Asianet Suvarna News Asianet Suvarna News

ಪತ್ನಿಗೆ 100 ರೂ ಕೊಟ್ಟು ಇದು ನಿನ್ನ ರಾತ್ರಿಯ ಪ್ರದರ್ಶನಕ್ಕೆ ಅಂತಿದ್ದ ಪಾಪಿ ಗಂಡ

ಮದ್ವೆಯೆಂಬ ತೊಳಲಾಟದಲ್ಲಿ ಸಿಲುಕಿ ಅನೇಕರು ತಮ್ಮ ಜೀವನವನ್ನೇ ಅಂತ್ಯಗೊಳಿಸಿದ್ದಾರೆ. ಮತ್ತೆ ಕೆಲವರು ಸಾಧಿಸಿ ತೋರಿಸಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಅಂತ ಓರ್ವ ಮಹಿಳೆಯ ಕತೆ ಇದು.

sinful husband who gave Rs 100 to his wife and said her this is your last night performence akb
Author
First Published May 22, 2023, 12:42 PM IST

ಮದುವೆ ಎಂಬುದು ಬದುಕಿನ ಬದಲಿಸುವ ಬದುಕಿಗೊಂದು ತಿರುವು ನೀಡುವ ಕ್ಷಣ. ಆದರೆ ಈ ತಿರುವು ಎಂಬುದು ಹೇಗಿರುತ್ತದೆ ಎಂಬುದರ ಮೇಲೆ ಅನೇಕರ ಜೀವ ನಿಂತಿರುತ್ತದೆ. ಕೆಲವರ ಬದುಕು ಮದುವೆಯ ನಂತರ ಸುಂದರವಾಗಿ ಬದಲಾಗಿ ಸ್ವರ್ಗವಾದರೆ ಮತ್ತೆ ಕೆಲವರಿಗೆ ರೌರವ ನರಕ. ಹೀಗೆ ಮದ್ವೆಯೆಂಬ ತೊಳಲಾಟದಲ್ಲಿ ಸಿಲುಕಿ ಅನೇಕರು ತಮ್ಮ ಜೀವನವನ್ನೇ ಅಂತ್ಯಗೊಳಿಸಿದ್ದಾರೆ. ಮತ್ತೆ ಕೆಲವರು ಸಾಧಿಸಿ ತೋರಿಸಿ ಇತರರಿಗೆ ಸ್ಫೂರ್ತಿಯಾಗಿದ್ದಾರೆ. ಅಂತ ಓರ್ವ ಮಹಿಳೆಯ ಕತೆ ಇದು. 

ಹ್ಯೂಮನ್ಸ್ ಆಫ್ ಬಾಂಬೆ ಎಂಬ ವೆಬ್‌ಸೈಟ್ ಹೀಗೆ ಬದುಕಿನಲ್ಲಿ ತೀವ್ರವಾದ ಸಂಕಷ್ಟಕ್ಕೆ ಸಿಲುಕಿ ಗೆದ್ದು ಬೀಗಿದ ಸಾಮಾನ್ಯ ವ್ಯಕ್ತಿಗಳ ಅಸಾಮಾನ್ಯವಾದ ಕತೆಯನ್ನು  ಆಗಾಗ ಪೋಸ್ಟ್ ಮಾಡುತ್ತಿದ್ದು, ಅಲ್ಲಿ ಪ್ರಕಟವಾದ ಮಹಿಳೆಯೊಬ್ಬರ ಏಳು ಬೀಳಿನ ಕತೆ ಇದೆ. 

ಮದುವೆ (Marriage) ಎಂಬುದು ನನ್ನ ಪಾಲಿಗೆ ಬಹಳ ಕಠಿಣವೆನಿಸಿದ ವಾಸ್ತವವಾಗಿತ್ತು. ಮದುವೆಯಾದ ಎರಡೇ ವಾರಕ್ಕೆ ನನ್ನ ಪತಿ ನೀನು ಬಹಳ ಚೆನ್ನಾಗಿದ್ದೀಯಾ ನಿನಗೆ ಬಾಯ್‌ಫ್ರೆಂಡ್ ಇರದಿರಲು ಹೇಗೆ ಸಾಧ್ಯ? ನೀನು ಹಾಸಿಗೆಯಲ್ಲಿ ಎಷ್ಟು ಅನುಭವ ಇಲ್ಲದವಳಂತೆ ವರ್ತಿಸುತ್ತೀಯಾ ಎಂದೆಲ್ಲಾ  ಹೇಳಿ ಅವಮಾನ ಮಾಡಲು ಶುರು ಮಾಡಿದ್ದ. ಆತನ ಮಾತು ನನಗೆ ನಿಜವಾಗಿಯೂ ಶಾಕ್ ನೀಡಿತ್ತು.  ಮನೆಗೆ ಈ ಬಗ್ಗೆ ಹೇಳಿದರೆ ಅಮ್ಮ ಹೇಳುತ್ತಿದ್ದಳು, ಆತ ಗಂಡಸು ಮಗುವಾದ ಮೇಲೆ ಎಲ್ಲಾ ಸರಿ ಹೋಗಬಹುದು ತಾಳ್ಮೆಯಿಂದ ಇರು  ಎಂದು. ಆದರೆ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಸಾಗಿತ್ತು.  ಒಂದು ದಿನ ಆತ  ನೂರು ರೂಪಾಯಿ ನೋಟನ್ನು ನನ್ನ ಮುಂದಿಟ್ಟು, ' ಇದು ಕಳೆದ ರಾತ್ರಿಯ ನಿನ್ನ ಅದ್ಭುತ ಪ್ರದರ್ಶನಕ್ಕೆ ಎಂದು ಹೇಳಿ ಅವಮಾನಿಸಿದ್ದ. ಇದರ ನಡುವೆ ಆತ ಆತನಿಗಿದ್ದ ಸಾಲು ಸಾಲು ಗರ್ಲ್‌ಫ್ರೆಂಡ್‌ಗಳ (Girlfriend) ಕತೆ ಹೇಳಿಕೊಂಡು ಮನೆಗೆ ಬರುತ್ತಿದ್ದ.

Real Story : ಸಾಯಬೇಕು ಅಂದುಕೊಂಡಿದ್ದೆ, – ಅರೇಂಜ್ಡ್ ಮ್ಯಾರೇಜ್ ಹುಡುಗರ ಕಥೆ ವ್ಯಥೆ

ಇತ್ತ ನನ್ನ ಪೋಷಕರಿಗೆ ಇದೆಲ್ಲವನ್ನು ಹೇಳಿಕೊಳ್ಳಲು ಅವಮಾನವೆನಿಸುತ್ತಿತ್ತು. ಆದರೆ ಆತನ ಜೊತೆ ಬದುಕುವುದಕ್ಕೆ ಸಾಧ್ಯವೇ ಇಲ್ಲ ಎಂದು ಮನಸ್ಸು ನಿರ್ಧಾರ ಮಾಡಿತ್ತು.  ಕಾರಣ ತಿಳಿಯದ ನನ್ನ ಅಪ್ಪ ಅಮ್ಮ ಆತನ ಬಳಿ ರಾಜಿ ಆಗುವಂತೆ ಜೊತೆಯಲ್ಲೇ ಜೀವಿಸುವಂತೆ ನಿರಂತರ ಒತ್ತಾಯಿಸುತ್ತಿದ್ದರು. ಇದರ ಜೊತೆಗೆ ನನ್ನ ಪತಿಯೂ ನನಗೆ ಕರೆ ಮಾಡಿ  ಮನೆಗೆ ಬಾ ಅಥವಾ ನನಗೆ ಬೇರೆ ಹುಡುಗಿ ಹುಡುಕಿ ಕೊಡು ಎಂದು ದುಂಬಾಲು ಬಿದ್ದಿದ್ದ. ಆದರೆ ನನ್ನ ಜೀವನದಿಂದ ಒಮ್ಮೆ ಆತ ಹೊರ ನಡೆದರೆ ಸಾಕು ಎಂದು ನಾನು ಬಯಸಿದ್ದೆ.  ಆದರೆ ಜೊತೆ ಜೊತೆಗೆ ಗರ್ಭಿಣಿಯಾದೆ (Pragnency). ಒಂದು ಕಡೆ ತಾಯಿಯಾಗುವ ಖುಷಿಯಾದರೆ ಮತ್ತೊಂದೆಡೆ ಇವನ್ನೊಂದಿಗೆ ಬದುಕಿನುದ್ದಕ್ಕೂ ಹೋರಾಡುವುದು ಹೇಗೆ ಎಂಬ ಯೋಚನೆ ಶುರುವಾಗಿತ್ತು. ಅದರ ಜೊತೆಗೆ ಹೆಣ್ಣು ಮಗಳು ಹುಟ್ಟಿದರೆ ಆಕೆಯನ್ನು ಆತ ನನ್ನಂತೆ ನಿರ್ಲಕ್ಷಿಸಿದರೆ ಎಂಬ ಯೋಚನೆ ಶುರುವಾಗಿತ್ತು.  ಭಯ ಆತಂಕದಿದ ಖಿನ್ನತೆಗೆ ಜಾರಿದ್ದ ನನಗೆ ಜೀವನ ಕೊನೆಗೊಳಿಸುವುದೇ ಮುಂದಿರುವ ಪರಿಹಾರವಾಗಿತ್ತು.

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ

ಹಾಗಾಗಿ ಹುಟ್ಟಲಿರುವ ಮಗುವಿಗೆ ಪತ್ರ ಬರೆದ ಆಕೆ ಮಗುವಿನ ಕ್ಷಮೆ ಕೇಳಿ ಬೆಂಕಿ ಹಚ್ಚಿಕೊಂಡು  ಸಾಯಲು ಯತ್ನಿಸಿದೆ ಬೆಂಕಿ ಹಚ್ಚಿಕೊಂಡು 49 ಬಾರಿ ಕಡ್ಡಿ ಗೀರಿದ ನಾನು 50ನೇ ಬಾರಿ ಬೆಂಕಿ ಹಚ್ಚಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ನನ್ನ ಮನೆಯವರು ನನ್ನ ಉಳಿಸಿದರು ಬಕೆಟ್ ನೀರು ತಂದು ನನ್ನ ಮೇಲೆ ಸುರಿದರು.  ಶೇ.55 ಸುಟ್ಟ ಗಾಯಗಳೊಂದಿಗೆ ಬದುಕುಳಿದೆ. ಆದರೆ ಮಗುವನ್ನು ಕಳೆದುಕೊಂಡೆ. 

ಖಿನ್ನತೆಯ ಜೊತೆಗೆ ಪುಟಿದೆದ್ದ ಸಂಕಲ್ಪವೆಂಬ ಶಕ್ತಿ

ಆತ್ಮಹತ್ಯೆ ಯತ್ನಿಸಿದ್ದಕ್ಕೆ ಅಪರಾಧಿ ಪ್ರಜ್ಞೆ ಕಾಡತೊಡಗಿತ್ತು. ಮುಖ ವಿರೂಪಗೊಂಡಿತ್ತು. ಸಮಾಜಕ್ಕೆ ಮುಖ ತೋರಿಸಲಾಗದೇ  ಹಲವು ತಿಂಗಳುಗಳನ್ನು ಮನೆಯ ಕೋಣೆಯೊಳಗೆ ಕಳೆದೆ.  ಆದರೆ ನನ್ನ ಈ ಮರುಜನ್ಮ ಕಾಕತಾಳೀಯ ಅಲ್ಲ ನಾನು ನನ್ನಂತೆ ಸಂಕಷ್ಟಕ್ಕೀಡಾದ ಬೇರೆಯವರ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಬಯಸಿದ ನಾನು ಕುಟುಂಬದ ಬೆಂಬಲದೊಂದಿಗೆ ವೈದ್ಯಕೀಯ ಲೋಕಕ್ಕೆ ಕಾಲಿಟ್ಟೆ.  ಇದಕ್ಕಾಗಿ ಹೈದರಾಬಾದ್‌ಗೆ ಹೊರಟ ನಾನು ಶಿಕ್ಷಣ ಪೂರೈಸಿದೆ. ಅಲ್ಲಿ ಸಿಕ್ಕ ಪ್ರತಿಯೊಬ್ಬರು ನನ್ನ ಮುಖದ ಬಗ್ಗೆ ಕಾಮೆಂಟ್ ಮಾಡಿದಾಗಲೆಲ್ಲಾ ನನ್ನ ಸಂಕಲ್ಪ ಧೃಡಗೊಳ್ಳುತ್ತಲೇ ಹೋಯ್ತು. 

Relationship Tips : ಪತ್ನಿ – ಪಾಲಕರ ಮಧ್ಯೆ ಸುಸ್ತಾಗಿರುವ ಗಂಡಸರಿಗೆ ಕಿವಿ ಮಾತು

ಒಂದು ವರ್ಷದಲ್ಲಿ ನಾ ಬಯಸಿದ್ದ ಕ್ಷೇತ್ರದಲ್ಲಿ ನಾನು ಜನರ  ಪರಿಚಯ ಗಳಿಸಿದೆ.  ಇದರ ಜೊತೆಗೆ ಪೋಷಕರ ಬೆಂಬಲದೊಂದಿಗೆ 'ಬರ್ನ್ ಸರ್ವೈವರ್ ಮಿಷನ್ ಸೇವಿಯರ್ ಟ್ರಸ್ಟ್' ಆರಂಭಿಸಿದೆ.  ಇದು 10 ವರ್ಷಗಳ ಹಿಂದಿನ ಕತೆ. ಈಗ ನಾನು ಇಲ್ಲಿಯವರೆಗೆ 950 ಸಮಾಲೋಚನಾ ಸೆಷನ್‌ಗಳನ್ನು ನಡೆಸಿ ದೇಶಾದ್ಯಂತ 140 ಜನರಿಗೆ ಉಚಿತವಾಗಿ ಪ್ಲಾಸ್ಟಿಕ್ ಸರ್ಜರಿಗಳನ್ನು ಮಾಡಿಸಿದ್ದೇನೆ. ಇದರಲ್ಲಿ ಮಕ್ಕಳು ದೊಡ್ಡವರು ಸೇರಿದ್ದಾರೆ.  ಸಮಾಜ ನನ್ನನ್ನು ಮಾತುಗಳಿಂದ ಹೀಯಾಳಿಸಿದಷ್ಟು ಪುಟಿದೆದ್ದು ಮೇಲೆ ನಿಂತಿದ್ದೇನೆ. ಸಮಾಜ ನನಗೆ ಬಾಗಿಲು ಮುಚ್ಚಿದರು ನನ್ನ ಬದುಕಿನ ಬಾಗಿಲನ್ನು ನಾನೇ ತೆರೆದುಕೊಂಡಿದ್ದೇನೆ ಎಂದು ಅವರು ತಮ್ಮ ಸಂಘರ್ಷದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

Follow Us:
Download App:
  • android
  • ios