ್ತಿರುತ್ತಾರೆ. ಅಂಥವರಿಗೆ ಎಲಾನಂತವರ ಅವಶ್ಯಕತೆಯಿರುತ್ತದೆ. ಎಲಾ ಮಾತ್ರವಲ್ಲ ಅನೇಕರು ಇಂಥ ಸಣ್ಣ ಸಣ್ಣ ಹವ್ಯಾಸವನ್ನು ಹೊಂದಿರುತ್ತಾರೆ. ಎಂದೂ ಇದನ್ನು ವ್ಯಾಪಾರವಾಗಿಸುವ ಆಲೋಚನೆ ಮಾಡಿರುವುದಿಲ್ಲ. ಆರಂಭದಲ್ಲಿ ಕಷ್ಟವೆನಿಸಿದ್ರೂ ನಿಮ್ಮ ಹವ್ಯಾಸವೇ ನಿಮ್ಮ ಗಳಿಕೆಗೆ ದಾರಿಯಾಗಬಹುದು.  

Follow Us:
Download App:
  • android
  • ios