ಇರುವೆಗೆ ಹಾಡಿ ಮುಕ್ತಿ.. ಹಾಲು ಉಕ್ಲೇಬಾರ್ದು ಅಂದ್ರೆ ಹಿಂಗ್ ಮಾಡಿ
ಅಡುಗೆ ಮನೆಯಲ್ಲಿ ನೀವು ಎಷ್ಟೇ ವರ್ಷಗಳಿಂದ ಕೆಲಸ ಮಾಡ್ತಿರಿ. ಕೆಲವೊಂದು ಟಿಪ್ಸ್ ನಿಮಗೋ ಗೊತ್ತಿರೋದಿಲ್ಲ. ಪದೇ ಪದೇ ಒಂದೇ ತಪ್ಪು ಮರುಕಳಿಸ್ತಿದ್ರೆ ನಿಮಗೂ ಕಿರಿಕಿರಿ, ಕೆಲಸಕ್ಕೂ ಅಡ್ಡಿ. ಹಾಗಾಗಿ ನಾವಿಂದು ಹೇಳುವ ಪ್ಲಾನ್ ಫಾಲೋ ಮಾಡಿ ಈ ಎರಡು ಸಮಸ್ಯೆಯಿಂದ ಮುಕ್ತಿ ಪಡೆಯಿರಿ.
ಮಹಿಳೆಯರು ದಿನದ ಹಲವು ಗಂಟೆ ಅಡುಗೆ ಮನೆಯಲ್ಲೇ ಕಳೆಯುತ್ತಾರೆ. ಅಡುಗೆ ಮನೆ ಸ್ವಚ್ಛವಿದ್ದಾಗಲೇ ಅಲ್ಲಿ ಆರೋಗ್ಯಕರ ಅಡುಗೆ ಸಿದ್ಧವಾಗಲು ಸಾಧ್ಯ. ಮಹಿಳೆಯರು ಅಡುಗೆ ಮನೆಯನ್ನು ಎಷ್ಟೇ ನೀಟ್ ಆಗಿ ಇಟ್ಟುಕೊಂಡರೂ ಕೆಲವೊಮ್ಮೆ ಇರುವೆ ಕಾಟ ಶುರುವಾಗುತ್ತದೆ. ಏನೇ ಆಹಾರವಿಟ್ಟರೂ ಅದಕ್ಕೆ ಇರುವೆ ಮುತ್ತಿಕೊಳ್ಳುತ್ತದೆ. ಈಗ ಮಾಡಿದ ಸಿಹಿ ತಿಂಡಿಗೂ ಇರುವೆ ಮುತ್ತಿ ಕೊಂಡ್ರೆ ತಿನ್ನಲೂ ಆಗದೆ, ಎಸೆಯಲೂ ಆಗದೆ ಉಭಯ ಸಂಕಟ ಎದುರಾಗುತ್ತದೆ. ಅದನ್ನು ಓಡಿಸಲಾಗದೆ ಮಹಿಳೆಯರು ಸೋತು ಸುಣ್ಣವಾಗ್ತಾರೆ. ಇರುವೆಗಳನ್ನು ಓಡಿಸಲು ಸುಲಭ ಮಾರ್ಗವಿದೆ.
ಇರುವೆ (Ant) ಓಡಿಸಲು ಸರಳ ಉಪಾಯ : ಎಲ್ಲರ ಮನೆಯಲ್ಲೂ ಮುಖಕ್ಕೆ ಹಚ್ಚಿಕೊಳ್ಳುವ ಪೌಡರ್ (Powder) ಇದ್ದೇ ಇರುತ್ತೆ. ಮುಖದ ಸೌಂದರ್ಯ (Beauty) ಹೆಚ್ಚಿಸುವ ಪೌಡರ್ ಇರುವೆ ಓಡಿಸಲೂ ಯೂಸ್ ಆಗುತ್ತೆ. ಪೌಡರ್ ನಿಂದ ಇರುವೆ ಓಡಿಸಲು ನೀವು ಮಾಡಬೇಕಾಗಿರೋದು ಇಷ್ಟೇ. ಮೊದಲು ಒಂದು ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಪೌಡರ್ ಅನ್ನು ಹಾಕಿ ಸ್ವಲ್ಪ ಬಿಸಿ ಮಾಡಿ. ನಂತರ ಅದಕ್ಕೆ ಅರಿಶಿನ ಪುಡಿಯನ್ನು ಸೇರಿಸಿ ಮತ್ತೆ ಬಿಸಿ ಮಾಡಿ. ಹೀಗೆ ಬಿಸಿ ಮಾಡಿದ ಅರಿಶಿನ ಬೆರೆತ ಪೌಡರನ್ನು ಇರುವೆ ಬಂದ ಸ್ಥಳದಲ್ಲಿ ಉದುರಿಸಿ. ಹೀಗೆ ಮಾಡೋದ್ರಿಂದ ಇರುವೆಗಳು ಸ್ವಲ್ಪ ಹೊತ್ತಿನಲ್ಲೇ ಮಾಯವಾಗುತ್ತವೆ.
ಕೆಲಸ, ಅದು ಇದು ಅಂತ ಮಗು ಲೇಟ್ ಮಾಡಿಕೊಳ್ಳೋ ಮಹಿಳೆಯರಿಗೆ, ಇಲ್ ಕೇಳಿ ಕನ್ಸೀವ್ ಆಗಲು ರೈಟ್ ಏಜ್!
ಮಕ್ಕಳಿಗೂ ಸುರಕ್ಷಿತ : ಮನೆಯಲ್ಲಿ ಬರುವ ಇರುವೆಗಳನ್ನು ಓಡಿಸಲು ಸಾಮಾನ್ಯವಾಗಿ ಎಲ್ಲರೂ ರಾಸಾಯನಿಕ ಮಿಶ್ರಿತ ಇರುವೆ ಪುಡಿಗಳನ್ನು ಹಾಕುತ್ತಾರೆ. ಇಂತಹ ಪುಡಿಗಳು ಚಿಕ್ಕ ಮಕ್ಕಳಿಗೆ ತೊಂದರೆ ಉಂಟುಮಾಡಬಹುದು. ಚಿಕ್ಕ ಮಕ್ಕಳಿಗೆ ಇಂತಹ ಪುಡಿಗಳು ತಾಕಿದರೆ ಚರ್ಮದ ಅಲರ್ಜಿ ಸಮಸ್ಯೆ ಕಾಣಿಸಬಹುದು ಅಥವಾ ಮಕ್ಕಳು ಅದೇ ಕೈಗಳಿಂದ ಆಹಾರ ಸೇವಿಸಿದರೆ ಅವರ ಆರೋಗ್ಯದಲ್ಲಿ ಏರುಪೇರಾಗಬಹುದು. ಹಾಗಾಗಿ ರಾಸಾಯನಿಕ ಪೌಡರ್ ಬಳಕೆಗಿಂತ ಇದು ಅತ್ಯುತ್ತಮ ಮನೆ ಮದ್ದಾಗಿದೆ.
ಹಾಲು ಉಕ್ಕೋದನ್ನ ತಪ್ಪಿಸಲು ಹೀಗೆ ಮಾಡಿ : ಈಗ್ತಾನೆ ನೋಡಿದ್ದೇನೆ, ತಳದಲ್ಲಿದ್ದ ಹಾಲು ಅರೆ ಕ್ಷಣದಲ್ಲಿ ಉಕ್ಕಿಬಿಟ್ಟಿದೆ ಅಂತಾ ವಾರದಲ್ಲಿ ನಾಲ್ಕೈದು ದಿನವಾದ್ರೂ ಮಹಿಳೆಯರು ಗೊಣಗ್ತಾರೆ. ಅಡುಗೆ ಮನೆಯಲ್ಲಿ ನಾಲ್ಕೈದು ಕೆಲಸವನ್ನು ಒಂದೇ ಬಾರಿ ಮಾಡುವ ಮಹಿಳೆಯರಿಗೆ ಎಲ್ಲ ಕಡೆ ಗಮನವಿಡಲು ಸಾಧ್ಯವಾಗೋದಿಲ್ಲ. ಅದ್ರಲ್ಲೂ ಹಾಲು ಒಲೆ ಮೇಲೆ ಇದ್ದಾಗ ಮರೆವು ಹೆಚ್ಚು. ಗ್ಯಾಸ್ ಮೇಲೆ ಹಾಲಿಟ್ಟು, ಊರು ಸುತ್ತೋಕೆ ಹೋಗಿಲ್ಲವೆಂದ್ರೂ ತರಕಾರಿ ಹೆಚ್ಚುತ್ತಲೋ, ತಿಂಡಿ ಬಡಿಸುತ್ತಲೋ ಇರುವಾಗ್ಲೇ ಹಾಲು ಉಕ್ಕಿರುತ್ತದೆ.
ಒಮ್ಮೆ ಹಾಲು ಉಕ್ಕಿದ್ರೆ ಸಾಕು ಗ್ಯಾಸ್ ಸಂಪೂರ್ಣ ಕೊಳಕಾಗುತ್ತದೆ. ಅದನ್ನು ಸ್ವಚ್ಛಗೊಳಿಸಲು ಬಳಸಿದ ಬಟ್ಟೆ ಕೂಡ ಕೆಟ್ಟ ವಾಸನೆ ಬರುತ್ತದೆ. ಹಾಲು ಉಕ್ಕಿ ಹಾಳಾಗಿದ್ದಲ್ಲದೆ ಕ್ಲೀನಿಂಗ್ ಗೆ ಮತ್ತಷ್ಟು ಸಮಯ ನೀಡ್ಬೇಕಾಗುತ್ತದೆ. ಆದ್ರೆ ಹಾಲು ಉಕ್ಕದಂತೆ ನೀವು ತಪ್ಪಿಸಬಹುದು. ಅದಕ್ಕೆ ನಮ್ಮ ಬಳಿ ಒಂದು ಸೂಪರ್ ಐಡಿಯಾ ಇದೆ.
ಅತ್ತೆಯನ್ನು ಇಂಪ್ರೆಸ್ ಮಾಡೋದು ಹೇಗೆ? ಮೊನ್ನೆ ಮೊನ್ನೆ ಮದ್ವೆಯಾದ ಕಿಯಾರಾ ಆಡ್ವಾಣಿ ಹೇಳ್ತಾರೆ!
ನೀವು ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕಾಯಿಸಲು ಇಡಿ. ಗ್ಯಾಸ್ ಹಚ್ಚಿದ ಮೇಲೆ ಪಾತ್ರೆಯ ಮೇಲ್ಭಾಗಕ್ಕೆ ಅಂದ್ರೆ ಹಾಲಿರದ ಜಾಗಕ್ಕೆ ಸ್ವಲ್ಪ ತುಪ್ಪವನ್ನು ಸವರಿ. ಹೀಗೆ ಪಾತ್ರೆಯ ಸುತ್ತಲೂ ತುಪ್ಪ ಸವರುವುದರಿಂದ ಹಾಲು ಪಾತ್ರೆಯಿಂದ ಉಕ್ಕಿ ಹೊರಗೆ ಬರೋದಿಲ್ಲ. ಹಾಲು ಪಾತ್ರೆಯಿಂದ ಹೊರಗೆ ಬರದೇ ಅಲ್ಲೇ ಬಿಸಿಯಾಗುತ್ತದೆ. ಹೀಗೆ ಮಾಡೋದ್ರಿಂದ ಮಹಿಳೆಯರು ಒಲೆ ಮೇಲೆ ಹಾಲನ್ನಿಟ್ಟು ನಿಶ್ಚಿಂತೆಯಿಂದ ನಿಮ್ಮ ಕೆಲಸದಲ್ಲಿ ನೀವು ತೊಡಗಬಹುದು. ಹಾಗಂತ ಹಾಲಿಟ್ಟಿದ್ದನ್ನೇ ಮರೆಯಲು ಹೋಗ್ಬೇಡಿ. ಹಾಲು ಉಕ್ಕದೆ ಅಲ್ಲಿಯೇ ಬತ್ತಿ ಬತ್ತಿ ಖಾಲಿಯಾಗುವ ಜೊತೆಗೆ ಪಾತ್ರೆಯ ತಳಹಿಡಿದು ಕಪ್ಪಗಾಗಬಹುದು.