Asianet Suvarna News Asianet Suvarna News

ಮಹಿಳಾ ನೌಕರರಿಗೆ ಕೇಂದ್ರದ ಕೊಡುಗೆ, ಬಾಡಿಗೆ ತಾಯ್ತನದ ಸಂದರ್ಭದಲ್ಲಿ 6 ತಿಂಗಳ ರಜೆ!

ಬರೋಬ್ಬರಿ 50 ವರ್ಷದ ನಿಯಮವನ್ನು ಕೇಂದ್ರ ಸರ್ಕಾರ ಬದಲಿಸಿ ಮಹಿಳಾ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಇನ್ಮುಂದೆ ಬಾಡಿಗೆ ತಾಯ್ತನದ ಸಂದರ್ಭದಲ್ಲೂ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ಘೋಷಿಸಿದೆ.

Six month maternity leave allowed in case of woman Govt employees have children through surrogacy ckm
Author
First Published Jun 24, 2024, 3:14 PM IST | Last Updated Jun 24, 2024, 3:14 PM IST

ನವದೆಹಲಿ(ಜೂ.24)  ನರೇಂದ್ರ ಮೋದಿ ಸೇರಿದಂತೆ ಸಂಸದರು ಲೋಕಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹಿಳಾ ನೌಕರರಿಗೆ ಬಂಪರ್ ಕೊಡುಗೆ ನೀಡಿದೆ. ಇನ್ಮುಂದೆ ಬಾಡಿಗೆ ತಾಯ್ತನದ ಸಂದರ್ಭದಲ್ಲೂ ಮಹಿಳಾ ಸಿಬ್ಬಂದಿಗೆ 6 ತಿಂಗಳ ಹೆರಿಗೆ ರಜೆ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಬರೋಬ್ಬರಿ 50 ವರ್ಷದ ನಿಯಮ ಬದಲಿಸುವ ಮೂಲಕ ಮಹತ್ವದ ಹೆಜ್ಜೆ ಇಟ್ಟಿದೆ. 

ವಿಶೇಷ ಅಂದರೆ ಬಾಡಿಗೆ ತಾಯ್ತನದ ಮೂಲಕ ಜನಿಸಿದ ಮಗುವಿನ ತಾಯಿಗೆ 6 ತಿಂಗಳ ಹೆರಿಗೆ ರಜೆ ಘೋಷಿಸಿದರೆ, ಅದೇ ಮಗುವಿನ ತಂದೆಗೆ 15 ದಿನಗಳ ಪಿತೃತ್ವ ರಜೆಯನ್ನೂ ಮಗಿನ ಆರೈಕೆಗಾಗಿ ನೀಡಲಾಗಿದೆ.  ಇದುವರೆಗೂ ಸರೋಗಸಿ ಮೂಲಕ ತಾಯಿಯಾದರೆ ರಜೆ ನೀಡುವ ನಿಯಮ ಇರಲಿಲ್ಲ. ಇದೀಗ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರ ಮಹತ್ದ ನಿಯಮ ರೂಪಿಸಿದೆ.

ಕಚೇರಿಗೆ ತಡವಾದರೆ 200 ರೂ ದಂಡ, ಹೊಸ ನಿಯಮ ಜಾರಿಗೊಳಿಸಿದ ಸಂಸ್ಥಾಪಕನಿಗೆ 1,000 ರೂ ಫೈನ್!

ಹಳೇ ನಿಯಮದ ಪ್ರಕಾರ ಮಹಿಳಾ ಉದ್ಯೋಗಿಗೆ 6 ತಿಂಗಳ ರಜೆ ಹಾಗೂ ಮಗುವಿನ ತಂದೆ ಪಿತೃತ್ವದ 15 ರಜೆಗಳ ಅವಕಾಶವಿತ್ತು. ಮಹಿಳಾ ಸರ್ಕಾರಿ ನೌಕರರು ಗರಿಷ್ಠ 730 ದಿನಗಳ ರಜೆ ಪಡೆಯಲು ಅವಕಾಶವಿತ್ತು. ಇದೀಗ ಬಾಡಿಗೆ ತಾಯ್ತನದ ವೇಳೆಯೂ ತಾಯಿಗೆ ಹೆರಿಗೆ ರಜೆ ನೀಡಲಾಗುತ್ತದೆ. 

ಇತ್ತೀಚೆಗೆ ಬಾಡಿಗೆ ತಾಯ್ತನದಲ್ಲಿ ಕೆಲ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ವಿವಾಹಿತ ದಂಪತಿಯ ಪೈಕಿ ಯಾರಿಗಾದರೂ ಒಬ್ಬರಿಗೆ ಆರೋಗ್ಯ ಸಮಸ್ಯೆ ಇದ್ದರೆ ಅಂಥವರು ದಾನಿಗಳಿಂದ ಅಂಡಾಣು ಅಥವಾ ವೀರ್ಯಾಣುವನ್ನು ಪಡೆದು ಬಾಡಿಗೆ ತಾಯ್ತನದ(ಸರೋಗಸಿ) ಮೂಲಕ ಸಂತಾನ ಹೊಂದಲು ಕೇಂದ್ರ ಸರ್ಕಾರ ನಿಯಮಗಳಿಗೆ ತಿದ್ದುಪಡಿ ಮಾಡಿದೆ.ಪತಿ ಅಥವಾ ಪತ್ನಿ ಯಾರದರೊಬ್ಬರು ಆರೋಗ್ಯ ಸಮಸ್ಯೆ ಹೊಂದಿದ್ದು ಮಗು ಪಡೆಯಲು ಸಾಧ್ಯವಾಗದಿದ್ದಾಗ, ಅಂತವರು ದಾನಿಗಳಿಂದ ನೆರವು ಪಡೆಯಬಹುದು ಎಂದು ತಿದ್ದುಪಡಿ ತರಲಾಗಿದೆ. 2022ರ ಬಾಡಿಗೆ ತಾಯ್ತನದ ನಿಯಮಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು ಹೊಸ ನಿಮಯ ರೂಪಿಸಿದೆ.  ಆದರೆ ಪತಿ ಹಾಗೂ ಪತ್ನಿ ಇಬ್ಬರೂ ಆರೋಗ್ಯ ಸಮಸ್ಯೆ ಹೊಂದಿದ್ದರೆ,  ಅಂಡಾಣು/ವೀರ್ಯಾಣು ಉತ್ಪತ್ತಿ ಅವರಲ್ಲಿ ಇಲ್ಲದಿದ್ದರೆ ಅವರು ಬಾಡಿಗೆ ತಾಯ್ತನದ ಮೊರೆ ಹೋಗುವಂತಿಲ್ಲ ಹೊಸ ನಿಯಮ ಹೇಳುತ್ತದೆ. 

ಹೇಳದೇ ಕೇಳದೇ ಸಾಮೂಹಿಕ ರಜೆ ಹಾಕಿದ ಸಿಬ್ಬಂದಿಗೆ ಪರ್ಮನೆಂಟ್ ರಜೆ ನೀಡಿದ ಏರ್ ಇಂಡಿಯಾ..!
 

Latest Videos
Follow Us:
Download App:
  • android
  • ios