ಪೋರ್ಚುಗಲ್‌ನಲ್ಲಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದು, ಮಕ್ಕಳ ತಂದೆ ಬೇರೆ ಬೇರೆಯಾಗಿದ್ದಾರೆ. ಡಿಎನ್ಎ ಪರೀಕ್ಷೆಯಿಂದ ಇದು ದೃಢಪಟ್ಟಿದೆ. ವೈದ್ಯರ ಪ್ರಕಾರ, ಇದು ಹೆಟೆರೊಪೇರೆಂಟಲ್ ಸೂಪರ್‌ಫೆಕಂಡೇಶನ್‌ನಿಂದ ಸಂಭವಿಸಿದೆ. ಮಹಿಳೆಯು ಒಂದೇ ಸಮಯದಲ್ಲಿ ಇಬ್ಬರು ಪುರುಷರೊಂದಿಗೆ ಸಂಬಂಧ ಹೊಂದಿದ್ದರಿಂದ, ಎರಡು ಅಂಡಾಣುಗಳು ಬೇರೆ ಬೇರೆ ವೀರ್ಯದಿಂದ ಫಲಿತಗೊಂಡಿವೆ. ತಂದೆ ಬೇರೆಯಾದರೂ, ದಾಖಲೆಗಳಲ್ಲಿ ತಂದೆಯ ಹೆಸರು ಬದಲಾಗುವುದಿಲ್ಲ.
ಮಹಿಳೆಗೆ ಅವಳಿ ಮಕ್ಕಳು (Twins) ಜನಿಸಿದ್ದು, ತಾಯಿ ಒಬ್ಳೆ, ಆದ್ರೆ ಆ ಮಕ್ಕಳ ತಂದೆ ಬೇರೆ ಬೇರೆ ಅಂದ್ರೆ ನೀವು ನಂಬ್ತೀರಾ? ಫೋರ್ಚುಗಲ್ (Portugal) ನಲ್ಲಿ ಇಂಥ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದ್ರೆ ಅವಳಿಗೆ ಹುಟ್ಟಿದ ಮಕ್ಕಳ ತಂದೆ ಮಾತ್ರ ಬೇರೆ ಬೇರೆ. ಡಿಎನ್ ಎ ಪರೀಕ್ಷೆ (DNA test) ಮಾಡಿದಾಗ ಸತ್ಯ ಬಹಿರಂಗವಾಗಿದೆ.
ಪೋರ್ಚುಗಲ್ ನ ಮೋನೆರೊನಾ ನಗರದಲ್ಲಿ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಮಕ್ಕಳು ಒಂದೇ ರೀತಿ ಇದ್ರು. ಮಕ್ಕಳಿಗೆ ಎಂಟು ತಿಂಗಳಾದ್ಮೇಲೆ ಅವರ ಡಿಎನ್ ಎ ಪರೀಕ್ಷೆ ನಡೆದಿದೆ. ಈ ಟೈಂನಲ್ಲಿ ಒಂದು ಮಗುವಿನ ಡಿಎನ್ ಎ, ಆಕೆ ಪತಿಗೆ ಮ್ಯಾಚ್ ಆಗ್ತಾ ಇತ್ತು. ಆದ್ರೆ ಇನ್ನೊಂದು ಮಗುವಿನ ಡಿಎನ್ ಎ, ಪತಿಗೆ ಮ್ಯಾಚ್ ಆಗ್ತಾ ಇರಲಿಲ್ಲ. ಹಾಗಿದ್ರೆ ಮಗುವಿನ ತಂದೆ ಯಾರು ಎನ್ನುವ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಈ ಸಮಯದಲ್ಲಿ ಮಹಿಳೆಗೆ ನೆನಪಾಗಿದೆ. ಒಂದೇ ದಿನ ಪತಿ ಹಾಗೂ ಇನ್ನೊಬ್ಬ ವ್ಯಕ್ತಿ ಜೊತೆ ಸಂಬಂಧ ಬೆಳೆಸಿದ್ದನ್ನು ಆಕೆ ನೆನಪಿಸಿಕೊಂಡಿದ್ದಾಳೆ. ಡಿಎನ್ ಎ ಪರೀಕ್ಷೆ ವೇಳೆ ಆ ಮಗು ಇನ್ನೊಬ್ಬ ವ್ಯಕ್ತಿಯದ್ದು ಎಂಬುದು ಗೊತ್ತಾಗಿದೆ. ಇದನ್ನು ಕೇಳಿ ಜನರು ಅಚ್ಚರಿಗೊಳಗಾಗಿದ್ದಾರೆ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಇಟ್ಟಿದ್ದಾರೆ.
ತಾಳಿ, ಕಾಲುಂಗುರ, ಬಳೆ ಹಾಕುವುದೇಕೆ? ಭಾರತದ ಹಿಂದೂ ಮದುವೆಯಾಗಿದ್ದೇನೆ ಎಂದ ಫಾರಿನ್ ಸೊಸೆ!
ಅವಳಿ ಮಕ್ಕಳ ತಂದೆ ಬೇರೆಯಾಗಿದ್ರೂ ನಿಯಮದ ಪ್ರಕಾರ, ತಂದೆ ಹೆಸರನ್ನು ಬದಲಿಸುವಂತಿಲ್ಲ. ಸರ್ಟಿಫಿಕೆಟ್ ನಲ್ಲಿ ಮಗುವಿನ ತಂದೆ ಹೆಸರು ಒಂದೇ ಇದೆ. ಇಬ್ಬರು ಮಕ್ಕಳ ಜವಾಬ್ದಾರಿಯನ್ನು ಒಬ್ಬ ತಂದೆ ಮಾತ್ರ ವಹಿಸಿಕೊಂಡಿದ್ದಾನೆ. ಮಹಿಳೆ ಜೊತೆಗಿರುವ ವ್ಯಕ್ತಿ, ಎರಡೂ ಮಕ್ಕಳನ್ನು ನೋಡಿಕೊಳ್ತಿದ್ದಾರೆ.
ಡಿಎನ್ ಎ ಬೇರೆಯಾಗಲು ಕಾರಣ ಏನು? : ಈ ಘಟನೆ ನೋಡಿ ವೈದ್ಯರೂ ದಂಗಾಗಿದ್ದಾರೆ. ವಿಶ್ವದಲ್ಲಿ ಇಂಥ ಘಟನೆ ಬಹಳ ಕಡಿಮೆ. ಕೇವಲ 20 ಇಂಥ ಘಟನೆ ಮಾತ್ರ ಈವರೆಗೆ ನಡೆದಿದೆ ಎಂದು ವೈದ್ಯರು ಹೇಳಿದ್ದಾರೆ. ಇದನ್ನು ವೈದ್ಯರು ಹೆಟೆರೊಪೇರೆಂಟಲ್ ಸೂಪರ್‌ಫೆಕಂಡೇಶನ್ ಎಂದು ಕರೆಯುತ್ತಾರೆ. ಅವಳಿ ಮಕ್ಕಳು ವಿಭಿನ್ನ ತಂದೆಯ ಡಿಎನ್‌ಎಗಳನ್ನು ಹೊಂದಿರುತ್ತಾರೆ. ಮಹಿಳೆಯ ದೇಹದಲ್ಲಿ ಕಂಡುಬರುವ ಅಂಡಾಣುಗಳು ಇಬ್ಬರು ವಿಭಿನ್ನ ಪುರುಷರಿಂದ ಫಲವತ್ತಾದಾಗ ಇಂತಹ ಪರಿಸ್ಥಿತಿ ಉಂಟಾಗುತ್ತದೆ. ಇದರರ್ಥ ಆ ಟೈಂನಲ್ಲಿ ಮಹಿಳೆ ಇಬ್ಬರು ವಿಭಿನ್ನ ಪುರುಷರೊಂದಿಗೆ ಸಂಬಂಧ ಹೊಂದಿರಬಹುದು. ಈ ಮಹಿಳೆ ಕೂಡ ಇಬ್ಬರು ಪುರುಷರ ಜೊತೆ ಸಂಬಂಧ ಹೊಂದಿದ್ದ ಕಾರಣ ಅವಳಿ ಮಕ್ಕಳು ಜನಿಸಿದ್ವು ಎಂದು ವೈದ್ಯರು ಹೇಳಿದ್ದಾರೆ.
10ನೇ ಕ್ಲಾಸ್ ಪರೀಕ್ಷೆ ಮುಗಿಸಿ ಹಾಸ್ಟೆಲ್‌ಗೆ ಬಂದು ಮಗುವಿಗೆ ಜನ್ಮ ನೀಡಿದ ಬಾಲಕಿ
ಸರಳವಾಗಿ ಹೇಳೋದಾದ್ರೆ ತಾಯಿ ದೇಹವು ಪ್ರತಿ ತಿಂಗಳು ಎರಡು ಎಗ್ ಬಿಡುಗಡೆ ಮಾಡುತ್ತೆ. ಬೇರೆ ಬೇರೆ ಪುರುಷರ ವೀರ್ಯದಿಂದ ಫಲವತ್ತಾಗಿದ್ದರೂ, ಮಕ್ಕಳು ಅವಳಿಗಳಾಗಿರುತ್ವೆ. ಶಿಶುಗಳು ತಾಯಿಯ ಗರ್ಭದಲ್ಲಿ ವಿಭಿನ್ನ ಹೊಕ್ಕುಳಬಳ್ಳಿಗಳಿಗೆ ಸಂಪರ್ಕ ಹೊಂದಿರುತ್ವೆ. ಎರಡೂ ಮಕ್ಕಳಲ್ಲಿ ತಾಯಿಯ ಜೀನ್ ಒಂದೇ ಆಗಿರುತ್ತವೆ. ಆದರೆ ತಂದೆ ಮಾತ್ರ ಬೇರೆಯಾಗಿರುತ್ತಾರೆ.
ಪೋರ್ಚುಗಲ್ ಮಹಿಳೆಗೆ ಆಗ 19 ವರ್ಷ. ಅವಳಿ ಮಕ್ಕಳು ಹೊಟ್ಟೆಯಲ್ಲಿದ್ರೂ ನಾರ್ಮಲ್ ಹೆರಿಗೆ ಆಗಿತ್ತು. ಆಕೆಗೆ ಜನಿಸಿದ ಇಬ್ಬರು ಮಕ್ಕಳು ಆರೋಗ್ಯವಾಗಿದ್ದಾರೆ. ಈಗ ಮಕ್ಕಳಿಗೆ ನಾಲ್ಕು ವರ್ಷವಾಗಿದೆ. ಗಂಡ- ಹೆಂಡತಿ ಮಧ್ಯೆ ಯಾವುದೇ ಮನಸ್ತಾಪ ಇರಲಿಲ್ಲ. ಆದ್ರೂ ಡಿಎನ್ ಎ ಪರೀಕ್ಷೆ ಮಾಡಿಸುವ ನಿರ್ಧಾರಕ್ಕೆ ಬಂದಿದ್ದರು. ಅದ್ರಿಂದ ಮಕ್ಕಳ ಬಗ್ಗೆ ಅವರಿಗೆ ಮಾಹಿತಿ ಸಿಕ್ಕಿತ್ತು, ಮಕ್ಕಳು ಹಾಗೂ ಮಹಿಳೆ ಬಗ್ಗೆ ಯಾವುದೇ ಮಾಹಿತಿ ನೀಡಬಾರದು ಎಂಬ ಷರತ್ತಿನ ಮೇಲೆ ವೈದ್ಯರು ಈ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ.
