Women's Day: ಆತ್ಮರಕ್ಷಣೆಗಾಗಿ ಮಹಿಳೆಯರು ಮಾಡ್ಲೇಬೇಕು ಈ ಕೆಲಸ
ಸಮಾಜ ಎಷ್ಟೇ ಮುಂದುವರೆದಿರಲಿ, ಮಹಿಳೆಯರ ಶೋಷಣೆ,ದೌರ್ಜನ್ಯ ಮಾತ್ರ ಅಂತ್ಯವಾಗಿಲ್ಲ. ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿದೆ. ಮಹಿಳೆಯಾದವಳು ಸೌಂದರ್ಯ ವೃದ್ಧಿ,ವೃತ್ತಿ ಬದುಕಿನಲ್ಲಿ ಯಶಸ್ಸಿನೆಡೆಗೆ ಸಾಗುವ ಪ್ರಯತ್ನ ನಡೆಸುವ ಜೊತೆಗೆ ತನ್ನ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡ್ಬೇಕು.
ಮಹಿಳೆ (Woman) ಯರು ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ ಸಾಧಿಸುತ್ತಿದ್ದಾರೆ. ಪುರುಷ (Male)ರ ಸಮಾನವಾಗಿ ಹೆಜ್ಜೆ ಹಾಕ್ತಿದ್ದಾರೆ. ಆದ್ರೆ ಈಗ್ಲೂ ಮಹಿಳೆ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. ಬೇರೆ ಊರಿನಲ್ಲಿ ಒಂಟಿಯಾಗಿ ವೃತ್ತಿ (Career) ಮುಂದುವರೆಸುತ್ತಿರುವ ಮಹಿಳೆಯಾಗಿರಬಹುದು ಇಲ್ಲ ರಾತ್ರಿ ಡ್ಯೂಟಿ ಮಾಡುವ ಅಥವಾ ತಡರಾತ್ರಿ ಮನೆಗೆ ಬರುವ ಮಹಿಳೆಯಾಗಿರಬಹುದು, ಈ ಎಲ್ಲ ಮಹಿಳೆಯರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಹಿಳೆಯರು ಸದಾ ಆತ್ಮರಕ್ಷಣೆ (Self Defense)ಗೆ ಸಿದ್ಧವಾಗಿರಬೇಕು. ಸ್ವಲ್ಪ ಎಚ್ಚರ ತಪ್ಪಿದ್ರೂ ದೊಡ್ಡ ಅಪಾಯ ಎದುರಿಸಬೇಕಾಗುತ್ತದೆ. ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಮೂಲಭೂತ ಸುರಕ್ಷತಾ ಸಲಹೆಗಳನ್ನು ಕಲಿಯುವ ಮೂಲಕ ನೀವು ಇತರ ಮಹಿಳೆಯರಿಗೆ ಇದನ್ನು ಕಲಿಸಬಹುದು. ನಿಮ್ಮ ಸುರಕ್ಷತೆ ಬಹಳ ಮುಖ್ಯ ಎಂಬುದು ತಿಳಿದಿರಿ. ಅದಕ್ಕೆ ಅಗತ್ಯವಾಗಿ ಯಾವ ಕೆಲಸ ಮಾಡ್ಬೇಕು ಎಂಬುದನ್ನು ಅರಿಯಿರಿ. ಇಂದು ಮಹಿಳೆಯರು ತಮ್ಮ ಸುಕ್ಷತೆಯನ್ನು ಹೇಗೆ ನೋಡಿಕೊಳ್ಬೇಕು ಎಂಬ ಬಗ್ಗೆ ಕೆಲವೊಂದು ಟಿಪ್ಸ್ ನೀಡ್ತೇವೆ.
ಮಹಿಳೆಯರ ಸುರಕ್ಷತೆಗಾಗಿ ಸಲಹೆಗಳು :
ಮನೆ ಕೆಲಸದವರ ನೇಮಕ : ಕೆಲ ಮಹಿಳೆಯರು ಮನೆ ಕೆಲಸದವರನ್ನು ನೇಮಿಸಿಕೊಂಡಿರ್ತಾರೆ. ಆದ್ರೆ ಅವರ ಬಗ್ಗೆ ಯಾವುದೇ ಸರಿಯಾದ ಮಾಹಿತಿ ಇರುವುದಿಲ್ಲ. ಒಂಟಿ ಮಹಿಳೆ ಬಗ್ಗೆ ಸಂಪೂರ್ಣ ತಿಳಿಯುವ ಮನೆ ಕೆಲಸದವರು ನಿಮ್ಮನ್ನು ಅಪಾಯಕ್ಕೆ ತಳ್ಳಬಹುದು. ಹಾಗಾಗಿ ಮನೆ ಕೆಲಸದವರನ್ನು ನೇಮಕ ಮಾಡಿಕೊಳ್ಳುವ ಮೊದಲು ಅವರು ಯಾವುದಾದ್ರೂ ಕ್ರೈಂ ಹಿನ್ನಲೆ ಹೊಂದಿದ್ದಾರಾ ಎಂಬುದನ್ನು ಪರಿಶೀಲಿಸಿ. ಹಾಗೆ ಅವರ ಕುಟುಂಬದ ಬಗ್ಗೆ ಸ್ವಲ್ಪ ತಿಳಿದುಕೊಂಡಿರಿ.
ಸುರಕ್ಷತೆಗಾಗಿ ಸೇಫ್ಟಿ ಡೋರ್ : ಮನೆಯಲ್ಲಿ ಒಂಟಿ ವಾಸ ನಿಮ್ಮದಾಗಿದ್ದರೆ ನೀವು ಸೇಫ್ಟಿ ಡೋರ್ ನಿರ್ಮಿಸಿಕೊಳ್ಳಿ. ಮನೆ ಡೋರ್ ಬೆಲ್ ಆದ ತಕ್ಷಣ ಬಾಗಿಲು ತೆರೆಯಬೇಡಿ. ಸೇಫ್ಟಿ ಡೋರ್ ಮೂಲಕ ಪರಿಶೀಲನೆ ನಡೆಸಿ ನಂತ್ರ ಬಾಗಿಲು ತೆರೆಯಿರಿ. ಸೇಫ್ಟಿ ಡೋರ್ ನಿಮ್ಮನ್ನು ಹೆಚ್ಚು ಸುರಕ್ಷಿತವಾಗಿರಿಸುತ್ತದೆ.
ಫೋನ್ ಗೆ ಫುಲ್ ಚಾರ್ಜ್ ಇರಲಿ : ಒಂಟಿಯಾಗಿ ವಾಸಿಸುತ್ತಿರಲಿ ಇಲ್ಲ ಕುಟುಂಬದ ಜೊತೆಗಿರಲಿ, ಮನೆಯಿಂದ ಹೊರಗೆ ಹೋಗುವ ಮೊದಲು ನಿಮ್ಮ ಫೋನ್ ಫುಲ್ ಚಾರ್ಜ್ ಆಗಿರುವಂತೆ ನೋಡಿಕೊಳ್ಳಿ. ಫೋನ್ ನಲ್ಲಿ ಯಾವಾಗಲೂ ಜಿಪಿಎಸ್ ಆನ್ ಆಗಿರಲಿ. ರಾತ್ರಿ ಪ್ರಯಾಣ ಬೆಳೆಸುವ ಮೊದಲು ನಿಮ್ಮವರಿಗೆ ನೀವು ಏರಿದ ವಾಹದನ ಬಗ್ಗೆ ಮಾಹಿತಿ ನೀಡಿರಿ.
33 ವರ್ಷ ದಾಂಪತ್ಯದ ನಂತ್ರವೂ ವಂಚಿಸಿದ ಪತಿ! ಆದರೆ, ನೀವಂದುಕೊಂಡಂತೆ ಆಗಿಲ್ಲ
ಮನೆಯವರಿಗಿರಲಿ ಮಾಹಿತಿ : ಅನೇಕ ಬಾರಿ ನಾವು ಎಲ್ಲಿಗೆ ಹೋಗ್ತಿದ್ದೇವೆ ಎಂಬುದು ನಮ್ಮ ಮನೆಯವರಿಗೆ ತಿಳಿದಿರುವುದಿಲ್ಲ. ಒಂಟಿಯಾಗಿ ವಾಸಿಸುವ ಸಂದರ್ಭದಲ್ಲಿ ಅದನ್ನು ಕೇಳಲು ಮನೆಯಲ್ಲಿ ಯಾರೂ ಇರುವುದಿಲ್ಲ. ಹಾಗಾಗಿ ನೀವು ಮನೆಯಿಂದ ಹೊರಗೆ ಹೋಗುವ ವೇಳೆ ಕುಟುಂಬಸ್ಥರಲ್ಲಿ ಒಬ್ಬರಿಗೆ ಅಥವಾ ಸ್ನೇಹಿತರಿಗೆ ನೀವು ಎಲ್ಲಿಗೆ ಹೋಗ್ತಿದ್ದೀರಿ ಎಂಬ ಮಾಹಿತಿ ನೀಡಿ. ನೀವು ಕರೆ ಮಾಡಿಯೇ ಹೇಳಬೇಕೆಂದೇನಿಲ್ಲ. ಒಂದು ಮೆಸ್ಸೇಜ್ ಕಳುಹಿಸಿದ್ರೆ ಸಾಕಾಗುತ್ತದೆ.
ಫೋನ್ ಕಾಲ್ ಲೀಸ್ಟ್ ನಲ್ಲಿ ಮೊದಲಿರಲಿ ಮನೆಯವರ ಹೆಸರು : ನಿಮ್ಮ ಮೊಬೈಲ್‌ನ ಕಾಲ್ ಹಿಸ್ಟರಿ ಲಿಸ್ಟ್ ನಲ್ಲಿ ನಿಮ್ಮ ಕುಟುಂಬದ ಸದಸ್ಯರ ಸಂಖ್ಯೆ ಅಗ್ರಸ್ಥಾನದಲ್ಲಿರಬೇಕು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ತುರ್ತು ಸಂದರ್ಭದಲ್ಲಿ ಕರೆ ಮಾಡಲು ನಿಮಗೆ ಸಹಾಯವಾಗುತ್ತದೆ.
ಮದುವೆಯಾದ್ಮೇಲೆ ತಂದೆ ಜೊತೆ ಹೆಣ್ಮಕ್ಕಳು ಎಂತ ಬಾಂಧವ್ಯ ಹೊಂದರಿಬೇಕು?
ಪೇಪರ್ ಸ್ಪ್ರೇ ಸದಾ ಪರ್ಸ್ ನಲ್ಲಿರಲಿ : ನಿಮ್ಮ ಕೈಚೀಲದಲ್ಲಿ ಯಾವಾಗಲೂ ಪೇಪರ್ ಸ್ಪ್ರೇ ಇಟ್ಟಿರಿ. ಅಪರಿಚಿತ ವ್ಯಕ್ತಿಯು ನಿಮ್ಮನ್ನು ಒತ್ತಾಯಿಸಲು ಪ್ರಯತ್ನಿಸಿದರೆ ನೀವು ತಕ್ಷಣ ಅದನ್ನು ಅವನ ಕಣ್ಣುಗಳಿಗೆ ಸಿಂಪಡಿಸಬಹುದು. ಆಗ ನಿಮಗೆ ಅಲ್ಲಿಂದ ತಪ್ಪಿಸಿಕೊಳ್ಳುವುದು ಸುಲಭವಾಗುತ್ತದೆ.