ಕೆಲಸ, ಅದು ಇದು ಅಂತ ಮಗು ಲೇಟ್ ಮಾಡಿಕೊಳ್ಳೋ ಮಹಿಳೆಯರಿಗೆ, ಇಲ್ ಕೇಳಿ ಕನ್ಸೀವ್ ಆಗಲು ರೈಟ್ ಏಜ್!

ಗರ್ಭಧಾರಣೆ ಆರಾಮವಾಗಿ ಆಗ್ಬೇಕು, ಹುಟ್ಟುವ ಮಗು ಆರೋಗ್ಯವಾಗಿ ಇರಬೇಕು ಅಂತಾ ಎಲ್ಲರೂ ಬಯಸ್ತಾರೆ. ಆದ್ರೆ ಅದಕ್ಕೆ ಏನು ಮಾಡ್ಬೇಕು ಎಂಬುದು ಸರಿಯಾಗಿ ತಿಳದಿರೋದಿಲ್ಲ. ಸಮಸ್ಯೆಯಿಲ್ಲದ ಗರ್ಭಧಾರಣೆ, ಹೆರಿಗೆಗೆ ನಿಮ್ಮ ವಯಸ್ಸು ಕೂಡ ಮುಖ್ಯವಾಗುತ್ತೆ ಎಂಬುದು ನಿಮಗೆ ಗೊತ್ತಾ? 
 

women delay to get concieved due to career science says best age for pregnancy roo

ದಿ ಬೆಸ್ಟ್ ಆಗ್ಬೇಕು.. ಇದು ಈಗಿನ ಯುವಜನರ ತುಡಿತ. ಇಲ್ಲಿ ಲಿಂಗ ಬೇಧವಿಲ್ಲ. ಪುರುಷರಷ್ಟೆ ಮಹಿಳೆಯರು ವೃತ್ತಿಯನ್ನು ನೆಚ್ಚಿಕೊಂಡಿದ್ದಾರೆ. ಗುರಿ ಸಾಧನೆಗೆ ಇಂದಿನ ಜನರು ಹೆಚ್ಚಿನ ಆದ್ಯತೆ ನೀಡ್ತಿದ್ದಾರೆ. ವೃತ್ತಿಗಿಂತ ಮಿಗಿಲಾದದ್ದು ಏನೂ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಮದುವೆ, ಮಕ್ಕಳಿಂದ ವೃತ್ತಿ ಜೀವನ ಹಾಳಾಗಬಹುದು ಎಂಬ ಭಯಕ್ಕೆ ಅನೇಕರು ವರ್ಷ 30 ದಾಟಿದ್ರೂ ಮದುವೆಯಾಗ್ತಿಲ್ಲ. ಮದುವೆಯಾದ್ಮೇಲೂ ಮಕ್ಕಳನ್ನು ಪಡೆಯಲು ಹಿಂದೇಟು ಹಾಕುವವರೇ ಹೆಚ್ಚು. ಮನೆ, ಮಕ್ಕಳ ಜವಾಬ್ದಾರಿ ಅವರ ಕನಸನ್ನು ಹಾಳು ಮಾಡುತ್ತದೆ ಎಂಬ ಭಯ ಕೆಲವರಿಗಿದ್ರೆ ಮತ್ತೆ ಕೆಲವರಿಗೆ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ತಮ್ಮ ಕಾಲ್ಮೇಲೆ ನಾವು ನಿಂತು, ಎಲ್ಲ ಸೌಕರ್ಯ ಪಡೆದ ಮೇಲೆ ಮಕ್ಕಳನ್ನು ಪಡೆದ್ರೆ ಒಳ್ಳೆಯದು ಎನ್ನುವವರು ಕೆಲವರು.

ಅನೇಕ ಕಾರಣಕ್ಕೆ ಈಗಿನ ಮಹಿಳೆಯರು ಮದುವೆ (Marriage) ಹಾಗೂ ಮಕ್ಕಳ ವಿಷ್ಯದಲ್ಲಿ ಹಿಂದಿದ್ದಾರೆ. ವರ್ಷ 35 ದಾಟಿದ ಮೇಲೆ ಮಕ್ಕಳನ್ನು ಪಡೆಯಲು ಮುಂದಾಗ್ತಾರೆ. ಆದ್ರೆ ಅದು ಮೀರಿದ ಸಮಯ. ಈ ವಯಸ್ಸಿನ ನಂತ್ರ ಎಲ್ಲ ಮಹಿಳೆಯರು ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ. ಹುಟ್ಟಿದ ಮಕ್ಕಳು ಆರೋಗ್ಯ (Health) ವಾಗಿರ್ತಾರೆ ಎನ್ನುವುದೂ ಕಷ್ಟ. ಹಾಗಾಗಿಯೇ ಮಗುವನ್ನು ಹೊಂದಲು ಯಾವ ಸಮಯ ಬೆಸ್ಟ್ ಎನ್ನುವ ಬಗ್ಗೆ ಸಂಶೋಧನೆ ನಡೆದಿದೆ. ಸಂಶೋಧನೆ (Research) ಪ್ರಕಾರ, 23 ರಿಂದ 32ನೇ ವಯಸ್ಸು ಉತ್ತಮ ಎಂಬುದು ಪತ್ತೆಯಾಗಿದೆ. 

HEALTH TIPS: ರಾತ್ರಿ ಯಾರಪ್ಪ ಬ್ರಶ್ ಮಾಡ್ತಾರೆ ಅನ್ನೋ ಸೋಂಬೇರಿಗಳಿಗೆ ಕಾಡುತ್ತೆ ಹೃದಯ ರೋಗ!

23 ರಿಂದ 32 ನೇ ವಯಸ್ಸಲ್ಲಿ ಮಗುವಾದ್ರೆ ಒಳ್ಳೇದು : ಹಂಗೇರಿಯ ಬುಡಾಪೆಸ್ಟ್ ನಲ್ಲಿರುವ ಸೆಮ್ಮೆಲ್ವೀಸ್ ವಿಶ್ವವಿದ್ಯಾಲಯದ ಸಂಶೋಧಕರು ಮಗುವನ್ನು ಹೊಂದಲು 23 ಮತ್ತು 32ರ ನಡುವಿನ ವಯಸ್ಸು ಅತ್ಯಂತ ಸುರಕ್ಷಿತ ಎಂಬುದನ್ನು ಬಹಿರಂಗಪಡಿಸಿದ್ದಾರೆ. ತಾಯಿ ಈ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದರೆ ಗರ್ಭಧಾರಣೆ ಮತ್ತು ಹೆರಿಗೆಗಳಲ್ಲಿ ತೊಂದರೆಯಾಗುವ ಸಾಧ್ಯತೆಗಳು ತೀರ ಕಡಿಮೆ ಎಂದು ಸಂಶೋಧಕರು ತಿಳಿಸಿದ್ದಾರೆ.

23ರಕ್ಕಿಂತ ಕಡಿಮೆ ಇದ್ರೆ ಸಮಸ್ಯೆ ಏನು? : ಬೇಗ ಮಕ್ಕಳನ್ನು ಪಡೆಯೋದು ಉತ್ತಮ ಎಂದ ಕಾರಣಕ್ಕೆ 23 ವರ್ಷಕ್ಕಿಂತ ಮೊದಲೇ ಮಕ್ಕಳನ್ನು ಪಡೆಯೋದು ಕೂಡ ಸೂಕ್ತವಲ್ಲ. ಕ್ರೋಮೋಸೋಮಲ್ ಅಲ್ಲದ ಅಸಹಜತೆಗಳು 23ನೇ ವಯಸ್ಸಿಗಿಂತ ಕಡಿಮೆಯಾಗಿರುವ ಮಹಿಳೆಯರಲ್ಲಿ ಪ್ರತಿಶತ 20ರಷ್ಟು ಮತ್ತು 32 ವರ್ಷಕ್ಕಿಂತ ಹೆಚ್ಚಿಗೆ ಆದ ಮಹಿಳೆಯರಲ್ಲಿ ಪ್ರತಿಶತ 15 ರಷ್ಟು ಕಂಡು ಬರುತ್ತದೆ. 1980 ಮತ್ತು 2009ರ ನಡುವಿನ ದತ್ತಾಂಶಗಳನ್ನು ಬಳಸಿಕೊಂಡು ನಡೆಸಿದ ಸಂಶೋಧನೆಯ ಪ್ರಕಾರ 31,128 ಗರ್ಭಧಾರಣೆಯಲ್ಲಿ ಕ್ರೋಮೋಸೋಮಲ್ ಅಲ್ಲದ ಬೆಳವಣಿಗೆಯ ಅಸ್ವಸ್ಥತೆ ಕಂಡುಬಂದಿದೆ. 22ನೇ ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ತಾಯಿಯಾಗುವುದರಿಂದ ಭ್ರೂಣದ ವೈಪರಿತ್ಯಗಳು ಪ್ರತಿಶತ 25 ರಷ್ಟು ಉಂಟಾಗುವ ಸಾಧ್ಯತೆ ಇರುತ್ತದೆ. ಇನ್ನು ಮಹಿಳೆಯರು 32 ಅಥವಾ 40 ವರ್ಷ ಮೇಲ್ಪಟ್ಟು ಗರ್ಭಧರಿಸುವುದರಿಂದ ಮಗುವಿಗೆ ಜನ್ಮಜಾತ ಅಸ್ವಸ್ಥತೆಗಳು ಕಾಡುತ್ತವೆ. ಹುಟ್ಟುವ ಮಗುವಿನ ತಲೆ, ಕಿವಿ, ಮೆದುಳು ಮುಂತಾದ ಭಾಗಗಳು ವಿಕಲಾಂಗವಾಗಬಹುದು.

Healthy Food : ಮನೆಯಲ್ಲೇ ಬೋರ್ನ್ ವಿಟಾ ಮಾಡಬುಹದು, ಹೇಗೆ ಇಲ್ಲಿದೆ ನೋಡಿ

ವಯಸ್ಸು ಹೆಚ್ಚಾದರೆ ಹುಟ್ಟುವ ಮಗುವಿನಲ್ಲಿ ಅಸ್ವಸ್ಥತೆ :  ಡೌನ್ ಸಿಂಡ್ರೋಮ್ ನಂತಹ ಕೆಲವು ಆನುವಂಶಿಕವಲ್ಲದ ಅಸ್ವಸ್ಥತೆಗಳು ತಾಯಂದಿರಿಂದ ಮಗುವಿಗೆ ಬರಬಹುದು. ಕಿರಿಯ ಮಹಿಳೆಯರಿಗೆ ಹೋಲಿಸಿದರೆ 35ಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು ಡೌನ್ ಸಿಂಡ್ರೋಮ್ ಹೊಂದಿರುವ ಮಗುವಿಗೆ ಜನ್ಮ ನೀಡುವ ಅಪಾಯ ಹೆಚ್ಚಿದೆ. ಅಲ್ಲದೇ ಮಹಿಳೆಯರ ವಯಸ್ಸು ಹೆಚ್ಚಿದಂತೆ ಅಥವಾ ಮೆನೋಪಾಸ್ ಸಮಯದಲ್ಲಿ ಫರ್ಟಿಲಿಟಿ ಕಡಿಮೆಯಾಗುವುದರಿಂದಲೂ ಗರ್ಭಧರಿಸುವುದು ಕಷ್ಟವಾಗುತ್ತದೆ. ವಯಸ್ಸಾದ ಮಹಿಳೆಯರಲ್ಲಿ ಅಂಡಾಣುವಿನ ಉತ್ಪತ್ತಿ ಮತ್ತು ಗುಣಮಟ್ಟ ಎರಡೂ ಕಡಿಮೆಯಾಗುವುದರಿಂದಲೂ ಗರ್ಭಧರಿಸುವುದು ಕಷ್ಟವಾಗುತ್ತದೆ. ಆದ್ದರಿಂದಲೇ 40 ವರ್ಷದ ನಂತರ ಹೆಚ್ಚಿನ ಸಂಖ್ಯೆಯ ಮಹಿಳೆಯರು ಬಂಜೆತನವನ್ನು ಅನುಭವಿಸುತ್ತಾರೆ.
 

Latest Videos
Follow Us:
Download App:
  • android
  • ios