Asianet Suvarna News Asianet Suvarna News

Business Ideas: ಮನೆಯಲ್ಲೇ ವ್ಯಾಪಾರ ಮಾಡಿ, ಹಣ ಗಳಿಸಲು ಇಲ್ಲಿವೆ ಅವಕಾಶ!

ನೀ ದುಡಿದು ಮನೆ ಸಾಕಬೇಕಾ? ಸಾಕು,ಸುಮ್ಮನೆ ಮನೆಯಲ್ಲಿ ಕುಳಿತ್ಕೊ ಅಂತಾ ಅನೇಕ ಹೆಣ್ಣು ಮಕ್ಕಳಿಗೆ ಪಾಲಕರು,ಸಂಬಂಧಿಕರು ಹೇಳ್ತಾರೆ. ಮದುವೆಯಾಗಿ ಮಕ್ಕಳಾದ್ಮೇಲೆ ಅನೇಕರಿಗೆ ದುಡಿಮೆ ಸ್ವಪ್ನವಾಗಿರುತ್ತದೆ. ಅವಶ್ಯಕತೆ ಇರಲಿ,ಬಿಡಲಿ, ಕೆಲಸ ಮಾಡಿದಾಗ ಸಿಗುವ ತೃಪ್ತಿ,ಹಣ,ಸಂತೋಷ,ಪರರು ನೀಡಿದಾಗ ಸಿಗುವುದಿಲ್ಲ. ಒಂದು ರೂಪಾಯಿ ದುಡಿದರೂ ಅದ್ರಲ್ಲಿ ನೆಮ್ಮದಿಯಿರುತ್ತದೆ. ಮನಸ್ಸು ಮಾಡಿದ್ರೆ ಮಹಿಳೆಯರು ಮನೆಯಲ್ಲಿಯೇ ಲಕ್ಷಾಂತರ ರೂಪಾಯಿ ಗಳಿಸಬಹುದು.

Small Business Ideas for women to work from home and earn
Author
Bangalore, First Published Dec 15, 2021, 7:24 PM IST
  • Facebook
  • Twitter
  • Whatsapp

ಬದಲಾವಣೆಯ ಸಮಯದಲ್ಲಿ ಲಿಂಗ ತಾರತಮ್ಯ (Gender Discrimination)  ಕಡಿಮೆಯಾಗಿದೆ. ಈಗ ಮಹಿಳೆ ಪುರುಷರ ಸಮನಾಗಿ ಹೆಜ್ಜೆ ಹಾಕಬಲ್ಲವಳಾಗಿದ್ದಾಳೆ. ಸಾಧನೆ ಮೆಟ್ಟಿಲನ್ನೇರುತ್ತ ಆರ್ಥಿಕವಾಗಿ ಮಹಿಳೆ ಸದೃಢವಾಗ್ತಿದ್ದಾಳೆ. ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆ ಧುಮುಕಬಲ್ಲಳು. ಪುರುಷನಿಗೆ ಸಮಾನವಾಗಿ ದುಡಿಯಬಲ್ಲಳು. ಮನೆ ಜವಾಬ್ದಾರಿಯೆಲ್ಲ ಪುರುಷರ ಹೆಗಲ ಮೇಲಿದೆ ಎಂಬ ಕಾಲ ಈಗಿಲ್ಲ. ಸರಿಯಾದ ಮಾರ್ಗದರ್ಶಕ ಹಾಗೂ ಅವಕಾಶ ಸಿಕ್ಕಲ್ಲಿ ಮಹಿಳೆಗೆ ಯಾವುದೂ ಕಷ್ಟವಲ್ಲ. ಮನೆ,ಮಕ್ಕಳು,ಸಂಸಾರದ ಜೊತೆ ವ್ಯಾಪಾರ,ಉದ್ಯೋಗ,ಶಿಕ್ಷಣ,ಕಲೆ,ದೇಶ ಸೇವೆ,ಸಮಾಜದ ಉಳಿತು,ಪರಿಸರ ರಕ್ಷಣೆ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ತನ್ನ ಛಾಪು ಮೂಡಿಸಬಲ್ಲಳು. ಅನೇಕ ಮಹಿಳೆಯರಿಗೆ ಮನೆಯಲ್ಲಿಯೇ ಉದ್ಯೋಗ,ವ್ಯಾಪಾರ ಮಾಡುವ ಆಸೆಯಿರುತ್ತದೆ. ಆದ್ರೆ ಆಯ್ಕೆಯ ಬಗ್ಗೆ ಗೊಂದಲಿರುತ್ತದೆ. ನಾವಿಂದು ಇಲ್ಲಿ ಕೆಲವೊಂದು ಮನೆಯಲ್ಲಿಯೇ ಮಾಡಬಹುದಾದ ಉದ್ಯೋಗಗಳ ಬಗ್ಗೆ ಮಾಹಿತಿ ನೀಡುತ್ತೇವೆ.

ಒಳ್ಳೆಯ ಬ್ಯುಸಿನೆಸ್ ಆಯ್ಕೆ ಹೇಗೆ? : ಎಲ್ಲರನ್ನು ಕಾಡುವ ಮೊದಲ ಪ್ರಶ್ನೆಯಿದು. ಮನಸ್ಸಿದ್ದಲ್ಲಿ ಮಾರ್ಗ. ನಮಗೆ ಹೆಚ್ಚು ಆಸಕ್ತಿಯಿರುವ ಕ್ಷೇತ್ರದಲ್ಲಿಯೇ ನಾವು ಕೆಲಸ ಮಾಡಿದಾಗ ಯಶಸ್ಸು ಹುಡುಕಿಕೊಂಡು ಬರುತ್ತದೆ. ಯಾವ ಕ್ಷೇತ್ರದಲ್ಲಿ ನೀವು ಪರಿಣಿತರು ಎಂಬುದನ್ನು ಮೊದಲು ಪತ್ತೆ ಮಾಡಿಕೊಳ್ಳಿ. ನಂತರ ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡಬಲ್ಲ ಹಾಗೂ ಹೆಚ್ಚು ಯಶಸ್ಸು ಸಿಗಬಲ್ಲ ವ್ಯಾಪಾರ ಯಾವುದು ಎಂಬ ಆಯ್ಕೆಗೆ ಬನ್ನಿ. ನಿಮ್ಮ ಆಸಕ್ತಿ ಕ್ಷೇತ್ರದಲ್ಲಿಯೇ ಕಡಿಮೆ ಹೂಡಿಕೆಯ ವ್ಯಾಪಾರ ಶುರು ಮಾಡಿ. 

ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?

ನಗರದ ಮಹಿಳೆಯರಿಗೆ ಸೂಕ್ತವಾದ ವ್ಯಾಪಾರ :
ಹೊಲಿಗೆ : ಹೊಲಿಗೆ ಒಂದು ಕಲೆ. ಸದಾ ಬೇಡಿಕೆಯಲ್ಲಿರುವ ಬ್ಯುಸಿನೆಸ್. ಹೊಲಿಗೆಯಲ್ಲಿ ಸಾಕಷ್ಟು ವಿಧಗಳಿವೆ. ಕೇವಲ ಸ್ಟಿಚ್ಚಿಂಗ್ ಮಾತ್ರ ಹೊಲಿಕೆಯಲ್ಲ. ಕಟ್ಟಿಂಗ್,ಸ್ಟಿಚ್ಚಿಂಗ್,ಕೈ ಹೊಲಿಗೆ,ರಿಪೇರಿ,ಎಂಬ್ರಾಯ್ಡರಿ,ಫಾಲ್, ಹರಿದ ಬಟ್ಟೆಗಳ ರಿಪೇರಿ ಹೀಗೆ ಅನೇಕ ಕೆಲಸ ಇದ್ರಲ್ಲಿದೆ.  

ಕೋಚಿಂಗ್ (Coaching) : ಇದು ಕೂಡ ಬೇಡಿಕೆ ಕಡಿಮೆಯಾಗದ ಕೆಲಸ. ವಿದ್ಯೆ ಕಲಿತವರು ಮಕ್ಕಳಿಗೆ ಕೋಚಿಂಗ್ ನೀಡಬಹುದು. ಇತ್ತೀಚಿನ ದಿನಗಳಲ್ಲಿ ಕೋಚಿಂಗ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿಯೇ ಮಕ್ಕಳಿಗೆ ಪಾಠ ಹೇಳಬಹುದು. ಕೇವಲ ಶಾಲೆಯ ಶಿಕ್ಷಣವನ್ನು ಮಾತ್ರ ಹೇಳಬೇಕಾಗಿಲ್ಲ. ಬೇಸಿಗೆ ಶಿಬಿರಗಳನ್ನು ನೀವು ನಡೆಸಬಹುದು. ಡಾನ್ಸ್,ಚಿತ್ರಕಲೆ,ಮೆಹಂದಿ,ಕ್ರಾಫ್ಟ್ ಹೀಗೆ ಬೇರೆ ಬೇರೆ ಕ್ಲಾಸ್ ಗಳನ್ನು ನೀವು ಮನೆಯಲ್ಲಿ ನಡೆಬಹುದು.

ಆರ್ಟಿಫಿಶಿಯಲ್ ಆಭರಣ (Artificial Jewelry) : ಬಂಗಾರದ ಆಭರಣಕ್ಕಿಂತ ಹೆಚ್ಚಿನ ಮಹಿಳೆಯರು ಆರ್ಟಿಫಿಶಿಯಲ್ ಆಭರಣವನ್ನು ಇಷ್ಟಪಡುತ್ತಾರೆ. ಇದ್ರಲ್ಲೂ ಸಾಕಷ್ಟು ವೆರೈಟಿಗಳಿವೆ. ಆರ್ಟಿಫಿಶಿಯಲ್ ಆಭರಣಗಳನ್ನು ತಯಾರಿಸಿ ನೀವು ಮಾರಾಟ ಮಾಡಬಹುದು. ಇಲ್ಲವೆ ಆಸಕ್ತರಿಗೆ ಆರ್ಟಿಫಿಶಿಯಲ್ ಆಭರಣ ತಯಾರಿ ಬಗ್ಗೆ ಕಲಿಸಬಹುದು. ಇದ್ರ ಜೊತೆ ಬೊಂಬೆಗಳನ್ನು ತಯಾರಿಸಿ ನೀವು ಮಾರಾಟ ಮಾಡಬಹುದು. ಸುಂದರ ಪುಟಾಣಿ ಗೊಂಬೆಗಳು ಎಲ್ಲರನ್ನು ಆಕರ್ಷಿಸುತ್ತವೆ. ನಿಮ್ಮ ಬಿಡುವಿನ ಸಮಯದಲ್ಲಿ ನೀವು ಇವುಗಳನ್ನು ತಯಾರಿಸಿ ಮಾರಾಟ ಮಾಡಬಹುದು.

ಹೋಮ್ ಬೇಕರಿ (Home Bakery): ಯಸ್, ಸದ್ಯ ಹೆಚ್ಚು ಪ್ರಸಿದ್ದಿಗೆ ಬರ್ತಿರುವ ಕ್ಷೇತ್ರ ಇದು. ಮನೆಯಲ್ಲಿ ಮಾಡಿದ ಆಹಾರಗಳ ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಕೇಕ್,ಬ್ರೆಡ್,ಚಾಕೋಲೇಟ್ ತಯಾರಿಸುವಲ್ಲಿ ಪರಿಣಿತರಾಗಿದ್ದರೆ ಮನೆಯಲ್ಲಿಯೇ ಈ ವ್ಯವಹಾರ ಶುರು ಮಾಡಬಹುದು. ಆರಂಭದಲ್ಲಿ ಕಷ್ಟವೆನಿಸಿದ್ರೂ ನಿಧಾನವಾಗಿ ನಿಮ್ಮ ವ್ಯಾಪಾರ ಉತ್ತುಂಗಕ್ಕೇರುತ್ತದೆ. ರುಚಿ,ಶುಚಿ ಜೊತೆ ಆಕರ್ಷಕ ಪ್ಯಾಕಿಂಗ್ ಇಲ್ಲಿ ಮಹತ್ವ ಪಡೆಯುತ್ತದೆ.

ರೀ ಸೆಲ್ಲಿಂಗ್(Re-Selling) : ಇದು ಸುಲಭದ ಕೆಲಸ. ಆನ್ಲೈನ್ ಮೂಲಕ ನೀವು ವಸ್ತುಗಳನ್ನು ಮಾರಾಟ ಮಾಡಬೇಕಾಗುತ್ತದೆ. ಒಂದು ಕಂಪನಿ ಜೊತೆ ಕೈ ಜೋಡಿಸಿ ಆ ಕಂಪನಿ ವಸ್ತುಗಳಿಗೆ ಪ್ರಚಾರ ನೀಡಿ ಮಾರಾಟ ಮಾಡಬೇಕು. ಇದಕ್ಕೆ ಕಂಪನಿ ಹಣ ನೀಡುತ್ತದೆ. ತಯಾರಿ,ಪ್ಯಾಕಿಂಗ್,ಡಿಲೆವರಿ ಕಿರಿಕಿರಿ ಇದರಲ್ಲಿ ಇರುವುದಿಲ್ಲ. ಹೆಚ್ಚು ಹೆಚ್ಚು ಸೇಲ್ ಮಾಡಿದಂತೆ ಹೆಚ್ಚು ಲಾಭ ಪಡೆಯಬಹುದು. ಇದಲ್ಲದೆ ಇನ್ನೂ ಅನೇಕ ವ್ಯವಹಾರಗಳನ್ನು ಮಹಿಳೆಯರು ಮನೆಯಲ್ಲೇ ಮಾಡಬಹುದು.  

Follow Us:
Download App:
  • android
  • ios