Baal Aadhaar Card : ನಿಮ್ಮ ಮಗುವಿಗಿನ್ನೂ ಐದು ವರ್ಷ ತುಂಬಿಲ್ವಾ? ಆಧಾರ್ ಕಾರ್ಡ್ ಮಾಡಿಸೋದು ಹೇಗೆ? ಇಲ್ಲಿದೆ ಮಾಹಿತಿ

ಆಧಾರ್ ಕಾರ್ಡ್ ಅನಿವಾರ್ಯತೆ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಸರ್ಕಾರ 5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೂ ಆಧಾರ್ ಕಾರ್ಡ್  ಕಡ್ಡಾಯಗೊಳಿಸಿದೆ. ನವಜಾತ ಶಿಶುವಿಗೂ ಈಗ ಆಧಾರ್ ಕಾರ್ಡ್ ಪಡೆಯಬಹುದು. ಮಕ್ಕಳ ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ಎಲ್ಲ ಪ್ರಮುಖ ಮಾಹಿತಿ ಇಲ್ಲಿದೆ. 

How to get Aadhaar card for children  what all are the documents needed here is the information

ಮಗು ಹುಟ್ಟಿದ ತಕ್ಷಣ ಜನನ ದಾಖಲೆ ಪಡೆಯುತ್ತೇವೆ. ಹಾಗೆಯೇ ಆಧಾರ್ ಕಾರ್ಡ್ (Aadhaar card ) ಕೂಡ ಈಗ ಪಡೆಯಬಹುದು. ಸರ್ಕಾರಿ ಸೇವೆ,ಖಾಸಗಿ ಸೇವೆ ಜೊತೆ ಶಾಲೆಗೆ ಮಕ್ಕಳ ಹೆಸರು ನೊಂದಾಯಿಸಲು ಆಧಾರ್ ಕಾರ್ಡ್ ಅನಿವಾರ್ಯ. ಮಕ್ಕಳ ಆಧಾರ್ ಕಾರ್ಡನ್ನು ಬಾಲ್ ಆಧಾರ್ ಕಾರ್ಡ್(Baal Aadhar card) ಎಂದು ಕರೆಯಲಾಗುತ್ತದೆ. 

ಬಾಲ್ ಆಧಾರ್ ಕಾರ್ಡ್ : 
ಈ ಆಧಾರ್ ಕಾರ್ಡ್ ನೀಲಿ(Blue) ಬಣ್ಣದಲ್ಲಿರುತ್ತದೆ. ಮಗುವಿನ ವಯಸ್ಸು 5 ವರ್ಷಕ್ಕಿಂತ ಹೆಚ್ಚಾದ್ಮೇಲೆ ಈಗ ಮಾಡಿದ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ. ಐದು ವರ್ಷದ ನಂತರ ಮಗುವಿಗೆ ಆಧಾರ್ ಕಾರ್ಡ್ ನವೀಕರಿಸಬೇಕಾಗುತ್ತದೆ. ಈ ಹಿಂದೆ ಮಗುವಿನ ಆಧಾರ್ ಕಾರ್ಡ್ ಗೆ ಬಯೋಮೆಟ್ರಿಕ್ ಮಾಡಲಾಗ್ತಿತ್ತು. ಈಗ ಯುಐಡಿಎಐ (UIDAI) ಹೊಸ ನಿಯಮ ಜಾರಿಗೆ ತಂದಿದೆ. ಅದರ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಣ್ಣಿನ (Eyes) ಸ್ಕ್ಯಾನಿಂಗ್ ಹಾಗೂ ಬೆರಳಚ್ಚಿನ(fingerprints) ಪ್ರಕ್ರಿಯೆ ರದ್ದು ಮಾಡಲಾಗಿದೆ. ಹಾಗಾಗಿ ಐದು ವರ್ಷದ ನಂತರ ಮಕ್ಕಳಿಗೆ ಬಯೋಮೆಟ್ರಿಕ್(Biometric) ಪ್ರಕ್ರಿಯೆ ನಡೆಯಲಿದೆ.  

ಬಾಲ್ ಆಧಾರ್ ತಯಾರಿ : ಮಗುವಿನ ಆಧಾರ್ ಕಾರ್ಡ್ ಮಾಡಲು ಯುಐಡಿಎಐ ಅಧಿಕೃತ ವೆಬ್‌ಸೈಟ್‌ಗೆ (Website)  https://uidai.gov.in ಭೇಟಿ ನೀಡಬೇಕು. ಅಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಮುಖಪುಟದಲ್ಲಿ ಅಪಾಯಿಂಟ್‌ಮೆಂಟ್ ಬುಕ್ ಮಾಡಿ ಆಯ್ಕೆ ಸಿಗುತ್ತದೆ.ಈ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ. ಆಗ ತೆರೆಯುವ ಪುಟದಲ್ಲಿ ನಿಮ್ಮ ರಾಜ್ಯ, ಜಿಲ್ಲೆಯನ್ನು ಆಯ್ಕೆ ಮಾಡಬೇಕು. ಆಧಾರ್ ಕೇಂದ್ರವನ್ನು ಆಯ್ಕೆ ಮಾಡಬೇಕು. ಅಪಾಯಿಂಟ್‌ಮೆಂಟ್ ಕಾಯ್ದಿರಿಸಬೇಕು.ಇದರ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಒಟಿಪಿ ಪರಿಶೀಲನೆ ನಂತರ ಅಪಾಯಿಂಟ್‌ಮೆಂಟ್ ದಿನಾಂಕವನ್ನು ಕಾಯ್ದಿರಿಸಬೇಕು. ಅಪಾಯಿಂಟ್ಮೆಂಟ್ ಸಿಕ್ಕ ದಿನದಂದು ಮಗುವನ್ನು ಆಧಾರ್ ಕೇಂದ್ರಕ್ಕೆ ಕರೆದೊಯ್ಯಬೇಕು. ಅಲ್ಲಿ ಮಗುವಿನ ಆಧಾರ್ ಪ್ರಕ್ರಿಯೆ ನಡೆಯಲಿದೆ.

ಬಾಲ್ ಆಧಾರ್ ಗೆ ಬೇಕಾಗುವ ದಾಖಲೆ :
ಬಾಲ್ ಆಧಾರ್ ಕಾರ್ಡ್ ಮಾಡಲು ಕೆಲ ದಾಖಲೆ ಅವಶ್ಯಕ. ಮಗುವಿನ ಜನನ ಪ್ರಮಾಣಪತ್ರ,ಪೋಷಕರ ಆಧಾರ್ ಕಾರ್ಡ್,ವಿಳಾಸದ ಪುರಾವೆ,ಮೊಬೈಲ್ ನಂಬರ್,ಮಗುವಿನ ಪಾಸ್ಪೋರ್ಟ್ (Passport) ಗಾತ್ರದ ಫೋಟೋ ನೀಡಬೇಕಾಗುತ್ತದೆ. 

LIC Jeevan Labh policy:ಈ ಯೋಜನೆಯಲ್ಲಿ ದಿನಕ್ಕೆ ಕೇವಲ 8ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 17ಲಕ್ಷ ರೂ.!

ಮಕ್ಕಳ ಆಧಾರ್ ಕಾರ್ಡ್ ಅನ್ನು ಆಫ್‌ಲೈನ್ ಮಾಡುವುದು ಹೇಗೆ?
ಮೊದಲನೆಯದಾಗಿ, ಪಾಲಕರು ಮತ್ತು ಮಗುವಿನ ದಾಖಲೆಯನ್ನು  ಆಧಾರ್ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು.ಇದಕ್ಕಿಂತ ಮೊದಲು ಮಕ್ಕಳ ಆಧಾರ್ ಕಾರ್ಡ್ ನೋಂದಣಿ ಫಾರ್ಮ್ ಭರ್ತಿ ಮಾಡಬೇಕು. ಇದರ ನಂತರ  ಅರ್ಜಿಯಲ್ಲಿ ಕೇಳಲಾದ ಮಗುವಿನ ಹೆಸರು, ಪೋಷಕರ ಆಧಾರ್ ಸಂಖ್ಯೆ, ಇತ್ಯಾದಿ ನಮೂದಿಸಬೇಕು. ಆಧಾರ್ ಕೇಂದ್ರಕ್ಕೆ ಹೋಗುವ ಮೂಲಕ ಮಗುವಿನ ಜನನ ಪ್ರಮಾಣಪತ್ರ ಮತ್ತು ಒಬ್ಬರ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಬೇಕಾಗುತ್ತದೆ. 
ಮಗುವಿನ ಆಧಾರ್ ಕಾರ್ಡ್ ಮಾಡಲು, ಪಾಲಕರ ಮೊಬೈಲ್ ಸಂಖ್ಯೆಯನ್ನು ಸಹ ಕೇಂದ್ರದಲ್ಲಿ ನೋಂದಾಯಿಸಬೇಕು. ಮಗುವಿನ ಫೋಟೋವನ್ನು ನೀಡಬೇಕಾಗುತ್ತದೆ, ಮಗುವಿನ ಕಾರ್ಡ್ ಅನ್ನು ಪೋಷಕರ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾಗುತ್ತದೆ.
ಅದರ ನಂತರ ಅರ್ಜಿ ನಮೂನೆಯನ್ನು ಸಲ್ಲಿಸಬೇಕು. ಅದರ ನಂತರ ರಶೀದಿ ಸಿಗುತ್ತದೆ. ಮಗುವಿನ ಆಧಾರ್ ಕಾರ್ಡ್‌ನ ನೋಂದಣಿ ಮತ್ತು ಪರಿಶೀಲನೆ ಪೂರ್ಣಗೊಂಡ ನಂತರ ಮೊಬೈಲ್ ಸಂಖ್ಯೆ ದೃಢೀಕರಣಕ್ಕಾಗಿ ಎಸ್ ಎಂಎಸ್ ಬರುತ್ತದೆ. ಮಗುವಿನ ಆಧಾರ್ ಸಂಖ್ಯೆ 2 ತಿಂಗಳೊಳಗೆ ಬರುತ್ತದೆ.

IT Returns Deadline: ಡಿ.31 ಅಂತಿಮ ಗಡುವು, ಇ-ಫೈಲಿಂಗ್ ಪೋರ್ಟಲ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆಗೆ ಒತ್ತಾಯ

ಆಧಾರ್ ಸ್ಥಿತಿ ಪರಿಶೀಲನೆ ಹೇಗೆ : ಆಧಾರ್‌ ಗೆ ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿಯನ್ನು ಪರಿಶೀಲಿಸಲು ಬಯಸುವವರು ವೆಬ್ಸೈಟ್ ಗೆ ಹೋಗಬೇಕಾಗುತ್ತದೆ. ಆಧಾರ್ ಸ್ಥಿತಿ ಪರಿಶೀಲನೆ ಆಯ್ಕೆ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಬೇಕು. ಬಾಲ್ ಆಧಾರ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ಬಯಸಿದರೆ, ಸಹಾಯವಾಣಿ ಸಂಖ್ಯೆ 1947 ಗೆ ಸಹ ಕರೆ ಮಾಡಬಹುದು. 

 

Latest Videos
Follow Us:
Download App:
  • android
  • ios