ಹೆಂಗಸರಲ್ಲಿ ಸೆಕ್ಸ್‌ಗೂ ಮರೆತು ಹೋಗೋ ಕಾಯಿಲೆಗೂ ಸಂಬಂಧ ಇದೆಯಾ? ಅದು ಹೇಗೆ ಸಾಧ್ಯ?
ಸೆಕ್ಸ್‌ಗೂ ಅಲ್ಝೈಮರ್ಸ್ ಸಮಸ್ಯೆಗೂ ಏನ್ ಸಂಬಂಧ? ಈ ಸಮಸ್ಯೆ ಬಂದಾಗ ಹೆಂಗಸರಲ್ಲಿ ಸೆಕ್ಸ್ ವಿಪರೀತ ಆಗುತ್ತದಾ? ಈ ಬಗ್ಗೆ ವಿವರಗಳು ಇಲ್ಲಿವೆ.
ಅಲ್ಝೈಮರ್ಸ್ ಅನ್ನೋದು ಮರೆವಿನ ರೋಗ ಅನ್ನೋದು ಈ ಕಾಲದ ಹೆಚ್ಚಿನವರಿಗೆಲ್ಲ ಗೊತ್ತು. ಒಂದು ಕಾಲದಲ್ಲಿ ಗಂಡಸರಿಗೆ ಮರೆವಿನ ಕಾಯಿಲೆ ಬರೋದು ಜಾಸ್ತಿ ಅಂತಿದ್ರು. ಆದರೆ ಈಗ ಹೆಂಗಸರಲ್ಲಿ ಈ ಮರೆವಿನ ಸಮಸ್ಯೆ ಅದರಲ್ಲೂ ಅಲ್ಝೈಮರ್ಸ್‌ನಂಥಾ ಗಂಭೀರ ಸಮಸ್ಯೆ ಹೆಚ್ಚಾಗ್ತಿದೆ. ನಿನ್ನೆ ಮೊನ್ನೆ ಈ ಬಗ್ಗೆ ಮೆಡಿಕಲ್ ನ್ಯೂಸ್ ಒಂದು ವರದಿ ರೆಡಿ ಮಾಡಿದೆ. ಅದನ್ನೋದಿ ಕೆಲ ಹೆಂಗಸರು ತಲೆ ಮೇಲೆ ಕೈ ಇಟ್ಟು ಕೂರೋ ಹಾಗಾಗಿದೆ.
ನಿಮಗೆ ಗೊತ್ತಿರಬಹುದು, ಪ್ರಪಂಚದಾದ್ಯಂತ ಸುಮಾರು 32 ಮಿಲಿಯನ್ ಜನರು ಆಲ್ಝೈಮರ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ವಿಚಿತ್ರವೆಂದರೆ, ಆಲ್ಝೈಮರ್ ರೋಗಿಗಳ ಪೈಕಿ ಸುಮಾರು ಮೂರನೇ ಎರಡರಷ್ಟು ಭಾಗ ಮಹಿಳೆಯರಿದ್ದಾರೆ. ಆಲ್ಝೈಮರ್ಸ್ ಕಾಯಿಲೆಯು ಮೆದುಳಿನ ಅಸ್ವಸ್ಥತೆಯಾಗಿದ್ದು, ಅದು ನೆನಪಿನ ಶಕ್ತಿ ಮತ್ತು ಆಲೋಚನಾ ಸಾಮರ್ಥ್ಯಗಳನ್ನು ನಿಧಾನವಾಗಿ ನಾಶಪಡಿಸುತ್ತದೆ. ಕೊನೆಗೆ ನಮ್ಮ ದಿನನಿತ್ಯದ ಕೆಲಸಗಳನ್ನು ಮಾಡುವ ಸಾಮರ್ಥ್ಯವೂ ಇಲ್ಲದಂತೆ ಮಾಡುತ್ತದೆ. ಈ ರೋಗ ಇರುವ ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿ 60 ವರ್ಷವಾದ ನಂತರ ಈ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಇದೀಗ ಹೆಣ್ಣುಮಕ್ಕಳು ಗಾಬರಿ ಬೀಳುವ ಮತ್ತೊಂದು ಸುದ್ದಿ ಬಂದಿದೆ. ಆ ಪ್ರಕಾರ 30ರಿಂದ 60 ವರ್ಷದ ನಡುವೆ ಆಲ್ಝೈಮರ್ ಲಕ್ಷಣಗಳು ಗೋಚರಿಸುತ್ತವೆ. ಹಿಂದೆ ಹೀಗಾಗೋದು ಅಪರೂಪ ಆಗಿತ್ತಾದರೂ ಇವತ್ತಿನ ಲೈಫ್‌ಸ್ಟೈಲ್‌ನಿಂದಾಗಿ ಇದು ಸಾಮಾನ್ಯ ಅನ್ನೋ ಹಾಗಾಗಿದೆ.
ಪುರುಷರು ಮಹಿಳೆಯರಿಗೆ ಯಾವತ್ತೂ ಈ ವಿಷ್ಯಗಳನ್ನ ಹೇಳೋದೆ ಇಲ್ಲ!
ಅಲ್ಝೈಮರ್ಸ್ ಸಮಸ್ಯೆಗೆ ಡಾ. ಅಲೋಯಿಸ್ ಆಲ್ಝೈಮರ್ ಅವರ ಹೆಸರನ್ನು ಇಡಲಾಗಿದೆ. 1906ರಲ್ಲಿ ಡಾ. ಆಲ್ಝೈಮರ್ ಅಸಾಮಾನ್ಯ ಮಾನಸಿಕ ಅಸ್ವಸ್ಥತೆಯಿಂದ ಸಾವನ್ನಪ್ಪಿದ ಮಹಿಳೆಯ ಮೆದುಳಿನ ಅಂಗಾಂಶದಲ್ಲಿನ ಬದಲಾವಣೆಗಳನ್ನು ಗಮನಿಸಿದರು. ಆಕೆಯ ರೋಗಲಕ್ಷಣಗಳು ನೆನಪಿನ ಶಕ್ತಿಯ ಕೊರತೆ, ಭಾಷಾ ಸಮಸ್ಯೆಗಳು ಮತ್ತು ಅನಿರೀಕ್ಷಿತ ನಡವಳಿಕೆಯನ್ನು ಒಳಗೊಂಡಿತ್ತು. ಆಕೆ ಸತ್ತ ನಂತರ ಡಾ. ಆಲ್ಝೈಮರ್ ಆಕೆಯ ಮೆದುಳನ್ನು ಪರೀಕ್ಷಿಸಿದರು. ಅದರಲ್ಲಿ ಅನೇಕ ಅಸಹಜ ಕ್ಲಂಪ್‌ಗಳನ್ನು ಮತ್ತು ಫೈಬರ್‌ಗಳ ಟ್ಯಾಂಗಲ್ಡ್ ಬಂಡಲ್‌ಗಳನ್ನು ಕಂಡುಹಿಡಿದರು.
ಆಲ್ಝೈಮರ್ ಸಮಸ್ಯೆಯ ಸಾಮಾನ್ಯ ಲಕ್ಷಣಗಳೆಂದರೆ, ಬೇರೆಯವರೊಂದಿಗೆ ಮಾತನಾಡಲು ತೊಂದರೆಯಾಗುವುದು, ಇತ್ತೀಚಿನ ಅನುಭವಗಳು ಅಥವಾ ಸುತ್ತಮುತ್ತಲಿನವರ ಬಗ್ಗೆ ನೆನಪಿಲ್ಲದಿರುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಹಲ್ಲಿನ, ಚರ್ಮದ ಮತ್ತು ಕಾಲಿನ ಸಮಸ್ಯೆಗಳು ಹೆಚ್ಚಾಗುವುದು, ನುಂಗಲು ತೊಂದರೆಯಾಗುವುದು, ನರಳುವುದು, ಹೆಚ್ಚು ನಿದ್ರೆ ಮಾಡುವುದು ಇತ್ಯಾದಿ. ಇದು ಕ್ರಮೇಣ ತೀವ್ರ ರೂಪ ಪಡೆಯುತ್ತಾ ಹೋಗುತ್ತದೆ.
ಇದೀಗ ವೆಸ್ಟರ್ನ್ ಒಂಟಾರಿಯೊ ವಿಶ್ವವಿದ್ಯಾನಿಲಯದ ಸಂಶೋಧಕರು ಸ್ತ್ರೀಯರಲ್ಲಿನ ಲೈಂಗಿಕ ಹಾರ್ಮೋನುಗಳು ಮೆದುಳಿನಲ್ಲಿ ಆಲ್ಝೈಮರ್ ಕಾಯಿಲೆಯು ಉಂಟಾಗಲು ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಕಂಡುಹಿಡಿದಿದ್ದಾರೆ.
ಆಲ್ಝೈಮರ್ ರೋಗ ಹೆಚ್ಚಾಗಲು ಸ್ತ್ರೀಯರ ಲೈಂಗಿಕ ಹಾರ್ಮೋನ್ಗಳೂ ಕಾರಣವಂತೆ. ಇದು ಯಾವ ರೀತಿ ಅನ್ನೋದನ್ನು ವೈದ್ಯಕೀಯವಾಗಿ ವಿವರಿಸಿದ್ದಾರೆ. ಪುರುಷರಿಗಿಂತ ಮಹಿಳೆಯರಲ್ಲಿ ಆಲ್ಝೈಮರ್ ಕಾಯಿಲೆ ಹೆಚ್ಚು ಏಕೆ ಕಾಣಿಸಿಕೊಳ್ಳುತ್ತದೆ ಎಂಬುದರ ಕುರಿತು ಸಂಶೋಧಕರು ಕೆಲವು ಸಿದ್ಧಾಂತಗಳನ್ನು ಹೊಂದಿದ್ದರೂ, ಅದಕ್ಕೆ ಆಧಾರವಾಗಿರುವ ಜೈವಿಕ ಕಾರಣಗಳು ಇನ್ನೂ ತಿಳಿದಿಲ್ಲ.
ರಾಜ್ಯಾದ್ಯಂತ ಡೆಂಘೀ ಜ್ವರ ಅಬ್ಬರ, ಕೇವಲ 20 ದಿನದಲ್ಲಿ 1404 ಪ್ರಕರಣ!
ಎಕ್ಸ್ ಕ್ರೋಮೋಸೋಮ್ ನಲ್ಲಿ ನಿರ್ದಿಷ್ಟ ಜೀನ್ ಅನ್ನು ಗುರುತಿಸಿದೆ. ಅದು ಮೆದುಳಿನಲ್ಲಿ ಟೌ ಪ್ರೋಟೀನ್ ಟ್ರಸ್ಟೆಡ್ ಸೋರ್ಸ್‌ನ ಶೇಖರಣೆಯನ್ನು ಹೆಚ್ಚಿಸುತ್ತದೆ. ಹೆಣ್ಣುಮಕ್ಕಳು ಎರಡು ಎಕ್ಸ್ ವರ್ಣತಂತುಗಳನ್ನು ಹೊಂದಿರುವುದರಿಂದ ಅವರು ಮೆದುಳಿನಲ್ಲಿ ಹೆಚ್ಚಿನ ಮಟ್ಟದ ಟೌ ಪ್ರೋಟೀನ್ ಅನ್ನು ಹೊಂದುವ ಹೆಚ್ಚಿನ ಸಾಧ್ಯತೆಯನ್ನು ಹೊಂದಿರುತ್ತಾರೆ. ಇದು ಆಲ್ಝೈಮರ್ ಕಾಯಿಲೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.
ವಿಭಿನ್ನ ಹಾರ್ಮೋನುಗಳ ಕಾರಣದಿಂದ ಮಹಿಳೆಯರು ಆಲ್ಝೈಮರ್ ಕಾಯಿಲೆಗೆ ಹೆಚ್ಚು ಒಳಗಾಗುತ್ತಾರೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 2023ರಲ್ಲಿ ಪ್ರಸ್ತುತಪಡಿಸಿದ ಸಂಶೋಧನೆಯು ಋತುಬಂಧಕ್ಕೊಳಗಾದ (menopause) ಮಹಿಳೆಯರಿಗೆ ಆಲ್ಝೈಮರ್ (Alzheimer) ಕಾಯಿಲೆಯ ಹೆಚ್ಚಿನ ಅಪಾಯವಿದೆ ಎಂದು ಕಂಡುಹಿಡಿದಿದೆ.
ಅಲ್ಜೈಮರ್‌ಗೆ ತುತ್ತಾದ ಹೆಂಗಸರಲ್ಲಿ ಸೆಕ್ಸ್(sex) ಬಯಕೆ ಹೆಚ್ಚಾಗುತ್ತಂತೆ. ಹಾಗಂತ ಸೆಕ್ಸ್ ಬಯಕೆ ಹೆಚ್ಚಾಗೋದಕ್ಕೂ ಈ ಸಮಸ್ಯೆಯೂ ಸಂಬಂಧ ಇಲ್ಲ. ಆದರೆ ಸೆಕ್ಸ್ ಹಾರ್ಮೋನ್ (hormone) ಈ ಸಮಸ್ಯೆಯಲ್ಲಿ ಮುಖ್ಯ ಪಾತ್ರ ವಹಿಸೋದಂತೂ ನಿಜ. ಜೊತೆಗೆ ಈ ಸಮಸ್ಯೆ ಇರುವ ಹೆಚ್ಚಿನ ಹೆಣ್ಣುಮಕ್ಕಳಲ್ಲಿ ಸೆಕ್ಸ್‌ನ ತೀವ್ರತೆ ಹೆಚ್ಚಾಗಿರುತ್ತೆ ಅನ್ನೋದು ಅಧ್ಯಯನದಿಂದ ದೃಢಪಟ್ಟಿದೆ.